RIP Captain Chalapati Choudhary: ಹಿರಿಯ ಬಹುಭಾಷಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ನಿಧನ

ಹಿರಿಯ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ( (67) ನಿಧನ ಹೊಂದಿದ್ದಾರೆ. ಕಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಕ್ಯಾಪ್ಟನ್ ಚಲಪತಿ ಚೌದ್ರಿ

ಕ್ಯಾಪ್ಟನ್ ಚಲಪತಿ ಚೌದ್ರಿ

  • Share this:
ಇತ್ತೀಚಿನ ವರ್ಷದಲ್ಲಿ ಚಿತ್ರರಂಗದ ಅನೇಕ ನಟ, ನಟಿಯರು ನಿಧನಹೊಂದುತ್ತಿದ್ದು, ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗುತ್ತಿದೆ. ಇದರ ನಡುವೆ ಇದೀಗ ಕನ್ನಡ (Kannada), ತೆಲುಗು (Telugu), ತಮಿಳು (Tamil) ಮತ್ತು ಹಿಂದಿ (Hindi) ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ( (67) ನಿಧನ ಹೊಂದಿದ್ದಾರೆ. ಕಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಇನ್ನು, ಕ್ಯಾಪ್ಟನ್ ಚಲಪತಿ ಚೌದ್ರಿ (Captain Chalapati Choudhary) ನಿಧನಕ್ಕೆ ಅನೇಕ ಸಿನಿಮಾರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಚೌದ್ರಿ ಆಂಧ್ರ ಪ್ರದೇಶದ ವಿಜಯವಾಡದ ನಿವಾಸಿಯಾಗಿದ್ದರು. ಆದರೆ ನಂತರದ ದಿನಗಳಲ್ಲಿ ಕರ್ನಾಟಕದ ರಾಯಚೂರಿನಲ್ಲಿ ಬಂದು ನೆಲೆಸಿದ್ದರು.

100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ:

ಇನ್ನು, ಕ್ಯಾಪ್ಟನ್ ಚಲಪತಿ ಚೌದ್ರಿ ಅವರು ಕನ್ನಡ, ತೆಲುಗು, ಹಿಂದಿ ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ನಟ ಆಗಿರುವ ಚೌದ್ರಿಮ ಅವರು, ಈವರೆಗೆ ಸರಿಸುಮಾರು 100ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು ಎಲ್ಲಾ ಭಾಷೆಗಳಲ್ಲಿ ಸ್ಟಾರ್ ನಟರುಗಳ ಜೊತೆ ಬೆಳ್ಳಿ ತೆರೆಯನ್ನು ಹಂಚಿಕೊಂಡಿದ್ದಾರೆ. ಇವರು, ಕನ್ನಡದ ಸಂಚೂರಿ ಸ್ಟಾರ್ ಶಿವರಾಜ್ ಕುಮಾರ್, ತೆಲುಗಿನ ಬಾಲಕೃಷ್ಣ, ನಾಗಾರ್ಜುನ್, ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಹೀರೋಗಳ ಜೊತೆ  ಅಭಿನಯಿಸಿದ್ದಾರೆ. ಅವರು ಪ್ರಸ್ತುತ ಧಾರವಾಹಿಗಳಲ್ಲಿ ನಟಿಸುತ್ತಿದ್ದರು.

ಇದನ್ನೂ ಓದಿ: KGF 2 ಚಿತ್ರದ ಯಶಸ್ಸಿನ ಹಿಂದಿನ ಕಾಣದ ಕೈಗಳ ಕಥೆ ಹೇಳ್ತಿದೆ Route To EL Dorado

ಇಂದು ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ:

ಕ್ಯಾಪ್ಟನ್ ಚಲಪತಿ ಚೌದ್ರಿ ಅವರು ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ರಾಯಚೂರಿನ ಕೆ.ಎಂ ಕಾಲೊನಿಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಸಲಾಗಿತ್ತು. ಇದಾದ ಬಳಿಕ ಅಲ್ಲೇ ಹತ್ತಿರದ ಮುಕ್ತಿಧಾಮದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Dhananjay: ಕನ್ನಡ್ಕಕೆ ಕೆಜಿಎಫ್ ಹೆಮ್ಮೆಯಾದರೆ ತೆಲುಗಿಗೆ ಪುಷ್ಪ ಹೆಮ್ಮೆ, ಕಿಚ್ಚನ ಕೈರುಚಿ ಸವಿದ ಡಾಲಿ

ಪೋಷಕ ಪಾತ್ರಗಳಿಂದ ಪ್ರಸಿದ್ಧರಾಗಿದ್ದ ಚೌದ್ರಿ:

ಇನ್ನು, ಕ್ಯಾಪ್ಟನ್ ಚಲಪತಿ ಚೌದ್ರಿ ಅವರು ಹೆಚ್ಚು ಪೋಷಕ ಪಾತ್ರಗಳಿಂದ ಗಮನ ಸೇಳೆದಿದ್ದರು. ಅವರು ಸಿನಿಮಾ ಮತ್ತು ಕಿರುತೆರೆಗಳಲ್ಲಿ ಪೋಷಕ ಪಾತ್ರ ನಿರ್ವಹಿಸುವುದರ ಮೂಲಕ ಹೆಚ್ಚು ಪ್ರಸಿದ್ಧರಾಗಿದ್ದರು. ಅವರ ಅಗಲಿಕೆ ಚಿತ್ರರಂಗ ಮಾತ್ರವಲ್ಲದೇ ಕಿರುತೆರೆಗೂ ತುಂಬಲಾರದ ನಷ್ಟವಾಗಿದೆ  ಎಂದು ಹೇಳಬಹುದು. ಇವರ ಅಗಲಿಕೆಗೆ ಚಿತ್ರರಂಗದ ಗಣ್ಯರು ಮತ್ತು ಕಿರುತೆರೆಯ ಕಲಾವಿದರುಗಳು ಸಂತಾಪ ಸೂಚಿಸಿದ್ದಾರೆ.
Published by:shrikrishna bhat
First published: