• Home
  • »
  • News
  • »
  • entertainment
  • »
  • Arjun Sarja: ನಟ ಅರ್ಜುನ್ ಸರ್ಜಾ ತಾಯಿ ನಿಧನ, ಅನಾರೋಗ್ಯದಿಂದ ಕೊನೆಯುಸಿರೆಳೆದ ಲಕ್ಷ್ಮೀದೇವಮ್ಮ

Arjun Sarja: ನಟ ಅರ್ಜುನ್ ಸರ್ಜಾ ತಾಯಿ ನಿಧನ, ಅನಾರೋಗ್ಯದಿಂದ ಕೊನೆಯುಸಿರೆಳೆದ ಲಕ್ಷ್ಮೀದೇವಮ್ಮ

ಅರ್ಜುನ್ ಸರ್ಜಾ ತಾಯಿ ನಿಧನ

ಅರ್ಜುನ್ ಸರ್ಜಾ ತಾಯಿ ನಿಧನ

Dhruva Sarja Grand Mother Death: ಸ್ಯಾಂಡಲ್‌ವುಡ್‌ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ತಾಯಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ 22 ದಿನಗಳಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

  • Share this:

ಸ್ಯಾಂಡಲ್ ವುಡ್ ನಟ (Sandalwood Actor) ಅರ್ಜುನ್ ಸರ್ಜಾ (Arjun Sarja) ಅವರಿಗೆ ಮಾತೃ ವಿಯೋಗವಾಗಿದ್ದು, ಅವರ ತಾಯಿ (Mother) ಲಕ್ಷ್ಮಿದೇವಿ ನಿಧನರಾಗಿದ್ದಾರೆ (Death) . ಇಂದು ಬೆಳಿಗ್ಗೆ ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಮ್ಮ ಅವರು ಜಯನಗರದ (Jayanagar) ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಶಕ್ತಿಪ್ರಸಾದ್ ಪತ್ನಿ ಲಕ್ಷ್ಮಿದೇವಿ ಅವರಿಗೆ ಅವರಿಗೆ 85 ವರ್ಷ ವಯಸ್ಸಾಗಿತ್ತು.


ಅನಾರೋಗ್ಯದಿಂದ ಲಕ್ಷ್ಮೀದೇವಮ್ಮ ನಿಧನ


ಸ್ಯಾಂಡಲ್‌ವುಡ್‌ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ತಾಯಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ 22 ದಿನಗಳಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.  ಇನ್ನು ಅರ್ಜುನ್ ಸರ್ಜಾ ಅವರು ಕೆಲ ತಿಂಗಳ ಹಿಂದೆ ಮಾವನನ್ನ ಕಳೆದುಕೊಂಡಿದ್ದರು. ಕಲಾತಪಸ್ವಿ ಎಂದು ಖ್ಯಾತರಾಗಿದ್ದ ನಟ ರಾಜೇಶ್ ಅವರು ಫೆಬ್ರವರಿಯಲ್ಲಿ ಅನಾರೋಗ್ಯದ ಕಾರಣದಿಂದ ವಿಧಿವಶರಾಗಿದ್ದರು. ಆ ನೋವಿನಿಂದ ಹೊರ ಬರುವ ಮೊದಲೇ ತಾಯಿಯ ನಿಧನದ ನೋವು ಅವರನ್ನು ಆವರಿಸಿದ್ದು, ಆಘಾತ ನೀಡಿದೆ.
ಇನ್ನು ಮೂಲಗಳ ಪ್ರಕಾರ ಲಕ್ಷ್ಮೀ ದೇವಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ದತೆ ಮಾಡಿಕೊಂಡಿದ್ದು, ಪಾರ್ಥಿವ ಶರೀರವನ್ನು ಜಯನಗರದ ಅಪೋಲೋ ಆಸ್ಪತ್ರೆಯಿಂದ ಅರ್ಜುನ್‌ ಸರ್ಜಾ ಅವರ ನಿವಾಸಕ್ಕೆ ಶಿಫ್ಟ್‌ ಮಾಡಲು ಸಿದ್ದತೆ ನಡೆಸಲಾಗಿದೆ. ತಾಯಿಯ ಆರೋಗ್ಯದಲ್ಲಿ ಏರು ಪೇರು ಉಂಟಾದ ಹಿನ್ನಲ್ಲೇ ಅರ್ಜುನ್ ಸರ್ಜಾ ಬೆಂಗಳೂರಿನಲ್ಲಿಯೇ ಕಳೆದ ಕೆಲ ದಿನಗಳಿಂದ ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಹೈದರಾಬಾದ್​ನಿಂದ ಬರುತ್ತಿದ್ದಾರೆ ಧ್ರುವ ಸರ್ಜಾ


ಇನ್ನು ಲಕ್ಷ್ಮೀ ದೇವಮ್ಮಅವರ ಮೊಮ್ಮಗ ನಟ ಧ್ರುವ ಸರ್ಜಾ ಮಾರ್ಟಿನ್ ಶೂಟಿಂಗ್​ ಗಾಗಿ ಹೈದರಾಬಾದ್​ಗೆ ತೆರಳಿದ್ದರು. ಆದರೆ ಅಲ್ಲಿಂದ ಈಗಾಗಲೇ ಹೊರಟಿರುವ ಮಾಹಿತಿ ಇದೆ.  ಕಳೆದ 2 ವರ್ಷದ ಹಿಂದೆ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಆ ನೋವಿನಿಂದ ಇನ್ನೂ ಕುಟುಂಬಸ್ಥರು ಹೊರ ಬಂದಿರಲಿಲ್ಲ. ಆದರೆ ಈಗ ಲಕ್ಷ್ಮೀ ದೇವಮ್ಮ ಅವರ ನಿಧನದಿಂದ ಮತ್ತೊಮ್ಮೆ ಮನೆಯಲ್ಲಿ ಸೂತಕ ಛಾಯೆ ಮೂಡಿದೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು