Jote Joteyali: ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ; ಜೊತೆ ಜೊತೆಯಲಿ ನಿರ್ಮಾಪಕರಿಗೆ ಅನಿರುದ್ಧ್ ಸವಾಲ್

ನಾನು ಹೋರಾಟ ಮಾಡಿದ್ದು ಸ್ಕ್ರಿಪ್ಟ್ ಗೋಸ್ಕರ ಅಷ್ಟೆ, ಕೊನೆಯ ನಿಮಿಷಕ್ಕೆ ಸ್ಕ್ರಿಪ್ಟ್ ಕೊಟ್ಟರೆ ನನಗೆ ಕೋಪ ಬರುತ್ತೆ. ನನ್ನ ಪಾತ್ರ ನೆಗೆಟಿವ್ ಆಗಬಾರದು ಎಂದು ಮೊದಲೇ ಹೇಳಿದ್ದೆ ಅದನ್ನು ಒಪ್ಪಿಕೊಂಡಿದ್ದರು. ಆದರೆ ಬಳಿಕ ನೆಗೆಟಿವ್ ಆಗಿದೆ. ಆದರೂ ನಾನು ಮಾಡಿದೆ ಎಂದು ಅನಿರುದ್ಧ್​ ಹೇಳಿದ್ದಾರೆ.

ನಟ ಅನಿರುದ್ಧ್

ನಟ ಅನಿರುದ್ಧ್

  • Share this:
ಜೀ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ (Jote Jotheyali) ನಾಯಕ ನಟ ಅನಿರುದ್ಧ್​​ಗೆ (Aniruddha) ಸೀರಿಯಲ್​ನಿಂದ ಗೇಟ್​ ಪಾಸ್​ ನೀಡಲಾಗಿದೆ. ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿಗಳಲ್ಲಿ ಅವಕಾಶ ನೀಡದಂತೆ ಎಲ್ಲಾ ನಿರ್ಮಾಪಕರು ನಿರ್ಧರಿಸಿದ್ದಾರೆ.  ಅನಿರುದ್ಧ್​ ವಿರುದ್ಧ ನಿರ್ಮಾಪಕ ಆರೂರು ಜಗದೀಶ್ (Aroor Jagadish)​ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಆರೋಪಗಳ ಬಗ್ಗೆ ಸುದ್ದಿಗೋಷ್ಠಿ ಕರೆದು ನಟ ಅನಿರುದ್ಧ್​  ಸ್ಪಷ್ಟನೆ ನೀಡಿದ್ದಾರೆ.  ಧಾರಾವಾಹಿ ನಂಗೆ ವೈಯಕ್ತಿಕವಾಗಿ ತುಂಬಾ ಕೊಟ್ಟಿದೆ. ಇದು ನನ್ನ ಅದೃಷ್ಟ ಎಂದು ಭಾವಿಸುವೇ, ಜೊತೆ ಜೊತೆಯಲ್ಲಿ ನನ್ನಿಂದ ನಡೆಯುತ್ತಿದೆ ಎಂದು ನಾನು ಭಾವಿಸಿಲ್ಲ. ದೇವರ ಸ್ವರೂಪ ಆಗಿರೋ ಪ್ರೇಕ್ಷಕರಿಂದ ಈ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.

'ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ದುರಹಂಕಾರ ಅಂತ ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ, ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು. ಈ ಪಾತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಇದಕ್ಕೆ ತುಂಬಾ ಕಷ್ಟ ಪಟ್ಟಿದ್ದೇನೆ. ಯಾವುದಕ್ಕಾಗಿ ಇದೆಲ್ಲ ಮಾಡಿದ್ದು. ಅಷ್ಟು ಸುಲಭ ಅಲ್ಲ ಇದು.  ಇದನ್ನ ನಾನು ಮಾಡಿದ್ದು ಪಾತ್ರಕ್ಕಾಗಿ ಅಷ್ಟೆ ಎಂದು ಹೇಳಿದರು.

ಹೊರಗಡೆ ಹೇಳೋ ಅವಶ್ಯಕತೆ ಇರಲಿಲ್ಲ

ಹಿಂದಿನಿ ದಿನ ಸೀನ್ ಪೇಪರ್ ಕಳುಹಿಸಿ ಎಂದು ಸೀರಿಯಲ್ ಶುರುವಾದಾಗಿನಿಂದ ಕೇಳುತ್ತಿರುವೇ ಇವತ್ತು ಅಧಿಕೃತವಾಗಿ ಮಾಹಿತಿ ಬಂದಿದೆ. ಭಿನ್ನಾಭಿಪ್ರಾಯ ಆಗೋದು ಸರ್ವೇ ಸಾಮಾನ್ಯ, ಇಲ್ಲಿ ಆಗಿರುವ ಘಟನೆ ಕಥೆಗೋಸ್ಕರ, ಆ ಭಿನ್ನಾಭಿಪ್ರಾಯ ಹೊರಗಡೆ ಹೇಳೋ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Jote Jotheyali: ಅನಿರುದ್ಧ್‌ಗೆ ಸ್ಟಾರ್‌ ಹೋಟೆಲ್ ಬೇಕು, ಕಾಲು ಹಿಡಿದು ಆ್ಯಕ್ಟ್ ಮಾಡಿಸ್ಬೇಕು! ಜೊತೆ ಜೊತೆಯಲಿ ನಿರ್ಮಾಪಕರ ಗಂಭೀರ ಆರೋಪ

jagdish the producer of- Jote jothayali has accusations against actor aniruddha
ಜೊತೆ ಜೊತೆಯಲ್ಲಿ ಸೀರಿಯಲ್ ಗಲಾಟೆ


ನನ್ನ ಪಾತ್ರ ನೆಗೆಟಿವ್ ಆಗಬಾರದು ಎಂದು ಮೊದಲೇ ಹೇಳಿದ್ದೆ

ನಾನು ಹೋರಾಟ ಮಾಡಿದ್ದು ಸ್ಕ್ರಿಪ್ಟ್ ಗೋಸ್ಕರ ಅಷ್ಟೆ, ಕೊನೆಯ ನಿಮಿಷಕ್ಕೆ ಸ್ಕ್ರಿಪ್ಟ್ ಕೊಟ್ಟರೆ ನನಗೆ ಕೋಪ ಬರುತ್ತೆ. ನನ್ನ ಪಾತ್ರ ನೆಗೆಟಿವ್ ಆಗಬಾರದು ಎಂದು ಮೊದಲೇ ಹೇಳಿದ್ದೆ ಅದನ್ನು ಒಪ್ಪಿಕೊಂಡಿದ್ದರು. ಆದರೆ ಬಳಿಕ ನೆಗೆಟಿವ್ ಆಗಿದೆ. ಆದರೂ ನಾನು ಮಾಡಿದೆ. ಈಗ ಅವರು ಅನಿರುದ್ಧ ಒಪ್ಪಿಕೊಳ್ಳುತ್ತಿಲ್ಲ ಅಂತ ನನ್ನ ಮೇಲೆ ಹೇಳುತ್ತಿದ್ದಾರೆ. ಇದನ್ನು ಸಹ ಅವರು ಅವರ ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ ಎಂದು ಹೇಳಿದರು. ನನ್ನ ಮಾನಹಾನಿಯಾಗಿದೆ ಇದನ್ನು ಯಾರಿಗೆ ಹೇಳುವುದು ಎಂದು ಪ್ರಶ್ನೆ ಅನಿರುದ್ಧ್​ ಪ್ರಶ್ನೆ ಮಾಡಿದ್ದಾರೆ.

ನಿರ್ಮಾಪಕ ಆರೂರು ಜಗದೀಶ್​ ಆರೋಪ

ಜೊತೆ ಜೊತೆಯಲಿ ಸೀರಿಯಲ್​ನ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್ (Arooru Jagadish)​ ಅವರು ನಟ ಅನಿರುದ್ಧ್​ ಅವರಿಂದ ಸೀರಿಯಲ್​ ಶೂಟಿಂಗ್​ಗೆ ಆಗುತ್ತಿದ್ದ ತೊಂದರೆಯನ್ನು ಸ್ವತಃ ಅವ್ರೇ ಹೇಳಿಕೊಂಡಿದ್ದಾರೆ. ಆಡಿಯೋ ಒಂದನ್ನು ರಿಲೀಸ್​ ಮಾಡೋ ಮೂಲಕ ಆರೂರು ಜಗದೀಶ್​ ಅವರು ತಮ್ಮ ನೋವು ಹೊರಹಾಕಿದ್ದಾರೆ. ಸೀರಿಯಲ್ ಹಿಟ್ ಆಗಿ​ ಸ್ಟಾರ್ ಗಿರಿ ಬರ್ತಿದ್ದಂತೆ ನಟ ಅನಿರುದ್ದ್​​ ಬದಲಾದ್ರು ಎಂದು ಆರೂರು ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: Aniruddha: ಜೊತೆ ಜೊತೆಯಲಿ ಸೀರಿಯಲ್​ನಿಂದ ಮಾತ್ರವಲ್ಲ, ಕಿರುತೆರೆಯಿಂದಲೇ ಅನಿರುದ್ಧ್​ಗೆ ಗೇಟ್ ಪಾಸ್

ಸೀರಿಯಲ್​ ಹಿಟ್​​ ಆಗ್ತಿದ್ದಂತೆ ಬದಲಾಯ್ತು ವರ್ತನೆ

ವಿಷ್ಣುವರ್ಧನ್​ ಅವರ ಅಳಿಯ ಅನ್ನೋ ಗೌರವ ಇತ್ತು. ಆರ್ಯವರ್ಧನ್​ ಪಾತ್ರಕ್ಕೂ ಅವರು ಜೀವ ತುಂಬಿದ್ರೆ. ಆದ್ರೆ ದಿನ ಕಳೆದಂತೆ ಅವರ ವರ್ತನೆ ಬದಲಾಯ್ತು, ಮೊದಲು ಆರ್, ಆರ್​ ನಗರ, ಗಾಂಧಿ ಬಜಾರ್ ಬೀದಿಯಲ್ಲಿ ಕುಳಿತು, ಅಲ್ಲೇ ತಿಂಡಿ ತಿಂದು ಕೆಲಸ ಮಾಡ್ತಿದ್ವಿ. ಆದ್ರೆ ಈಗ ಅನಿರುದ್ಧ್​ ಅವರಿಗೆ ಕ್ಯಾರವನ್ ಬೇಕೇ ಬೇಕು ಇಲ್ಲ ಶೂಟಿಂಗ್​ಗೆ ಬರಲ್ಲ. ತಿನ್ನಲು ಸ್ಟಾರ್​ ಹೋಟೆಲ್​ಗಳೇ ಬೇಕಿತ್ತು. ಸರ್​ ಇದು ಸಿನಿಮಾ ಅಲ್ಲ, ಸೀರಿಯಲ್ ಅಂದ್ರು ಕೇಳಲಿಲ್ಲ.
Published by:Pavana HS
First published: