Akshay Kumar: ಸಹೋದರಿಯ ಮಾತು ಕೇಳಿ ಭಾವುಕರಾದ ನಟ ಅಕ್ಷಯ್! ಅಷ್ಟಕ್ಕೋ ಏನ್ ಹೇಳಿದ್ರು ಅಲ್ಕಾ ಭಾಟಿಯಾ

ಈ ಸಹೋದರ ಮತ್ತು ಸಹೋದರಿಯರ ಸಂಬಂಧ ರಕ್ಷಾ ಬಂಧನದ ಹಬ್ಬದ ದಿನ ಕೈಗೆ ಕಟ್ಟಿಸಿಕೊಳ್ಳುವ ಆ ಬಣ್ಣದ ರಾಖಿಯ ಹಾಗೆ ಅಂತ ಹೇಳಬಹುದು. ಜೀವನದಲ್ಲಿ ಬರುವ ಕಷ್ಟ ಸುಖದ ಅನೇಕ ಬಣ್ಣಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಸದಾ ಜೊತೆಗಿರಬೇಕು ಎಂಬುದನ್ನು ಸೂಚಿಸುತ್ತದೆ. ಹಾಗೆಯೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಸಹೋದರಿ ಅಲ್ಕಾ ಭಾಟಿಯಾ ಅವರು ಕಳುಹಿಸಿದ ಒಂದು ಆಡಿಯೋ ಸಂದೇಶವನ್ನು ಕೇಳಿ ತುಂಬಾನೇ ಭಾವುಕರಾದರು.

ಭಾವುಕರಾದ ಅಕ್ಷಯ್ ಕುಮಾರ್

ಭಾವುಕರಾದ ಅಕ್ಷಯ್ ಕುಮಾರ್

  • Share this:
ಜೀವನದಲ್ಲಿ ತಾಯಿ ನಂತರದ ಸ್ಥಾನ ಯಾರಾದರೂ ತುಂಬಬಲ್ಲರು ಎಂದರೆ ಅದು ನಮ್ಮ ಸಹೋದರಿಯರು (Sisters) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಾಮಾನ್ಯವಾಗಿ ನಾವು ಚಿಕ್ಕವರಾಗಿದ್ದಾಗ ಅಕ್ಕ ತಂಗಿಯರ ಜೊತೆ ಬೆಳೆಯುವುದು ನಮಗೆ ಆ ಪವಿತ್ರವಾದ ಬಾಂಧವ್ಯದ ಬಗ್ಗೆ ತಿಳಿಸಿಕೊಡುತ್ತದೆ. ಬಾಲ್ಯದಲ್ಲಿ (Childhood) ನಾವು ತಂಟೆ ತರ್ಲೆಗಳನ್ನು ಮಾಡಿದಾಗ ನಮ್ಮನ್ನು ನಮ್ಮ ತಂದೆ ತಾಯಿಯ ಕೈಯಿಂದ ತಿನ್ನುವ ಹೊಡೆತಗಳಿಂದ ರಕ್ಷಿಸಿದ್ದು ಯಾರಿಗೆ ತಾನೇ ಮರೆಯಲು ಸಾಧ್ಯ ಹೇಳಿ? ಹೌದು.. ನಾವು ಶಾಲೆಗೆ(School)  ಹೋಗುವಾಗ ಜಗತ್ತಿನ ಪರಿಚಯವೇ ಇಲ್ಲದ ನಮಗೆ ನಮ್ಮ ಜೊತೆ ಇರುವ ನಮ್ಮ ಸಹೋದರ (Brother), ಸಹೋದರಿಯರೆ ಇಡೀ ಜಗತ್ತು ಆಗಿರುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಮ್ಮ ಬಾಲ್ಯದ ಸಿಹಿ ಕಹಿ ನೆನಪುಗಳು (Memories) ಏನೇ ಇದ್ದರೂ ಅದು ಸಹೋದರ ಸಹೋದರಿಯ ಬಾಂಧವ್ಯಕ್ಕೆ ಅಡಿಪಾಯವಾಗಿರುತ್ತದೆ.

ಸಹೋದರಿಯ ಆಡಿಯೋ ಕೇಳಿ ಭಾವುಕರಾದ ಅಕ್ಷಯ್
ಎಷ್ಟೋ ಜನರು ತಮ್ಮ ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದರೆ, ಅವರಿಗೆ ಅಕ್ಕನೇ ತಾಯಿಯಾಗಿರುತ್ತಾರೆ. ಇಷ್ಟೇ ಅಲ್ಲದೆ ಸಹೋದರರು ಸಹ ತಮ್ಮ ಸಹೋದರಿಯರಿಗೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತಾರೆ ಮತ್ತು ಸಹೋದರಿಯರಿಗೆ ಕೆಲವೊಮ್ಮೆ ಅವರ ಸಹೋದರರು ತಂದೆಯ ಸ್ಥಾನದಲ್ಲಿ ನಿಂತು ಅವರಿಗೆ ಬೆಂಬಲ ನೀಡಿರುತ್ತಾರೆ. ಈ ಸಹೋದರ ಮತ್ತು ಸಹೋದರಿಯರ ಸಂಬಂಧ ರಕ್ಷಾ ಬಂಧನದ ಹಬ್ಬದ ದಿನ ಕೈಗೆ ಕಟ್ಟಿಸಿಕೊಳ್ಳುವ ಆ ಬಣ್ಣದ ರಾಖಿಯ ಹಾಗೆ ಅಂತ ಹೇಳಬಹುದು. ಜೀವನದಲ್ಲಿ ಬರುವ ಕಷ್ಟ ಸುಖದ ಅನೇಕ ಬಣ್ಣಗಳಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಸದಾ ಜೊತೆಗಿರಬೇಕು ಎಂಬುದನ್ನು ಸೂಚಿಸುತ್ತದೆ ಎಂದು ಹೇಳಬಹುದು.
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಸಹೋದರಿ ಅಲ್ಕಾ ಭಾಟಿಯಾ ಅವರು ಕಳುಹಿಸಿದ ಒಂದು ಆಡಿಯೋ ಸಂದೇಶವನ್ನು ಕೇಳಿ ತುಂಬಾನೇ ಭಾವುಕರಾದರು.

ಅಕ್ಷಯ್ ಅವರ ಮುಂದಿನ ಸಿನೆಮಾ? 
ಇತ್ತೀಚೆಗೆ ನಟನಿಗಾಗಿ ಒಂದು ಆಡಿಯೋ ಸಂದೇಶವನ್ನು ಅವರ ಸಹೋದರಿ ಅಲ್ಕಾ ಅವರು ಕಳುಹಿಸಿದರು, ಇದು ಅವರನ್ನು ತುಂಬಾನೇ ಭಾವುಕರನ್ನಾಗಿ ಮಾಡಿತು. ಅವರು ಸಿಂಗಿಂಗ್ ರಿಯಾಲಿಟಿ ಶೋ ಸೂಪರ್ ಸ್ಟಾರ್ ಸಿಂಗರ್ 2 ರಲ್ಲಿ ವಿಶೇಷ ಅತಿಥಿಯಾಗಿದ್ದರು, ಈ ಸಮಯದಲ್ಲಿ ಅವರು ಅಲ್ಕಾ ಅವರಿಂದ ಆಡಿಯೋ ಸಂದೇಶವನ್ನು ಸ್ವೀಕರಿಸಿದರು. ನಟ ಪ್ರಸ್ತುತ ತಮ್ಮ ಚಿತ್ರ ‘ರಕ್ಷಾ ಬಂಧನ್’ ಅನ್ನು ಪ್ರಚಾರ ಮಾಡುತ್ತಿದ್ದಾರೆ, ಇದು ಆಗಸ್ಟ್ 11 ರಂದು ರಕ್ಷಾ ಬಂಧನ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಅಷ್ಟಕ್ಕೂ ಅಲ್ಕಾ ಕಳುಹಿಸಿದ ಆಡಿಯೋದಲ್ಲಿ ಏನಿತ್ತು?
‘ರಕ್ಷಾ ಬಂಧನ್’ ಚಿತ್ರವು ತನ್ನ ನಾಲ್ವರು ಸಹೋದರಿಯರನ್ನು ಮದುವೆ ಮಾಡಲು ತನ್ನ ಮದುವೆಯನ್ನು ತಡೆ ಹಿಡಿಯುವ ಪ್ರೀತಿಯ ಸಹೋದರನ ಕಥೆಯಾಗಿದೆ. ಸೋನಿ ಸೂಪರ್ ಸ್ಟಾರ್ ಸಿಂಗರ್ 2 ರ ಹೊಸ ಪ್ರೋಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಸ್ಪರ್ಧಿ ರಿತುರಾಜ್ ಕಿಶೋರ್ ಕುಮಾರ್ ಅವರ ‘ಫೂಲೊಂಕ ತಾರೋಂಕಾ’ ಹಾಡನ್ನು ಹಾಡಿದ್ದಾರೆ. ಅವರ ಪ್ರದರ್ಶನದ ಸಮಯದಲ್ಲಿ, ಅಕ್ಷಯ್ ಅವರ ಸಹೋದರಿ ಅಲ್ಕಾ ಅವರ ಆಡಿಯೋ ಸಂದೇಶವನ್ನು ಸಹ ಹಾಕಲಾಗುತ್ತದೆ.

ಇದನ್ನೂ ಓದಿ:  Ranbir and Alia: ರಣಬೀರ್ ಕಪೂರ್ ಸೆಟ್‌ನಲ್ಲಿ ಹೇಗಿರ್ತಾರೆ? ಈ ಬಗ್ಗೆ ಖುದ್ದು ಆಲಿಯಾ ಏನು ಹೇಳಿದ್ದಾರೆ ಗೊತ್ತಾ?

ಅದರಲ್ಲಿ ಅಕ್ಷಯ್ ಸಹೋದರಿ ಅವರನ್ನು 'ರಾಜು' ಅಂತ ಕರೆದು ಪಂಜಾಬಿ ಭಾಷೆಯಲ್ಲಿ ಮಾತನಾಡಲು ಶುರು ಮಾಡಿ "ರಾಖಿ ಹಬ್ಬವು ಆಗಸ್ಟ್ 11 ರಂದು ಇದೆ ಎಂದು ಯಾರೊಂದಿಗೋ ಚಾಟ್ ಮಾಡುವಾಗ ನನಗೆ ನೆನಪಾಯಿತು. ಜೀವನದಲ್ಲಿ ನೀನು ನನ್ನ ಎಲ್ಲಾ ಕಷ್ಟದ ಮತ್ತು ಖುಷಿಯ ಸಮಯದಲ್ಲಿ ಜೊತೆಗಿದ್ದಿದೀಯಾ. ಒಬ್ಬ ತಂದೆ, ಸ್ನೇಹಿತನಿಂದ ಹಿಡಿದು ಸಹೋದರನವರೆಗೆ, ನೀವು ನನಗಾಗಿ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು" ಎಂದು ಆ ಸಂದೇಶದಲ್ಲಿ ಅಲ್ಕಾ ಅವರು ಹೇಳಿದರು.

ಆಡಿಯೋ ಕೇಳಿ ಅಕ್ಷಯ್ ಸಹೋದರಿಗೆ ಹೇಳಿದ್ದೇನು ?
ಈ ಸಂದೇಶವನ್ನು ಕೇಳುತ್ತಿದ್ದಂತೆಯೇ ಅಕ್ಷಯ್ ಅವರ ಕಣ್ಣುಗಳು ನೀರಿನಿಂದ ತುಂಬಿಕೊಂಡವು. ಭಾವುಕರಾದ ಅವರು ತಮ್ಮ ಸಹೋದರಿಯ ಸಂದೇಶ ಕೇಳಿದ ನಂತರ ಮಾತನಾಡುತ್ತಾ “ನಾವು ಚಿಕ್ಕವರಾಗಿದ್ದಾಗ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದೆವು. ಈ ದೇವಿಯ ಆಗಮನದ ನಂತರವೇ ನಮ್ಮ ಜೀವನವು ಬದಲಾಯಿತು ಎಂದು ಹೇಳಬಹುದು. ಒಬ್ಬ ಸಹೋದರಿಯೊಂದಿಗಿನ ಸಂಬಂಧಕ್ಕಿಂತ ದೊಡ್ಡ ಸಂಬಂಧ ಇನ್ನೊಂದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: Aamir Khan: ಬಾಲಿವುಡ್ ಸಿನಿಮಾಗಳು ಸದ್ದು ಮಾಡದಿರಲು ಆಮಿರ್ ಖಾನ್ ಕಾರಣವಂತೆ, ಕರಣ್ ಜೋಹರ್ ಹೀಗೆ ಅಂದಿದ್ಯಾಕೆ?

ಆನಂದ್ ಎಲ್ ರಾಯ್ ನಿರ್ದೇಶನದ ‘ರಕ್ಷಾ ಬಂಧನ್’ ಚಿತ್ರವನ್ನು ಹಿಮಾಂಶು ಶರ್ಮಾ ಮತ್ತು ಕನಿಕಾ ಧಿಲ್ಲೋನ್ ಬರೆದಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಅವರ ನಾಲ್ವರು ಸಹೋದರಿಯರ ಪಾತ್ರದಲ್ಲಿ ಸಹೆಜ್ಮೀನ್ ಕೌರ್, ದೀಪಿಕಾ ಖನ್ನಾ, ಸಾದಿಯಾ ಖತೀಬ್ ಮತ್ತು ಸ್ಮೃತಿ ಶ್ರೀಕಾಂತ್ ನಟಿಸಿದ್ದಾರೆ. ಭೂಮಿ ಪೆಡ್ನೇಕರ್ ಅಕ್ಷಯ್ ಅವರ ಪ್ರೇಯಸಿಯ ಪಾತ್ರದಲ್ಲಿ ನಟಿಸಿದ್ದಾರೆ.
Published by:Ashwini Prabhu
First published: