ಹಿಂದಿ ದಿವಸ್ ಪರ ಹಾಗೂ ವಿರೋಧ ದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನಡೆಯುತ್ತಿದೆ. ಅಲ್ಲದೆ ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಡ. ಶಾಲೆಯ ಪಠ್ಯದಿಂದ ಹಿಂದಿಯನ್ನು ತೆಗೆದು, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಜನರು, ಕನ್ನಡಪರ ಹೋರಾಟಗಾರರು, ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರೂ ಈ ವಿಷಯದಲ್ಲಿ ಒಂದಾಗಿದ್ದಾರೆ. ರಾಜ್ಯದಲ್ಲಿ ಕನ್ನಡಕ್ಕೆ ಮಹತ್ವ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇದೇ ವಿಷಯವಾಗಿ ನಟ ಧನಂಜಯ್, ಪ್ರಕಾಶ್ ರೈ ಹಾಗೂ ಚೇತನ್ ಸಹ ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ. ಹಿಂದಿ ದಿವಸ್ ಆಚರಣೆ ವಿರುದ್ಧ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಬಂದಿದೆ. ಧನಂಜಯ್ ಹಾಗೂ ಚೇತನ್ ಅವರ ಅಭಿಪ್ರಾಯಕ್ಕೆ ದನಿಗೂಡಿಸುತ್ತಿದ್ದಾರೆ. ಆದರೆ ನಟ ಪ್ರಕಾಶ್ ರೈ ಅವರ ಟ್ವೀಟ್ ಅನ್ನು ಸಾಕಷ್ಟು ಮಂದಿ ಟೀಕಿಸುತ್ತಿದ್ದಾರೆ.
ನನ್ನ ದೇಶ ಭಾರತ. ನನ್ನ ಬೇರು ಕನ್ನಡ. ಎಲ್ಲ ಭಾಷೆಯನ್ನು ಗೌರವಿಸುತ್ತೇನೆ. ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಹೇರಿಕೆ ಸಲ್ಲದುಎಂದು ನಟ ಧನಂಜಯ ಟ್ವೀಟ್ ಮಾಡಿದ್ದಾರೆ.
ನನ್ನ ದೇಶ ಭಾರತ
ನನ್ನ ಬೇರು ಕನ್ನಡ
ಎಲ್ಲ ಭಾಷೆಯನ್ನು ಗೌರವಿಸುತ್ತೇನೆ
ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ
ಯಾವುದೇ ಹೇರಿಕೆ ಸಲ್ಲದು.#StopHindiImposition #ServeInMyLanguage @dr_bhushana @PoornaMysore @baadalvirus @ImSimhaa @SathishNinasam pic.twitter.com/Ro3nPwaktg
— Dhananjaya (@Dhananjayaka) September 14, 2020
View this post on Instagram
ಇನ್ನು ಬಹಳ ದಿನಗಳಿಂದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೂ ಸಹ ಹಿಂದಿ ಹೇರಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ. ನಿಖಿಖ್ ಕುಮಾರಸ್ವಾಮಿ, ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಕೆ.ಎಂ. ಚೈತನ್ಯ ಸೇರಿದಂತೆ ಸಾಕಷ್ಟು ಮಂದಿ ರಾಜ್ಯದಲ್ಲಿ ಹಿಂದಿ ಹೇರಿಕೆ ಸಲ್ಲದು ಎಂದು ವಿರೋಧಿಸಿದ್ದಾರೆ. ಹಿಂದಿ ಎಲ್ಲ ಭಾಷೆಗಳಂತೆಯೇ ಒಂದು. ಅದನ್ನು ಬಲವಂತವಾಗಿ ಹೇರುವುದು ಸರಿಯಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ