HOME » NEWS » Entertainment » ACTOR ABHISHEK BACHCHAN TESTS NEGATIVE FOR COVID 19 HG

ಕೊರೋನಾ ಗೆದ್ದು ಬಂದು ಅಭಿಷೇಕ್​ ಬಚ್ಚನ್​; ಟ್ವೀಟ್​ ಮೂಲಕ ವೈದ್ಯರಿಗೆ ಧನ್ಯವಾದ

ಆಗಸ್ಟ್ 2 ರಂದು ಬಿಗ್​ ಬಿ ಅಮಿತಾಭ್​ ಕೊರೋನಾದಿಂದಾಗಿ ಸಂಪೂರ್ಣ ಮುಕ್ತಿ ಹೊಂದಿ ಡಿಸ್ಚಾರ್ಜ್​ ಆದರು. ಇಂದು ಮಗ ಅಭಿಷೇಕ್​ ಬಚ್ಚನ್​ ಕೂಡ ಕೊರೋನಾ ನೆಗೆಟಿವ್​ ಬಂದಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಸಂತಸಕ್ಕೆ ಕಾರಣವಾಗಿದೆ.

news18-kannada
Updated:August 8, 2020, 5:26 PM IST
ಕೊರೋನಾ ಗೆದ್ದು ಬಂದು ಅಭಿಷೇಕ್​ ಬಚ್ಚನ್​; ಟ್ವೀಟ್​ ಮೂಲಕ ವೈದ್ಯರಿಗೆ ಧನ್ಯವಾದ
ಅಭಿಷೇಕ್​ ಬಚ್ಚನ್
  • Share this:
ಇತ್ತೀಚೆಗೆ ಬಾಲಿವುಡ್​  ನಟ ಅಭಿಷೇಕ್​ ಬಚ್ಚನ್​ಗೆ​ ಕೊರೋನಾ ಸೋಂಕು ತಗುಲಿತ್ತು. ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅಭಿಷೇಕ್​ ಅವರ ವರದಿ ನೆಗೆಟಿವ್​ ಬಂದಿದ್ದು, ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಹೊರಬಂದಿದ್ದಾರೆ.

ಜುಲೈ 11ರಂದು ಬಾಲಿವುಡ್​ ಖ್ಯಾತ ನಟ ಅಮಿತಾಭ್​  ಬಚ್ಚನ್​, ಅಭಿಷೇಕ್ ಬಚ್ಚನ್​ ಅವರಿಗೆ ಕೊರೋನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಅಮಿತಾಭ್​ ಬಚ್ಚನ್​ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆನಂತರ ಸೊಸೆ ಐಶ್ವರ್ಯಾ ರೈ, ಮೊಮ್ಮಗಳು ಆರಾಧ್ಯ ರೈ ಅವರಿಗೆ ಕೊರೋನಾ ಸೋಂಕು ಧೃಡವಾಗಿತ್ತು. ಇವರು ಕೂಡ ಕೊರೋನಾಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಗಸ್ಟ್ 2 ರಂದು ಬಿಗ್​ ಬಿ ಅಮಿತಾಭ್​ ಕೊರೋನಾದಿಂದಾಗಿ ಸಂಪೂರ್ಣ ಮುಕ್ತಿ ಹೊಂದಿ ಡಿಸ್ಚಾರ್ಜ್​ ಆದರು. ಇಂದು ಮಗ ಅಭಿಷೇಕ್​ ಬಚ್ಚನ್​ ಕೂಡ ಕೊರೋನಾ ನೆಗೆಟಿವ್​ ಬಂದಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಸಂತಸಕ್ಕೆ ಕಾರಣವಾಗಿದೆ.

ಬಚ್ಚನ್​ ಕುಟುಂಬಕ್ಕೆ ಕೊರೋನಾ ಸೋಂಕು ತಗಲಿದೆ ಎಂಬ ವಿಚಾರ ತಿಳಿದಂತೆ ಅನೇಕರು ಬೇಗ ಗುಣಮುಖರಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಮಾಡಿದ್ದರು. ಅಭಿಷೇಕ್​ ಬಚ್ಚನ್​ ಕೂಡ ಅಭಿಮಾನಿಗಳ ಆಶಿರ್ವಾದದಿಂದ ಬೇಗ ಗುಣಮುಖರಾಗುತ್ತೇವೆ ಎಂದು ಬರೆದುಕೊಂಡಿದ್ದರು.

ಕೊರೋನಾ ನೆಗೆಟಿವ್​ ವರದಿ ಬಂದ ನಂತರ ಅಭಿಷೇಕ್​ ಬಚ್ಚನ್​ ಟ್ವೀಟ್​ ಮಾಡಿದ್ದಾರೆ. ಪ್ರಾಮಿಸ್​ ಅಂದರೆ ಪ್ರಾಮಿಸ್​! ಈ ಮದ್ಯಾಹ್ನ  ನನ್ನ ಕೋವಿಡ್​​ 19 ವರದಿ ನೆಗೆಟಿವ್​ ಬಂದಿದೆ. ನಾನು ಈ ಸೋಂಕನ್ನು ಗೆದ್ದು ಬರುತ್ತೇನೆ ಎಂದು ಹೇಳಿದ್ದೆ. ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ನಾನಾವತಿ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ನನ್ನ ಕೃತಜ್ನತೆಗಳು ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.ಇತ್ತೀಚೆಗೆ ಅಭಿಷೇಕ್​ ಬಚ್ಚನ್​ ನಟನೆಯ ವೆಬ್​ ಸಿರೀಸ್​​ ಬ್ರೀತ್​​ ಇನ್​ ಟು ದಿ ಶ್ಯಾಡೋ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿ ಬಿಡುಗಡೆಗೊಂಡು ಅಭಿಮಾನಿಗಳ ಮನರಂಜಿಸಿತ್ತು. ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಗೊಂಡ ಬ್ರೀತ್​ ಇನ್​ ಟು ದಿ ಶ್ಯಾಡೋ ವೆಬ್​ ಸಿರೀಸ್​​ ಸಾಕಷ್ಟು ಜನರಿಗೆ ಮೆಚ್ಚುಗೆಯನ್ನು ಗಳಿಸುತ್ತು.
Published by: Harshith AS
First published: August 8, 2020, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories