Chandan Kumar: ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗಾಗಿ ವಿಶೇಷ ವಿಡಿಯೋ ಹಂಚಿಕೊಂಡ ಚಂದನ್​..!

Kavitha Gowda: ಚಂದನ್​ ತಮ್ಮ ಹಾಗೂ ಕವಿತಾ ಅವರ ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಅದನ್ನು ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರಿಗಾಗಿ ಎಂದು ಬರೆದುಕೊಂಡಿದ್ದಾರೆ.

ಚಂದನ್​ ಕುಮಾರ್​ ಹಾಗೂ ಕವಿತಾ ಗೌಡ

ಚಂದನ್​ ಕುಮಾರ್​ ಹಾಗೂ ಕವಿತಾ ಗೌಡ

  • Share this:
ಲಕ್ಷ್ಮೀ ಬಾರಮ್ಮ ಖ್ಯಾತಿಯ ಜೋಡಿ ಚಂದನ್​ ಕುಮಾರ್​ ಹಾಗೂ ಕವಿತಾ ಇತ್ತೀಚೆಗಷ್ಟೆ ಸಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಸಹ ಕಲಾವಿದರೊಂದಿಗೆ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಇವರು ಒಂದರ ಹಿಂದೆ ಒಂದರಂತೆ ಚಾರಣ ಮಾಡುತ್ತಿದ್ದಾರೆ. ಒಮ್ಮೆ ಶಿವಗಂಗೆಯಾದರೆ, ಮತ್ತೊಮ್ಮೆ ಸ್ಕಂದಗಿರಿ, ಮಾಕಳಿ ದುರ್ಗ ಹೀಗೆ ವಾರಕ್ಕೊಂದು ಕಡೆ ಎಲ್ಲ ಸ್ನೇಹಿತರೂ ಸೇರಿ ಸುತ್ತಾಡುತ್ತಿದ್ದಾರೆ. ತಮ್ಮ ಪ್ರವಾಸ ಹಾಗೂ ಚಾರಣದ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಅವು ವೈರಲ್​ ಆಗುತ್ತಿವೆ. ಅದರಲ್ಲೂ ಚಂದನ್​ ಹಾಗೂ ಕವಿತಾ ಅವರ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದವರು ಈ ಜೋಡಿಯ ನಡುವೆ ಪ್ರೀತಿ ಇರಬೇಕು ಎಂದು ಸುದ್ದಿ ಹರಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವಾಗಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೂ ಇದೆ. ಇವರು ಕೇವಲ ಸ್ನೇಹಿತರಾಗಿದ್ದರೂ ಪರವಾಗಿಲ್ಲ, ಆದರೆ ಇನ್ನಾದರೂ ಒಂದಾದರೆ ಅದೇ ಖುಷಿ ಎಂದೂ ಕಮೆಂಟ್​ ಮಾಡುತ್ತಿದ್ದಾರೆ.

ಚಂದನ್​ ಹಾಗೂ ಕವಿತಾ ಗೌಡ ಇತ್ತೀಚೆಗಷ್ಟೆ ಹೊಸ ಫೋಟೋಶೂಟ್ ಒಂದಕ್ಕೆ ಪೋಸ್​ ಕೊಟ್ಟಿದ್ದಾರೆ. ಇದು ಈ ಜೋಡಿಯ ಮೊದಲ ಫೋಟೋಶೂಟ್ ಆಗಿದ್ದು, ಇದರ ಬಗ್ಗೆ ಚಂದನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹೀಗಿರುವಾಗಲೇ ಚಂದನ್​ ತಮ್ಮ ಹಾಗೂ ಕವಿತಾ ಅವರ ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಅದನ್ನು ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರಿಗಾಗಿ ಎಂದು ಬರೆದುಕೊಂಡಿದ್ದಾರೆ.


ನಾನು ಹಾಗೂ ಕವಿತಾ ಒಳ್ಳೆಯ ಸ್ನೇಹಿತರು. ಈ ವಿಷಯ ತಿಳಿದಿದ್ದರೂ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರನ್ನು ಕನ್​ಫ್ಯೂಸ್​ ಮಾಡಲು ಈ ವಿಡಿಯೋ ಪೋಸ್ಟ್​ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಇತ್ತೀಚೆಗಷ್ಟೆ ಚಾರಣಕ್ಕೆ ಹೋದಾಗ ಶೂಟ್​ ಮಾಡಿದ್ದು, ಅದನ್ನು ಎಡಿಟ್​ ಮಾಡಿ ಉಸಿರೇ ಉಸಿರೇ ಅನ್ನೋ ಹಾಡನ್ನು ಸೇರಿಸಿದ್ದಾರೆ.
Published by:Anitha E
First published: