Anushka Sharma: ವಮಿಕಾ ಜೊತೆ ಸೈಕ್ಲಿಂಗ್ ಮಾಡಿದ ಅನುಷ್ಕಾ ಶರ್ಮಾ, ವಿಡಿಯೋ ವೈರಲ್

ಅನುಷ್ಕಾ ಶರ್ಮಾ ರೆಸಾರ್ಟ್ ಸುತ್ತಲೂ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ವೀಡಿಯೊದಲ್ಲಿ ಮಗಳು ವಮಿಕಾ ಸಹ ಬೈಸಿಕಲ್‌ನಲ್ಲಿ ಇರುವುದನ್ನು ನೊಡಬಹುದು. ಆದರೆ, ಇದರಲ್ಲೂ ವಾಮಿಕಾ ಮುಖ ಕಾಣಿಸುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಜೋಡಿಯ ಬಗ್ಗೆ ಹೆಚ್ಚು ಹೇಳುವ ವಿಷಯಗಳಿಲ್ಲ ಎಂದರೂ ತಪ್ಪಾಗಲಾರದು. ಸ್ಟಾರ್​ ಜೋಡಿಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವ ಈ ಕ್ಯೂಟ್ ಕಪಲ್ಸ್, ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸದ್ಯ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಮಗಳು ವಮಿಕಾ (Vamika) ಜೊತೆ ಮಾಲ್ಡೀವ್ಸ್‌ಗೆ (Maldives) ತೆರಳಿದ್ದಾರೆ. ಈ ವೇಳೆ ಸುಂದರ ಕ್ಷಣಗಳ ವಿಡಿಯೋಗಳನ್ನು ಅನುಷ್ಕಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ಅವರು ತನ್ನ ರೆಸಾರ್ಟ್ ಸುತ್ತಲೂ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ವೀಡಿಯೊದಲ್ಲಿ ಮಗಳು ವಮಿಕಾ ಸಹ ಬೈಸಿಕಲ್‌ನಲ್ಲಿ ಇದ್ದಂತಿದೆ. ಆದರೆ, ಈ ಬಾರಿಯೂ ವಮಿಕಾ ಮುಖವನ್ನು ತೋರಿಸಿಲ್ಲ. ಹೌದು, ಈ ಜೋಡಿ ಈವರೆಗೂ ತಮ್ಮ ಮಗುವಿನ ಮುಖವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೂ ಸಹ ಅನುಷ್ಕಾ ಹಂಚಿಕೊಂಡಿರುವ ಹೊಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬೈಸಿಕಲ್ ಜೊತೆಗಿನ ವಿಡಿಯೋ ಹಂಚಿಕೊಂಡ ಅನುಷ್ಕಾ:

ಮಾಲ್ಡ್ವೀಸ್ ಪ್ರವಾಸದಲ್ಲಿರುವ ಅನುಷ್ಕಾ ಹಾಗೂ ವಿರಾಟ್ ರಜೆಯ ಮಜದಲ್ಲಿದ್ದಾರೆ. ಈ ವೇಳೆ ಅನುಷ್ಕಾ ತಮ್ಮ ರೆಸಟಾರ್ಟ್ ಸುತ್ತ ಸೈಕಲಿಂಗ್ ಮಾಡುತ್ತಿರುವ ಹೊಸ ವಿಡಯೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನುಷ್ಕಾ ಕಿತ್ತಳೆ ಬಣ್ಣದ ಸ್ವಿಮ್ ಸೂಟ್​ನಲ್ಲಿ ಕಾಣಿಸಿಕೊಂಡಿದ್ದು, ಮಗಳು ವಮಿಕಾಳನ್ನು ಬೈಸಿಕಲ್‌ನಲ್ಲಿ ಕುಳ್ಳಿರಿಕೊಂಡಿದ್ದಾರೆ. ಆದರೆ ಈ ಬಾರಿಯೂ ವಮಿಕಾ ಮುಖವನ್ನು ಬಹಿರಂಗಪಡಿಸದೆಯೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಆದರೂ ಮಗಳಿಗೆ ಸೈಕಲ್ ಸವಾರಿ ಮಾಡಿಸಿರು ಅನುಷ್ಕಾ ತಮ್ಮ ಪ್ರವಾಸದ ಸಮಯವನ್ನು ಸಖತ್ ಎಂಜಾಯ್ ಮಾಡುತ್ತುರುವುದಾಗಿ ಬರೆದುಕೊಂಡಿದ್ದಾರೆ.






ಈವರೆಗೂ ಬಹಿರಂಗಪಡಿಸಿಲ್ಲ ವಮಿಕಾ ಫೋಟೊ:

ಹೌದು, ವಿರಾಟ್ ಮತ್ತು ಅನುಷ್ಕಾ ಜೋಡಿಗೆ ಮುಗುವಾಗಿ ವರ್ಷ ಸಮೀಪಿಸುತ್ತಿದೆ. ಆದರೂ ಈವರೆಗೂ ಈ ತಾರಾ ಜೋಡಿ ತಮ್ಮ ಮಗುವಿನ ಫೋಟೋವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದಕ್ಕಾಗಿ ಅಭಿಮಾನಿಗಳು ಎಂದಿಗೂ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇನ್ನು, ಈ ಬಾರಿ ಹಂಚಿಕೊಂಡಿರುವ ವಿಡಯೋದಲ್ಲಿಯೂ ವಮಿಕಾ ಮುಖ ಕಾಣಿದ ಹಿನ್ನಲೆ ವಿಡಿಯೋಗೆ ಸಾಕಷ್ಟು ಪ್ರತಿಕ್ರಯೆಗಳು ಬರುತ್ತಿವೆ. ಇಬ್ಬರೂ ತಮ್ಮ ಮಗಳುನ್ನು ಸಾರ್ವಜನಿಕರ ಕಣ್ಣುಗಳಿಂದ ದೂರವಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗಳೊಂದಿಗಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರೂ ಮುಖವನ್ನು ಏಕೆ ರಿವೀಲ್ ಮಾಡುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: Anushka Sharma: ಮಾಲ್ಡೀವ್ಸ್ ಬೀಚ್​​ನಲ್ಲಿ ಅನುಷ್ಕಾ ಶರ್ಮಾ, ಇಲ್ಲಿವೆ ಸಖತ್ ಫೋಟೋಸ್

ವೈರಲ್ ಆಗಿತ್ತು ವಮಿಕಾ ಫೋಟೋ:

ಜನವರಿ 2022 ರಲ್ಲಿ ಭಾರತ-ದಕ್ಷಿಣ ಆಫ್ರಿಕಾ ಸರಣಿಯ ಸಮಯದಲ್ಲಿ ವಮಿಕಾ ಅವರ ಮುಖವನ್ನು ಪ್ರಸಾರಕರು ಆಕಸ್ಮಿಕವಾಗಿ ಬಹಿರಂಗಪಡಿಸಿದ್ದರು. ವೈರಲ್ ಫೋಟೋಗಳಲ್ಲಿ, ವಮಿಕಾ ಅನುಷ್ಕಾ ಜೊತೆ ಇದ್ದರು. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದಂಪತಿಗಳು ಮಗುವಿನ ಫೋಟೋವನ್ನು ಪ್ರಕಟಿಸದಂತೆ ಎಲ್ಲರಿಗೂ ಮನವಿ ಮಾಡಿದ್ದರು.

ಇದನ್ನೂ ಓದಿ: Anushka Sharma: ಮತ್ತೆ ಗುಡ್ ನ್ಯೂಸ್ ಕೊಡಲಿದ್ದಾರಾ ವಿರಾಟ್ -ಅನುಷ್ಕಾ ಜೋಡಿ? ಅನುಮಾನ ಹುಟ್ಟಿಸಿದ ವೈರಲ್ ವಿಡಿಯೋ

ಅನುಷ್ಕಾ ಶರ್ಮಾ ಅವರ ಮುಂಬರುವ ಚಿತ್ರಗಳು:

ಅನುಷ್ಕಾ ಶರ್ಮಾ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಆನಂದ್ ಎಲ್ ರೈ ಅವರ ಝೀರೋದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಫ್ಲಾಪ್ ಆಗಿತ್ತು. ‘ಚಕ್ದಾ ಎಕ್ಸ್‌ಪ್ರೆಸ್‌’ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರ ಭಾರತೀಯ ಮಹಿಳಾ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರವಾಗಿದೆ.
Published by:shrikrishna bhat
First published: