Fans War: ಎರಡನೇ ಸುತ್ತಿಗೆ ಎಂಟ್ರಿ ಕೊಟ್ಟ ಫ್ಯಾನ್ಸ್​ ವಾರ್: ಪರಭಾಷಾ ಚಿತ್ರಗಳ ಜೂನಿಯರ್ ಆರ್ಟಿಸ್ಟ್ ಅಂದಿದ್ಯಾರಿಗೆ ?

Sudeep - Darshan Fans War: ಪೈಲ್ವಾನ್ ಪೈರಸಿಯಿಂದ ಪ್ರಾರಂಭವಾದ ಕಿಚ್ಚ, ದಚ್ಚು ಫ್ಯಾನ್ಸ್​ ವಾರ್ ಮತ್ತು ಸ್ಟಾರ್​ವಾರ್​ ಇನ್ನೇನು ಮುಗೀತು ಅನ್ನುತ್ತಿರುವಾಗಲೇ, ಒಂದು ಸ್ಮಾಲ್ ಬ್ರೇಕ್ ತಗೊಂಡು ಸೆಕೆಂಡ್ ರೌಂಡ್‍ಗೆ ಎಂಟ್ರಿ ಕೊಟ್ಟಿದೆ. ಅಂತಹ ಕುರುಕ್ಷೇತ್ರ ಯುದ್ಧವೇ 18 ದಿನಗಳಿಗೆ ಮುಗಿಯಿತು. ಆದರೆ ಸ್ಯಾಂಡಲ್‍ವುಡ್ ಕುರುಕ್ಷೇತ್ರ ಮುಗಿಯುತ್ತಲೇ ಇಲ್ಲವಲ್ಲ ಅಂತ, ಚಿತ್ರರಂಗದ ಮಂದಿಯೂ ಅಸಮಾಧಾನಗೊಂಡಿದ್ದಾರೆ.

Anitha E | news18-kannada
Updated:October 7, 2019, 2:57 PM IST
Fans War: ಎರಡನೇ ಸುತ್ತಿಗೆ ಎಂಟ್ರಿ ಕೊಟ್ಟ ಫ್ಯಾನ್ಸ್​ ವಾರ್: ಪರಭಾಷಾ ಚಿತ್ರಗಳ ಜೂನಿಯರ್ ಆರ್ಟಿಸ್ಟ್ ಅಂದಿದ್ಯಾರಿಗೆ ?
ದರ್ಶನ್​-ಸುದೀಪ್​
  • Share this:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಬಾದ್‍ಶಾ ಕಿಚ್ಚ ಸುದೀಪ್ ಅವರ ಎರಡನೇ ಸುತ್ತಿನ ಫ್ಯಾನ್ಸ್​ ವಾರ್ ಶುರುವಾಗಿದೆ. ಎಲ್ಲ ಮುಗೀತು ಎನ್ನುತ್ತಿರುವಾಗಲೇ ಈ ಸೆಕೆಂಡ್ ರೌಂಡ್ ಟ್ವೀಟ್‍ವಾರ್ ಹಲವರಿಗೆ ಶಾಕ್ ನೀಡಿದೆ. ಮೊದಲು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿದ್ದವರು, ಈಗ ನೇರವಾಗಿಯೇ ಹಲ್ಲಾಬೋಲ್ ಅಂದಿದ್ದಾರೆ.

'ಪೈಲ್ವಾನ್' ಪೈರಸಿಯಿಂದ ಪ್ರಾರಂಭವಾದ ಕಿಚ್ಚ, ದಚ್ಚು ಫ್ಯಾನ್ಸ್​ ವಾರ್ ಮತ್ತು ಸ್ಟಾರ್​ವಾರ್​ ಇನ್ನೇನು ಮುಗೀತು ಅನ್ನುತ್ತಿರುವಾಗಲೇ, ಒಂದು ಸ್ಮಾಲ್ ಬ್ರೇಕ್ ತಗೊಂಡು ಸೆಕೆಂಡ್ ರೌಂಡ್‍ಗೆ ಎಂಟ್ರಿ ಕೊಟ್ಟಿದೆ. ಅಂತಹ 'ಕುರುಕ್ಷೇತ್ರ' ಯುದ್ಧವೇ 18 ದಿನಗಳಿಗೆ ಮುಗಿಯಿತು. ಆದರೆ ಸ್ಯಾಂಡಲ್‍ವುಡ್ ಕುರುಕ್ಷೇತ್ರ ಮುಗಿಯುತ್ತಲೇ ಇಲ್ಲವಲ್ಲ ಅಂತ, ಚಿತ್ರರಂಗದ ಮಂದಿಯೂ ಅಸಮಾಧಾನಗೊಂಡಿದ್ದಾರೆ.

ದಚ್ಚು-ಕಿಚ್ಚನ ಸ್ಟಾರ್ ವಾರ್​ ಮತ್ತೊಂದು ಹಂತಕ್ಕೆ ಹೋಗುತ್ತಿದೆ


ಕಳೆದ ವಾರದವರೆಗೂ ಟ್ವಿಟರ್​ನಲ್ಲಿ ಫ್ಯಾನ್ಸ್​ವಾರ್ ಜೋರಾಗೇ ನಡೀತಿತ್ತು. ಫ್ಯಾನ್ಸ್ ಪೇಜ್‍ಗಳೂ ಬಹಿರಂಗ ಪತ್ರಗಳ ಮೂಲಕ ಫ್ಯಾನ್ಸ್​ವಾರ್​ಗೆ ಎಂಟ್ರಿ ಕೊಟ್ಟಿದ್ದವು. ಇನ್ನೇನು ಪರಿಸ್ಥಿತಿ ಕೈಮೀರಿತು ಅನ್ನುತ್ತಿರುವಾಗಲೇ ಟ್ವೀಟ್ ಮಾಡುವ ಮೂಲಕ ದರ್ಶನ್ ಹಾಗೂ ಬಹಿರಂಗ ಪತ್ರದ ಮುಖೇನ ಸುದೀಪ್, ಈ ಫ್ಯಾನ್ಸ್‍ವಾರ್‍ಗೆ ಬ್ರೇಕ್ ಹಾಕಲು ಯತ್ನಿಸಿದ್ದರು. ಟ್ವಿಟರ್​ನಲ್ಲಿ ಜೋರಾಗಿ ನಡೀತಿದ್ದ ಈ ಫ್ಯಾನ್ಸ್​ವಾರ್ ದಿನಕ್ರಮೇಣ ಕಡಿಮೆಯಾಗುತ್ತಿತ್ತು.

ಫ್ಯಾನ್ಸ್​ ವಾರ್​ ಕುರಿತಾದ ಟ್ವೀಟ್​


ಕಳೆದ ವಾರವಷ್ಟೇ ಕಿಚ್ಚ ಸುದೀಪ್ 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್‍ಗಾಗಿ ಪೋಲ್ಯಾಂಡ್‍ಗೆ ಹೊರಟರು. ಸುಮಾರು 15 ದಿನಗಳ ಶೆಡ್ಯೂಲ್ ಪ್ಲ್ಯಾನ್ ಮಾಡಲಾಗಿದ್ದ ಕಾರಣ, ಕಿಚ್ಚ ಬೆಂಗಳೂರಿನಲ್ಲೇ ನಡೆದ ಮೆಗಾಸ್ಟಾರ್ ಚಿರಂಜೀವಿಯವರ ಬಹುನಿರೀಕ್ಷಿತ 'ಸೈರಾ ನರಸಿಂಹರೆಡ್ಡಿ' ಚಿತ್ರದ ಪ್ರೀರಿಲೀಸ್ ಈವೆಂಟ್‍ಗೂ ಬರಲು ಸಾಧ್ಯವಾಗಿರಲಿಲ್ಲ.

ಮತ್ತೊಂದೆಡೆ ಫ್ಯಾನ್ಸ್​ವಾರ್ ಕುರಿತು ಫ್ಯಾನ್ಸ್ ಅಸೋಸಿಯೇಷನ್ ಹಾಗೂ ಫ್ಯಾನ್ಸ್ ಪೇಜ್ ಅಡ್ಮಿನ್‍ಗಳ ಜತೆ ಸಭೆ ನಡೆಸಿದ ದಚ್ಚು, ತಾವೂ ದೂರದ ಕೀನ್ಯಾಗೆ ಹೊರಟರು. ಮಸಾಯಿ ಮರಾ ರಾಷ್ಟ್ರೀಯ ಉದ್ಯಾನ ಸೇರಿದಂತೆ ಎರಡು, ಮೂರು ದಿನಗಳ ಕಾಲ ಅಲ್ಲಿನ ದಟ್ಟ ಕಾಡುಗಳಲ್ಲಿ ಅಲೆದಾಡಿದರು. ಕಾಡು ಮೃಗಗಳು ಬೇಟೆಯಾಡೋದನ್ನು ಫೋಟೋಗಳಲ್ಲಿ ಸೆರೆ ಹಿಡಿದ್ರು, ಮಸಾಯಿ ಅರಣ್ಯವಾಸಿಗಳ ಜತೆ ಕಾಲ ಕಳೆದು, ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.ಇದನ್ನೂ ಓದಿ: ಹಾಡಿಗೆ ಹೆಜ್ಜೆ ಹಾಕುತ್ತಾ ಟಾಪ್​ ತೆಗೆದು ಎಸೆದ ಸ್ಯಾಂಡಲ್​ವುಡ್​ ನಟಿಯ ವಿಡಿಯೋ ವೈರಲ್​..!

'ಪೈಲ್ವಾನ್' ಪೈರಸಿಯಿಂದ ಶುರುವಾಗಿದ್ದ ದಚ್ಚು, ಕಿಚ್ಚ ಅಭಿಮಾನಿಗಳ ನಡುವಿನ ವಾರ್, ಈಗ 'ಸೈರಾ ನರಸಿಂಹರೆಡ್ಡಿ' ಚಿತ್ರದಿಂದ ಮತ್ತಷ್ಟು ಜೋರಾಗಿದೆ. 'ಸೈರಾ' ಸಿನಿಮಾಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಿಚ್ಚ ಸುದೀಪ್‍ರ ಅವುಕುರಾಜು ಪಾತ್ರಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಕಡಿಮೆ ಸಮಯ ಸ್ಕ್ರೀನ್ ಮೇಲೆ ಬಂದಿದ್ದರೂ, ತಮ್ಮ ಅದ್ಭುತ ನಟನೆಯಿಂದ ಕಿಚ್ಚ ಸುದೀಪ್ ಎಲ್ಲರನ್ನೂ ಸೆಳೆದಿದ್ದಾರೆ.

ಸ್ಟಾರ್ ವಾರ್ ಕುರಿತಾದ ಟ್ವೀಟ್​


'ಪೈಲ್ವಾನ್​' ಪೈಸರಸಿ ಕುರಿತು ಸುದೀಪ್​ ಮಾಡಿದ್ದ ಟ್ವೀಟ್​


ಈಗ ಇದೇ 'ಸೈರಾ' ಮತ್ತು ಸುದೀಪ್ ಪಾತ್ರವನ್ನು ಟ್ರಾಲ್ ಮಾಡಲಾಗುತ್ತಿದೆ. ದರ್ಶನ್ ಫ್ಯಾನ್ಸ್ ಪೇಜ್‍ನಲ್ಲಿ ಪರಭಾಷೆಯ ಐತಿಹಾಸಿಕ ಸಿನಿಮಾಗಳಲ್ಲಿ ಸೈಡ್‍ರೋಲ್‍ನಲ್ಲಿ ನಟಿಸುವ ಕೆಲ ಜೂನಿಯರ್ ಆರ್ಟಿಸ್ಟ್‍ಗಳಿದ್ದಾರೆ. ಆದರೆ ನಮ್ಮ ಡಿಬಾಸ್ ದರ್ಶನ್‍ನಂತಹ ಸೂಪರ್​ಸ್ಟಾರ್​, ತಾವೇ ಎರಡು ಐತಿಹಾಸಿಕ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಇಂಡಸ್ಟ್ರಿ ಹಿಟ್ ಕೊಟ್ಟಿದ್ದಾರೆ ಎಂದು ಕಾಲೆಳೆದಿದ್ದಾರೆ. ಜೊತೆಗೆ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಹಾಗೂ 'ಕುರುಕ್ಷೇತ್ರ' ಚಿತ್ರಗಳ ಪೋಸ್ಟರ್​ಗಳನ್ನೂ ಶೇರ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಮಾತ್ರವಲ್ಲ ಅವ್ರ ಫ್ಯಾನ್ಸ್ ಮೇಲೂ ದಚ್ಚು ಅಭಿಮಾನಿಗಳು, ಗುಡುಗಿದ್ದಾರೆ. ಸುದೀಪ್ ಅಭಿಮಾನಿಗಳು 'ಯಜಮಾನ' ಚಿತ್ರವನ್ನು ಪೈರಸಿ ಮಾಡಿರದಿದ್ರೆ, 100 ಕೋಟಿ ಕಲೆಕ್ಷನ್ ಮಾಡುತ್ತಿತ್ತು ಅಂತ ದರ್ಶನ್ ಫ್ಯಾನ್ಸ್ ಕಿಚ್ಚನ ಅಭಿಮಾನಿಗಳ ಮೇಲೆ ನೇರ ಆರೋಪ ಮಾಡಿದ್ದಾರೆ.

ಇವರಿಗೆ ಬೇರೆ ನಟರ ಐತಿಹಾಸಿಕ ಸಿನಿಮಾದಲ್ಲಿ ಸೈಡ್ ರೋಲ್ ಮಾಡಿ ಅಭ್ಯಾಸ ಇಲ್ಲ, ಬಾಸ್ ಕೈ ಇಟ್ರೆ 'ಮದಕರಿನಾಯಕ'. ಇಂತಹ ಪಾತ್ರ ಮಾಡೋಕೆ ಯೋಗ್ಯತೆ ಇರಬೇಕು ಅಂತಲೂ ದಚ್ಚು ಫ್ಯಾನ್ಸ್ ಕಿಚ್ಚನಿಗೆ ಕಿಚಾಯಿಸಿದ್ದಾರೆ. 'ಮದಕರಿನಾಯಕ' ಜೀವನಾಧಾರಿತ ಚಿತ್ರದಲ್ಲಿ ದರ್ಶನ್ ನಟಿಸುತ್ತಿರುವ ಕಾರಣ, ಮತ್ತೊಂದು ಬಯೋಪಿಕ್‍ನಿಂದ ಸುದೀಪ್ ಹೊರನಡೆದಿದ್ದರು. ಈಗ ಅದೇ ವಿಷಯವನ್ನು ಕೆದಕಿ, ಸುದೀಪ್ ಅಭಿಮಾನಿಗಳು ಕೆರಳುವಂತೆ ಮಾಡಿದ್ದಾರೆ.

ಇದನ್ನೂ ಓದಿ: Kiara Advani: ಇಟಲಿಯ ಬೀಚ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಕಿಯಾರಾ ..!

ಹಾಗಂತ ಸುದೀಪ್ ಅಭಿಮಾನಿಗಳೇನೂ ಸುಮ್ಮನಿಲ್ಲ. ದರ್ಶನ್ ಮತ್ತವರ ಅಭಿಮಾನಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವ್ರೂ ಟ್ವೀಟ್​ಗಳನ್ನು ಅಸ್ತ್ರಗಳನ್ನಾಗಿ ಪ್ರಯೋಗಿಸುತ್ತಲೇ ಇದ್ದಾರೆ. ಕಿಚ್ಚ ಸುದೀಪ್ ಅವರನ್ನು ಶ್ರೀಕೃಷ್ಣನಿಗೆ ಹಾಗೂ ದರ್ಶನ್‍ರನ್ನು ಕಂಸನಿಗೆ ಹೋಲಿಸಿರುವ ಕೆಲವರು ಇದು ಧರ್ಮ, ಅಧರ್ಮಗಳ ನಡುವಿನ ಯುದ್ಧ ಅಂತ ಕದನವಿರಾಮದಲ್ಲೂ ರಣರಂಗದಲ್ಲಿ ಗರ್ಜಿಸಿದ್ದಾರೆ.

ಹೀಗೆ ಒಂದು ಕ್ಷಣ ಸೈಲೆಂಟಾಗುವ ಈ ಫ್ಯಾನ್ಸ್ ವಾರ್ ಮತ್ತೊಂದು ಕ್ಷಣದಲ್ಲೇ ವೈಲೆಂಟಾಗುತ್ತಿದೆ. ಅತ್ತ ಖುದ್ದು ಕಿಚ್ಚ ಸುದೀಪ್ ಮತ್ತು ಡಿಬಾಸ್ ದರ್ಶನ್, ಸ್ಟಾರ್​ವಾರ್​ನಿಂದ ದೂರ ಉಳಿದಿದ್ದಾರೆ. ಆದರೆ ಅವರ ಫ್ಯಾನ್‍ಗಳ ವಾರ್​ಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಅವರು ಇವರ, ಇವರು ಅವರ ಕಾಲೆಳೆಯೋದು, ಅಣಕಿಸೋದು, ಕೆಣಕೋದು ಸಾಮಾನ್ಯವಾಗಿ ಬಿಟ್ಟಿದೆ.

ಇದನ್ನೂ ಓದಿ: Sye Raa Collections: ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿದೆ ಮೆಗಾಸ್ಟಾರ್​ ಚಿರು-ರಾಮ್​ ಚರಣ್​ ಜೋಡಿ..!

ಒಂದೆಡೆ ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ 3', 'ದಬಾಂಗ್ 3', 'ಫ್ಯಾಂಟಮ್' ಸಿನಿಮಾಗಳು ರೆಡಿಯಾಗುತ್ತಿವೆ. ಮತ್ತೊಂದೆಡೆ ದರ್ಶನ್‍ರ 'ರಾಬರ್ಟ್', 'ಒಡೆಯ', 'ಮದಕರಿನಾಯಕ' ಚಿತ್ರಗಳು ಸಿದ್ಧವಾಗುತ್ತಿವೆ. ಇನ್ನೂ ಸ್ಟಾರ್​ ವಾರ್​ ನಿಲ್ಲದೇ, ಫ್ಯಾನ್ಸ್​ ವಾರ್ ಕೂಡ ಹೀಗೇ ಮುಂದುವರಿದರೆ, ಇಬ್ಬರ ಸಿನಿಮಾಗಳಿಗೂ ನಷ್ಟವಾಗೋದು ಖಚಿತ ಎನ್ನಲಾಗುತ್ತಿದೆ. ಇದು ಚಿತ್ರರಂಗಕ್ಕೂ ಕೆಟ್ಟ ಬೆಳವಣಿಗೆ ಎಂಬ ಮಾತುಗಳು ಗಾಂಧಿನಗರದಿಂದಲೂ ಕೇಳಿಬರುತ್ತಿದೆ.

ಹೀಗಾಗಿಯೇ ನಿರ್ಮಾಪಕರ, ಹಾಗೂ ಚಿತ್ರರಂಗದ ಹಿತದೃಷ್ಟಿಯಿಂದ ಮತ್ತು ತಮ್ಮ ಏಳಿಗೆಗಾಗಿ, ದಚ್ಚು ಮತ್ತು ಕಿಚ್ಚ ಯುದ್ಧ ವಿರಾಮ ಘೋಷಿಸಲೇಬೇಕಿದೆ. ಅಭಿಮಾನಿಗಳಲ್ಲಿ ಒಗ್ಗಟ್ಟಿನ ಮಂತ್ರ ಮೂಡಿಸಬೇಕಿದೆ.

- ಹರ್ಷವರ್ಧನ್,

Rana Daggubati: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ರಾಣಾ: ಚಿಕಿತ್ಸೆ ಪಡೆದು ಭಾರತದತ್ತ ಮುಖ ಮಾಡಿದ ಬಲ್ಲಾಳದೇವ..!


First published:October 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ