Ajith Kumar: ನಟನೆ ಮಾತ್ರವಲ್ಲ, ಮೆಕ್ಯಾನಿಕ್ ಕೆಲಸಾನೂ ಮಾಡ್ತಾರೆ ಈ ನಟ! ಕನ್ನಡಿಗನ ಬೈಕ್ ರಿಪೇರಿ ಮಾಡಿಕೊಟ್ಟ ಅಜಿತ್ ಕುಮಾರ್

Ajith Kumar At Ladakh: ಸ್ಟಾರ್ ನಟ ಅಜಿತ್ ಕುಮಾರ್ ಸಿನಿಮಾ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ? ಅಜಿತ್ ನಟನಾಗಿ ಮಾತ್ರವಲ್ಲ ಬೈಕ್ ಲವ್​ಗಾಗಿ ಕೂಡಾ ಫೇಮಸ್. ಈಗ ತಮಿಳು ನಟ ಕನ್ನಡಿಗನ ಬೈಕ್ ರಿಪೇರಿ ಮಾಡಿಕೊಟ್ಟಿದ್ದಾರೆ.

ನಟ ಅಜಿತ್ ಕುಮಾರ್ ಜೊತೆ ಕಶ್ಯಪ್

ನಟ ಅಜಿತ್ ಕುಮಾರ್ ಜೊತೆ ಕಶ್ಯಪ್

  • Share this:
ಸೌತ್ ನಟ ಅಜಿತ್ ಕುಮಾರ್ ಕಾಲಿವುಡ್​​ನಲ್ಲಿ (Kollywood) ಹಿಟ್ ಸಿನಿಮಾಗಳನ್ನು (Cinema) ಕೊಟ್ಟ ಕಲಾವಿದ. ಅಜಿತ್ ಕುಮಾರ್ (Ajith Kumar) ಎಂದ ಕೂಡಲೇ ಅವರ ಬೈಕ್ ಲವ್ (Bike Love) ಕೂಡಾ ನೆನಪಾಗುತ್ತದೆ. ಅಜಿತ್ ಕುಮಾರ್ ನಟ ಎನ್ನುವುದನ್ನು ಹೊರತುಪಡಿಸಿದ ಅವರು ಅತ್ಯಂತ ಸರಳ ವ್ಯಕ್ತಿ. ಸಿಂಪಲ್ ಆಗಿ ವ್ಯವಹರಿಸುವ ಕಾಲಿವುಡ್ ನಟ. ಅವರ ಸಿನಿಮಾಗಳಿಗೆ (Cinema) ಹೊರತಾಗಿ ಅವರ ಕೆಲವು ಹವ್ಯಾಸಗಳಿಂದಲೂ ಸುದ್ದಿಯಲ್ಲಿದ್ದಾರೆ. ಹಲವು ರೋಡ್ ಟ್ರಿಪ್, ರೈಡಿಂಗ್  (Riding) ಮಾಡುವ ನಟ ಅವರ ಬೈಕ್ ಲವ್​ನಿಂದ ಕೂಡಾ ಫೇಮಸ್ ಆಗಿದ್ದಾರೆ. ನಟ ತಮ್ಮ ಮೆಚ್ಚಿನ ಬೈಕ್​​ನಲ್ಲಿ ಕುಳಿತು ದೇಶ ಸುತ್ತುತ್ತಾರೆ. ಬೈಕ್​ನಲ್ಲಿ ಕುಳಿತುಕೊಂಡು ನಟ ತಮ್ಮ ನೆಚ್ಚಿನ ಪ್ರದೇಶಗಳಿಗೆ ಸುತ್ತುತ್ತಾರೆ. ಹೀಗೆ ಹೋಗುವಾಗ ಅಜಿತ್ ನಟ ಎನ್ನುವುದು ಹೈಲೈಟ್ ಆಗುವುದಕ್ಕಿಂತ ರೈಡರ್ ಆಗಿ ಹೈಲೈಟ್ ಆಗುತ್ತಾರೆ. ಇದೀಗ ನಟ ಲಡಾಖ್ ಹೋಗಿರುವಾಗ ಆಗಿರುವಂತಹ ಘಟನೆಯನ್ನು ಕನ್ನಡಿಗರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.

ಲಡಾಖ್​ನಲ್ಲಿ ಬೈಕ್ ರಿಪೇರಿ ಮಾಡಿದ ತಮಿಳು ನಟ

ನಟ ಅಜಿತ್ ಅವರು ಲಡಾಖ್​ಗೆ ಬೈಕ್ ರೈಡ್ ಹೋಗಿದ್ದಾಗ ಅಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಬೈಕ್ ಹಾಗೂ ಲಡಾಖ್ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದ ಮಂಜು ಕಶ್ಯಪ್ ಹವ್ಯಾಸಿ ಬೈಕರ್. ಅವರು ಲಡಾಖ್​ಗೆ ಹೋಗಿದ್ದಾಗ ನಟ ಅಜಿತ್ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಸಾಮಾನ್ಯ ಭೇಟಿಯಲ್ಲ, ತುಂಬಾ ಸ್ಪೆಷಲ್ ಆಗಿತ್ತು.

ಕನ್ನಡಿಗನಿಗೆ ಸಹಾಯ ಮಾಡಿದ ನಟ

ನಾನು ಬೈಕ್‌ನಲ್ಲಿ ಲಡಾಖ್‌ನಲ್ಲಿ ಟ್ರಿಪ್ ಮಾಡುತ್ತಿದ್ದೆ. ನನ್ನ ಬೈಕ್ ಇದ್ದಕ್ಕಿದ್ದಂತೆಯೇ ನಿಂತು ಹೋಯಿತು. ರಸ್ತೆ ಬದಿ ನಿಲ್ಲಿಸಿಕೊಂಡಿದ್ದೆ. ಅದೇ ದಾರಿಯಲ್ಲಿ ಅಜಿತ್ ಮತ್ತು ಅವರ ಸ್ನೇಹಿತರು ಹೋಗುತ್ತಿದ್ದರು. ನಾನು ಸಹಾಯ ಕೇಳಿದಾಗ ಅಜಿತ್ ಅವರು ತಕ್ಷಣವೇ ತಮ್ಮ ಬೈಕ್ ನಿಲ್ಲಿಸಿ ಸಹಾಯಕ್ಕೆ ಧಾವಿಸಿದರು' ಎಂದು ಬರೆದುಕೊಂಡಿದ್ದಾರೆ.


ಅಜಿತ್ ಅವರು ನಮ್ಮ ಬಳಿಗೆ ಬಂದು ನಮ್ಮ ಬೈಕ್ ಅನ್ನು ಪರೀಕ್ಷಿಸಿದ್ದಾರೆ. ಅವರೇ ಬೈಕ್ ಸರಿಮಾಡಿ, ಅದನ್ನು ಓಡಿಸಿ ಚೆಕ್ ಮಾಡಿದರು. ಇದನ್ನು ನೋಡುತ್ತಿದ್ದ ಅಲ್ಲಿದ್ದವರು ಒಂದು ಕ್ಷಣ ಆಶ್ಚರ್ಯಚಕಿತರಾದರು. ನಂತರ ರಸ್ತೆ ಬದಿಯ ಅಂಗಡಿಯಲ್ಲಿ ನಮ್ಮ ಜೊತೆಗೆ ಅಜಿತ್ ಅವರು ಟೀ ಕುಡಿದರು. ನಮ್ಮ ಜೊತೆಗೆ 10 ನಿಮಿಷ ಮಾತನಾಡಿದರು. ಅಲ್ಲದೆ, ತಮ್ಮ ಹಿಂದಿನ ರೋಡ್ ಟ್ರಿಪ್‌ ಬಗ್ಗೆ ಹೇಳಿದರು.

ಒಂಚೂರು ಜಂಭ ಇಲ್ಲದ ಸರಳ ವ್ಯಕ್ತಿ

ಇದನ್ನೆಲ್ಲ ನಾನು ಬರೆಯಲು ಕಾರಣ, ಲೆಜೆಂಡ್ ಎನಿಸಿಕೊಂಡಿರುವ ವ್ಯಕ್ತಿಯೊಬ್ಬರು ಒಂಚೂರು ಕೂಡಾ ಅಟಿಟ್ಯೂಡ್‌ ಇಲ್ಲದೆ ಜನರ, ಅಭಿಮಾನಿಗಳ ಮೇಲೆ ಅದ್ಭುತವಾದ ಪ್ರೀತಿಯನ್ನು ಹೊಂದಿದ್ದಾರೆ. ನಾನು ಅದೃಷ್ಟಶಾಲಿ. ಅವರು ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿದ ಈ ದಿನವನ್ನು ನಾನು ಮರೆಯಲಾರೆ' ಎಂದು ಮಂಜು ಬರೆದುಕೊಂಡಿದ್ದಾರೆ. ಜೊತೆಗೆ ಅಜಿತ್ ಅವರ ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Raju Srivastav: ಕಾಮಿಡಿ ಕಿಂಗ್ ಇನ್ನಿಲ್ಲ, ಪ್ರೇಕ್ಷಕರ ನಗಿಸಿದ ಹಾಸ್ಯ ಕಲಾವಿದನಿಗೆ ಕಣ್ಣೀರ ವಿದಾಯ

ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟ

ತಮಿಳು ಮಾತ್ರವಲ್ಲದೆ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟನ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮಂಜು ಕಶ್ಯಪ ಅವರ ಪೋಸ್ಟ್ ಅನ್ನು ಅಜಿತ್ ಅಭಿಮಾನಿಗಳು ವೈರಲ್ ಮಾಡಿದ್ದಾರೆ. ಅಜಿತ್‌ ಬೈಕ್, ಕಾರು ಚಲಾಯಿಸಿವುದರಲ್ಲಿ ಪರಿಣಿತರು. ಹಾಗೆಯೇ ಅಜಿತ್ ಅವರ ಬಳಿ ಪೈಲೆಟ್ ಲೈಸೆನ್ಸ್ ಕೂಡ ಇದೆ. ಇದೀಗ ತಾವೊಬ್ಬ ನಿಪುಣ ಬೈಕ್ ಮೆಕ್ಯಾನಿಕ್ ಎಂಬುದನ್ನು ಕೂಡ ಅವರು ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ: Ajith Kumar: ಯುರೋಪ್​ನ ಗಲ್ಲಿ ಗಲ್ಲಿಯಲ್ಲೂ ಅಜಿತ್​ ಹವಾ! ಬೈಕ್​ ಸ್ಟಾರ್ಟ್ ಮಾಡಿದ್ರೂ ಅಂದ್ರೆ, ತಡೆಯೋರು ಯಾರು ಇಲ್ಲ

ಈ ವರ್ಷ ಅಜಿತ್ ಅವರ 'ವಲಿಮೈ' ಸಿನಿಮಾ ತೆರೆಕಂಡಿತ್ತು. ಅದರಲ್ಲೂ ಬೈಕ್ ಚೇಸ್ ಸೀನ್‌ಗಳಿದ್ದವು. ಅದನ್ನು ಸ್ವತಃ ಅಜಿತ್ ಅವರೇ ಯಾವುದೇ ಡ್ಯೂಪ್ ಬಳಸದೇ ಮಾಡಿದ್ದರು. ಇದೀಗ ಅವರು ತಮ್ಮ 61ನೇ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾವನ್ನು ಎಚ್. ವಿನೋದ್ ನಿರ್ದೇಶನ ಮಾಡುತ್ತಿದ್ದು, ಅವರ 62ನೇ ಸಿನಿಮಾವನ್ನು ವಿಘ್ನೇಶ್ ಶಿವನ್ ಡೈರೆಕ್ಷನ್ ಮಾಡಲಿದ್ದಾರೆ.

ಲಡಾಖ್ ಬೈಕರ್ಸ್​ಗಳ ಸ್ವರ್ಗ

ಲಡಾಖ್ ಬೈಕರ್ಸ್​ಗಳ ಸ್ವರ್ಗ. ಬೈಕ್, ಬುಲೆಟ್ ಇಷ್ಟಪಡುವ ಜನರು ಲಡಾಖ್​​ಗೆ ಒಂದು ಟ್ರಿಪ್ ಪ್ಲಾನ್ ಮಾಡುವುದು ತುಂಬಾ ಸಾಮಾನ್ಯ. ಅಥವಾ ಒಮ್ಮೆಯಾದರೂ ಲಡಾಖ್​ಗೆ ಹೋಗಿ ಬರಬೇಕೆಂದು ಕನಸು ಕಾಣುತ್ತಾರೆ. ದೇಶಾದ್ಯಂತ ಇರುವ ಯುವ ಜನರು ಲಡಾಖ್​​ಗೆ ರೈಡ್ ಹೋಗುತ್ತಾರೆ.
Published by:Divya D
First published: