Chandan Kumar: ತೆಲುಗು ಶೂಟಿಂಗ್ ಸೆಟ್‌ನಲ್ಲಿ ಕಿರಿಕ್ ಆಗಿದ್ದೇಕೆ? ಗಲಾಟೆ ಬಗ್ಗೆ ಚಂದನ್ ಕುಮಾರ್ ರಿಯಾಕ್ಷನ್

ಗಲಾಟೆ ಕುರಿತಂತೆ ನ್ಯೂಸ್ 18 ಜೊತೆ ಮಾತನಾಡಿದ ನಟ ಚಂದನ್ ಕುಮಾರ್, ಗಲಾಟೆ ನಡೆದ ದಿನ ಟೆನ್ಶನ್‌ನಲ್ಲಿದ್ದೆ ಎಂದಿದ್ದಾರೆ. ಅಮ್ಮನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಈ ಟೆನ್ಶನ್‌ನಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೆ. ಈ ವೇಳೆ ಮಿಸ್ ಕಮ್ಯೂನಿಕೇಷನ್‌ನಿಂದ ಗಲಾಟೆ ನಡೆದಿದೆ ಎಂದಿದ್ದಾರೆ.

ಕಿರುತೆರೆ ನಟ ಚಂದನ್ ಕುಮಾರ್

ಕಿರುತೆರೆ ನಟ ಚಂದನ್ ಕುಮಾರ್

  • Share this:
ಬೆಂಗಳೂರು: ತೆಲುಗು ಧಾರಾವಾಹಿ (Telugu Serial Set) ಶೂಟಿಂಗ್ ಸೆಟ್‌ನಲ್ಲಿ (Shooting Set) ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಕಿರುತೆರೆ ನಟ (Kannada Serial, Actor) ಚಂದನ್ ಕುಮಾರ್ (Chandan Kumar) ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಅವರು, ನಾನು ಅಮ್ಮನ (Mother) ಅನಾರೋಗ್ಯದ ಟೆನ್ಶನ್‌ನಲ್ಲಿದ್ದೆ. ಆದರೆ ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ, ನನಗೆ ಯಾರೂ ಕಪಾಳ ಮೋಕ್ಷ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ತೆಲುಗು ಧಾರಾವಾಹಿಯೊಂದರ ಚಿತ್ರೀಕರಣದ (Shooting) ವೇಳೆ ಚಂದನ್ ಮೇಲೆ ಹಲ್ಲೆ ನಡೆಸಲಾಗಿತ್ತು. ತೆಲುಗಿನ ಜನಪ್ರಿಯ ಧಾರಾವಾಹಿ ಸಾವಿತ್ರಮ್ಮಗಾರು ಅಬ್ಬಾಯಿ (Svithrammagari Abbayi) ಶೂಟಿಂಗ್ ಸೆಟ್‌ನಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಹಲ್ಲೆ ನಡೆದಿದ್ದು, ಇದೀಗ ಜಟಾಪಟಿಯ ವಿಡಿಯೋ ವೈರಲ್ (Video Viral) ಆಗಿತ್ತು, ಈ ಬಗ್ಗೆ ಖುದ್ದು ಚಂದನ್ ಅವರೇ ಸ್ಪಷ್ಟನೆ ನೀಡಿದ್ದಾರೆ. “ಅಮ್ಮನಿಗೆ ಅನಾರೋಗ್ಯವಾಗಿದ್ದ ಟೆನ್ಶನ್‌ನಲ್ಲಿದ್ದೆ” 

ಗಲಾಟೆ ಕುರಿತಂತೆ ನ್ಯೂಸ್ 18 ಜೊತೆ ಮಾತನಾಡಿದ ನಟ ಚಂದನ್ ಕುಮಾರ್, ಗಲಾಟೆ ನಡೆದ ದಿನ ಟೆನ್ಶನ್‌ನಲ್ಲಿದ್ದೆ ಎಂದಿದ್ದಾರೆ. ಅಮ್ಮನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಈ ಟೆನ್ಶನ್‌ನಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೆ. ಈ ವೇಳೆ ಮಿಸ್ ಕಮ್ಯೂನಿಕೇಷನ್‌ನಿಂದ ಗಲಾಟೆ ನಡೆದಿದೆ ಎಂದಿದ್ದಾರೆ.

 “ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ”

ನಾನೂ ಯಾರ ಮೇಲೂ ಹಲ್ಲೆ ಮಾಡಿಲ್ಲ ಅಂತ ಚಂದನ್ ಕುಮಾರ್ ಹೇಳಿದ್ದಾರೆ. ನಾನು ರೆಸ್ಟ್ ಮಾಡುತ್ತಿದ್ದಾಗ ಅಸ್ಟಿಸ್ಟೆಂಟ್ ಕ್ಯಾಮರಾ ಮೆನ್ ಬಂದು ನನ್ನ ಅಸಿಸ್ಟಂಟ್ ಜೊತೆ ಗಲಾಟೆ ಮಾಡಿದ್ದಾನೆ. ಆಗ ನಾನು ಸಲುಗೆಯಿಂದಲೇ ನಿಧಾನಕ್ಕೆ ತಳ್ಳಿದ್ದೆ. ಆದರೆ ಅದನ್ನೇ ಅಪಾರ್ಥ ಮಾಡಿಕೊಂಡಿದ್ದಾಗಿ ಚಂದನ್ ಹೇಳಿದ್ದಾರೆ.

ಇದನ್ನೂ ಓದಿ: Breaking News: ಕನ್ನಡ ಕಿರುತೆರೆ ನಟ ಚಂದನ್‌ಗೆ ಕಪಾಳಮೋಕ್ಷ! ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕಿರಿಕ್

 “ನನಗೆ ಯಾರೂ ಕಪಾಳ ಮೋಕ್ಷ ಮಾಡಿಲ್ಲ”

ಇನ್ನು ನನಗೆ ಯಾರೂ ಕಪಾಳ ಮೋಕ್ಷ ಮಾಡಿಲ್ಲ ಅಂತ ಚಂದನ್ ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಮಿಸ್ ಕಮ್ಯೂನಿಕೇಷನ್‌ನಿಂದ ಗಲಾಟೆ ಆಗಿದೆ. ನನ್ನ ಮೇಲೂ ಹಲ್ಲೆಯಾಗಿಲ್ಲ, ನಾನೂ ಯಾರ ಮೇಲೂ ಹಲ್ಲೆ ನಡೆಸಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ಏನಾಗಿತ್ತು?

ಹೈದ್ರಾಬಾದ್‌ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಾ ಇತ್ತು. ಈಗಾಗಲೇ ಜನಮನ ಸೆಳೆದ ಈ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವ್ರೇ ಮುಖ್ಯ ಪಾತ್ರ ನಿರ್ವಹಿಸುತ್ತಾ ಇದ್ದರು. ಶೂಟಿಂಗ್ ವೇಳೆ ಅಲ್ಲಿನ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ನಟ

ಚಂದನ್ ಈ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಬಳಿಕ 'ರಾಧಾ ಕಲ್ಯಾಣ', 'ಲಕ್ಷ್ಮೀ ಬಾರಮ್ಮ', 'ಸರ್ವ ಮಂಗಳ ಮಾಂಗಲ್ಯೇ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ನಟಿಸುತ್ತಿದ್ದಾರೆ. ತೆಲುಗು ಕಿರುತೆರೆಗೂ ಜಿಗಿದಿರುವ ಚಂದನ್, ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ.

ಇದನ್ನೂ ಓದಿ: Kannadathi Serial: ಹಾಲಿನಂತಿರುವ ಹರ್ಷ-ಭುವಿ ನಡುವೆ ಹುಳಿ ಹಿಂಡೋಕೆ ಯಾರಿಗೂ ಆಗಲ್ವಾ? ಸಾನಿಯಾ, ವರೂಧಿನಿ ಕಿಡಿ-ಕಿಡಿ!

 ಹೋಟೆಲ್ಕೂಡ ನಡೆಸುತ್ತಿರುವ ಚಂದನ್

ಸದ್ಯ ಧಾರಾವಾಹಿಗಳ ಶೂಟಿಂಗ್ ಜೊತೆಗೆ ಚಂದನ್ ಕುಮಾರ್ ಒಡೆತನದ ಹೋಟೆಲ್ ಕೂಡ ಇದೆ., ಇದರ ಜೊತೆಗೆ ಪ್ರೋಟೀನ್ ಅಂಗಡಿ ಕೂಡ ಇದೆ. ಹೀಗಾಗಿ ಚಂದನ್ ಕುಮಾರ್ ಸಖತ್ ಬ್ಯುಸಿಯಾಗಿದ್ದಾರೆ.
Published by:Annappa Achari
First published: