• Home
 • »
 • News
 • »
 • entertainment
 • »
 • Chandan Kumar: ನಟ ಚಂದನ್ ಕುಮಾರ್ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಲಾಕ್! ಕದ್ದ ಹಣವೆಷ್ಟು ಗೊತ್ತಾ?

Chandan Kumar: ನಟ ಚಂದನ್ ಕುಮಾರ್ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಲಾಕ್! ಕದ್ದ ಹಣವೆಷ್ಟು ಗೊತ್ತಾ?

ನಟ ಚಂದನ್ ಕುಮಾರ್ ಅವರ ದೊನ್ನೆ ಬಿರಿಯಾನಿ ಅರಮನೆ ಹೋಟೆಲ್

ನಟ ಚಂದನ್ ಕುಮಾರ್ ಅವರ ದೊನ್ನೆ ಬಿರಿಯಾನಿ ಅರಮನೆ ಹೋಟೆಲ್

ನಟ ಚಂದನ್ ಕುಮಾರ್ ಅವರ ಹೋಟೆಲ್‍ನಲ್ಲಿ ಕಳ್ಳತನ ನಡೆದಿತ್ತು. ನಟನ ದೊನ್ನೆ ಬಿರಿಯಾನಿ ಅರಮನೆ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಸಿಕ್ಕಿಹಾಕಿಕೊಂಡಿದ್ದಾನೆ.

 • Share this:

  ಲಕ್ಷ್ಮಿ ಬಾರಮ್ಮ ಧಾರಾವಾಹಿ (Serial) ಖ್ಯಾತಿ ನಟ ಚಂದನ್ ಕುಮಾರ್ (Chandan Kumar) ಅವರ ಹೋಟೆಲ್‍ನಲ್ಲಿ (Hotel) ಕಳ್ಳತನ ನಡೆದಿತ್ತು. ನಟನ ದೊನ್ನೆ ಬಿರಿಯಾನಿ ಅರಮನೆ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಸಿಕಿಹಾಕಿಕೊಂಡಿದ್ದಾನೆ. ಜುಲೈ 3 ರಿಂದ ಸೆಪ್ಟೆಂಬರ್ 13 ರ ನಡುವೆ 73 ದಿನಗಳಲ್ಲಿ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆ ಸಿರಾ ಸಮೀಪದ ಗೊಲ್ಲರಹಳ್ಳಿ ನಿವಾಸಿ ಗೊಲ್ಲ ರಂಗಪ್ಪ ಅಲಿಯಾಸ್ ಸತೀಶ್ ಅಲಿಯಾಸ್ ರಂಗನಾಥ್ ಅಲಿಯಾಸ್ ಮುರಳಿ ಮತ್ತು ಆತನ ಸಹಚರರು ಕಳ್ಳತನ ಮಾಡಿದ ಸ್ಥಳಗಳಿಂದ ಕೇವಲ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕಳ್ಳತನ ಮಾಡಿದ್ದ 9.2 ಲಕ್ಷ ರೂಪಾಯಿಗಳಲ್ಲಿ 10,000 ರೂಪಾಯಿಗಳನ್ನು ಮಾತ್ರ ಪೊಲೀಸ್ರು ವಶಪಡಿಸಿಕೊಳ್ಳಲು ಸಾಧ್ಯವಾಗಿದೆಯಂತೆ.


  ನಟ ಚಂದನ್ ಕುಮಾರ್ ಹೋಟೆಲ್‍ನಲ್ಲಿ ಕಳ್ಳತನ
  ಚಂದನ್ ಕುಮಾರ್ ನಟನೆಯ ಜೊತೆ ಹೋಟೆಲ್ ಉದ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಹೋಟೆಲ್‍ನಲ್ಲಿ ಸ್ಯಾಂಡಲ್‍ವುಡ್ ನಟರಿಂದ ತೊಡಗಿ ರಾಜಕೀಯ ಮುಖಂಡರೂ ಬಿರಿಯಾನಿ ಸವಿದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಕಳೆದ ತಿಂಗಳು ಆಗಸ್ಟ್ 5ರಂದು ಈ ಹೋಟೆಲ್‍ನಲ್ಲಿ ಕಳ್ಳತನ ಆಗಿತ್ತು.


  ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು
  ಚಂದನ್ ದೊನ್ನೆ ಬಿರಿಯಾನಿ ಹೋಟೆಲ್ ಸೇರಿ ನಾಲ್ಕೈದು ಅಂಗಡಿಗಳಲ್ಲಿ ಖದೀಮರು ಕಳ್ಳತನ ಮಾಡಿದ್ದರು. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಿರಿಯಾನಿ ಹೋಟೆಲ್‍ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಚಂದನ್ ಕುಮಾರ್ ದೂರು ದಾಖಲಿಸಿದ್ದಾರೆ. ಈಗ ಕಳ್ಳನನ್ನು ಬಂಧಿಸಲಾಗಿದೆ.


  ಸಿಂಪ್ಲಿ ಸೋಫಾಸ್ ಶೋ ರೂಂನಲ್ಲಿ ಕಳ್ಳತನ
  ಆ.31 ರಂದು ಸದಾಶಿವನಗರದ ಬಳ್ಳಾರಿ ರಸ್ತೆಯಲ್ಲಿರುವ ಸಿಂಪ್ಲಿ ಸೋಫಾಸ್ ಶೋ ರೂಂನಲ್ಲಿ ಕಳ್ಳತನ ಮಾಡಿ 4.6 ಲಕ್ಷ ನಗದು ಹಣವಿರುವ ಲಾಕರ್ ಅನ್ನು ತೆಗೆದುಕೊಂಡು ಹೋಗಿದ್ದರು. ಶೋ ರೂಂ ಮ್ಯಾನೇಜರ್ ಶಿವಕುಮಾರ್ ಎನ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


  Actor Chandan Kumar, Chandan Kumar hotel, Theft in Chandan Kumar Hotel, ನಟ ಚಂದನ್ ಕುಮಾರ್, ಚಂದನ್ ಕುಮಾರ್ ಹೋಟೆಲ್, ಚಂದನ್ ಕುಮಾರ್ ಹೋಟೆಲ್ ನಲ್ಲಿ ಕಳ್ಳತನ, ಚಂದನ್ ಕುಮಾರ್ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಲಾಕ್, Kannada news, Karnataka news,
  ಚಂದನ್ ಕುಮಾರ್ ಹೋಟೆಲ್‍


  ಸದಾಶಿವನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶಂಕಿತರ ಫೋಟೋ ಗ್ರಾಫ್ ಅನ್ನು ನಗರದ ಅವರ ಸಹವರ್ತಿಗಳಿಗೆ ಕಳುಹಿಸಿದ್ದಾರೆ. ಇಬ್ಬರಲ್ಲಿ ಒಬ್ಬನನ್ನು ರಂಗಪ್ಪ ಎಂದು ಗುರುತಿಸಲಾಗಿತ್ತು. ಕಳೆದ ವರ್ಷ ಕಳ್ಳತನ ಪ್ರಕರಣದಲ್ಲಿ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದರು. ಇಬ್ಬರು ಶಂಕಿತರು ರಾಜಸ್ಥಾನ ಮತ್ತು ನಂತರ ಮಹಾರಾಷ್ಟ್ರದಲ್ಲಿ ತಿರುಗಾಡುತ್ತಿದ್ದಾರೆ ಎಂದು ಪೊಲೀಸ್ ರಿಗೆ ತಿಳಿದುಬಂದಿದೆ. ಕೊನೆಗೆ ರಂಗಪ್ಪನನ್ನು ಪೊಲೀಸರು ಹಿಡಿದಿದ್ದಾರೆ.


  ಕದ್ದ ಹಣದಲ್ಲಿ ಐಷಾರಾಮಿ ಜೀವನ
  ಈ ಖದೀಮರು ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕದಿಯುತ್ತಿದ್ದರು. ಅಲ್ಲಿ ಬೇರೆ ಯಾವುದೇ ವಸ್ತುಗಳನ್ನು ಮುಟ್ಟದೇ ಹಣ ಮಾತ್ರ ಕದ್ದಿದ್ದರು. ಐಷಾರಾಮಿ ಹೋಟೆಲ್‍ಗಳಲ್ಲಿ ತಂಗುವ ಮೂಲಕ ಖರ್ಚು ಮಾಡಿದ್ದಾರೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ತಿರುಗಾಡುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.


  Actor Chandan Kumar, Chandan Kumar hotel, Theft in Chandan Kumar Hotel, ನಟ ಚಂದನ್ ಕುಮಾರ್, ಚಂದನ್ ಕುಮಾರ್ ಹೋಟೆಲ್, ಚಂದನ್ ಕುಮಾರ್ ಹೋಟೆಲ್ ನಲ್ಲಿ ಕಳ್ಳತನ, ಚಂದನ್ ಕುಮಾರ್ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಲಾಕ್, Kannada news, Karnataka news,
  ಚಂದನ್ ಕುಮಾರ್


  ಪೊಲೀಸರ ಪ್ರಕಾರ, ಜುಲೈ 3 ರಂದು ಯಲಹಂಕದ ಹೊಸ ಒಊ ಪ್ರಾವಿಷನ್ ಸ್ಟೋರ್ ಇಬ್ಬರು ಹೊಡೆದು 80,000 ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದರು. ಆಗಸ್ಟ್ 25 ರಂದು ಯಲಹಂಕ ನ್ಯೂ ಟೌನ್‍ನಲ್ಲಿರುವ ಸನ್‍ವ್ಯೂ ಹಾರ್ಡ್‍ವೇರ್ ಶಾಪ್ ಅನ್ನು ಗುರಿಯಾಗಿಸಿಕೊಂಡು 1.5 ಲಕ್ಷ ರೂ. ಕದಿದ್ದಾರೆ. ಆ.26ರಂದು ಸಹಕಾರನಗರದ ಚಂದನ್ ಅವರು ದೊನ್ನೆ ಬಿರಿಯಾನಿ ಅರಮನೆ ಹೊಟೇಲ್‍ಗೆ ಕನ್ನ ಹಾಕಿ 50 ಸಾವಿರ ರೂ. ಕದ್ದಿದ್ದರು.

  Published by:Savitha Savitha
  First published: