ಅಜ್ಞಾನ, ವಿಪರ್ಯಾಸ ಎಂದು ಬೇರೊಬ್ಬ ನಟನ ಬಗ್ಗೆ ಚೇತನ್ ಟ್ವೀಟ್; ಪರ-ವಿರೋಧ ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟ ಚೇತನ್​ ಸದಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಂದು ವಿಷಯಗಳಲ್ಲಿ ತಮ್ಮ ನಿಲುವು ತಿಳಿಸಿದಕ್ಕಾಗಿಯೇ ಟ್ರೋಲ್​ ಆಗಿದ್ದೂ ಇದೆ. ಇಂತಹ ನಟ ಈಗ ಮತ್ತೋರ್ವ ನಟನ ವಿರುದ್ಧವಾಗಿ ಟ್ವೀಟ್​ ಮಾಡುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.

ನಟ ಚೇತನ್

ನಟ ಚೇತನ್

  • Share this:
ಆ ದಿನಗಳು ಖ್ಯಾತಿಯ ಚೇತನ್​ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳಿಂದಲೇ ಗುರುತಿಸಿಕೊಂಡಿರುವ ವ್ಯಕ್ತಿ. ಸಂಕಷ್ಟದಲ್ಲಿರುವ ಹಾಗೂ ಅನ್ಯಾಯಕ್ಕೆಒಳಗಾದವರ ಪರವಾಗಿ ಹೋರಾಟ ಮಾಡುತ್ತಿರುವ ಸಾಕಷ್ಟು ಸಲ ಟೀಕೆಗೂ ಒಳಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟ ಚೇತನ್​ ಸದಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಂದು ವಿಷಯಗಳಲ್ಲಿ ತಮ್ಮ ನಿಲುವು ತಿಳಿಸಿದಕ್ಕಾಗಿಯೇ ಟ್ರೋಲ್​ ಆಗಿದ್ದೂ ಇದೆ. ಇಂತಹ ನಟ ಈಗ ಮತ್ತೋರ್ವ ನಟನ ವಿರುದ್ಧವಾಗಿ ಹೆಸರೇಳದೆ ಟ್ವೀಟ್​ ಮಾಡಿದ್ದಾರೆ. ಇದೀಗ ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

ಚೇತನ್​ ಮಾಡಿರುವ ಟ್ವೀಟ್​


ಹೌದು, ನಿನ್ನೆ ಎಲ್ಲರೂ ಅಂಬೇಡ್ಕರ್ ಜಯಂತಿಯ ಶುಭಾಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ನಟ ಧ್ರುವ ಸರ್ಜಾ ಸಹ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಆದರೆ ಈ ವಿಷಯವಾಗಿ ಚೇತನ್​ ಧ್ರುವ ಸರ್ಜಾ ಅವರ ಹೆಸರನ್ನು ಉಲ್ಲೇಖಿಸದೆ ಒಂದು ಟ್ವೀಟ್ ಮಾಡಿದ್ದಾರೆ.ಕನ್ನಡ ಚಿತ್ರರಂಗದ ನಟರೊಬ್ಬರು ಮಹಿಳೆಯನ್ನು ಪದೇ ಪದೇ ನಾಯಿ, ನರಿ, ಕ್ರಿಮಿ, ಕೀಟ ಎಂದು ಅನುಮೋದಿಸುತ್ತಾರೆ. ಹಾಡಿನಲ್ಲಿ ನಟಿಸುವಾಗ ಪ್ರಣಯದ ಹೆಸರಲ್ಲಿ ನಾಯಕಿಯ ಕೂದಲನ್ನು ಎಳೆಯುತ್ತಾರೆ. ಕರೆಂಟ್ ಶಾಕ್ ಕೊಟ್ಟು ಹಾಗೂ ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕುತ್ತಾರೆ. ಮಹಿಳೆ ಮೇಲೆ ಹಲ್ಲೆ ಮಾಡುತ್ತಾರೆ. ಇಷ್ಟವಿಲ್ಲದಿದ್ದರೂ ಒತ್ತಾಯಿಸುವುದು ಕಿರುಕುಳ. ಇದೇ ನಟ ನಿನ್ನೆ ಧಾರ್ಮಿಕತೆಯನ್ನು ವೈಭವೀಕರಿಸುವ ಮೂಲಕ ಅಂಬೇಡ್ಕರ್ ಜಯಂತಿಯ ಶುಭ ಕೋರುತ್ತಾರೆ. ಕಾಯಿಲೆ, ಅಜ್ಞಾನ ಮತ್ತು ವಿಪರ್ಯಾಸ ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ. ಚೇತನ್​ ಅವರು ಪರೋಕ್ಷವಾಗಿ ಹೇಳಿರುವುದು ಧ್ರುವ ಸರ್ಜಾ ಅವರಿಗೆ ಎಂಬುದು ಎಲ್ಲರಿಗೂ ತಿಳಿಯದ ಗುಟ್ಟೆನಾಗಿ ಉಳಿದಿಲ್ಲ. ಇದೇ ವಿಚಾರವಾಗಿ ಅವರವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ.ಚೇತನ್​ ಅವರ ಟ್ವೀಟ್ ನೋಡಿದ ಕೆಲವು ನೆಟ್ಟಿಗರು ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿನಿಮಾವನ್ನು ಸಿನಿಮಾವಾಗಿ ನೋಡಿ... ಅದು ನಿಜ ಜೀವನ ಅಲ್ಲ. ಡಾ. ರಾಜ್​ ಕುಮಾರ್​ ಅವರು ಕಳ್ಳನ ಪಾತ್ರದಲ್ಲಿ ನಟಿಸಿದರೆ ಅವರು ನಿಜ ಜೀವನದಲ್ಲಿ ಕಳ್ಳ ಎಂದು ಹೇಳುತ್ತೀರಾ.. ? ಎಂದೆಲ್ಲ ಕಮೆಂಟ್​ ಮಾಡಿದ್ದಾರೆ. ಮತ್ತೆ ಕೆಲವರು ಚೇತನ್​ ಅವರನ್ನು ಸಮರ್ಥಿಸಿಕೊಂಡು ಹಾಗೂ ಖರಾಬು ಹಾಡು ಸರಿಯಿಲ್ಲ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.

ಚೇತನ್​ ಮಾಡಿರುವ ಟ್ವೀಟ್​ಗೆ ನೆಟ್ಟಿಗರ ಪ್ರತಿಕ್ರಿಯೆ


 

ಧ್ರುವಾ ಸರ್ಜಾ ನಟಿಸುತ್ತಿರುವ ಪೊಗರು ಸಿನಿಮಾದ ಖರಾಬು ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಇದೇ ಹಾಡಿನಲ್ಲಿ ನಾಯಕಿಗೆ ಹಿಂಸೆ ನೀಡಲಾಗುತ್ತದೆ. ಈ ಹಾಡಿನ ಕುರಿತಾಗಿಯೇ ಚೇತನ್​ ಬರೆದಿದ್ದಾರೆ ಎಂದು ನೆಟ್ಟಿಗರು ನೇರವಾಗಿ ಧ್ರುವಾ ಅವರ ಹೆಸರನ್ನೂ ತಮ್ಮ ಕಮೆಂಟ್​ಗಳಲ್ಲಿ ಬರೆಯುತ್ತಿದ್ದಾರೆ.ಈ ಹಿಂದೆ ಮಿಟೂ ಅಭಿಯಾನದ ಮೂಲಕ ಶ್ರುತಿ ಹರಿಹರನ್​ ಅರ್ಜುನ್​ ಸರ್ಜಾ ಅವರ ಮೇಲೆ ಆರೋಪ ಮಾಡಿದ್ದರು. ಆಗ ಧ್ರುವಾ ಸರ್ಜಾ ಅರ್ಜುನ್​ ಅವರ ಬೆಂಬಲಕ್ಕೆ ನಿಂತಿದ್ದರು.

Shahrukh Khan: ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರಕ್ಕೆ ಮತ್ತೆ ನೆರವಾದ ಕಿಂಗ್​ ಖಾನ್​ ಶಾರುಖ್​..!

First published: