Macbeth ಆಗಿ ಮಿಂಚಲಿರುವ ಹಾಲಿವುಡ್​ ನಟ Daniel Craig

53ರ ಹರೆಯದ ಕ್ರೇಗ್ ನಟನೆಯ ಶೇಕ್ಸ್‌ಪಿಯರ್‌ನ “ಮ್ಯಾಕ್‌ಬೆತ್” ನಿರ್ಮಾಣವನ್ನು ಬಾಂಡ್ ಚಲನಚಿತ್ರ ನಿರ್ಮಾಪಕರಾದ ಬಾರ್ಬರಾ ಬ್ರೊಕೋಲಿ ಮತ್ತು ಮೈಕೆಲ್ ಜಿ. ವಿಲ್ಸನ್ ನಿರ್ಮಿಸುತ್ತಿದ್ದಾರೆ. ಬುಧವಾರದಿಂದಲೇ ಇದರ ಟಿಕೆಟ್‌ಗಳು ಮಾರಾಟವಾಗುತ್ತಿವೆ.

ಜೇಮ್ಸ್ ಬಾಂಡ್ ನಟ ಡೇನಿಯಲ್ ಕ್ರೇಗ್

ಜೇಮ್ಸ್ ಬಾಂಡ್ ನಟ ಡೇನಿಯಲ್ ಕ್ರೇಗ್

  • Share this:
'ನೋ ಟೈಮ್ ಟು ಡೈ' ಚಿತ್ರದಲ್ಲಿ ಕೊನೆಯ ಬಾರಿಗೆ ಜೇಮ್ಸ್ ಬಾಂಡ್ ಪಾತ್ರ ವಹಿಸುತ್ತಿರುವ ಹಾಲಿವುಡ್​ ನಟ ಡೇನಿಯಲ್ ಕ್ರೇಗ್, ಅನುಭವಿ ರಂಗ ಕಲಾವಿದನಾಗಿದ್ದು 2013ರಲ್ಲಿ 'ಬಿಟ್ರೇಯಲ್' ಹಾಗೂ ಇನ್ನು ಹೆಚ್ಚಿನ ರಂಗ ನಿರ್ಮಾಣಗಳ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಜೇಮ್ಸ್​ ಬಾಂಡ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ಡೇನಿಯಲ್ ಕ್ರೇಗ್ ತಮ್ಮ ಮುಂದಿನ ಪಾತ್ರವನ್ನು ಆರಿಸಿದ್ದಾರೆ. ಐದನೇ ಬಾರಿಗೆ ಹಾಗೂ ಕೊನೆಯ ಬಾರಿಗೆ ಬ್ರಿಟಿಷ್ ರಹಸ್ಯ ಏಜೆಂಟ್ ಬಾಂಡ್ ಆಗಿ ಕಾಣಿಸಿಕೊಂಡ ಚಿತ್ರವು ವಿಶ್ವದಾದ್ಯಂತ ಪ್ರದರ್ಶನ ಕಾಣುತ್ತಿದೆ. ಡೇನಿಯಲ್ ಕ್ರೇಗ್ ಹೆಚ್ಚು ನಿರೀಕ್ಷಿತ ಹಾಗೂ ಕ್ರೂರ 'ಮ್ಯಾಕ್‌ಬೆತ್” ಆಗಿ ಮುಂದಿನ ವರ್ಷ ಮಿಂಚಲಿದ್ದಾರೆ ಎನ್ನುತ್ತಿದ್ದಾರೆ ಚಿತ್ರ ನಿರ್ಮಾಪಕರು .

ಹೊಸ ಪ್ರೊಡಕ್ಶನ್ ಅಡಿಯಲ್ಲಿ ಬ್ರಿಟಿಷ್ ನಟಿ ರುತ್ ನೆಗ್ಗಾ, ಲೇಡಿ ಮ್ಯಾಕ್‌ಬೆತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 15 ವಾರಗಳ ಸೀಮಿತ ಪ್ರದರ್ಶನದಲ್ಲಿ ಮಾರ್ಚ್ 29 ರಂದು ಪ್ರದರ್ಶನಗಳನ್ನು ಆರಂಭಿಸುತ್ತದೆ ಎಂದು ತಿಳಿಸಲಾಗಿದೆ.  53ರ ಹರೆಯದ ಕ್ರೇಗ್ ನಟನೆಯ ಶೇಕ್ಸ್‌ಪಿಯರ್‌ನ “ಮ್ಯಾಕ್‌ಬೆತ್” ನಿರ್ಮಾಣವನ್ನು ಬಾಂಡ್ ಚಲನಚಿತ್ರ ನಿರ್ಮಾಪಕರಾದ ಬಾರ್ಬರಾ ಬ್ರೊಕೋಲಿ ಮತ್ತು ಮೈಕೆಲ್ ಜಿ. ವಿಲ್ಸನ್ ನಿರ್ಮಿಸುತ್ತಿದ್ದಾರೆ. ಬುಧವಾರದಿಂದಲೇ ಇದರ ಟಿಕೆಟ್‌ಗಳು ಮಾರಾಟವಾಗುತ್ತಿವೆ.

No Time to Die Movie review, No Time to Die Released, James Bond, No Time to Die, Daniel Craig, CBFC, ಜೇಮ್ಸ್‌ ಬಾಂಡ್‌, ನೋ ಟೈಮ್‌ ಟು ಡೈ, Tom Hardy, Idris Elba or Lashana Lynch, Who Will Replace Daniel Craig as James Bond, No Time to Die will be the 25th instalment in the James Bond film series, Craig's fifth James Bond film, Daniel Craig, James Bond, Viral News, Movie, ಡೇನಿಯಲ್ ಕ್ರೇಗ್, ಜೇಮ್ಸ್ ಬಾಂಡ್, ಚಲನಚಿತ್ರ, ವೈರಲ್ ಸುದ್ದಿ, ಡೇನಿಯಲ್‌ ಕ್ರೇಗ್‌, ಸಿಬಿಎಫ್‌ಸಿ, The worldwide release cut of No Time To Die has been approved by the CBFC with zero cuts stg ae
ರಿಲೀಸ್ ಆಗಿದೆ 'ನೋ ಟೈಮ್ ಟು ಡೈ' ಹಾಲಿವುಡ್ ಸಿನಿಮಾ


ಡೇನಿಯಲ್ ಕ್ರೇಗ್​ ಒಬ್ಬ ಚಲನಚಿತ್ರ ನಟ ಮಾತ್ರವಲ್ಲ, ಅನುಭವಿ ರಂಗಕರ್ಮಿ ಕೂಡ ಹೌದು. ಈ ಅಪ್ರತಿಮ ಪಾತ್ರವನ್ನು ನಿರ್ವಹಿಸುವ ಮೂಲಕ ಡೇನಿಯಲ್ ರಂಗ ವೇದಿಕೆಗೆ (ಬ್ರಾಡ್‌ವೇ ಥಿಯೇಟರ್) ಮರಳಿರುವುದು ನನಗೆ ಅತೀವ ಸಂತಸವನ್ನುಂಟು ಮಾಡುತ್ತಿದೆ ಎಂದು ಬ್ರೊಕೋಲಿ ತಿಳಿಸಿದ್ದಾರೆ.

ಇದನ್ನೂ ಓದಿ: Daniel Craig ಅಭಿನಯದ No Time To Die ಸಿನಿಮಾದಲ್ಲಿ ಈ ಸಲ ಚುಂಬನದ ದೃಶ್ಯಗಳಿಗೆ ಕತ್ತರಿ ಹಾಕದ CBFC..!

ಕೊರೋನಾ ವೈರಸ್ ಸಾಂಕ್ರಾಮಿಕದಿಂದ 18 ತಿಂಗಳ ಕಾಲ ಮುಚ್ಚಲಾಗಿದ್ದ ಹಲವಾರು ಬ್ರಾಡ್‌ವೇ ನಾಟಕಗಳು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮತ್ತೆ ತೆರೆಯಲಾಗಿದೆ. ನೋ ಟೈಮ್ ಟು ಡೈ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿರುವ ಡೇನಿಯಲ್ ಬಾಂಡ್ ಚಿತ್ರವು ಅತ್ಯಂತ ಸುಂದರ ಹಾಗೂ ಪ್ರಣಯ ಚಿತ್ರವಾಗಿ ಹೊರಹೊಮ್ಮಿದೆ. ಜೇಮ್ಸ್ ಬಾಂಡ್ ಫ್ರಾಂಚೈಸಿಯ 25ನೇ ಚಿತ್ರವಾಗಿರುವ ನೋ ಟೈಮ್ ಟು ಡೈ ಕೋವಿಡ್‌ ಸಾಂಕ್ರಾಮಿಕದ ಸುದೀರ್ಘ ಎರಡು ವರ್ಷಗಳ ಬಳಿಕ ತೆರೆಗೆ ಅಪ್ಪಳಿಸಿದೆ.

ಇದನ್ನೂ ಓದಿ: No time to Die: ನೋ ಟೈಮ್​ ಟು ಡೈ..!; ನವೆಂಬರ್​ನಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ ಬಾಂಡ್​ ಸರಣಿಯ 25ನೇ ಸಿನಿಮಾ

ಬಾಂಡ್ ಚಿತ್ರದ ಕಥಾವಸ್ತುವು ನಿಜಜೀವನದ ಹಲವಾರು ಘಟನೆಗಳೊಂದಿಗೆ ಸಾಮ್ಯತೆ ಹೊಂದಿದ್ದು ಅತ್ಯಂತ ರೋಮಾಂಚನಕಾರಿಯಾಗಿ ಚಿತ್ರ ಮೂಡಿ ಬಂದಿದೆ ಎಂಬುದು ಸಿನಿ ಪ್ರಿಯರ ಅಭಿಪ್ರಾಯವಾಗಿದೆ. ಚಿತ್ರವನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದು ಪ್ರತಿಪಾತ್ರದ ನಿರ್ಮಾಣ, ವಿನ್ಯಾಸ, ಸಾಹದ ದೃಶ್ಯಗಳು, ಪಾತ್ರದ ಭಾವಾಭಿನಯ ಹೀಗೆ ಪ್ರತಿಯೊಂದು ಅಂಶಗಳನ್ನು ಅತ್ಯಂತ ಎಚ್ಚರಿಕೆಯಿಂದ ಹಾಗೂ ಸೂಕ್ಷ್ಮವಾಗಿ ತೆರೆಯ ಮೇಲೆ ತರಲಾಗಿದೆ ಎನ್ನಲಾಗಿದೆ.

ಬಾಂಡ್​ ಸರಣಿ ಸಿನಿಮಾದ ನೋ ಟೈಮ್ ಟು ಡೈ ಚಿತ್ರದ ನಂತರ ಜೇಮ್ಸ್ ಬಾಂಡ್ ಪಾತ್ರದಿಂದ ನಿವೃತ್ತಿ ಘೋಷಿಸಿರುವ ಡೇನಿಯಲ್ ಕ್ರೇಗ್ ನಂತರ, ಬಾಂಡ್ ಸ್ಥಾನವನ್ನು ಯಾವ ನಟ ತುಂಬಲಿದ್ದಾರೆ ಎಂಬುದು ಇನ್ನೂ ನಿರ್ಣಯಗೊಂಡಿಲ್ಲ. ಆದರೆ, ವೆನಮ್ ಸಿನಿಮಾದ ನಾಯಕ ನಟ ಟಾಮ್ ಹಾರ್ಡಿ ಮುಂದಿ ಬಾಂಡ್​ ಸರಣಿ ಸಿನಿಮಾಗಳಲ್ಲಿ ಬಾಂಡ್​ ಆಗಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Anitha E
First published: