ಜನಪ್ರಿಯ ನಿರೂಪಕ (Anchor), ನಟ ಮಾಸ್ಟರ್ ಆನಂದ್ (Master Anand) ಅವರು ಜೀ ಕನ್ನಡ (Zee Kannada) ಕಾರ್ಯಕ್ರಮದಲ್ಲಿ ಮಗನನ್ನು (Son) ನೆನೆದು ಭಾವುಕರಾಗಿದ್ದಾರೆ (Emotional). ಜೀ ಕನ್ನಡ ಚಾನೆಲ್ ಅವರು ಈ ವರ್ಷ ಹೊಸ ವರ್ಷದ ಸಂಭ್ರಮಾಚರಣೆಗೆಂದು, ಜೀ ಕುಟುಂಬ ಹೊಸ ವರ್ಷದ ಸಂಭ್ರಮ ಮಹಾಸಂಗಮ ಕಾರ್ಯಕ್ರಮ ನಡೆಸಿದೆ. ಅದರಲ್ಲಿ ಮಾಸ್ಟರ್ ಆನಂದ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಆನಂದ್ ಅವರಿಗೆ ಹಲವು ಸರ್ಪ್ರೈಸ್ ಗಳನ್ನು ನೀಡಲಾಗಿದೆ. ಅದರಲ್ಲಿ ಮಗನ ಪತ್ರವು ಸಹ ಬಂದಿತ್ತು. ಮಗನ ಪತ್ರ (Letter) ನೋಡಿ ಆನಂದ್ ಅವರು ವೇದಿಕೆ ಮೇಲೆ ಭಾವುಕರಾದ್ರು. ಅಲ್ಲದೇ ಮಗಳ ಬಗ್ಗೆ ಜನ ಮಾತನಾಡಿಕೊಳ್ಳುವುದಕ್ಕೆ ಬೇಸರ ಮಾಡಿಕೊಂಡರು. ಮಕ್ಕಳ ಬಗ್ಗೆ ತಮಗಿರುವ ಕಾಳಜಿಯನ್ನು ಹೇಳಿಕೊಂಡ್ರು.
ಹುಟ್ಟುಹಬ್ಬ ಆಚರಣೆ
ಮಾಸ್ಟರ್ ಆನಂದ್ ಅವರು ಹುಟ್ಟುಹಬ್ಬ ಜನವರಿ 4 ರಂದು. ಜೀ ಕುಟುಂಬ ಮುಂಚೆಯೇ ಆನಂದ್ ಅವರಿಗೆ ಸರ್ಪ್ರೈಸ್ ನೀಡಿದೆ. ಹೊಸ ವರ್ಷದ ಕಾರ್ಯಕ್ರಮದಲ್ಲಿ ಆಚರಣೆ ಮಾಡಿದೆ. ಅಲ್ಲಿ ಅಪ್ಪ ಐ ಲವ್ ಯು ಅನ್ನೋ ಹಾಡಿಗೆ ಪುತ್ರನ ಜೊತೆಗಿರುವ ವಿಡಿಯೋ ಪ್ಲೇ ಮಾಡಿದ್ದಾರೆ. ಅದನ್ನು ನೋಡಿ ಆನಂದ್ ಕಣ್ಣೀರು ಹಾಕಿದ್ದಾರೆ.
ಮಗನ ಪತ್ರದಲ್ಲಿ ಏನಿತ್ತು?
'ಹರಿ ಓಂ ಅಪ್ಪ. ಹುಟ್ಟುಹಬ್ಬದ ಶುಭಾಶಯಗಳು. ನಾನು ನಿಮ್ಮ ಜೊತೆ ಸಮಯ ಕಳೆಯುತ್ತಿದ್ದೆ. ಗುರುಕುಲಕ್ಕೆ ಬಂದ ಕಾರಣದಿಂದ ನಿಮ್ಮ ಜೊತೆ ಸಮಯ ಕಳೆಯಲಾಗಲಿಲ್ಲ. ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬಕ್ಕೆ ಇರುತ್ತಿದ್ದೆ. ನಾನು ಗುರುಕುಲದ ಅಧ್ಯಯನ ಮುಗಿಯುವವರೆಗೂ ನಿಮ್ಮ ಹುಟ್ಟುಹಬ್ಬಕ್ಕೆ ಬರೋಕೆ ಆಗಲ್ಲ.
ಇದನ್ನೂ ಓದಿ: Bhagya Lakshmi: ಲಕ್ಷ್ಮಿ-ವೈಷ್ಣವ್ ಮದುವೆ ಮಾಡೋ ಹಠ, ದೇವರ ಮೊರೆ ಹೋದ ಕುಸುಮಾ!
ನಿಮಗೆ ಹೊಸ ವರ್ಷದ ಶುಭಾಶಯಗಳು. ನಾನು ನಿಮ್ಮನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ಮನೆಯಲ್ಲಿ ನಾನು ನಿಮ್ಮ ಜೊತೆ ವಿಡಿಯೋ ಗೇಮ್ಸ್ ಆಡುತ್ತಿದ್ದಾಗ ಸಿಗುತ್ತಿದ್ದ ಖುಷಿ ಈಗ ಸಿಗುವುದಿಲ್ಲ. ಐ ಲವ್ ಯು ಅಪ್ಪ'. ಎಂದು ಮಾಸ್ಟರ್ ಕೃಷ್ಣ ಪತ್ರ ಬರೆದಿದ್ದಾರೆ.
View this post on Instagram
ಆನಂದ್ ಅವರ ಮಗ ಎಲ್ಲಿ ಇರೋದು?
ಆನಂದ್ ಅವರ ಮಗ ಮಾಸ್ಟರ್ ಕೃಷ್ಣ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರ ಪುರದಲ್ಲಿ ಒಂದು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ. ಅಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತ ಮತ್ತು ನಾವು ಓದುವ ಸಿಲಬಸ್ ಕೂಡ ಅಲ್ಲಿ ಹೇಳಿ ಕೊಡ್ತಾರೆ.
ವಂಶಿಕಾ ಬಗ್ಗೆ ಹೇಳಿದ್ದೇನು?
ಇನ್ನು ಮಗನ ಬಗ್ಗೆ ಮಾತನಾಡುತ್ತಾ, ಆನಂದ್ ಮಗಳು ವಂಶಿ ಬಗ್ಗೆಯೂ ಹೇಳಿದ್ರು. ನನ್ನ ಮಗಳನ್ನು ನಟನೆಗೆ ಕಳಿಸಿರುವುದಕ್ಕೆ, ಹಲವರು, ಹಲವು ರೀತಿ ಮಾತನಾಡುತ್ತಾರೆ. ಓದು ಬಿಟ್ಟು, ಅಲ್ಲಿಗೆ ಕಳಿಸುತ್ತೀರಿ ಅಂತಾರೆ. ನನಗೆ ನನ್ನ ಮಕ್ಕಳ ಕಾಳಜಿ ಬಗ್ಗೆ ಗೊತ್ತಿದೆ. ನನ್ನ ಮಗನನ್ನು ಓದುವುದಕ್ಕೆ ಕಳಿಸಿದ್ದೇನೆ.
ನನ್ನ ಮಗಳ ಓದಿಗೂ ಪ್ರಾಮುಖ್ಯತೆ ಕೊಡುತ್ತೇನೆ. ನಾನು ಒಬ್ಬ ಬಾಲ ಕಲಾವಿದ ಆಗಿದ್ದೇ ಅನ್ನೋದನ್ನು ಮರೆತು ಸಲಹೆ ನೀಡ್ತಾರೆ. ಬೇಜಾರಾಗುತ್ತೆ ಎಂದಿದ್ದಾರೆ.
ಇದನ್ನೂ ಓದಿ: Kannadathi: ಭುವಿಯನ್ನು ಕಾಪಾಡಿದ ಹರ್ಷ, ಮದುವೆಗೆ ಒಪ್ಪಿದ ವರು: ಮುಂದೇನು?
'Love ಲಿ' ಸಿನಿಮಾದಲ್ಲಿ ವಂಶಿಕಾ ನಟನೆ
ಶಾಲೆಗೆ ಹೋಗಲು ಶುರುಮಾಡಿರುವ ವಂಶಿಕಾ ಅವರು ರಿಯಾಲಿಟಿ ಶೋ ಬಳಿಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾಳೆ. ವಸಿಷ್ಠ ಸಿಂಹ ನಟನೆಯ 'ಲವ್ ಲಿ' ಸಿನಿಮಾದಲ್ಲಿ. ವಂಶಿಕಾ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ