ದರ್ಶನ್​ರ ಕನ್ನಡ ಪ್ರೀತಿ: 'ಒಡೆಯ' ಸಿನಿಮಾದಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ ನೀಡಿದ ದಾಸ..!

news18
Updated:August 31, 2018, 5:14 PM IST
ದರ್ಶನ್​ರ ಕನ್ನಡ ಪ್ರೀತಿ: 'ಒಡೆಯ' ಸಿನಿಮಾದಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ ನೀಡಿದ ದಾಸ..!
news18
Updated: August 31, 2018, 5:14 PM IST
ನ್ಯೂಸ್ 18 ಕನ್ನಡ

ದರ್ಶನ್‍ರಂತೆಯೇ ಎಲ್ಲ ನಾಯಕರೂ ನಿರ್ಧರಿಸಿಬಿಟ್ಟರೆ ಎಷ್ಟು ಒಳ್ಳೆಯದ್ದಲ್ವಾ. ಇಂತಹ ಗುಣಗಳೇ ನೋಡಿ ದಾಸನನ್ನು ಕನ್ನಡಿಗರು ಮತ್ತಷ್ಟು ಮಗದಷ್ಟು ಪ್ರೀತಿಸೋ ಹಾಗೆ ಮಾಡ್ತಿರೋದು. ಹಾಗಾದರೆ ಚಾಲೆಂಜಿಂಗ್‍ಸ್ಟಾರ್ ತೆಗೆದುಕೊಂಡ ನಿರ್ಧಾರ ಏನು? ಇದನ್ನು ಉಳಿದ ನಟರೂ ಯಾಕೆ ಹಿಂಬಾಲಿಸಬೇಕು? ಎಂದು ತಿಳಿಯೋಕೆ ಈ ವರದಿ ಓದಿ...

ಚಾಲೆಂಜಿಂಗ್‍ಸ್ಟಾರ್ ದರ್ಶನ್ ಯಾವಾಗಲೂ ತಲೆಬಾಗೋದು ಅಭಿಮಾನಿಗಳಿಗೆ. ತನ್ನನ್ನು ಬೆಳೆಸಿದ ಈ ಮಣ್ಣಿಗೆ ಮತ್ತು ಕನ್ನಡಿಗರಿಗೆ. ಈಗ ದರ್ಶನ್ ತನ್ನನ್ನು ಬೆಳೆಸಿದವರು ಮತ್ತು ಹರಸಿದವರ ಋಣ ತೀರಿಸುತ್ತಿದ್ದಾರೆ. ಅದು ತಮ್ಮಲ್ಲಿರೋ ಅಪಾರ ಕನ್ನಡ ಪ್ರೀತಿಯನ್ನು ಧಾರೆ ಎರೆಯುವ ಮೂಲಕ.

ದರ್ಶನ್ ಮುಂದಿನ ಚಿತ್ರ 'ಒಡೆಯ' ಚಿತ್ರೀಕರಣ ಆರಂಭವಾಗುತ್ತಿದೆ. ಯಜಮಾನದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ದರ್ಶನ್ ತಮ್ಮ ಒಡೆಯ ಚಿತ್ರದಲ್ಲಿ ಸಂಪೂರ್ಣ ಕನ್ನಡದ ತಾರಾಗಣ ಮತ್ತು ತಂತ್ರಜ್ಞರು ಕನ್ನಡದವರೇ ಆಗಿರಬೇಕು ಅನ್ನೋ ಮನವಿಯನ್ನು ದರ್ಶನ್ ಮಾಡಿಕೊಂಡಿದ್ದಾರೆ. ದರ್ಶನ್ ಮನವಿಯನ್ನ ಆದೇಶದಂತೆ ನಡೆದುಕೊಳ್ಳುವ ಚಿತ್ರತಂಡ ಅದನ್ನು ಚಾಚೂ ತಪ್ಪದೇ ಪಾಲಿಸಲಿದೆ ಎನ್ನುತ್ತಾರೆ

ನಿರ್ದೇಶಕ ಎಂ.ಡಿ ಶ್ರೀಧರ್ ಹಾಗೂ ನಿರ್ಮಾಪಕ ಸಂದೇಶ್ ನಾಗರಾಜ್.

ಇದರ ಹಿಂದಿರೋ ಕಾರಣ ಅಂದರೆ, ದಾಸನಿಗೆ ಕರ್ನಾಟಕದಲ್ಲಿರೋ ದೊಡ್ಡ ಅಭಿಮಾನಿ ಬಳಗ. ಇನ್ನೂ ವಿಶೇಷ ಅಂದರೆ ದರ್ಶನ್‍ಗೆ ರಾಜ್ಯದಾದ್ಯಂತ ದೊಡ್ಡ ಮಾರುಕಟ್ಟೆಯಿದೆ.  ಬೇರೆ ಸ್ಟಾರ್​ಗಳಿಗೆ ಕರ್ನಾಟಕವನ್ನೂ ಮೀರಿದ ಮಾರುಕಟ್ಟೆಯಿದ್ದರೂ ದರ್ಶನ್‍ಗೆ ಕರ್ನಾಟಕದಲ್ಲೇ ಅದನ್ನೂ ಮೀರಿಸುವಷ್ಟು ಮಾರ್ಕೆಟ್ಮಾ ವ್ಯಾಲ್ಯೂ ಇದೆ.

ರಾಜ್ಯದಲ್ಲೇ ಕನ್ನಡಿಗರ ಮೇಲೆ ನಯವಾಗಿ ಆಗುತ್ತಿರುವ ಹಲ್ಲೆ,  ಎಲ್ಲವನ್ನೂ ಸಹಿಸಿಕೊಳ್ಳುವ ಕನ್ನಡಿಗರ ಮೃದು ಧೋರಣೆ, ನಮಗೆ ಪರಭಾಷೆಗಳಲ್ಲಿ ಥಿಯೇಟರ್ ಸಿಕ್ಕದಿದ್ದರೂ, ನಾವು ಪರಭಾಷೆಯ ಸಿನಿಮಾಗಳಿಗೆ ಥಿಯೇಟರ್​ಗಳನ್ನು ಧಾರಾಳವಾಗಿ ಧಾರೆ ಎಳೆದುಕೊಡುವುದು, ಇದೆಲ್ಲವನ್ನೂ ನೋಡುತ್ತಿದ್ದರೆ, ಮತ್ತೆ ಯಾವಾಗ ನಾವೂ ಸ್ವಂತಿಕೆ ಉಳಿಸಿಕೊಂಡು, ಸ್ವಾಭಿಮಾನ ಬೆಳೆಸಿಕೊಳ್ಳೋದು ಅನಿಸುತ್ತೆ. ಹೀಗೆ ಕುಗ್ಗಿರೋ ನಮಗೆ ದರ್ಶನ್ ತೆಗೆದುಕೊಂಡಿರುವ ಈ ನಿರ್ಧಾರ ಸಂತಸ ಮೂಡಿಸುತ್ತದೆ.
Loading...

ಇಲ್ಲಿ ಬಹಳ ಮುಖ್ಯವಾದ ವಿಚಾರ ಅಂದರೆ ದರ್ಶನ್ ತೆಗೆದುಕೊಳ್ಳೋ ಈ ನಿರ್ಧಾರ ಹಲವರಿಗೆ ಪ್ರೇರಣೆಯಾದರೆ, ಎಷ್ಟೋ ಕನ್ನಡ ಕಲಾವಿದರು ಮತ್ತು ತಂತ್ರಜ್ಞರು ಅವಕಾಶ ಸಿಕ್ಕುತ್ತದೆ. ದರ್ಶನ್ ಮಾಡುತ್ತಿರೋ ಕನ್ನಡದ ಕೆಲಸವನ್ನು ಬೇರೆ ಸ್ಟಾರ್​ಗಳೂ ಅಳವಡಿಸಿಕೊಂಡರೆ ನಮ್ಮೊಳಗಿನ ಕನ್ನಡತನ ಜಾಗೃತವಾಗುತ್ತದೆ.

ಇನ್ನು ದರ್ಶನ್ ಸಿನಿಮಾಗಳನ್ನು ನೋಡಿದರೂ ಸಹಜವಾಗಿಯೇ ಕನ್ನಡ ಪ್ರೇಮ ಮೇಳೈಸಿರುತ್ತೆ. ಕನ್ನಡ ಕಾಳಜಿ ಅತ್ಯಂತ ಹೆಚ್ಚು ಜಾಗೃತವಾಗುತ್ತಿರುವ ದಿನಗಳಿವು. ಸಿನಿಮಾ ಸ್ಟಾರ್​ಗಳೂ ಕೂಡ ಒಂದೊಂದು ವಿಷಯಗಳಲ್ಲಿ ಕನ್ನಡದ ಕಾಳಜಿ ಮೆರೆಯುತ್ತಿದ್ದಾರೆ. ಚಾಲೆಂಜಿಂಗ್‍ಸ್ಟಾರ್ ದರ್ಶನ್ ಈ ವಿಷಯದಲ್ಲಿ ಸದಾ ಒಂದು ಹೆಜ್ಜೆ ಮುಂದು..

ಅಭಿಮಾನಿಗಳಿಂದಲೇ ನಾನು ಅಂತ ಹೇಳುವ ದಾಸನ ಮುಂದಿನ ಚಿತ್ರಗಳಾದ 'ಕುರುಕ್ಷೇತ್ರ' ಮತ್ತು 'ಯಜಮಾನ' ಥಿಯೇಟರ್ ಬಾಗಿಲಿಗೆ ದೌಡಾಯಿಸುತ್ತಿವೆ. ಕನ್ನಡ ಪ್ರೀತಿ ಮೆರೆಯುತ್ತಿರೋ ದರ್ಶನ್ ಅಭಿಮಾನಿಗಳೂ ಕೂಡ ಸಿನಿಮಾ ಯಾವ ಬರುತ್ತೆ ಅಂತ ತುದಿಗಾಲಲ್ಲಿ ನಿಂತಿದ್ದಾರೆ.

 
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ