ಯಾವ ತಂದೆ ತಾಯಿ(Parents)ಗೆ ತಮ್ಮ ಮಕ್ಕಳು(Children's) ಮಾಡಿದ ಒಳ್ಳೆಯ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದರೆ ಖುಷಿ ಆಗಲ್ಲ ಹೇಳಿ..? ಆದರೆ ಜನರು ಹೊಗಳಲಿ ಎಂದು ತಮ್ಮ ಮಕ್ಕಳ ಮೇಲೆ ಪೋಷಕರಾದವರು ಒತ್ತಡವನ್ನು ಹೇರಬಾರದು ಅಷ್ಟೇ. ಪ್ರತಿಭೆ(Talent) ಎನ್ನುವುದು ಒಂದು ರಕ್ತಗತವಾಗಿ ಬಂದಿರಬೇಕು ಅಥವಾ ತಮ್ಮ ಸ್ವಪ್ರಯತ್ನದಿಂದ ಆ ಪ್ರತಿಭೆಯನ್ನು ಸಿದ್ದಿಸಿಕೊಂಡಿರಬೇಕು. ಅದರಲ್ಲೂ ಈ ಸಿನಿಮಾ ತಾರೆ(Film Actors)ಯರ ಮಕ್ಕಳು ಎಂದರೆ ಕೇಳಬೇಕೆ..? ತಮ್ಮ ನೆಚ್ಚಿನ ನಟ ಮತ್ತು ನಟಿಯ ಮಕ್ಕಳು ಹೇಗೆ ಮಾತಾಡುತ್ತಾರೆ, ಹೇಗೆ ಇರುತ್ತಾರೆ ಮತ್ತು ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ತುಂಬಾನೇ ಇರುತ್ತದೆ.
ಐಶ್ವರ್ಯಾ ಬಚ್ಚನ್ ಮಗಳ ವಿಡಿಯೋ ವೈರಲ್!
ಹೌದು..ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದು ಒಂದು ವಿಷಯವನ್ನು ನಿಮಗೆ ತಿಳಿಸಲು ಎಂದು ನಿಮಗೆ ಅರ್ಥವಾಗಿರಬೇಕಲ್ಲವೇ..? ಇತ್ತೀಚೆಗೆ ಬಿಗ್ ಬಿ ಅಮಿತಾಭ್ ಬಚ್ಚನ್(Amithabh Bachchan) ಅವರ ಏಕೈಕ ಪುತ್ರ ಮತ್ತು ನಟ ಅಭಿಷೇಕ್ ಬಚ್ಚನ್(Abhishek Bachchan) ಮತ್ತು ಅವರ ಪತ್ನಿ ಮತ್ತು ನಟಿಯಾದ ಐಶ್ವರ್ಯಾ ರೈ(Aishwarya Rai) ಬಚ್ಚನ್ ಅವರ ಮಗಳು ಆರಾಧ್ಯ ತನ್ನ ಶಾಲೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿದೆ.
ಹಿಂದಿಯಲ್ಲಿ ಭಾಷಣ ಮಾಡಿದ ಆರಾಧ್ಯ ಬಚ್ಚನ್!
ಆರಾಧ್ಯ ಬಚ್ಚನ್ ಅವರ ಮುತ್ತಜ್ಜ ಎಂದರೆ ಅಮಿತಾಭ್ ಬಚ್ಚನ್ ಅವರ ತಂದೆ ಸಾಹಿತ್ಯ ಪ್ರತಿಪಾದಕ ಹರಿವಂಶ್ ರೈ ಬಚ್ಚನ್ ಅವರ ಗುಣಗಳು ಮತ್ತು ಅಭಿರುಚಿ ಅವರ ಮರಿ ಮೊಮ್ಮಗಳಿಗೂ ಬಂದಿರುವುದು ಸಹಜವಲ್ಲವೇ..? ಆರಾಧ್ಯ ಬಚ್ಚನ್ ಹಿಂದಿಯಲ್ಲಿ ಭಾಷಣ ಮಾಡುತ್ತಿರುವ ಮತ್ತು ಹೇಗೆ ಒಂದು ಭಾಷೆಯು ಮಗುವಿನ ಬಾಯಲ್ಲಿ ಸುಂದರವಾಗಿ ಮೂಡಿ ಬರುತ್ತದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಮುಗ್ದತೆಯನ್ನು ಜನರು ಇಷ್ಟ ಪಟ್ಟಿದ್ದು, ವಿಡಿಯೋ ವೈರಲ್ ಆಗಿರುವುದು ನಾವು ಕಾಣಬಹುದು.
After such a longggg time😭 Seeing this Princess 🥺 Can't tell how beautiful she is lookin' in this beautiful two cute ponytails 😍 Aaradhya Bachchan at her school's Hindi Elocution Competition 2021-22 ❤️
VC: @DaisMumbai Thank you very muchhh for sharing 🙏🏻 #AaradhyaBachchan pic.twitter.com/izfvCLxlxD
— Aaradhya Rai Bachchan Official ARB (@WeLoveAaradhyaB) March 13, 2022
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಆರಾಧ್ಯ ಓದುತ್ತಿದ್ದ ಶಾಲೆಯು ನಡೆಸಿದ ಆನ್‌ಲೈನ್ ಹಿಂದಿ ವಾಕ್ಚಾತುರ್ಯ ಸ್ಪರ್ಧೆಯಿಂದ ಈ ವಿಡಿಯೋವನ್ನು ತೆಗೆದುಕೊಳ್ಳಲಾಗಿದೆ ಎಂದು ತೋರುತ್ತದೆ. ಈ ಕ್ಲಿಪ್‌ನಲ್ಲಿ ಆರಾಧ್ಯ ಅವಳ ಅಭಿವ್ಯಕ್ತಿಗೆ ಮತ್ತು ಅವಳು ಭಾಷೆಯನ್ನು ಪರಿಚಯಿಸಿದ ರೀತಿ ತನ್ನೆಲ್ಲಾ ಸಹಪಾಠಿಗಳನ್ನು ಮಂತ್ರ ಮುಗ್ದರನ್ನಾಗಿಸಿದೆ. ಇಷ್ಟೇ ಅಲ್ಲದೆ ಅಭಿಮಾನಿಗಳು ಸಹ ಈಕೆಗೆ ಭೇಷ್ ಎಂದಿದ್ದಾರೆ.
ಇದನ್ನೂ ಓದಿ: ನನ್ನ ಗಂಡನೂ ಕಾಶ್ಮೀರಿ ಪಂಡಿತ್.. ನನಗೆ ಅವರೆಲ್ಲರ ಕಷ್ಟ ಗೊತ್ತಿದೆ ಎಂದ ಬಾಲಿವುಡ್ನ ಟಾಪ್ ನಟಿ!
ಮಗಳ ವಿಡಿಯೋ ಮೆಚ್ಚಿಕೊಂಡ ಅಭಿಷೇಕ್ ಬಚ್ಚನ್!
ಕೆಲವು ಅಭಿಮಾನಿಗಳಂತೂ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್ ಮಾಡಲಾದ ಆರಾಧ್ಯ ಅವರ ವೈರಲ್ ವಿಡಿಯೋ ನೋಡಿ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. "ವಾಹ್ ಮಗಳೇ.. ಅದ್ಭುತ ಆ್ಯಕ್ಷನ್, ಸುಂದರವಾದ ನಟನೆ, ಸುಂದರ ನಗುವಿನ ಸುಂದರ ಅಭಿವ್ಯಕ್ತಿ, ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಬರೆದಿದ್ದಾರೆ. ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಆರಾಧ್ಯ ಅವರ ತಂದೆ ಅಭಿಷೇಕ್ ಬಚ್ಚನ್ ಅವರನ್ನು ಟ್ಯಾಗ್ ಮಾಡಿದಾಗ ಅವರ ತಂದೆ ಅಭಿಷೇಕ್ ಬಚ್ಚನ್ ಕೈಮುಗಿದಿರುವ ಎಮೋಜಿ ಕಳುಹಿಸುವುದರೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಫಸ್ಟ್ ಟೈಂ ಬಿಕಿನಿ ತೊಟ್ಟ `ಮಾಣಿಕ್ಯ’ನ ಬೆಡಗಿ.. ಇಷ್ಟು ದಿನ ಇಲ್ದೇ ಇರದು, ಈಗ್ಯಾಕೆ? ಎಂದ ನೆಟ್ಟಿಗರು!
ಜನವರಿಯಲ್ಲಿ, ಈ 10 ವರ್ಷದ ಮಗು "ಸಾರೆ ಜಹಾನ್ ಸೆ ಅಚ್ಚಾ" ಮತ್ತು ಶಾಲೆಯಲ್ಲಿ ಗಣರಾಜ್ಯೋತ್ಸವ ದಿನದ ಸಮಾರಂಭಕ್ಕಾಗಿ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ "ವಂದೇ ಮಾತರಂ" ನ ನಿರೂಪಣೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಮತ್ತೊಂದು ವಿಡಿಯೋ ಸಹ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಈ ವಿಡಿಯೋದಲ್ಲಿ ಆರಾಧ್ಯ ಬಿಳಿ ಸಲ್ವಾರ್-ಕಮೀಜ್ ಮತ್ತು ಕಿತ್ತಳೆ ಬಣ್ಣದ ದುಪಟ್ಟಾವನ್ನು ಧರಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ