ಮಗನಿಗೆ ಅಭಿನಯದ ಪಾಠ ಮಾಡಿದ ರೆಬೆಲ್​ ವಿಡಿಯೋ: ಮಗನ ಸಿನಿಮಾ ಸೆಟ್​ಗೆ ಭೇಟಿ ನೀಡಿದ್ದ ಅಂಬರೀಷ

Anitha E | news18
Updated:December 25, 2018, 2:58 PM IST
ಮಗನಿಗೆ ಅಭಿನಯದ ಪಾಠ ಮಾಡಿದ ರೆಬೆಲ್​ ವಿಡಿಯೋ: ಮಗನ ಸಿನಿಮಾ ಸೆಟ್​ಗೆ ಭೇಟಿ ನೀಡಿದ್ದ ಅಂಬರೀಷ
  • News18
  • Last Updated: December 25, 2018, 2:58 PM IST
  • Share this:
-ಅನಿತಾ .ಈ,

ರೆಬೆಲ್​ ಅಂಬಿ ದೈಹಿಕವಾಗಿ ನಮ್ಮನ್ನೆಲ್ಲ ಅಗಲಿದ್ದರೂ ಇನ್ನೂ ಜನರ ಮನಸ್ಸಿನಲ್ಲಿ ಅವರು ಹಸಿರಾಗಿಯೇ ಇದ್ದಾರೆ. ಅಂಬಿ ಜೀವದಿಂದರುವಾಗಲೇ ಮಗ ಅಭಿಷೇಕ್​ ಅಭಿನಯಿಸುತ್ತಿರುವ 'ಅಮರ್​' ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಆದರೆ ಅದು ಪೂರ್ಣಗೊಂಡು ತೆರೆ ಕಾಣುವ ಮುನ್ನವೇ ಅಂಬಿ ಇಹಲೋಕ ತ್ಯಜಿಸಿದರು.

ಇದನ್ನೂ ಓದಿ: ಅಂಬಿ ಸಿಗರೇಟ್​ ಸೇದುವ 'ಸ್ಟೈಲ್​ ಕಾಪಿ' ಮಾಡಲು ಹೋಗಿ ಸೋತ ಬಿ-ಟೌನ್​-ಟಾಲಿವುಡ್​ ನಟರು..!

ಮಗನ ಮೊದಲ ಸಿನಿಮಾ ನೋಡುವ ಆಸೆ ಈಡೇರದೆಯೇ ಅಗಲಿದ ಅಂಬಿ, ಬದುಕಿದ್ದಾಗ ಮಗ ಅಭಿಷೇಕ್​ ಜತೆ ಒಮ್ಮೆ 'ಅಮರ್​' ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ಕಾಲಕಳೆದಿದ್ದರು.

ಅಭಿಷೇಕ್​ ನಟಿಸುತ್ತಿರುವ 'ಅಮರ್'​ ಚಿತ್ರದ ಶೂಟಿಂಗ್​ ಸೆಟ್​ಗೆ ಒಮ್ಮೆ ಮಾತ್ರ ಭೇಟಿ ನೀಡಿದ್ದ ಅಂಬಿಯ ವಿಡಿಯೋವನ್ನು ಸುಮಲತಾ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 ಆ ವಿಡಿಯೋದಲ್ಲಿ ಅಂಬಿ ಮಗನಿಗೆ ಹೇಗೆ ನಟಿಸಬೇಕು, ಬಾಡಿ ಲಾಂಗ್ವೇಜ್​ ಹೇಗಿರಬೇಕು ಅಂತೆಲ್ಲ ಶೂಟಿಂಗ್​ ಸ್ಪಾಟ್​ನಲ್ಲಿ ಚಿತ್ರತಂಡದ ಮುಂದೆಯೇ ಅಭಿಷೇಕ್​ಗೆ ಪಾಠ​ ಮಾಡಿದ್ದಾರೆ.

ಇದನ್ನೂ ಓದಿ: ಶಿಸ್ತಿನ ಸಿಪಾಯಿ ಪುಟ್ಟಣ್ಣ ಕಣಗಾಲರ ಸಿಟ್ಟನ್ನು ಓಡಿಸುತ್ತಿದ್ದ ಜಾದೂಗಾರ ಈ ತುಂಟ ಅಂಬಿ..!

ಅಂದು ಇಮ್ರಾನ್​ ಸರ್ದಾರಿಯಾ ಕೊರಿಯೋಗ್ರಫಿಯಲ್ಲಿ 'ಅಮರ್'​​ ಚಿತ್ರದ ಹಾಡಿನ ಚಿತ್ರೀಕರಣ​ ನಡೆಯುತ್ತಿದ್ದ ವೇಳೆ ಅಂಬಿ ಸೆಟ್​ಗೆ ಭೇಟಿ ನೀಡಿದ್ದರು. 

 

 
First published: December 25, 2018, 1:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading