ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ವಿಷಯದಲ್ಲಿ ಸಿಸಿಬಿ ಪೊಲೀಸರು, ಸೆಲೆಬ್ರಿಟಿಗಳು ಸೇರಿದಂತೆ ಸಾಕಷ್ಟು ಮಂದಿಗೆ ನೋಟಿಸ್ ನೋಡಿ ವಿಚಾರಣೆ ನಡಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ನಿನ್ನೆಯಷ್ಟೆ ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ ಹಾಗೂ ನಟ ಸಂತೋಷ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೋಡಿತ್ತು. ನೋಟಿಸ್ ಸಿಗುತ್ತಿದ್ದಂತೆಯೇ ಅಕುಲ್ ಬಾಲಾಜಿ ಹೈದರಾಬಾದಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಇನ್ನೂ ಮೂಸೂರಿನಲ್ಲಿದ್ದ ನಟ ಸಂತೋಷ್ ಸಹ ಬೆಳಿಗ್ಗೆ ಹೇಳಿದ ಸಮಯಕ್ಕೆ ಸರಿಯಾಗಿ ಸಿಸಿಬಿ ಕಚೇರಿಗೆ ಬಂದಿದ್ದರು. ಸಂತೋಷ್ ಮೊದಲು ವಿಚಾರಣೆಗೆ ಹಾಜರಾಗಿ ಪೊಲೀಸರಿಗೆ ಸಹಕರಿಸಿದ್ದಾರೆ. ಇನ್ನು ನಂತರ ಬಂದ ಅಕುಲ್ ಬಾಲಾಜಿ ಸಹ ಪೊಲೀಸರಿಗೆ ತನಿಖೆಯಲ್ಲಿ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ. ಇನ್ನು ತಮ್ಮ ರೆಸಾರ್ಟ್ಗಳ ಪತ್ರಗಳನ್ನು ತೆಗೆದುಕೊಂಡು ಬಂದಿದ್ದಾರೆ ಅಕುಲ್ ಬಾಲಾಜಿ. ಅಕುಲ್ ಹಾಗೂ ಸಂತೋಷ್ ಅವರಿಗೆ ಸೇರಿದ ವಿಲ್ಲಾ ಹಾಗೂ ರೆಸಾರ್ಟ್ಗಳಲ್ಲಿ ಡ್ರಗ್ಸ್ ಪಾರ್ಟಿ ನಡೆದಿದೆ ಎನ್ನಲಾಗುತ್ತಿದ್ದು, ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ ಸಿಸಿಬಿ ಪೊಲೀಸರು.
ವಿಚಾರಣೆಗೆ ಹಾಜರಾದ ನಂತರ ನಟ ಸಂತೋಷ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 5 ವರ್ಷಗಳಿಂದ ವೈಭವ್ ಜೈನ್ ಪರಿಚಯವಿದೆ. ನಾನು ಬೆಂಗಳೂರು ನಗರಕ್ಕೆ ಶಿಫ್ಟ್ ಆದಾಗಿನಿಂದ ನನ್ನ ವಿಲ್ಲಾ ಖಾಲಿ ಇತ್ತು. ಅಲ್ಲಿ ಪಾರ್ಟಿ ಆಗಾಗ ಆಗುತ್ತಿತ್ತು. ಆದರೆ ಡ್ರಗ್ಸ್ ಪಾರ್ಟಿ ಆಗಿಲ್ಲ. ನಾನು ಲೇಟ್ ನೈಟ್ ಪಾರ್ಟಿಗಳಿಗೆ ಅವಕಾಶ ಕೊಟ್ಟಿರಲಿಲ್ಲ. ಕೆಲವು ಸಮಸ್ಯೆ ನಂತರ ನಾನು ವಿಲ್ಲಾ ಕ್ಲೋಸ್ ಮಾಡಿದೆ ಎಂದಿದ್ದಾರೆ.
![Bangalore Police department is ready to give protection to indrajit lankesh in drugs mafia issue]()
ಪ್ರಾತಿನಿಧಿಕ ಚಿತ್ರ.
ವೈಭವ್ ಜೈನ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವರು ಹೀಗೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದಿದ್ದರೆ, ಆಗಲೇ ಕಪಾಳಕ್ಕೆ ಹೊಡೆದು ಬುದ್ಧಿ ಹೇಳಿರುತ್ತಿದ್ದೆ ಎಂದು ಸಂತೋಷ್, ವೈಭವ್ ಜೊತೆ ತಮಗಿರುವ ಸಂಬಂಧದ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
![Akul balaji]()
ಅಕುಲ್ ಬಾಲಾಜಿ
ಸಂತೋಷ್ ನಂತರ ವಿಚಾರಣೆಗೆ ಹಾಜರಾದ ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಸಿಸಿಬಿ ಪೊಲೀಸರು ಹೇಳಿದ ಸಮಯಕ್ಕೆ ಬಂದಿದ್ದೀನಿ. ಹತ್ತು ನಿಮಿಷ ತಡವಾಗಿದೆ. ನನ್ನ ರೆಸಾರ್ಟ್ ಅನ್ನು ಲೀಜ್ಗೆ ಕೊಟ್ಟಿದ್ದೆ. ಅದರ ದಾಖಲೆಗಳು ಸಹ ತಂದಿದ್ದೇನೆ. ಎಲ್ಲ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ನೀಡುತ್ತೇನೆ. ವೈಭವ್ ಜೈನ್ ಹಾಗೂ ನಾನು ಹಾಯ್ ಬಾಯ್ ಸ್ನೇಹಿತರು. ರೆಸಾರ್ಟ್ನಲ್ಲಿ ಲಾಕ್ಡೌನ್ ವೇಳೆಯಲ್ಲಿ ಏನು ನಡೆಯಿತ್ತು ಹಾಗೂ ಯಾರೆಲ್ಲ ಇದ್ದರು ಎಂದು ಎಲ್ಲ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಇನ್ನೂ ಜೈಲಿನಲ್ಲೇ ಇರಬೇಕು ರಾಗಿಣಿ-ಸಂಜನಾ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
ಸಾದಹಳ್ಳಿ ಗೇಟ್ ಬಳಿ ಸಂತೋಷ್ ಅವರ ವಿಲ್ಲಾ ಇದ್ದು, ಇಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಸಂತೋಷ್ ಸಹ ಬರುತ್ತಿದ್ದರಂತೆ. ಈ ಬಗ್ಗೆ ತನಿಖೆ ವೇಳೆ ವೈಭವ್ ಬಾಯಿಬಿಟ್ಟಿದ್ದಾರಂತೆ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಸಂತೋಷ್ ಅವರ ವಿಚಾರಣೆ ನಡೆಸಲಾಗಿದೆಯಂತೆ. ಸಂತೋಷ್ ಹಾಗೂ ಅಕುಲ್ ಬಾಲಾಜಿ ತಂದಿದ್ದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಪೊಲೀಸರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ