ಮತ್ತೆ ಮುನ್ನೆಲೆಗೆ ಬಂದ ಕಿಚ್ಚ-ದಚ್ಚು ವೈಮನಸ್ಸು; ವೇದಿಕೆ ಮೇಲೆ ಸುದೀಪ್​ಗೆ ಆಯ್ತಾ ಅವಮಾನ?

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು. ಈ ಕಾರಣಕ್ಕೆ ಸುದೀಪ್ ಅವರನ್ನು ವಿಡಿಯೋದಿಂದ ಕೈಬಿಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ದರ್ಶನ್​ ಹಾಗೂ ಕಿಚ್ಚ ಸುದೀಪ್​ ನಡುವಿನ ಮನಸ್ತಾಪ ಗೊತ್ತೇ ಇದೆ. ಇದೇ ಕಾರಣಕ್ಕೆ ಆಗಾಗ ಈ ಸ್ಟಾರ್​ಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜಗಳವಾಡುತ್ತಲೇ ಇರುತ್ತಾರೆ.

ದರ್ಶನ್​ ಹಾಗೂ ಕಿಚ್ಚ ಸುದೀಪ್​ ನಡುವಿನ ಮನಸ್ತಾಪ ಗೊತ್ತೇ ಇದೆ. ಇದೇ ಕಾರಣಕ್ಕೆ ಆಗಾಗ ಈ ಸ್ಟಾರ್​ಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜಗಳವಾಡುತ್ತಲೇ ಇರುತ್ತಾರೆ.

 • Share this:
  ಬೆಂಗಳೂರು (ಜ.30): ಅದು ನಟ ಆದಿತ್ಯ ಅಭಿನಯದ ‘ಮುಂದುವರೆದ ಅಧ್ಯಾಯ’ ಚಿತ್ರದ ಸುದ್ದಿಗೋಷ್ಠಿ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಅಭಿಮಾನಿಗಳು-ಪತ್ರಕರ್ತರು ನೆರೆದಿದ್ದರು. ಡಿ-ಬಾಸ್​ ದರ್ಶನ್​ ವೇದಿಕೆ ಮೇಲೆ ಕೂತಿದ್ದರು. ಈ ವೇಳೆ ಪ್ರಸಾರಗೊಂಡ ವಿಡಿಯೋ ಒಂದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

  ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾರಂಗದ ನಿರ್ದೇಶಕರ ವಿಡಿಯೋ ಪ್ರಸಾರ ಮಾಡಲಾಗಿತ್ತು. ವೈ.ವಿ. ರಾವ್ ಅವರಿಂದ ಹಿಡಿದು ಪ್ರಶಾಂತ್ ನೀಲ್​​ವರೆಗೆ ಎಲ್ಲ ನಿರ್ದೇಶಕರಿಗೆ ವಿಡಿಯೋ ಮೂಲಕ ಧನ್ಯವಾದ ಹೇಳಲಾಗಿತ್ತು. ಆದರೆ, ಈ ವಿಡಿಯೋದಲ್ಲಿ ಕಿಚ್ಚ ಸುದೀಪ್​ ಉಲ್ಲೇಖ ಎಲ್ಲಿಯೂ ಇಲ್ಲದಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು. ಈ ಕಾರಣಕ್ಕೆ ಸುದೀಪ್ ಅವರನ್ನು ವಿಡಿಯೋದಿಂದ ಕೈಬಿಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

  ಇದನ್ನೂ ಓದಿ: ಬಂಡೀಪುರ ಅಭಯಾರಣ್ಯದಲ್ಲಿ ನಟ ಅಕ್ಷಯ್​​ ಕುಮಾರ್ ಆ್ಯಕ್ಷನ್‌ ಕಟ್- ಯಾಕೆ ಗೊತ್ತಾ?

  ಸುದೀಪ್ ಫೋಟೋ ಕೈ ಬಿಟ್ಟ ವಿಚಾರಕ್ಕೆ ನಟ ಆದಿತ್ಯ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ವಿಡಿಯೋ ನೋಡಿರಲಿಲ್ಲ. ವಿಡಿಯೋ ಮಾಡಿದವರನ್ನು ಕೇಳಿ. ಈ ವಿಚಾರದಲ್ಲಿ ನಾನು ಏನನ್ನು ಹೇಳುವುದಿಲ್ಲ," ಎಂದು ಅವರು ನುಣಿಚಿಕೊಂಡಿದ್ದಾರೆ.

  ಇನ್ನು, ಇದು ಕೇವಲ ಕಾಕತಾಳೀಯ ಎಂದು ಹೇಳಲಾಗುತ್ತಿದೆ. ದರ್ಶನ್​ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಆದರೆ, ಅವರಿಗೆ ಈ ವಿಚಾರ ಗಮನಕ್ಕೆ ಬರದೆಯೂ ಇರಬಹುದು. ಹೀಗಾಗಿ ಈ ವಿಚಾರದಲ್ಲಿ ದರ್ಶನ್​-ಸುದೀಪ್​ ಹೆಸರು ಎಳೆದು ತರುವುದು ತಪ್ಪು ಎನ್ನುತ್ತಿದ್ದಾರೆ ಅನೇಕರು. ಇನ್ನು, ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡವೇ ಉದ್ದೇಶಪೂರ್ವಕವಾಗಿ ಸುದೀಪ್​ ಹೆಸರು ಕೈಬಿಟ್ಟಿರಬಹುದು ಎನ್ನುವ ಮಾತು ಕೇಳಿ ಬಂದಿದೆ.
  First published: