• Home
  • »
  • News
  • »
  • entertainment
  • »
  • Rishab Shetty-Chetan: ರಿಷಬ್ ಶೆಟ್ಟಿ ವಿರುದ್ಧ ಚೇತನ್ ವ್ಯಂಗ್ಯ! ಅಷ್ಟಕ್ಕೂ ಆ ದಿನಗಳ ನಟ ಹೇಳಿದ್ದೇನು?

Rishab Shetty-Chetan: ರಿಷಬ್ ಶೆಟ್ಟಿ ವಿರುದ್ಧ ಚೇತನ್ ವ್ಯಂಗ್ಯ! ಅಷ್ಟಕ್ಕೂ ಆ ದಿನಗಳ ನಟ ಹೇಳಿದ್ದೇನು?

ರಿಷಬ್ ವಿರುದ್ಧ ಚೇತನ್ ವ್ಯಂಗ್ಯ

ರಿಷಬ್ ವಿರುದ್ಧ ಚೇತನ್ ವ್ಯಂಗ್ಯ

ಇದೀಗ ಮತ್ತೊಮ್ಮೆ ನಟ ಚೇತನ್ ಕಾಂತಾರ ಸಿನಿಮಾ ಹಾಗೂ ಅದರ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ವಿರುದ್ಧ ವ್ಯಂಗ್ಯವಾಡಿದ್ದಾರೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಹೇಳಿದ್ದೇನು? ಇದಕ್ಕೆ ನಟ ಚೇತನ್ ಹೇಳಿದ್ದೇನು?

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕಾಂತಾರ (Kantara) ಗುಂಗು ಇನ್ನೂ ಕಡಿಮೆಯಾಗಿಲ್ಲ. ಭಾರತೀಯ ಚಿತ್ರರಂಗದ ಶ್ರೇಷ್ಠ ಸಿನಿಮಾಗಳ (greatest films of Indian cinema) ಸಾಲಿಗೆ ಸೇರಿದ ಕಾಂತಾರ, ಬಾಕ್ಸ್ ಆಫೀಸ್‌ನಲ್ಲೂ (Box Office) ಸದ್ದು ಮಾಡುತ್ತಿದೆ. 400 ಕೋಟಿ ಕ್ಲಬ್ (400 crore club) ಸೇರಿರುವ ಕಾಂತಾರದ ಅಬ್ಬರ ಇನ್ನೂ ಮುಂದುವರೆದಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಯಶಸ್ಸಿಯಾಗಿ, ಜನಮನ ಸೂರೆಗೊಂಡ ಕಾಂತಾರ, ಇದೀಗ ತುಳು ಭಾಷೆಯಲ್ಲೂ (Tulu Language) ರಿಲೀಸ್ ಆಗುತ್ತಿದೆ. ಈ ಯಶಸ್ಸಿನ ಬೆನ್ನಲ್ಲೇ ‘ವರಾಹ ರೂಪಂ’ ಹಾಡಿನ ವಿವಾದ (Varaha Roopam Song controversy) ಕಾಂತಾರದ ಬೆನ್ನಿಗೇರಿತ್ತು. ಇದರ ಜೊತೆಗೆ ಆ ದಿನಗಳ ನಟ ಚೇತನ್ ಕುಮಾರ್ (Actor Chetan Kumar), ಸಾಹಿತಿ ಬಿ.ಟಿ. ಲಲಿತಾ ನಾಯಕ್ (B.T. Lalitha Nayak) ಸೇರಿದಂತೆ ಕೆಲವರು ಕಾಂತಾರದ ಬಗ್ಗೆ ಕಿರಿಕ್ ತೆಗೆದಿದ್ದರು. ಇದೀಗ ಮತ್ತೊಮ್ಮೆ ನಟ ಚೇತನ್ ಕಾಂತಾರ ಸಿನಿಮಾ ಹಾಗೂ ಅದರ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ವಿರುದ್ಧ ವ್ಯಂಗ್ಯವಾಡಿದ್ದಾರೆ.  


ದೈವದ ಕೂಗು ಅನುಸರಿಸಬೇಡಿ ಎಂದಿದ್ದ ರಿಷಬ್


ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಓ ಎನ್ನುವ ಕೂಗು ಬಹಳ ಫೇಮಸ್ ಆಗಿತ್ತು. ಆದರೆ ಅದನ್ನು ಅನುಕರಿಸಬೇಡಿ ಅಂತ ಖುದ್ದು ರಿಷಬ್ ಶೆಟ್ಟಿ ಅವರೇ ಮನವಿ ಮಾಡಿದ್ದರು. ದೈವ ಆಕರ್ಷಣೆ ಆದಾಗ ಮಾಡುವ ಕೂಗನ್ನು ಯಾರೂ ಅನುಕರಣೆ ಮಾಡಬೇಡಿ ಸಿನಿಮಾದಲ್ಲಿ ನನ್ನ ಪಾತ್ರ ದೈವಾ ವೇಶದಲ್ಲಿ ಬೊಬ್ಬೆಯಿಡುವ ಒಂದು ದೃಶ್ಯವಿದೆ‌. ಸೋಶಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ದೈವಾರಾಧನೆ ಒಂದು ಆಚಾರಣೆಯ ಭಾಗವಾಗಿದ್ದು, ಅದು ನಂಬಿಕೆಯ ಸಂಗತಿ ಆಗಿದೆ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು ಎಂದು ಹೇಳಿದ್ದಾರೆ. ದಯವಿಟ್ಟು ಯಾರೂ ದೈವದಂತೆ ಕೂಗು ಹಾಕುವುದನ್ನು ಯಾರೂ ಅನುಕರಣೆ ಮಾಡಬಾರದು ಎಂದು ಮನವಿ ಮಾಡಿದ್ದರು.




ರೀಲ್ಸ್ ಮಾಡಬೇಡಿ ಎಂದಿದ್ದ ರಿಷಬ್


ಇನ್ನು ಪಂಜುರ್ಲಿ ದೈವದ ಬಗ್ಗೆ ರೀಲ್ಸ್ ಮಾಡಬೇಡಿ ಅಂತ ರಿಷಬ್ ಶೆಟ್ಟಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಸಿನಿಮಾ ರಿಲೀಸ್ ಆದ ಆರಂಭದಲ್ಲಿ ನಾನೊಂದು ಮನವಿ ಮಾಡಿದ್ದೆ, ಈಗಲೂ ಅದೇ ಮನವಿಯನ್ನು ಮಾಡುತ್ತಿದ್ದೇನೆ. ದೈವಾರಾಧನೆ ವಿಚಾರವನ್ನು ಇಟ್ಟುಕೊಂಡು ರೀಲ್ಸ್ ಮಾಡೋದು, ವೇದಿಕೆ ಮೇಲೆ ಅಣಕು ಪ್ರದರ್ಶನ ಮಾಡುವುದು ಬೇಡ. ಇದೆಲ್ಲ ಬಹಳ ನೋವು ತರುವಂತಹ ವಿಚಾರಗಳು. ಯಾಕಂದ್ರೆ ಇದನ್ನು ನಂಬಿದವರಿಗೆ ಹಾಗೂ ದೈವಾರಾಧಕರಿಗೆ ಬಹಳಷ್ಟು ನೋವು ತರುತ್ತದೆ. ನಂಬಿರುವ ನಮ್ಮಂತಹ ಭಕ್ತರಿಗೂ ನೋವು ತರುತ್ತದೆ. ಹೀಗಾಗಿ ಯಾರೂ ಅದನ್ನು ಅನುಕರಿಸಬೇಡಿ ಅಂತ ಹೇಳಿದ್ದರು.


ಇದನ್ನೂ ಓದಿ: Actor Chetan: ನಟ ಚೇತನ್ ವಿರುದ್ಧ ದೈವನರ್ತಕರ ಆಕ್ರೋಶ, ಪಂಜುರ್ಲಿ ಮೊರೆ ಹೋಗಲು ನಿರ್ಧಾರ


ರಿಷಬ್ ಹೇಳಿಕೆಗೆ ಚೇತನ್ ವ್ಯಂಗ್ಯ


ಇನ್ನು ರಿಷಬ್ ಹೇಳಿಕೆ ಬಗ್ಗೆ ನಟ ಚೇತನ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 'ಕೋಟಿಗಟ್ಟಲೇ ದುಡ್ಡು ಮತ್ತು ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು, ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವೈಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ. ನೀವು ಅದನ್ನು ತೋರಿಸಬಹುದಾದರೆ, ಇತರರು ಕೂಡ ತೋರಿಸಬಹುದು. ಪ್ರಜಾಪ್ರಭುತ್ವಕ್ಕೆ ಸ್ವಾಗತ..' ಎಂದು ಪೋಸ್ಟ್ ಹಾಕಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು