news18-kannada Updated:December 30, 2020, 7:18 AM IST
ರಾಜಶೇಖರ್ ಕೋಟ್ಯಾನ್ ಅವರ ತಾಯಿಯ ಮೂರ್ತಿ
ಉಡುಪಿ(ಡಿಸೆಂಬರ್. 30): ಹೆತ್ತು, ಹೊತ್ತು ಸಾಕಿ ಸಲುಹಿದ ಅಮ್ಮನ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಆದರೆ, ಹೆತ್ತಾಕೆಯ ನೆನಪಿಗಾಗಿ ಏನಾದರೂ ಮಾಡಬೇಕು ಅಂತ ಮಕ್ಕಳಿಗೆ ಇರುವ ಆಸೆ ಸಹಜ ಅಲ್ವಾ. ಹೀಗಾಗಿ ಚಿತ್ರ ನಟರೊಬ್ಬರು ಗತಿಸಿದ ಅಮ್ಮನ ನೆನಪಿಗಾಗಿ ಆಕೆಯ ಮೂರ್ತಿ ನಿರ್ಮಾಣ ಮಾಡಿ, ಗುಡಿ ಕಟ್ಟಿದ್ದಾರೆ. ದಿನ ನಿತ್ಯ ಪೂಜೆ ಮಾಡಿ ಹೆತ್ತಾಕೆಯ ಆಶೀರ್ವಾದ ಪಡೆಯುತ್ತಿದ್ದಾರೆ. ಪುಟ್ಟ ಮಗುವಿನ ಮೊದಲ ತೊದಲು ನುಡಿಯಲ್ಲಿ ಬರುವ ಮೊದಲ ಶಬ್ದ ಅಮ್ಮ ಅಮ್ಮ ಅಂದ್ರೆ ಅದೊಂದು ಅದ್ಭುತ ಅನನ್ಯ. ಜಗತ್ತಿನಲ್ಲಿ ಕೆಟ್ಟ ಮಕ್ಕಳಾದರು ಇರಬಹುದು, ಕೆಟ್ಟ ಅಮ್ಮ ಇರುವುದಕ್ಕೆ ಸಾಧ್ಯವಿಲ್ಲ. ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲಿ ಒಳಿತನ್ನೇ ಬಯಸುವ ತಾಯಿ ಅಂದ್ರೆ ಮಕ್ಕಳಿಗೂ ಇಷ್ಟನೇ ಹೀಗಾಗಿ ತನ್ನ ಹೆತ್ತಾಕೆಗೂ ಏನಾದರೂ ಕೊಡಬೇಕು ಅಂತ ಮಕ್ಕಳು ಆಸೆ ಪಡುತ್ತಾರೆ.
ಇದ್ದಾಗ ಮಾತ್ರವಲ್ಲ, ಗತಿಸಿದ ನಂತರವೂ ತಾಯಿ ನೆನಪಿಗಾಗಿ, ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಅಂತ ಹಿರಿಯ ನಟ, ನಿರ್ದೇಶಕ ನಿರ್ಮಾಪಕ ರಾಜಶೇಖರ್ ಕೋಟ್ಯಾನ್ ತನ್ನ ತಾಯಿ ದಿವಂಗತ ಕಲ್ಯಾಣಿ ಪೂಜಾರ್ತಿ ಅವರ ನೆನಪಿಗಾಗಿ ಹುಟ್ಟೂರು ಉಡುಪಿಯ ಸಾಂತೂರು ಗರಡಿ ಮನೆಯಲ್ಲಿ ಸುಂದರವಾದ ಗುಡಿ ಕಟ್ಟಿ, ಮೂರ್ತಿ ನಿರ್ಮಿಸಿ ಪ್ರತೀ ನಿತ್ಯ ಮಂಗಳಾರತಿ ಬೆಳಗುತ್ತಿದ್ದಾರೆ.
ರಾಜಸ್ಥಾನ ಜೈಪುರ ವೈಟ್ ಮಾರ್ಬಲ್ನಲ್ಲಿ ರಾಜಸ್ಥಾನಿ ಕಲಾವಿದ ಪೃಥ್ವಿರಾಜ್ ಅವರಿಂದ ಏಕಶಿಲಾ ಮೂರ್ತಿ ಕೆತ್ತನೆ ಕೆಲಸ ಮಾಡಿದ್ದಾರೆ. ಒಟ್ಟು ಆರು ತಿಂಗಳ ಕಾಲ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಮೂರ್ತಿಯನ್ನು ರಾಜಸ್ಥಾನದಲ್ಲಿ ನಿರ್ಮಿಸಿ ಊರಿಗೆ ತರಿಸಿಕೊಂಡಿದ್ದಾರೆ.
ಇದನ್ನು ಓದಿ :
ಹುಟ್ಟು ಹಬ್ಬದ ದಿನದಂದೇ ದೇಹದಾನ ; ಅರುಣ ಕುಲಕರ್ಣಿ ದಂಪತಿಗಳ ಕಾರ್ಯಕ್ಕೆ ಮೆಚ್ಚುಗೆ
ಮೊದಲು ತಾಯಿಯ ಪೋಟೋ ಕೊಟ್ಟು ಪೋಟೋದಲ್ಲಿ ಇದ್ದ ಹಾಗೆ ಮೂರ್ತಿ ನಿರ್ಮಾಣ ಮಾಡಿಸಿದ್ದಾರೆ. ಮೂರ್ತಿಯೂ ನೋಡುವುದಕ್ಕೂ ತಾಯಿಯಂತೆ ಇದ್ದು, ಮೂರ್ತಿ ನೋಡಿದ್ರೆ ತಾಯಿ ನೋಡದಷ್ಟೇ ಖುಷಿ ಆಗುತ್ತೆ ಎಂದು ರಾಜಶೇಖರ್ ಅವರ ಹೇಳುತ್ತಾರೆ.
ವಿಶ್ವದ ಅಪಾಯಕಾರಿ ಹಾವುಗಳನ್ನು ಹಿಡಿದ ಮಹಾಶೂರ; 15 ವರ್ಷಗಳಲ್ಲಿ 8,000 ಹಾವುಗಳನ್ನು ಹಿಡಿದಿದ್ದಾರೆ
ಒಟ್ಟಿನಲ್ಲಿ ಚಾಲೆಂಜಿಗ್ ಸ್ಟಾರ್ ನಟ ದರ್ಶನ್ ಅವರ ಗೆಳೆಯ ನಟ ರಾಜಶೇಖರ್ ಕೋಟ್ಯಾನ್ ಅವರು ತಮ್ಮ ಪ್ರೀತಿಯ ತಾಯಿಯನ್ನು ಇರುವಾಗಲೂ ಚೆನ್ನಾಗಿ ನೋಡಿಕೊಂಡು, ಗತಿಸಿದ ಮೇಲೂ ತಾಯಿ ಕಲ್ಯಾಣಿ ನೆನಪು ನೆನಪಲ್ಲಿ ಚಿರವಾಗಿ ಇರುವುವಂತೆ ಮಾಡಿದ್ದಾರೆ.
Published by:
G Hareeshkumar
First published:
December 30, 2020, 7:18 AM IST