#MeToo: ಸುಳ್ಳು ಆರೋಪ ಮಾಡಿರುವ ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ: ಅರ್ಜುನ್​ ಸರ್ಜಾ

news18
Updated:October 20, 2018, 4:23 PM IST
#MeToo: ಸುಳ್ಳು ಆರೋಪ ಮಾಡಿರುವ ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ: ಅರ್ಜುನ್​ ಸರ್ಜಾ
news18
Updated: October 20, 2018, 4:23 PM IST
ನ್ಯೂಸ್​ 18 ಕನ್ನಡ 

ದಕ್ಷಿಣ ಭಾರತದ ಹಿರಿಯ ನಟ ಅರ್ಜುನ್​ ಸರ್ಜಾ ಸಹ ಈಗ #MeToo ಸುಳಿಗೆ ಸಿಲುಕಿದ್ದಾರೆ. ನಟಿ ಶ್ರುತಿ ಹರಿಹರನ್​ ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ನಟ ಅರ್ಜುನ್​ ಸರ್ಜಾ ಈಗ ಪ್ರತಿಕ್ರಿಯೆ ನೀಡಿದ್ದಾರೆ.

'ಶ್ರುತಿ ಅವರ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಇದುವರೆಗೂ ನಾನು 60 ರಿಂದ 70 ನಟಿಯರ ಜೊತೆ ನಟಿಸಿದ್ದೇನೆ. ಯಾರೂ ಸಹ ಈ ರೀತಿಯ ಆರೋಪ ಮಾಡಿಲ್ಲ. ಜೊತೆಯಲ್ಲಿ ಕೂರಿಸಿಕೊಂಡು ದೃಶ್ಯದಲ್ಲಿ ಹೇಗೆ ನಟಿಸಬೇಕು? ಡೈಲಾಗ್​ನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ನಮ್ಮ ವೃತ್ತಿಯನ್ನು ಮುಂದಿಟ್ಟುಕೊಂಡು ಇಂತಹ ಕೆಳಮಟ್ಟದಲ್ಲಿ ನಾನು ಎಂದೂ ಇಳಿದಿಲ್ಲ. ಅಭಿನಯವನ್ನು ಮುಂದೆ ಇಟ್ಟುಕೊಂಡು ಒಂದು ಹೆಣ್ಣಿನ ಮೈ ಮುಟ್ಟಬೇಕು ಎಂಬ ನೀಚ ಬುದ್ಧಿ ನನ್ನಲ್ಲಿ ಇಲ್ಲ' ಎಂದು ಹೇಳಿದ್ದಾರೆ ಅರ್ಜುನ್​ ಸರ್ಜಾ.

'ನಾನು #MeToo ಅಭಿಯಾನದ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ಈ ದೊಡ್ಡ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶ್ರುತಿ ಮಾತನಾಡುವ ಮಾತುಗಳಿಗೆ ಯಾವುದಾದರೂ ಆಧಾರವಿದೆಯಾ? ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೆ. ಆದರೆ ಪ್ರತಿಕ್ರಿಯಸಿದಿದ್ದರೆ ಆರೋಪ ನಿಜ ಅನ್ನಿಸಿಬಿಡುತ್ತದೆ. ಇಂಥ ಆರೋಪಗಳನ್ನು ಕಡೆಗಣಿಸಬಾರದು. ಅದಕ್ಕಾಗಿಯೇ ಶ್ರುತಿ ಆರೋಪದ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ' ಎಂದಿದ್ದಾರೆ ಅವರು.

ಸರ್ಜಾ ಪರ  ನಿಂತ ಕುಟುಂಬಸ್ಥರು

'ಶ್ರುತಿ ಅವರ ಆರೋಪದಿಂದ ನಮ್ಮ ಕುಟುಂಬದವರಿಗೆ ತುಂಬಾ ನೋವಾಗಿದೆ.  ನನ್ನ ಅಳಿಯ ಅಂಥವರಲ್ಲ, ದೇವರಂತಾ ಮನುಷ್ಯ. ಘಟನೆ ನಡೆದ ದಿನ ಆರೋಪ ಮಾಡದೇ, ಈಗ ಏಕೆ ಶ್ರುತಿ ಹರಿಹರನ್ ಆರೋಪ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಅರ್ಜುನ್ ನನ್ನ ಮಗಳ ಜೊತೆ ಹಾಗೂ ನಮ್ಮ ಕುಟುಂಬದ ಜೊತೆ ಚೆನ್ನಾಗಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡ ಹಾಕೋದಕ್ಕೆ ನಾವು ಸಿದ್ಧವಾಗಿದ್ದು, ಈ ಬಗ್ಗೆ ಕುಟುಂಬಸ್ಥರೆಲ್ಲ ಮಾತಾನಾಡಿ ನಿರ್ಧಾರಕ್ಕೆ ಬರಲಿದ್ದೇವೆ' ಎಂದು ಶ್ರುತಿ ವಿರುದ್ಧ ಕಿಡಿಕಾರಿದ್ದಾರೆ ಅರ್ಜುನ್​ ಅವರ ಅತ್ತೆ ಪಾರ್ವತಮ್ಮ.

ಶ್ರುತಿ ಆರೋಪದ ಕುರಿತು  ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿಕ್ರಿಯೆ:
Loading...

'ಶ್ರುತಿ ಹರಿಹರನ್ ಈ ರೀತಿ ಮಾಡುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕಿತ್ತು.  ಇಂತಹ ಕಿರುಕುಳ ಆಗಿದ್ದರೆ, ಮೊದಲೇ ನಮ್ಮ ಗಮನಕ್ಕೆ ತರಬಹುದಿತ್ತು. ಇಷ್ಟು ದಿನ ಆದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಟ್ಟಿದ್ದು ನಿಜಕ್ಕೂ ಬೇಸರ ತಂದಿದೆ.  ಇದುವರೆಗೂ ಶ್ರುತಿ ಈ ಕುರಿತಾಗಿ ವಾಣಿಜ್ಯ ಮಂಡಳಿಗೆ ಯಾವುದೇ ದೂರಾಗಲಿ ಅಥವಾ ಮಾಹಿತಿಯಾಗಲಿ ಕೊಟ್ಟಿಲ್ಲ. ಯಾರು ಏನು ಆರೋಪ ಮಾಡುತ್ತಾರೋ ಮಾಡಲಿ. ದೂರು ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ತಿಳಿಸಿದ್ದಾರೆ.

 

 

 
First published:October 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...