• Home
  • »
  • News
  • »
  • entertainment
  • »
  • Actor Chetan Arrest: ನಟ ಚೇತನ್ ಬಂಧನ , ಪತಿ ಕಾಣೆಯಾಗಿದ್ದಾರೆಂದು ಫೇಸ್​ಬುಕ್​ ಲೈವ್ ಬಂದ ಮೇಘಾ

Actor Chetan Arrest: ನಟ ಚೇತನ್ ಬಂಧನ , ಪತಿ ಕಾಣೆಯಾಗಿದ್ದಾರೆಂದು ಫೇಸ್​ಬುಕ್​ ಲೈವ್ ಬಂದ ಮೇಘಾ

ನಟ ಚೇತನ್

ನಟ ಚೇತನ್

ನ್ಯಾಯಾಧೀಶರನ್ನು ನಿಂದಿಸಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ (Actor Chetan) ಅವರನ್ನು ಶೇಷಾದ್ರಿಪುಂರ ಪೊಲೀಸರು ಬಂಧಿಸಿದ್ದಾರೆ.

  • Share this:

    ಬೆಂಗಳೂರು (ಫೆ.22): ನ್ಯಾಯಾಧೀಶರನ್ನು ನಿಂದಿಸಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ (Actor Chetan) ಅವರನ್ನು ಶೇಷಾದ್ರಿಪುಂರ ಪೊಲೀಸರು (Seshadripuram Police) ಬಂಧಿಸಿದ್ದಾರೆ. ಇಂದು ನಟ ಚೇತನ್ (Actor chetan) ಅವರ ನಿವಾಸಕ್ಕೆ ತೆರಳಿದ ಶೇಷಾದ್ರಿಪುರಂ ಠಾಣೆಯ (Station) ಪೊಲೀಸರು, ನಟ ಚೇತನ್​ನನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ನೋಟಿಸ್​ ನೀಡದೆ ಪೊಲೀಸರು ಚೇತನ್​ನನ್ನು ಅರೆಸ್ಟ್​ ಮಾಡಿದ್ದಾರೆ ಎಂದು ಪತ್ನಿ ಮೇಘಾ (Megha) ಹೇಳಿದ್ದಾರೆ. ಚೇತನ್ ಬಂಧನವಾಗ್ತಿದ್ದಂತೆ ಪತ್ನಿ ಮೇಘಾ ಫೇಸ್​ ಬುಕ್​ ಲೈವ್​ ಮಾಡಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಫೆಬ್ರವರಿ 16ರಂದು ನ್ಯಾಯಾಧೀಶರ ಕುರಿತು​ ಚೇತನ್​ ಟ್ವಿಟ್​ವೊಂದನ್ನು​ ಮಾಡಿದ್ರು. ಇದು ಪ್ರಚೋದನಾಕಾರಿ ಟ್ವಿಟ್​ ಎಂದು ಚೇತನ್​ನನ್ನು ಬಂಧಿಸಲಾಗಿದೆ ಎಂದು ಹೇಳಲಾಗ್ತಿದೆ.


    ‘ಚೇತನ್​ರನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ’


    ನಟ ಚೇತನ್​ ಅವರನ್ನು ಪೊಲೀಸರು ಬಂಧಿಸುತ್ತಿದ್ದ ಪತ್ನಿ ಮೇಘಾ ಫೇಸ್​ಬುಕ್​ ಲೈವ್​ ಮಾಡಿದ್ದಾರೆ. ಕಾರಣವಿಲ್ಲದೆ ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಅಂತ ನೇಹಾ ಆರೋಪಿಸುತ್ತಿದ್ದಾರೆ. ಮನೆಯಲ್ಲಿದ್ದ ಚೇತನ್ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘಾ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿದ್ದವರು ಏಕಾಏಕಿ ಕಾಣಿಸದೇ ಇದ್ದಾಗ, ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದರು.


    ಇದನ್ನೂ ಓದಿ: ಮೇಕೆದಾಟು ಯೋಜನೆಯಿಂದ ಲಾಭವಿಲ್ಲ, ಪರಿಸರ ಹಾಳಾಗುತ್ತೆ ಅಷ್ಟೇ..: Actor Chetan ಆಕ್ರೋಶ


    ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡಿದೆ. ಅವರಿಂದ ಸಕಾರಾತ್ಮಕವಾಗಿ ಉತ್ತರ ಸಿಗುತ್ತಿಲ್ಲ. ಅವರು ಅರೆಸ್ಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಚೇತನ್ ಮತ್ತು ಅವರ ಅಂಗರಕ್ಷಕರ ಫೋನ್ ಕರೆ ಕೂಡ ಸಿಗುತ್ತಿಲ್ಲ. ನಿಜ ಅರ್ಥದಲ್ಲಿ ನನ್ನ ಪತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಮೇಘಾ ಆರೋಪ ಮಾಡಿದ್ದಾರೆ.


    ‘ನೋಟಿಸ್​ ನೀಡದೆ ಚೇತನ್​ ಬಂಧನ’


    ಪೊಲೀಸ್ ನವರು ಅವರನ್ನು ಬಂಧಿಸಿದ್ದರೆ, ಯಾವ ಕಾರಣಕ್ಕಾಗಿ ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಅಥವಾ ಮನೆಯವರಿಗೆ ಮಾಹಿತಿ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೇ, ಮನೆಯವರಿಗೂ ಮಾಹಿತಿ ಕೊಡದೇ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ನವರ ಕಸ್ಟಡಿಯಲ್ಲಿ ನನ್ನ ಪತಿ ಇಲ್ಲದೇ ಇದ್ದರೆ, ಅವರನ್ನು ಕಿಡ್ನ್ಯಾಪ್ ಮಾಡಿದ್ದು ಯಾರು ಎಂದಾದರೂ ಗೊತ್ತಾಗಬೇಕಿದೆ ಎಂದಿದ್ದಾರೆ ಮೇಘಾ.


    ಇದನ್ನೂ ಓದಿ: Actor Chetan Controversy| ಸಿದ್ದರಾಮಯ್ಯ ಬ್ರಾಹ್ಮಣ್ಯವನ್ನು ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ; ನಟ ಚೇತನ್ ವಿವಾದ


    ಎರಡು ವರ್ಷಗಳ ಹಿಂದೆ ಟ್ವೀಟ್ ಮಾಡಿದ್ದ ಚೇತನ್


    ನ್ಯಾಯಾಧೀಶರ ತೀರ್ಪಿನ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ್​ ಟ್ಟೀಟ್​ ಮಾಡಿದ್ರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸೋ ಮೊದಲೇ ಜಾಮೀನು ಮಂಜೂರು ಮಾಡಿದ್ರು ನ್ಯಾಯಾಧೀಶರು ಅಂತ 2 ವರ್ಷಗಳ ಹಿಂದೆ ಚೇತನ್​ ಟ್ವಿಟ್​ ಮಾಡಿದ್ರು ಇದೇ ವಿಚಾರದ ಮತ್ತೆ ಉಲ್ಲೇಖಿಸಿ ಅದೇ ನ್ಯಾಯಾಧೀಶರು ಸರ್ಕಾರಿ ಶಾಲಾ , ಕಾಲೇಜಿನ ಮಕ್ಕಳಿಗೆ ಹಿಜಾಬ್​ ಬೇಕೇ ಬೇಡವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಅವರಿಗೆ ಈ ಬಗ್ಗೆ ಸ್ಪಷ್ಟತೆ ಇದೆಯಾ ಎಂದು ಪ್ರಶ್ನಿಸಿ ಫೆಬ್ರವರಿ 16ರಂದು ಟ್ವಿಟ್​ ಮಾಡಿದ್ರು.


    ಪ್ರಚೋದನಾಕಾರಿ ಟ್ವಿಟ್​ ಎಂದು ಬಂಧನ


    ಫೆಬ್ರವರಿ 16ನೇ ತಾರೀಖು ಇದೇ ನ್ಯಾಯಮೂರ್ತಿಗಳ ಹಿಜಾಬ್ ವಿಚಾರಣೆ ಪೀಠದಲ್ಲಿ ಇದ್ದಾಗ ರೀ ಟ್ವೀಟ್ ಮಾಡಿ ನ್ಯಾಯಾಧೀಶರು ಸ್ತ್ರೀ ವಿರೋಧಿ ಎಂದು ಟ್ವೀಟ್ ನಲ್ಲಿ ಹೇಳಿದ್ರು ಹಿಜಾಬ್ ವಿಚಾರಣೆ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಬಾರದು,  ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್​ ಮಾಡಬಾರದು ಎಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಫೆಬ್ರವರಿ 12 ರಂದು ಕಮಲ್ ಪಂತ್ ಮೌಖಿಕ ಸೂಚನೆ ನೀಡಿದ್ರು ಆದರೆ 16 ನೇ ತಾರೀಖು ಚೇತನ್ ಟ್ವೀಟ್ ಮಾಡಿದ್ರು ಈ ಹಿನ್ನೆಲೆ ಚೇತನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Published by:Pavana HS
    First published: