news18-kannada Updated:September 8, 2020, 9:56 PM IST
ಸಂಯುಕ್ತಾ ಹೆಗಡೆ
ಇತ್ತೀಚೆಗೆ ಅಗರ ಪಾರ್ಕ್ನಲ್ಲಿ ನಟಿ ಸಂಯುಕ್ತಾ ಹೆಗಡೆ ಹಾಗೂ ಅವರ ಸ್ನೇಹಿತೆಯರ ಮೇಲೆ ಕಾಂಗ್ರೆಸ್ ಪಕ್ಷದ ವಕ್ತಾರೆ ಕವಿತಾ ರೆಡ್ಡಿ ನೈತಿಕ ಪೊಲೀಸ್ಗಿರಿ ತೋರಿಸಿದ್ದರು. ಈ ವಿಚಾರ ಎಲ್ಲೆಡೆ ವೈರಲ್ ಆಗಿತ್ತು. ಸಂಯುಕ್ತ ಹೆಗಡೆ ಮಾಡಿರುವ ಲೈವ್ ವಿಡಿಯೋ ಅನೇಕರು ವೀಕ್ಷಿಸಿದ್ದರು. ಕವಿತಾ ರೆಡ್ಡಿ ಮಾಡಿರುವ ವರ್ತನೆಗೆ ಅನೇಕ ಸ್ಟಾರ್ ನಟ-ನಟಿಯರು ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ, ಸಂಯುಕ್ತ ಅವರ ಬೆಂಬಲವಾಗಿ ನಿಂತರು. ಇದೀಗ ಫೈರ್ (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ) ಸಂಸ್ಥೆ ಕೂಡ ನಟಿಗೆ ಬೆಂಬಲವಾಗಿ ನಿಂತಿದೆ.
ಫೈರ್ ಸಂಸ್ಥೆಯ ಮುಖ್ಯಸ್ಥ ಚೇತನ್ ಈ ವಿಚಾರವಾಗಿ ಪತ್ರವನ್ನು ಬರೆದಿದ್ದು, ಸಿನಿಮಾ ತಾರೆಯರ ಮೇಲೆ ನಡೆಯುವ ದುರದೃಷ್ಟಕರ ಘಟನೆಯನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 4, 2020ರ ಶುಕ್ರವಾರ ಹಗಲು ಹೊತ್ತಿನಲ್ಲಿ ಬೆಂಗಳೂರಿನ ಅಗರಪಾರ್ಕ್ ಉದ್ಯಾನವನದಲ್ಲಿ ಉಡುಪಿನ ಆಧಾರದ ಮೇಲೆ ನಮ್ಮ ಸಹದ್ಯೋಗಿ ನಟಿ ಸಂಯುಕ್ತ ಹೆಗ್ಡೆಯವರ ಮೇಲೆ ನಡೆದ ನೈತಿಕ ಪೊಲೀಸ್ಗಿರಿಯಂತಹ ದುರದೃಷ್ಟಕರ ಘಟನೆಯನ್ನು ಖಂಡಿಸುತ್ತೇವೆ.
ನಮ್ಮ ರಾಜ್ಯ ಮತ್ತು ರಾಷ್ಟ್ರದ ಎಲ್ಲಾ ನಿವಾಸಿಗಳು ಸಾಂವಿಧಾನಿಕ ಸ್ವಾತಂತ್ರ್ಯವನ್ನ ಕಾಪಾಡಿಕೊಳ್ಳ ಬೇಕು, ಮತ್ತು ಯಾವುದೇ ಬಹಿರಂಗ ಉಲ್ಲಂಘನೆಗಳನ್ನು ವ್ಯಾಖ್ಯಾನಿಸಲಾದ ಕಾನೂನು ಚೌಕಟ್ಟಿನ ಮೂಲಕ ಮಾತ್ರ ಹೊಣೆಗಾರರನ್ನಾಗಿ ಮಾಡಬೇಕೆ ವಿನಃ ಈ ರೀತಿಯ ಗುಂಪು ದಾಳಿ ಮತ್ತು ಹಿಂಸಾಚಾರವಲ್ಲ ಎಂದು ಫೈರ್ ಹೇಳುತ್ತದೆ.
ಚಲನಚಿತ್ರ್ಯೋದ್ಯಮ ಮಹಿಳೆಯರ ಮೇಲಿನ ವದಂತಿಗಳು, ಕೆಸರೆರೆಚಾಟ, ಮತ್ತು ವೈಯ್ಯಕ್ತಿಕ ದಾಳಿ ಆಧಾರದ ಮೇಲೆ ಸಮಸ್ಯೆಗಳ ಪ್ರಸ್ತುತ ಸಂವೇದನೆಯ ಬಗ್ಗೆ ಫೈರ್ ನಿರಾಶೆಯನ್ನ ವ್ಯಕ್ತಪಡಿಸುತ್ತದೆ. ಭವಿಷ್ಯದ ವ್ಯಾಪ್ತಿಯನ್ನ ಹೆಚ್ಚು ಸೂಕ್ಷ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸಲು ನಾವು ಕೇಳುತ್ತೇವೆ.
ನೈತಿಕ ಪೊಲೀಸ್ಗಿರಿ ಮತ್ತು ಮಹಿಳೆಯರ ಮೇಲಿನ್ ಹಲ್ಲೆಯಂತಹ ಯಾವುದೇ ಪ್ರಯತ್ನಗಳಾದಲ್ಲಿ ಅಂತಹವರಿಗೆ ಕಾನೂನಿಕ ಪೂರ್ಣ ಪ್ರಮಾಣದ ಶಿಕ್ಷೆಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಫೈರ್ ಸಂಸ್ಥೆ ಕಳೆದ ಬಾರಿ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ನಟಿ ಶ್ರುತಿ ಹರಿಹರನ್ ಬೆನ್ನಿಗೆ ನಿಂತಿತ್ತು. ಇದೀಗ ಸಂಯುಕ್ತಾ ಮೇಲಿನ ನೈತಿಕ ಪೊಲೀಸ್ಗಿರಿಯನ್ನು ವಿರೋಧಿಸಿ ಆವರ ಸಹಾಯಕ್ಕೆ ನಿಂತಿದೆ.
Published by:
Harshith AS
First published:
September 8, 2020, 9:47 PM IST