ಬೆಂಗಳೂರು: ಕನ್ನಡದ ಯುವನಟ, ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಕಿರುತೆರೆ ನಟ (Serial Actor) ಚಂದನ್ ಕುಮಾರ್ (Chandan Kumar) ತೆಲುಗು ಧಾರಾವಾಹಿಗಳಲ್ಲೂ (Telugu Serial) ಅಭಿನಯಿಸುತ್ತಿದ್ದಾರೆ. ‘ಸಾವಿತ್ರಮ್ಮಗಾರಿ ಅಬ್ಬಾಯಿ’ (Savithrammagari Abbayi) ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಭಾರೀ ಜನಪ್ರಿಯತೆ ಗಳಿಸುತ್ತಿದ್ದಾರೆ. ಅದರೊಂದಿಗೆ ಇದೀಗ ವಿವಾದವೂ (Controversy) ಅವರ ಮೈ ಏರಿದೆ. ಶೂಟಿಂಗ್ ಸೆಟ್‌ನಲ್ಲಿ (Shooting Set) ಅಸಿಸ್ಟೆಂಟ್ ಕ್ಯಾಮೆರಾಮೆನ್ (Assistant Cameramen) ಮೇಲೆ ಚಂದನ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಅತ್ತ ಸೆಟ್‌ನಲ್ಲೇ ಅವರ ಮೇಲೂ ಹಲ್ಲೆ ನಡೆದಿದ್ದ ವಿಡಿಯೋ ವೈರಲ್ (Video Viral) ಆಗಿತ್ತು. ಈ ಬಳಿಕ ಚಂದನ್ ವಿವಾದದ ಬಗ್ಗೆ ನ್ಯೂಸ್ 18 ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಆದ ಗಲಾಟೆಯಿಂದ ಅವರ ಕೆರಿಯರ್‌ಗೆ ಕುತ್ತಾಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹೈದ್ರಾಬಾದ್ನಲ್ಲಿ ಚಿತ್ರೀಕರಣದ ವೇಳೆ ಕಿರಿಕ್
ಹೈದ್ರಾಬಾದ್‌ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಾ ಇತ್ತು. ಈಗಾಗಲೇ ಜನಮನ ಸೆಳೆದ ಈ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವ್ರೇ ಮುಖ್ಯ ಪಾತ್ರ ನಿರ್ವಹಿಸುತ್ತಾ ಇದ್ದರು. ಶೂಟಿಂಗ್ ವೇಳೆ ಅಲ್ಲಿನ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಧಾರಾವಾಹಿ ಸೆಟ್‌ನಲ್ಲಿ ಚಂದನ್ ಕುಮಾರ್ ಅವರೇ ಕ್ಯಾಮೆರಾ ಅಸಿಸ್ಟೆಂಟ್ ಮೇಲೆ ಮೊದಲು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಈ ವೇಳೆ ತಂತ್ರಜ್ಞರು ಮಾತಿಗೆ ಮಾತು ಬೆಳೆಸಿದ್ದು, ತಂತ್ರಜ್ಞರೊಬ್ಬರು ಚಂದನ್‌ಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಹಿಂದೆ ಹಲ್ಲೆ ಮಾಡಿದ್ದರಾ ಚಂದನ್?
ಚಂದನ್ ಈ ಹಿಂದೆಯೂ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದೇ ಕ್ಯಾಮರಾಮೆನ್ ಅಸ್ಟಿಸ್ಟೆಂಟ್ ಜೊತೆ ಕಿತ್ತಾಡಿಕೊಂಡು, ಹೊಡೆದಿದ್ದರು ಎನ್ನಲಾಗುತ್ತಿದೆ. ಅದೇ ವಿಚಾರಕ್ಕೆ ಮತ್ತೆ ಗಲಾಟೆ ನಡೆದು ಚಂದನ್ ಮೇಲೆ ಹಲ್ಲೆ ನಡೆದಿದೆ ಅಂತ ಹೇಳಲಾಗುತ್ತಿದೆ. ಈ ಘಟನೆ ಹೈದ್ರಾಬಾದ್‌ನಲ್ಲಿ ಶೂಟಿಂಗ್ ವೇಳೆ ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: Breaking News: ಕನ್ನಡ ಕಿರುತೆರೆ ನಟ ಚಂದನ್‌ಗೆ ಕಪಾಳಮೋಕ್ಷ! ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕಿರಿಕ್
ಗಲಾಟೆ ಬಗ್ಗೆ ಚಂದನ್ ಕುಮಾರ್ ರಿಯಾಕ್ಷನ್
ಗಲಾಟೆ ಕುರಿತಂತೆ ನ್ಯೂಸ್ 18 ಜೊತೆ ಮಾತನಾಡಿದ ನಟ ಚಂದನ್ ಕುಮಾರ್, ಗಲಾಟೆ ನಡೆದ ದಿನ ಟೆನ್ಶನ್‌ನಲ್ಲಿದ್ದೆ ಎಂದಿದ್ದಾರೆ. ಅಮ್ಮನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಈ ಟೆನ್ಶನ್‌ನಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೆ. ಈ ವೇಳೆ ಮಿಸ್ ಕಮ್ಯೂನಿಕೇಷನ್‌ನಿಂದ ಗಲಾಟೆ ನಡೆದಿದೆ ಎಂದಿದ್ದಾರೆ.
“ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ”
ನಾನೂ ಯಾರ ಮೇಲೂ ಹಲ್ಲೆ ಮಾಡಿಲ್ಲ ಅಂತ ಚಂದನ್ ಕುಮಾರ್ ಹೇಳಿದ್ದಾರೆ. ನಾನು ರೆಸ್ಟ್ ಮಾಡುತ್ತಿದ್ದಾಗ ಅಸ್ಟಿಸ್ಟೆಂಟ್ ಕ್ಯಾಮರಾ ಮೆನ್ ಬಂದು ನನ್ನ ಅಸಿಸ್ಟಂಟ್ ಜೊತೆ ಗಲಾಟೆ ಮಾಡಿದ್ದಾನೆ. ಆಗ ನಾನು ಸಲುಗೆಯಿಂದಲೇ ನಿಧಾನಕ್ಕೆ ತಳ್ಳಿದ್ದೆ. ಆದರೆ ಅದನ್ನೇ ಅಪಾರ್ಥ ಮಾಡಿಕೊಂಡಿದ್ದಾಗಿ ಚಂದನ್ ಹೇಳಿದ್ದಾರೆ.
ಹಿಂದೆಯೂ ವಿವಾದ ಮೈಮೇಲೆ ಎಳೆದುಕೊಂಡಿದ್ದ ಚಂದನ್
ಚಂದನ್ ಈ ಹಿಂದೆಯೂ ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಈ ವೇಳೆಯೂ ಕೆಲವು ಸಂದರ್ಭದಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಹಿಂದೊಮ್ಮೆ ಅವರ ಪತ್ನಿ ಕವಿತಾ ಜೊತೆ ಶಿವಗಂಗೆ ಬೆಟ್ಟದ ದೇಗುಲದ ಬಳಿ ಚಪ್ಪಲಿ ಹಾಕಿಕೊಂಡು ಫೋಟೋ ಶೂಟ್ ಮಾಡಿ, ಅಲ್ಲಿನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದನ್ನೂ ಓದಿ: Chandan Kumar: ತೆಲುಗು ಶೂಟಿಂಗ್ ಸೆಟ್‌ನಲ್ಲಿ ಕಿರಿಕ್ ಆಗಿದ್ದೇಕೆ? ಗಲಾಟೆ ಬಗ್ಗೆ ಚಂದನ್ ಕುಮಾರ್ ರಿಯಾಕ್ಷನ್
ತೆಲುಗು ಧಾರಾವಾಹಿಗಳಿಂದ ಬ್ಯಾನ್ ಆಗ್ತಾರಾ ಚಂದನ್?
ಹೌದು ಇಂಥದ್ದೊಂದು ಸುದ್ದಿ ಇದೀಗ ಹರಿದಾಡುತ್ತಿದೆ. ಚಂದನ್ ನಡೆಸಿದ ಗಲಾಟೆಯನ್ನು ತೆಲುಗು ಟಿವಿ ಅಸೋಸಿಯೇಶನ್ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಅವರನ್ನು ತೆಲುಗು ಧಾರಾವಾಹಿಗಳಿಂದ ಬ್ಯಾನ್ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹೀಗಾದರೆ ಚಂದನ್ ಕುಮಾರ್ ಅವರ ತೆಲುಗು ಸೀರಿಯಲ್ ಭವಿಷ್ಯಕ್ಕೆ ಕುತ್ತಾಗಲಿದೆ. ಆದರೆ ಯಾವುದು ಅಧಿಕೃತವಾಗಿಲ್ಲ. ಹೀಗೆಲ್ಲ ಆಗದಿರಲಿ ಅಂತ ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ