ರಕ್ಷಿತ್​​​ ಶೆಟ್ಟಿ ‘777 ಚಾರ್ಲಿ‘ ಚಿತ್ರತಂಡ ಸೇರಿಕೊಂಡ ಹೊಸ ಅತಿಥಿ; ಅದ್ಧೂರಿ ಸ್ವಾಗತ ಮಾಡಿದ ಪುಷ್ಕರ್​​

777 Charlie: ‘777 ಚಾರ್ಲಿ’ ಸಿನಿಮಾದಲ್ಲಿ ದಾನಿಶ್​ ಸೇಠ್​​​​ ಕರ್ಷನ್​ ರಾಯ್​​​ ಹೆಸರಿನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಅವರ ಪಾಲಿನ ಚಿತ್ರೀಕರಣ ಮುಗಿದಿದೆ. ಚಿತ್ರದ ಮಧ್ಯೆ ಅವರ ಪಾತ್ರ ಬಂದು ಹೋಗಲಿದೆ.

news18-kannada
Updated:July 1, 2020, 3:24 PM IST
ರಕ್ಷಿತ್​​​ ಶೆಟ್ಟಿ ‘777 ಚಾರ್ಲಿ‘ ಚಿತ್ರತಂಡ ಸೇರಿಕೊಂಡ ಹೊಸ ಅತಿಥಿ; ಅದ್ಧೂರಿ ಸ್ವಾಗತ ಮಾಡಿದ ಪುಷ್ಕರ್​​
777 ಚಾರ್ಲಿ
  • Share this:
‘ಅವನೇ ಶ್ರೀಮನ್ನಾರಾಯಣ‘ ಅವತಾರದಲ್ಲಿ ಕಾಣಿಸಿಕೊಂಡಿದ್ದ ರಕ್ಷಿತ್​ ಶೆಟ್ಟಿ ಇದೀಗ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಅದರ ಜೊತೆಗೆ ಚಿತ್ರದ ಪೋಸ್ಟರ್​, ಲೈಫ್​ ಆಫ್​ ಧರ್ಮ ವಿಡಿಯೋವನ್ನು ಯ್ಯೂಟೂಬ್​ನಲ್ಲಿ ರಿಲೀಸ್​​ ಮಾಡಿತ್ತು​. ಇವೆಲ್ಲವು 777 ಚಾರ್ಲಿ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಹೊಸ ಅವತಾರ ಶೆಟ್ರು ಪರದೆ ಮೇಲೆ ಮೋಡಿ ಮಾಡಲಿದ್ದಾರೆ ಎಂಬ ಮಾತುಗಳು ಕೂಡ ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ. ಹೀಗಿರುವಾಗ  ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸರ್​​ಪ್ರೈಸ್​ ನೀಡಿದೆ.

‘777 ಚಾರ್ಲಿ’ ಚಿತ್ರತಂಡ ಹೊಸ ನಟನನ್ನು ತಮ್ಮ ತಂಡಕ್ಕೆ ಸ್ವಾಗತಿಸಿದ್ದಾರೆ. ‘ಹಂಬಲ್​ ಪೊಲಿಟಿಷಿಯನ್’​ ಸಿನಿಮಾ ಖ್ಯಾತಿಯ ನಟ ದಾನಿಶ್​​ ಸೇಠ್​​​​​ ಚಾರ್ಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ದಾನಿಶ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಅವರ ಫೋಟೋವನ್ನು ಶೇರ್​ ಮಾಡಿಕೊಂಡಿದೆ. ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ದಾನಿಶ್​ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ.

 


ದಾನಿಶ್​ ಸೇಠ್​ ಪಾತ್ರ ಯಾವುದು?

‘777 ಚಾರ್ಲಿ’ ಸಿನಿಮಾದಲ್ಲಿ ದಾನಿಶ್​ ಸೇಠ್​​​​​​ ಕರ್ಷನ್​ ರಾಯ್​​​ ಹೆಸರಿನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಅವರ ಪಾಲಿನ ಚಿತ್ರೀಕರಣ ಮುಗಿದಿದೆ. ಚಿತ್ರದ ಮಧ್ಯೆ ಅವರ ಪಾತ್ರ ಬಂದು ಹೋಗಲಿದೆ.

ಕಿರಣ್​ ರಾಜ್​ ನಿರ್ದೇಶನಲ್ಲಿ ‘777 ಚಾರ್ಲಿ’ ಸಿನಿಮಾ ಮೂಡಿ ಬರುತ್ತಿದೆ. ಪುಷ್ಕರ್​ ಫಿಲ್ಮ್​​ ಬ್ಯಾನರ್​​ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ರಕ್ಷಿತ್​ ಶೆಟ್ಟಿ ಮತ್ತು ಜಿಎಸ್​​ ಗುಪ್ತಾ ಕೂಡ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಅರವಿಂದ್​ ಕಶ್ಯಪ್​​​ ಕ್ಯಾಮೆರಾ ಕೈಚಳ, ನೊಬಿನ್​ ಪೌಲ್​​​ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘777 ಚಾರ್ಲಿ’ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ  ತೆರೆಗೆ ತರುವ ಯೋಜನೆಯನ್ನು ಹಾಕಿಕೊಂಡಿದೆ ಚಿತ್ರತಂಡ.

ಸ್ಕೂಟರ್​ ಬೆಲೆ 50 ಸಾವಿರ; ಫ್ಯಾನ್ಸಿ ನಂಬರ್​ಗಾಗಿ ಆತ ಖರ್ಚು ಮಾಡಿದ್ದು ಕೇಳಿದ್ರೆ ಶಾಕ್​ ಆಗ್ತೀರಾ!
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading