Actor Darshan: ಅಭಿಮಾನಿಗಳ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೌನ್ಸರ್ಗಳ ದುರ್ವರ್ತನೆ; ವಿಡಿಯೋ ವೈರಲ್
D Boss Darshan: ದರ್ಶನ್ ಫ್ಯಾನ್ಸ್ಗಳನ್ನು ಏಕವಚನದಲ್ಲಿ ಬೆದರಿಸಿದ ಬೌನ್ಸರ್ಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ದರ್ಶನ್ ಅವರನ್ನು ಭೇಟಿ ಮಾಡಬೇಕು ಎಂದು ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಿಂದ ಹಿಂದಿರುಗಿದ್ದಾರೆ.
ಚಿಕ್ಕಮಗಳೂರು (ಆ.8): ಅಭಿಮಾನಿಗಳನ್ನು ದರ್ಶನ್ ದೇವರ ರೀತಿಯಲ್ಲಿ ನೋಡುತ್ತಾರೆ. ಅವರನ್ನು ಭೇಟಿ ಮಾಡಲು ಬಂದವರನ್ನು ಎಂದಿಗೂ ಅವರು ಹಾಗೆಯೇ ಕಳುಹಿಸಿದ ಉದಾಹರಣೆಯೇ ಇಲ್ಲ. ಜನ್ಮದಿನದ ವೇಳೆ ಅವರನ್ನು ಭೇಟಿ ಮಾಡಲು ಬಂದ ಅಭಿಮಾನಿಯನ್ನು ತಳ್ಳಿದ ಆಪ್ತರಿಗೆ ದರ್ಶನ್ ಬೈದಿದ್ದು ಇದಕ್ಕೆ ತಾಜಾ ಉದಾಹರಣೆ. ಈ ಮಧ್ಯೆ ದರ್ಶನ್ ಬೌನ್ಸರ್ಗಳು ಫ್ಯಾನ್ಸ್ ವಿರುದ್ಧ ದುರ್ವರ್ತನೆ ತೋರಿರುವ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಭದ್ರಾ ಜಲಾಶಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಭೇಟಿ ನೀಡಿದ್ದಾರೆ. ಜೊತೆಗೆ ಭದ್ರಾ ಅಭಯಾರಣ್ಯದಲ್ಲಿ ಸಫಾರಿ ನಡೆಸಿ ಫೋಟೋಗ್ರಫಿ ಕೂಡ ಅವರು ಮಾಡಲಿದ್ದಾರೆ. ಇದಕ್ಕೂ ಮೊದಲು ದರ್ಶನ್ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಡ್ಯಾಂಗೆ ಭೇಟಿ ನೀಡಿದ್ದರು. ದರ್ಶನ್ ಬರುತ್ತಿದ್ದಾರೆ ಎನ್ನುವ ವಿಚಾರ ತಿಳಿದ ಅವರ ಕೆಲ ಅಭಿಮಾನಿಗಳು ಡ್ಯಾಂ ಬಳಿ ಜಮಾಯಿಸಿದ್ದರು. ಈ ವೇಳೆ ದರ್ಶನ್ ಅಭಿಮಾನಿಗಳೆದುರು ಬೌನ್ಸರ್ಗಳು ದುರ್ವರ್ತನೆ ತೋರಿದ್ದಾರೆ.
ದರ್ಶನ್ ಬರುತ್ತಿದ್ದ ವಿಡಿಯೋ ಮಾಡುತ್ತಿದ್ದವನ ಮೊಬೈಲ್ಗೆ ಬೌನ್ಸರ್ಗಳು ಗುದ್ದಿದ್ದಾರೆ. ಏಯ್ ಹೋಗ್ರೋ ಹೋಗ್ರೋ ಕೊರೊನಾ ಅಂತ ಅವಾಜ್ ಹಾಕಿದ್ದಾರೆ. ಈ ವೇಳೆ ದರ್ಶನ್ ಸುಮ್ಮನೆ ಇದ್ದರೂ ಬೌನ್ಸರ್ಗಳು ಕಿರಿಕಿರಿ ಮಾಡಿದ್ದಾರೆ.
ದರ್ಶನ್ ಫ್ಯಾನ್ಸ್ಗಳನ್ನು ಏಕವಚನದಲ್ಲಿ ಬೆದರಿಸಿದ ಬೌನ್ಸರ್ಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ದರ್ಶನ್ ಅವರನ್ನು ಭೇಟಿ ಮಾಡಬೇಕು ಎಂದು ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಿಂದ ಹಿಂದಿರುಗಿದ್ದಾರೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ