Rakshit Shetty: ರಕ್ಷಿತ್​ ಶೆಟ್ಟಿ ಸಿನಿ ಜರ್ನಿಗೆ 10ರ ಸಂಭ್ರಮ: ಶುಭಕೋರಿದ ಸೆಲೆಬ್ರಿಟಿಗಳು..!

ರಕ್ಷಿತ್ ಶೆಟ್ಟಿ ಅವರ ಸಿನಿ ಜರ್ನಿಗೆ 10ರ ಸಂಭ್ರಮ. ಕಾಮನ್​ ಡಿಪಿ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ರಕ್ಷಿತ್​ಗೆ ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳೂ ಶುಭ ಕೋರುತ್ತಿದ್ದಾರೆ.

news18-kannada
Updated:July 23, 2020, 7:53 PM IST
Rakshit Shetty: ರಕ್ಷಿತ್​ ಶೆಟ್ಟಿ ಸಿನಿ ಜರ್ನಿಗೆ 10ರ ಸಂಭ್ರಮ: ಶುಭಕೋರಿದ ಸೆಲೆಬ್ರಿಟಿಗಳು..!
ರಕ್ಷಿತ್​ ಶೆಟ್ಟಿ
  • Share this:
ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಅವರ ಸಿನಿ ಜರ್ನಿಗೆ  10ರ ಸಂಭ್ರಮ. 2010ರಲ್ಲಿ ಬಣ್ಣದ ಲೋಕದ ಪಯಣ ಆರಂಭಿಸಿದ ಶೆಟ್ರು ಈಗ ಯಶಸ್ವಿ ನಟ ಹಾಗೂ ನಿರ್ದೇಶಕ. ರಕ್ಷಿತ್​ ಸವೆಸಿದ ಹಾದಿ ಸಹ ಏಳುಬೀಳಿನಿಂದಲೇ ಕೂಡಿತ್ತು. ಎಲ್ಲ ಅಡೆತಡೆಗಳನ್ನು ಧೈರ್ಯವಾಗಿ ಎದುರಿಸಿದ ರಕ್ಷಿತ್​ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ.

2010ರಲ್ಲಿ 'ನಮ್​ ಏರಿಯಾಲ್​ ಒಂದಿನ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ರಕ್ಷಿತ್​. ನಂತರ 'ತುಘಲಕ್'​ ಚಿತ್ರವನ್ನು ಮಾಡಿದರು. ಆದರೆ ಅವರ ಅಭಿನಯದ ಮೊದಲೆರಡು ಚಿತ್ರಗಳು ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಲೇ ಇಲ್ಲ. ನಂತರ ಮಾಡಿದ 'ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ' ರಕ್ಷಿತ್​ಗೆ ಹೆಸರು ತಂದು ಕೊಟ್ಟಿತ್ತು.

Rakshit Shetty decided to take a break from Punyakoti and started working on new project
ರಕ್ಷಿತ್​ ಶೆಟ್ಟಿ


ಸಿನಿಮಾದಲ್ಲಿ ನಟಿಸುತ್ತಲೇ ಕಿರುಚಿತ್ರಗಳನ್ನು ನಿರ್ಮಿಸುತ್ತಿದ್ದ ರಕ್ಷಿತ್​, ನಂತರದಲ್ಲಿ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಬಡ್ತಿ ಪಡೆದರು. ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಾ ವಿಭಿನ್ನ ಸಿನಿಮಾಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಇದನ್ನೂ ಓದಿ: ಪುಸ್ತಕ ಓದೋಕೆ ಆರಂಭಿಸಿದ್ದೇ ಪಾಠ ಮಾಡೋಕೆ ಶುರು ಮಾಡಿದ್ರಾ ನಿಖಿಲ್​

ರಕ್ಷಿತ್​ ನಿರ್ದೇಶನದ ಚೊಚ್ಚಲ ಸಿನಿಮಾ ಉಳಿದವರು ಕಂಡಂತೆ. ಈ ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲೇ ಯಶಸ್ವಿ ನಿರ್ದೇಶಕ ಎನಿಸಿಕೊಂಡರು. 'ಕಿರಿಕ್​ ಪಾರ್ಟಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಹೀಗೆ ಅವರ ಚಿತ್ರಗಳು ರಕ್ಷಿತ್​ ಅವರಿಗೆ ಕೀರ್ತಿ ತಂದುಕೊಟ್ಟವು.

Rakshit Shetty is going to start Kirik Party 2 movie very soon
2016ರಲ್ಲಿ ಬಿಡುಗಡೆಯಾಗಿದ್ದ 'ಕಿರಿಕ್​ ಪಾರ್ಟಿ' ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ
ಈಗ ಅವರ ಸಿನಿ ಜರ್ನಿಗೆ 10ರ ಸಂಭ್ರಮ. 'ಕಾಮನ್​ ಡಿಪಿ' ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ರಕ್ಷಿತ್​ಗೆ ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳೂ ಶುಭ ಕೋರುತ್ತಿದ್ದಾರೆ.









ಅದರಲ್ಲೂ ಎಲ್ಲರಿಗಿಂತ ಹೆಚ್ಚಾಗಿ ಅವರ ಗೆಳೆಯ ರಿಷಭ್​ ಶೆಟ್ಟಿ ವಿಶೇಷವಾಗಿ ವಿಶ್​ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ‌ ಇಂದಿಗೆ 10 ವರ್ಷ..!❤️❤️❤️



ಸದ್ಯ ರಕ್ಷಿತ್ ಶೆಟ್ಟಿ '777 ಚಾರ್ಲಿ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಅದರ ಮುಕ್ಕಾಲುಪಾಲು ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಲಾಕ್​ಡೌನ್​ನಲ್ಲಿ ಅವರ ಬಹುನಿರೀಕ್ಷಿತ ಸಿನಿಮಾ 'ಪುಣ್ಯಕೋಟಿ'ಗಾಗಿ ಕಥೆ ಬರೆಯುತ್ತಿದ್ದಾರೆ. ಆದರೆ ಈಗ ಈ ಚಿತ್ರದ ಕಥೆ ಬರೆಯೋದಕ್ಕೆ ಬ್ರೇಕ್​ ಕೊಟ್ಟಿದ್ದು, ಕಿರುಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Rakshit Shetty: ಪುಣ್ಯಕೋಟಿ ಚಿತ್ರಕ್ಕೆ ಬ್ರೇಕ್​ ಕೊಟ್ಟು ಹೊಸ ಪ್ರಾಜೆಕ್ಟ್​ ಕೈಗೆತ್ತಿಕೊಂಡ ರಕ್ಷಿತ್​ ಶೆಟ್ಟಿ..!



ಪುಣ್ಯಕೋಟಿಗೆ ಬ್ರೇಕ್​ ಕೊಡಲು ಕಾರಣ ಲಾಕ್​ಡೌನ್​. ಈ ಸಮಯದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಕೊಂಚ ಕಷ್ಟವಾಗಲಿದ್ದು, ಅದರಿಂದ ಪುಟ್ಟದಾದ ತಂಡ ಕಟ್ಟಿಕೊಂಡು ಈಗಿರುವ ಅವಕಾಶದಲ್ಲಿ ಒಂದು ಕಿರುಚಿತ್ರ ನಿರ್ಮಿಸಲಿದ್ದಾರಂತೆ. ಅದಕ್ಕಾಗಿ ಅ್ಕ್ರೀನ್​ಪ್ಲೇ ಸಹ ಬರೆಯಲು ಆರಂಭಿಸಿದ್ದಾರೆ ರಕ್ಷಿತ್ ಶೆಟ್ಟಿ.
Published by: Anitha E
First published: July 23, 2020, 7:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading