Actor Aniruddh: ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್‌ ಪಾಸ್! ಇವ್ರ ಕಿರಿಕ್‌ನಿಂದ ಸುಸ್ತಾಗಿತ್ತಂತೆ ಸೀರಿಯಲ್ ಟೀಂ!

ಇದೀಗ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ (Gate Pass) ನೀಡಲಾಗಿದೆ. ಇದರೊಂದಿಗೆ ಕಳೆದ 2-3 ದಿನಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ, ಅನಿರುದ್ಧ್ ಬದಲಾವಣೆ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಂತಾಗಿದೆ!

ನಟ ಅನಿರುದ್ಧ್

ನಟ ಅನಿರುದ್ಧ್

 • Share this:
  ಬೆಂಗಳೂರು: ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ (Serial) ಅಲ್ಲೋಲ ಕಲ್ಲೋಲ ಆಗುತ್ತಿದೆ. ರೀಲ್ ಕಥೆಗೂ (Reel Story) ಟ್ವಿಸ್ಟ್ (Twist) ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ರಿಯಲ್ ಕಥೆಗೂ (Real Story) ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇಡೀ ಕಥೆ ಸುತ್ತುವುದೇ ಆರ್ಯವರ್ಧನ್ (Aryavardhan) ಎನ್ನುವ ಕ್ಯಾರೆಕ್ಟರ್ (Character) ಮೇಲೆ. ಈ ಪಾತ್ರ ನಿರ್ವಹಿಸುತ್ತಾ ಇರುವವರು ಖ್ಯಾತ ನಟ, ಸಾಹಸಸಿಂಹ ವಿಷ್ಣು ವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ ಜತ್ಕರ್ (Aniruddh Jatkar). ಆದ್ರೆ ಇದೀಗ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ (Gate Pass) ನೀಡಲಾಗಿದೆ. ಇದರೊಂದಿಗೆ ಕಳೆದ 2-3 ದಿನಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ, ಅನಿರುದ್ಧ್ ಬದಲಾವಣೆ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಂತಾಗಿದೆ.

  ಅನಿರುದ್ಧ್‌ಗೆ ಮರುಜನ್ಮ ನೀಡಿದ್ದ ಜೊತೆ ಜೊತೆಯಲಿ

  ಜೊತೆ ಜೊತೆಯಲಿ ಧಾರಾವಾಹಿ ಬಹಳ ಕಾಲ ಟಿಆರ್‌ಪಿಯಲ್ಲಿ ನಂಬರ್ ಒನ್‌ ಸ್ಥಾನದಲ್ಲೇ ಇತ್ತು. ಅದಾದ ಬಳಿಕವೂ ಇದರ ಟಿಆರ್‌ಪಿ ಚೆನ್ನಾಗಿಯೇ ಇತ್ತು. ಇದರೊಂದಿಗೆ ಈ ಧಾರಾವಾಹಿ ನಟ ಅನಿರುದ್ದ್ ಅವರಿಗೂ ಮರು ಜನ್ಮ ನೀಡಿತ್ತು. ಅನಿರುದ್ಧ ಪ್ರತಿಭಾವಂತ ನಟನಾಗಿದ್ದರೂ, ಖ್ಯಾತ ನಟ ವಿಷ್ಣುವರ್ಧನ್, ನಟಿ ಭಾರತಿ ಅವರ ಅಳಿಯನಾಗಿದ್ದರೂ ಕನ್ನಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಾ ಸಿನಿಮಾಗಳೇನೂ ಅವರಿಗೆ ಸಿಗಲಿಲ್ಲ. ಮೊದಲ ಸಿನಿಮಾ ಚಿತ್ರ ಮಾತ್ರ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಆಮೇಲೆ ಬಂದಿದ್ದೆಲ್ಲವೂ ಪ್ಲಾಪ್ ಸಿನಿಮಾಗಳೇ. ಇನ್ನೇನು ಅನಿರುದ್ಧ್ ಕನ್ನಡಿಗರ ಮನಸ್ಸಿಂದ ದೂರವಾದ್ರು ಎನ್ನುವಷ್ಟರಲ್ಲಿ ಅವರಿಗೆ ಸಿಕ್ಕಿದ್ದೇ ಜೊತೆ ಜೊತೆಯಲಿ ಧಾರಾವಾಹಿ.

  ಆರ್ಯವರ್ಧನ್ ಆಗಿ ಕನ್ನಡಿಗರ ಮನೆ, ಮನ ಸೆೇರಿದ್ದ ಅನಿರುದ್ಧ್

  ಹೌದು, ಆರ್ಯವರ್ಧನ್ ಎಂಬ ಪ್ರಬುದ್ಧ ಪಾತ್ರದಲ್ಲಿ ನಟ ಅನಿರುದ್ಧ್ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು. ಬಿಳಿ ಗಡ್ಡ, ಪ್ರಬುದ್ಧತೆ ಸೂಸುವ ಕಣ್ಣು, ಅದಕ್ಕೆ ತಕ್ಕನಾದ ಹಾವಭಾವಗಳಿಂದ ಅನಿರುದ್ಧ ಆರ್ಯವರ್ಧನ್‌ ಪಾತ್ರಕ್ಕೆ ಜೀವ ತುಂಬಿದ್ದರು. ಧಾರಾವಾಹಿ ಜೊತೆಗೆ ಅವರ ಪಾತ್ರವೂ ಸೂಪರ್ ಹಿಟ್ ಆಗಿತ್ತು.

  ಇದನ್ನೂ ಓದಿ: Jote Joteyali: ವಿಷ್ಣುವರ್ಧನ್ ಅಳಿಯ ಅನಿರುದ್ಧ್‌ಗೆ ಕನ್ನಡ ಕಿರುತೆರೆಯಿಂದ ಬಹಿಷ್ಕಾರ? ಜೊತೆ ಜೊತೆಯಲಿ ಏನಾಯ್ತು?

  ಧಾರಾವಾಹಿಯಲ್ಲಿ ಕಿರಿಕ್ ಮಾಡಿಕೊಂಡಿದ್ದ ಅನಿರುದ್ಧ್

  ನಟ ಅನಿರುದ್ಧ್ ವಿರುದ್ಧ್ ಇಡೀ ಸೀರಿಯಲ್ ಟೀಂ ಆರೋಪ ಮಾಡುತ್ತಿದೆ ಎನ್ನಲಾಗಿದೆ. ಯಾಕೆಂದ್ರೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಫೇಮಸ್ ಆಗುತ್ತಿದ್ದಂತೆ ನಟ ಅನಿರುದ್ಧ್ ತಮ್ಮ ವರಸೆಯನ್ನೇ ಬದಲಾಯಿಸಿದ್ರು ಎನ್ನಲಾಗಿದೆ. ಶೂಟಿಂಗ್ ಸೆಟ್‌ನಲ್ಲಿ ಕಿರಿಕಿರಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

  ಕಥೆಯನ್ನೇ ತಿದ್ದುತ್ತಿದ್ದರಾ ಅನಿರುದ್ದ್?

  ಹೌದು, ಹೀಗೊಂದು ಗಂಭೀರ ಆರೋಪ ನಟ ಅನಿರುದ್ಧ್ ಮೇಲೆ ಕೇಳಿ ಬಂದಿದೆ. ಶೂಟಿಂಗ್‌ ಸೆಟ್‌ನಲ್ಲಿ ಅನಿರುದ್ಧ್ ಕಿರಿಕಿರಿ ಮಾಡುತ್ತಿದ್ದುದ್ದು ಒಂದೇ ಅಲ್ಲದೇ ತಮ್ಮ ಪಾತ್ರದ ಕಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎನ್ನಲಾಗಿದೆ. ತಮಗೆ ಬೇಕಾದಂತೆ ಕಥೆ, ಸಂಭಾಷಣೆ ಬದಲಾಯಿಸುತ್ತಿದ್ದರಂತೆ ಅಂತ ಧಾರಾವಾಹಿ ತಂಡದವರೇ ಆರೋಪಿಸುತ್ತಿದ್ದಾರೆ. ಹೀಗೆ ಒಂದು ವರ್ಷದಿಂದ ಇಡೀ ತಂಡಕ್ಕೆ ಕಾಟ ಕೊಡುತ್ತಲೇ ಇದ್ದರು ಎನ್ನಲಾಗಿದೆ.

  ಇದನ್ನೂ ಓದಿ: Jote Joteyali Serial: ‘ಜೊತೆ ಜೊತೆಯಲಿ’ ಟೀಮ್ ವಿರುದ್ಧ ಸಿಡಿದೆದ್ದ ಆರ್ಯವರ್ಧನ್; ಸೀರಿಯಲ್​ನಿಂದ ಬ್ಯಾನ್ ಆಗ್ತಾರಾ ಅನಿರುದ್ದ್?

  ಕಿರುತೆರೆಯಿಂದಲೇ ಬ್ಯಾನ್ ಆಗ್ತಾರಾ ವಿಷ್ಣುವರ್ಧನ್ ಅಳಿಯ?

  ಇನ್ನು ಅನಿರುದ್ಧ್‌ ಅವರನ್ನು ಕನ್ನಡದ ಯಾವ ಶೋಗಳಲ್ಲೂ ಹಾಕಿಕೊಳ್ಳಬಾರದು ಎಂದು ಕಿರುತೆರೆ ನಿರ್ಮಾಪಕರ ಸಂಘ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ಕನ್ನಡ ಟಿವಿ ಚಾನೆಲ್‌ಗಳಿಗೂ ಮನವಿ ಪತ್ರ ಕೊಡುವ ಬಗ್ಗೆ ನಿರ್ಧರಿಸಲಾಗಿದೆ. ಕನ್ನಡ ಕಿರುತೆರೆಯಿಂದ ಅನಿರುದ್ದ್‌ರನ್ನ ಶಾಶ್ವತವಾಗಿ ಬ್ಯಾನ್ ಮಾಡುವ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘದಿಂದ ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಗಿದೆ ಅಂತ ಹೇಳಲಾಗುತ್ತಿದೆ.
  Published by:Annappa Achari
  First published: