Actor Anirudh: ಅನಿರುದ್ಧ್ ಬಿಗ್ ಬಾಸ್​ಗೆ ಹೋಗ್ತಾರಾ? ವದಂತಿಗೆ ತೆರೆ ಎಳೆದ ನಟ

Bigg Boss OTT: ಇತ್ತ ಕಲರ್ಸ್​ ಕನ್ನಡದ ಬಿಗ್ ಬಾಸ್ ಒಟಿಟಿ ಸೀಸನ್ ನಡೆಯುತ್ತಿದ್ದು ನಟ ಅನಿರುದ್ಧ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆ ತಲೆಎತ್ತಿತ್ತು.

ನಟ ಅನಿರುದ್ಧ್ ಮತ್ತು ಕಿಚ್ಚ ಸುದೀಪ್

ನಟ ಅನಿರುದ್ಧ್ ಮತ್ತು ಕಿಚ್ಚ ಸುದೀಪ್

 • Share this:
  ಜೊತೆ ಜೊತೆಯಲಿ ಧಾರಾವಾಹಿಯಿಂದ (Jothe Jotheyali) ಹೊರಬಿದ್ದ ನಂತರ ನಟ ಅನಿರುದ್ಧ ಏನು ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಮೂಡಿತ್ತು. ಇತ್ತ ಕಲರ್ಸ್​ ಕನ್ನಡದ ಬಿಗ್ ಬಾಸ್ ಒಟಿಟಿ ಸೀಸನ್ (Bigg Boss OTT) ನಡೆಯುತ್ತಿದ್ದು ನಟ ಅನಿರುದ್ಧ (Actor Anirudh Jatkar) ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆ ತಲೆಎತ್ತಿತ್ತು. ಆದರೆ ಸ್ವತಃ ನಟ ಅನಿರುದ್ಧ್ ತಾವು ಬಿಗ್ ಬಾಸ್​​ಗೆ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.  ನಟ ಅನಿರುದ್ಧ್ ಬಿಗ್ ಬಾಸ್ ಒಟಿಟಿಗೆ ಹೋಗ್ತಾರೆ ಎಂಬ ಗಾಸಿಪ್​ಗಳ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

  ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಿದ್ದಿದ್ದ ನಟ
  ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯನ್ನು ಎಷ್ಟೋ ಜನ ಅನಿರುದ್ಧ​  ಗಾಗಿ ನೋಡ್ತಾ ಇದ್ರು. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅಂತ ತುಂಬಾ ಗೌರವ ಕೊಡ್ತಾ ಇದ್ರು. ಅಭಿಮಾನಿಗಳ ಮನಸ್ಸಿನಲ್ಲಿ ಅನಿರುದ್ಧ್ ಆರ್ಯನಾಗಿ ಅಳಿಯದೇ ಉಳಿದು ಬಿಟ್ಟಿದ್ರು. ಆದ್ರೆ ಶೂಟಿಂಗ್ ಸಮಯದಲ್ಲಿ ಆದ ಕಿರಿಕ್​ನಿಂದ ಧಾರಾವಾಹಿ ತಂಡದಿಂದ ಅನಿರುದ್ಧ್ ಔಟ್ ಆಗಿದ್ದರು.

  ಭಾವನಾತ್ಮಕ ಪೋಸ್ಟ್ ಹಾಕಿದ್ದ ನಟ
  ಆದ್ರೆ ಅವರು ಅಭಿನಯಿಸಿದ ಎಪಿಸೋಡ್‍ಗಳು ಇಲ್ಲಿಯವರೆಗೆ ಓಡ್ತಾ ಇದ್ವು. ಈಗ ಆ ಸೀನ್‍ಗಳು ಸಹ ಮುಗಿದಿವೆ. ಅಂದ್ರೆ ಜೊತೆ ಜೊತೆಯಲಿ ಧಾರಾವಾಹಿಯ ಅನಿರುದ್ಧ್ ಪ್ರಯಾಣ ಅಂತ್ಯವಾಗಿದೆ. ಅದಕ್ಕೆ ಫೇಸ್ ಬುಕ್‍ನಲ್ಲಿ ಅನಿರುದ್ಧ್ ಭಾವನಾತ್ಮಕ ಪೋಸ್ಟ್ ಹಾಕಿದ್ದರು.

  ಇದನ್ನೂ ಓದಿ: Gandhada Gudi: ಗಂಧದಗುಡಿಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? ತಪ್ಪೇ ಮಾಡದೇ ಹಿಂಸೆ ಅನುಭವಿಸಿದ್ಯಾಕೆ ದಾದಾ?

  ವಿಶ್ವಾಸ್ ದೇಸಾಯಿ ಮುಖ ಆರ್ಯನಿಗೆ?
  ಇನ್ನು ಹೊಸದಾಗಿ ಶುರುವಾಗಿದ್ದ ವಿಶ್ವಾಸ್ ದೇಸಾಯಿ ಪಾತ್ರ ಸಾವನ್ನಪ್ಪಿರುವ ಹಿನ್ನೆಲೆ, ಆರ್ಯವರ್ಧನ್‍ಗೆ ಅವನ ಮುಖವನ್ನೇ ಹಾಕಬಹುದು. ಅಂದ್ರೆ ಮುಖ ಮಾತ್ರ ವಿಶ್ವಾಸ್ ದೇಸಾಯಿದ್ದು, ಪಾತ್ರ ಆರ್ಯವರ್ಧನ್‍ದು. ಅದಕ್ಕೆ ಇಬ್ಬರಿಗೂ ಒಂದೇ ಬಾರಿ ಅಪಾಯ ಅಂತ ಅಂತ ಅಭಿಮಾನಿಗಳು ಕೇಳ್ತಾ ಇದ್ದಾರೆ.

  ಅನಿರುದ್ಧ್ ಜಾಗದಲ್ಲಿ ಹರೀಶ್ ರಾಜ್?
  ಆರೂರ್ ಜಗದೀಶ್ ಅವರು ಆರ್ಯವರ್ಧನ್ ಪಾತ್ರವನ್ನು ಜೀವಂತವಾಗಿಡಲು ಒಳ್ಳೆ ಐಡಿಯಾ ಮಾಡಿದ್ದಾರೆ. ವಿಶ್ವಾಸ್ ದೇಸಾಯಿ ಎಂಬ ಪಾತ್ರವನ್ನು ತಂದು, ಆ ಪಾತ್ರ ಸಾಯುವಂತೆ ಮಾಡಿ, ಆ ಪಾತ್ರದ ಮುಖವನ್ನೇ ಈಗ, ಆರ್ಯನ ಪಾತ್ರಕ್ಕೆ ಇಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಅನಿರುದ್ಧ್ ಜಾಗದಲ್ಲಿ ಹರೀಶ್ ರಾಜ್ ಬಂದಿರುವುದನ್ನು ತೋರಿಸೋ ಕಾರ್ಯ.

  ಇದನ್ನೂ ಓದಿ: Shankar Nag: ಶಂಕರ್​ ನಾಗ್​ ಮೃತಪಟ್ಟ ಸ್ಥಳದಲ್ಲಿ ಪ್ರತಿ ಅಮಾವಾಸ್ಯೆ ಕಾಯ್ತಾರೆ ಇವರು! ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ

  ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆದ ಮೇಲೆ ಅಭಿಮಾನಿಗಳು ನಿರ್ದೇಶಕರು ಮತ್ತು ವಾಹಿನಿ ಮೇಲೆ ಗರಂ ಆಗಿದ್ದರು. ಅನಿರುದ್ಧ್ ಅವರನ್ನು ವಾಪಸ್ ಕರೆಸಿ, ಇಲ್ಲ ಅಂದ್ರೆ ನಾವು ಧಾರಾವಾಹಿ ನೋಡಲ್ಲ ಎಂದಿದ್ದರು. ಆದ್ರೆ ಈಗ ಒಂದು ಹೆಜ್ಜೆ ಮುಂದಾಗಿ, ಅಭಿಮಾನಿ ಕೈ ಕುಯ್ದುಕೊಂಡಿದ್ದಾರಂತೆ. ನಂತರ ಅಭಿಮಾನಿಗಳಲ್ಲಿ ನಟ ಅನಿರುದ್ಧ್​ ಹೀಗೆಲ್ಲ ಮಾಡಬೇಡಿ ಎಂದು ಮನವಿಯನ್ನೂ ಮಾಡಿದ್ದರು.

  ತಮ್ಮ ಪ್ರೀತಿಗೆ ನಾನು ಚಿರಋಣಿ. ಆದರೆ ದಯವಿಟ್ಟು ಹೀಗೆಲ್ಲಾ ಮಾಡಿಕೊಳ್ಳಬೇಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ತಮ್ಮ ಪ್ರೀತಿ ಹಾಗೂ ಬೆಂಬಲ, ಹಾರೈಕೆ, ಆಶೀರ್ವಾದ, ಪ್ರಾರ್ಥನೆಯನ್ನ ಅಹಿಂಸಾತ್ಮಕ ಮಾರ್ಗಗಳಿಂದ ತೋರಿಸಿ ಎಂದು ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು.
  Published by:ಗುರುಗಣೇಶ ಡಬ್ಗುಳಿ
  First published: