Actor Arrest: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ವಿಜಯ್ ಅರೆಸ್ಟ್!

Vijay Babu: ದೂರಿನ ಪ್ರಕಾರ ಸಿನಿಮಾ ಪಾತ್ರಗಳನ್ನು ನೀಡುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ್ದ ಅವರನ್ನು ಬಂಧಿಸಲಾಗಿದೆ. 

ವಿಜಯ್ ಬಾಬು

ವಿಜಯ್ ಬಾಬು

  • Share this:
ಲೈಂಗಿಕ ದೌರ್ಜನ್ಯ (sexual harassment ) ಆರೋಪ ಕೇಳಿ ಬಂದ ಹಿನ್ನೆಲೆ  ಮಲಯಾಳಂ (Malayalam) ನಟ ಮತ್ತು ನಿರ್ಮಾಪಕ ವಿಜಯ್ ಬಾಬು (Vijay Babu)  ಅವರನ್ನು  ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ವಿಚಾರಣೆಗೆ ಎಂದು ಕರೆಯಲಾಗಿತ್ತು, ಈ ಸಂದರ್ಭದಲ್ಲಿ ನಟ ವಿಜಯ್ ಬಾಬು ಅವರನ್ನು ಬಂಧನ ಮಾಡಲಾಗಿದೆ. 

ನಟಿಯಿಂದ ಲೈಂಗಿಕ ದೌರ್ಜನ್ಯದ ಆರೋಪ

ನಟಿಯೊಬ್ಬರು ಕಳೆದ ತಿಂಗಳು ವಿಜಯ್ ಬಾಬು ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆದರೆ ಜೂನ್ 22ರಂದು ವಿಜಯ್ ಬಾಬು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.

ದೂರಿನ ಪ್ರಕಾರ ಸಿನಿಮಾ ಪಾತ್ರಗಳನ್ನು ನೀಡುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ್ದ ಅವರನ್ನು ಬಂಧಿಸಲಾಗಿದೆ. ಬಾಬು ಬಂಧನವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕೊಚ್ಚಿ ಉಪ ನಗರ ಪೊಲೀಸ್ ಆಯುಕ್ತ ಯು ವಿ ಕುರಿಯಾಕೋಸ್ ತಿಳಿಸಿದ್ದಾರೆ. ಸಾಕ್ಷ್ಯ ಸಂಗ್ರಹದ ಭಾಗವಾಗಿ ಅತ್ಯಾಚಾರ ನಡೆದಿದೆ ಎನ್ನಲಾದ ಕೊಚ್ಚಿಯ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬಾಬು ಅವರಿಗೆ ನಿರೀಕ್ಷಣಾ ಜಾಮೀನು ನೀಡುವಾಗ, ಹೈಕೋರ್ಟ್ ಜೂನ್ 27 ರಿಂದ ಜುಲೈ 3 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಅವರನ್ನು ವಿಚಾರಣೆ ಮಾಡಲು ಪೊಲೀಸರಿಗೆ ಅನುಮತಿ ನೀಡಿದೆ. ಪೊಲೀಸರು ನಿರ್ಮಾಪಕನನ್ನು ಮೊದಲು ಬಂಧಿಸಿದಾಗ, ತಲಾ ಎರಡು ಲಿಕ್ವಿಡ್​ ಶ್ಯೂರಿಟಿಗಳೊಂದಿಗೆ 5 ಲಕ್ಷ ರೂಪಾಯಿಗಳ ಜಾಮೀನು ಬಾಂಡ್‌ನಲ್ಲಿ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಆದರೆ ಬೇಲ್ ಪಡೆದ ಆರೋಪಿಯು, ದೂರುದಾರರ ಕುಟುಂಬದ ವಿರುದ್ಧ ಸಾಮಾಜಿಕ ಮಾಧ್ಯಮ ಅಥವಾ ಇತರ ವಿಧಾನಗಳ ಮೂಲಕ ಯಾವುದೇ ರೀತಿಯ ಸಮಸ್ಯೆ ನೀಡಬಾರದು. ಅಲ್ಲದೇ ಯಾವುದೇ ಕಾರಣಕ್ಕೂ ನ್ಯಾಯಲಯದ ಅನುಮತಿ ಇಲ್ಲದೇ ಕೇರಳದಿಂದ ಹೊರ ಹೋಗಬಾರದು ಎಂದು ಆದೇಶ ನೀಡಿದೆ.

ಇದನ್ನೂ ಓದಿ: ಪ್ರೆಗ್ನೆಂಟ್ ಆಗಿದ್ದು ಆಲಿಯಾ, ಆದ್ರೆ ಟ್ರೋಲ್ ಆಗ್ತಿರೋದು ದೀಪಿಕಾ!

ಒಮ್ಮತದ ಸಂಬಂಧವಿತ್ತು ಎಂದ ವಿಜಯ್

ಏಪ್ರಿಲ್ 27 ರಂದು ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ, ಅವರು ಬಂಧನಕ್ಕೆ ಹೆದರಿ ದೇಶದಿಂದ ಪಲಾಯನ ಮಾಡಿದ್ದರು. ಹೈಕೋರ್ಟ್ ಬೇಲ್​ ನೀಡಿದ ನಂತರ ಅವರು ಮೇ ಕೊನೆಯ ವಾರದಲ್ಲಿ ಕೊಚ್ಚಿಗೆ ಮರಳಿ ಬಂದಿದ್ದರು. ವಿಜಯ್ ಬಾಬು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದು,  ದೂರುದಾರರ ಜೊತೆ ತನಗೆ ಒಮ್ಮತದ ಸಂಬಂಧವಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿನಿಮಾಗಳಲ್ಲಿ ಪಾತ್ರ ಸಿಗದ ಕಾರಣ ತನ್ನ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

ಅಲ್ಲದೇ ಬೇಲ್ ಪಡೆಯುವಾಗ ದೂರುದಾರರು ಹಾಗೂ ತನ್ನ ಮಧ್ಯೆ ನಡೆದ ಚಾಟ್​ ಅನ್ನು ಸಹ ತೋರಿಸಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ದೂರುದಾರರ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಬಾಬು ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
Published by:Sandhya M
First published: