• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Raj B Shetty: ಕಾದ ಇಳೆಗೆ ತಂಪೆರೆದ ವರುಣ, ಮಳೆಯಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ ರಾಜ್ ಬಿ ಶೆಟ್ಟಿ!

Raj B Shetty: ಕಾದ ಇಳೆಗೆ ತಂಪೆರೆದ ವರುಣ, ಮಳೆಯಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ ರಾಜ್ ಬಿ ಶೆಟ್ಟಿ!

ರಾಜ್ ಬಿ ಶೆಟ್ಟಿ ಡ್ಯಾನ್ಸ್​

ರಾಜ್ ಬಿ ಶೆಟ್ಟಿ ಡ್ಯಾನ್ಸ್​

ಮಂಗಳೂರಿನ ಹುಡುಗ ಮಳೆಯಲ್ಲಿ ಕುಣಿದು ಕುಪ್ಪಳ್ಳಿಸಿದ್ದಾರೆ. ಮಳೆಯನ್ನು ಎಂಜಾಯ್ ಮಾಡಲು 2 ವಿಧಗಳಿವೆ ಎಂದ ರಾಜ್ ಬಿ ಶೆಟ್ಟಿ, ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

 • Share this:

ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ (Raj B Shetty) ಸ್ಯಾಂಡಲ್‌ವುಡ್‌ನಲ್ಲಿ (Sandalwood) ತಮ್ಮ ನಟನೆ ಮತ್ತು ನಿರ್ದೇಶನದ ಮೂಲಕವೇ ಹೆಸರುವಾಸಿ. ಸದ್ದಿಲ್ಲದೆ ಸಿನಿಮಾ ಮಾಡಿ ಗೆದ್ದಿರುವ ರಾಜ್ ಬಿ ಶೆಟ್ಟಿ ಇದೀಗ ಬ್ಯಾಕ್‌ ಟು ಬ್ಯಾಕ್‌ ಎರಡು ಸಿನಿಮಾ (Movie) ಮುಗಿಸಿ ಬಿಗ್ ಪ್ರಾಜೆಕ್ಟ್‌ ಕಡೆಗೆ ತಮ್ಮ ಚಿತ್ತಹರಿಸಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್​ನಲ್ಲಿ ರಾಜ್​ ಬಿ ಶೆಟ್ಟಿ  ಮಳೆಯನ್ನು ಎಂಜಾಯ್ ಮಾಡಿದ್ದಾರೆ. ಮಂಗಳೂರಿನ ಹುಡುಗ ಮಳೆಯಲ್ಲಿ ಕುಣಿದು ಕುಪ್ಪಳ್ಳಿಸಿದ್ದಾರೆ.  ಮಳೆಯನ್ನು ಎಂಜಾಯ್ ಮಾಡಲು 2 ವಿಧಗಳಿವೆ ಎಂದು ರಾಜ್ ಬಿ ಶೆಟ್ಟಿ ಅಭಿಮಾನಿಗಳಿಗೆ ತಿಳಿಸಿಕೊಟ್ಟಿದ್ದಾರೆ. 


ಮಳೆಯಲ್ಲಿ ಕುಣಿದು ಕುಪ್ಪಳಿಸಿದ ರಾಜ್ ಬಿ ಶೆಟ್ಟಿ


ಸಾಲು ಸಾಲು ಸಿನಿಮಾ ಶೂಟಿಂಗ್ ನಡುವೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್​ ಆಗಿದ್ದಾರೆ. ಆಗಾಗೆ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ. ಇದೀಗ ವರ್ಷದ ಮೊದಲ ಮಳೆಯನ್ನು ರಾಜ್ ಬಿ ಶೆಟ್ಟಿ ಸಂಭ್ರಮಿಸಿದ್ದಾರೆ. ಬಿರುಬೇಸಿಗೆಯಲ್ಲಿ ಮಳೆರಾಯ ಇಳೆಗೆ ತಂಪೆರೆದಿದ್ದನ್ನು ಕಂಡು ರಾಜ್ ಬಿ ಶೆಟ್ಟಿ ಕುಣಿದು ಕುಪ್ಪಳ್ಳಿಸಿದ್ದಾರೆ.
ಮಳೆಯನ್ನು ಎಂಜಾಯ್ ಮಾಡಲು 2 ವಿಧ


ತಮ್ಮ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ವಿಡಿಯೋ ಹಾಗೂ ಫೋಟೋ ಹಂಚಿಕೊಂಡ ನಟ ರಾಜ್​ ಬಿ ಶೆಟ್ಟಿ ಮಳೆಯನ್ನು ಎಂಜಾಯ್​ ಮಾಡಲು 2 ವಿಧಗಳಿವೆ ಎಂದಿದ್ದಾರೆ. ಸುಮ್ಮನೆ ಕುಳಿತುಕೊಂಡು ಮಳೆಯಾಗಿ, ಮತ್ತೊಂದು ಮಳೆಯೊಂದಿಗೆ ಬಿರುಗಾಳಿ ಕುಣಿದು ಕುಪ್ಪಳಿಸುವುದು ಎಂದು ರಾಜ್​ ಬಿ ಶೆಟ್ಟಿ ಬರೆದುಕೊಂಡಿದ್ದಾರೆ.

View this post on Instagram


A post shared by Raj B Shetty (@rajbshetty)

‘ಒಂದು ಮೊಟ್ಟೆಯ ಕಥೆ’ (Ondu Motteya Kathe) ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ರಾಜ್ ಬಿ ಶೆಟ್ಟಿ, ಹಲವು ಸಿನಿಮಾಗಳಲ್ಲಿ ನಟಿಸಿ, ಜನಮನ ಗೆದ್ದಿದ್ದಾರೆ. ಒಂದೆಡೆ ಸ್ವಾತಿ ಮುತ್ತಿನ ಮಳೆಹನಿಯೇ ಎಂಬ ಸಿನಿಮಾದಲ್ಲಿ ನಟಿಸ್ತಾ ಇದ್ದರೆ, ಮತ್ತೊಂದೆಡೆ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲೂ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ.


ಬಿಗ್ ಬಜೆಟ್ ಮೂವಿಯಲ್ಲಿ ರಾಜ್ ಬಿ ಶೆಟ್ಟಿ


ರಾಜ್ ಬಿ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸ್ತಿದ್ದಾರೆ ಎನ್ನಲಾಗಿದೆ. ಅದರ ಬಜೆಟ್ 16 ಕೋಟಿ ಅಂತ ಮೂಲಗಳು ತಿಳಿಸಿವೆ. ಅಗಸ್ತ್ಯ ಫಿಲ್ಮ್ ಮತ್ತು ಲೈಟರ್ ಬುದ್ಧ ಫಿಲ್ಮ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸ್ತಿದೆಯಂತೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.


ಇದನ್ನೂ ಓದಿ: Raj B Shetty: ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಸೆಕೆಂಡ್ ಪೋಸ್ಟರ್ ರಿಲೀಸ್


ಯಾರೂ ಗೆಸ್ ಮಾಡೋಕೆ ಆಗದ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ


ರಾಜ್ ಬಿ ಶೆಟ್ಟಿ ತಮ್ಮ ಮೊದಲ ಸಿನಿಮಾ ಒಂದು ಮೊಟ್ಟೆಯ ಕಥೆಯಿಂದಲೂ ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಒಂದು ಮೊಟ್ಟೆಯ ಕಥೆಯಲ್ಲಿ ಅವಿವಾಹಿತನ ಪಾತ್ರವಾದರೆ, ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ನಾಯಕಿಯನ್ನು ಕಾಡುವ ಪಾತ್ರ, ಅದಾದ ಬಳಿಕ ಗರುಡಗಮನ ವೃಷಭ ವಾಹನ ಸಿನಿಮಾದಲ್ಲಂತೂ ಅವರ ಪಾತ್ರ ಕನ್ನಡಿಗರ ಮನಗೆದ್ದಿತ್ತು.


top videos  ಅದಾದ ಬಳಿಕ 777 ಚಾರ್ಲಿ ಸಿನಿಮಾದಲ್ಲಿ ಪಶು ವೈದ್ಯನ ಪಾತ್ರ ಮಾಡಿದ್ದರು. ಇದೀಗ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪಾತ್ರ ವಿಶೇಷವಾಗಿ ಇರಲಿದೆ ಎನ್ನಲಾಗಿದೆ. ಯಾರೂ ಊಹಿಸಿಕೊಳ್ಳಲೂ ಆಗದ ರೀತಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಮಿಂಚಲಿದ್ದಾರೆ ಎನ್ನುವುದು ಕನ್ಫರ್ಮ್ ಆಗಲಿದೆ.

  First published: