Darshan: ದರ್ಶನ್​ ತೋಟದ ಮನೆಗೆ ಬಂದ ಹೊಸ ಅತಿಥಿಗಳು: ವೈರಲ್​ ಆಗುತ್ತಿದೆ ಡಿಬಾಸ್​ ಹೊಸ ವಿಡಿಯೋ..!

ಇತ್ತೀಚೆಗಷ್ಟೆ ನಟ ದರ್ಶನ್​ ತಮ್ಮ ಸ್ನೇಹಿತ ವಿನಯ್​ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿದ್ದರು. ಜೊತೆಗೆ ಅವರ ತೋಟದಲ್ಲಿದ್ದ ಎತ್ತಿನ ಬಂಡಿ ಏರಿ ಅಲ್ಲಿನ ರಸ್ತೆಗಳಲ್ಲಿ ಅಡ್ಡಾಡಿದ್ದರು. ಆ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಈಗ ದರ್ಶನ್​ರ ಮತ್ತೊಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಎತ್ತಿನ ಬಂಡಿ ಏರಿದ ದರ್ಶನ್​

ಎತ್ತಿನ ಬಂಡಿ ಏರಿದ ದರ್ಶನ್​

  • Share this:
ನಟ ದರ್ಶನ್​ ಅವರ ಯಾವುದೇ ಲೆಟೆಸ್ಟ್​ ಅಪ್ಡೇಟ್​ ಹಾಗೂ ವಿಡಿಯೋಗಳು ಸಿಕ್ಕರೆ ಸಾಕು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡುತ್ತಾರೆ. ದರ್ಶನ್​ ತಮ್ಮ ಅಧಿಕೃತ ಪುಟದಲ್ಲಿ ಹಂಚಿಕೊಳ್ಳುವ ಮೊದಲೇ ಎಷ್ಟೋ ಫೋಟೋ ಹಾಗೂ ವಿಡಿಯೋ ತುಣುಕುಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುತ್ತವೆ.  ಇತ್ತೀಚೆಗಷ್ಟೆ ನಟ ದರ್ಶನ್​ ತಮ್ಮ ಸ್ನೇಹಿತ ವಿನಯ್​ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿದ್ದರು. ಜೊತೆಗೆ ಅವರ ತೋಟದಲ್ಲಿದ್ದ ಎತ್ತಿನ ಬಂಡಿ ಏರಿ ಅಲ್ಲಿನ ರಸ್ತೆಗಳಲ್ಲಿ ಅಡ್ಡಾಡಿದ್ದರು. ಆ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು.

Actor Darshan bought two ox and he rided a bullock cart in his farmhouse
ಮಾಜಿ ಸಚಿವ ಹಾಗೂ ದರ್ಶನ್​ ಅವರ ಸ್ನೇಹಿತ ವಿನಯ್ ಕುಲಕರ್ಣಿ ಅವರ ತೋಟದಲ್ಲಿ ಎತ್ತಿನ ಸವಾರಿ ಮಾಡಿದ ದರ್ಶನ್​

ಇದಾದ ನಂತರ ಮತ್ತೊಮ್ಮೆ ದರ್ಶನ್​ ಎತ್ತಿನ ಬಂಡಿ ಸವಾರಿ ಮಾಡಿದ್ದಾರೆ. ಹೌದು, ಮೈಸೂರಿನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಡಿಬಾಸ್​ ಎತ್ತಿನ ಬಂಡಿ ಏರಿ ಆನಂದಿಸಿದ್ದಾರೆ. ವಿಡಿಯೋ ನೋಡಿದರೆ, ಅದರಲ್ಲಿ ಅಲ್ಲೇ ನಿಂತಿರುವ ಒಬ್ಬರು ಈ ಎತ್ತುಗಳನ್ನು ನಿನ್ನೆಯಷ್ಟೆ ತೋಟಕ್ಕೆ ತರಲಾಗಿದೆ ಎಂದು ಹೇಳುತ್ತಾರೆ. ಸದ್ಯ ದರ್ಶನ್​ ಅವರ ಈ ಲೆಟೆಸ್ಟ್​ ವಿಡಿಯೋ ವೈರಲ್​ ಆಗುತ್ತಿದೆ.






ಹೌದು, ವಿನಯ್​ ಕುಲಕರ್ಣಿ ಅವರ ಮನೆಯಿಂದ ಬಂದ ನಂತರ, ದರ್ಶನ್​ ತಮ್ಮ ತೋಟಕ್ಕೆ  ಎರಡು ಎತ್ತುಗಳನ್ನು ತರಿಸಿದ್ದಾರಂತೆ. ದರ್ಶನ್​ ಅವರಿಗೆ ಪ್ರಾಣಿ-ಪಕ್ಷಿಗಳೆಂದರೆ ಎಷ್ಟು ಇಷ್ಟ ಅನ್ನೋದು ಗೊತ್ತೇ ಇದೆ. ತೋಟದ ಮನೆಯಲ್ಲಿ ಹಸುಗಳು, ಕುದುರೆ, ನಾಯಿ, ಪಕ್ಷಿ ಹೀಗೆ ಹಲಾವರು ಜೀವಿಗಳನ್ನು ಸಾಕಿಕೊಂಡಿದ್ದಾರೆ ದಾಸ.



ಸಮಯ ಸಿಕ್ಕಾಗಲೆಲ್ಲ ದರ್ಶನ್​ ತಮ್ಮ ತೋಟದ ಮನೆಗೆ ಹೋಗಿ ಕಾಲ ಕಳೆಯುತ್ತಾರೆ. ತಾವು ಸಾಕಿರುವ ಪ್ರಾಣಿ-ಪಕ್ಷಿಗಳ ಆರೈಕೆ ಮಾಡುತ್ತಾ ನೆಮ್ಮದಿ ಕಾಣುತ್ತಾರೆ. ಅವರು ತೋಟದಲ್ಲಿ ಪ್ರಾಣಿಗಳೊಂದಿಗೆ ಕಾಲ ಕಳೆಯುವ ಹಲವಾರು ವಿಡಿಯೋಗಳು ವೈರಲ್​ ಈ ಹಿಂದೆ ಆಗಿವೆ.
Published by:Anitha E
First published: