KGF 2 vs Aamir Khan: ಕೆಜಿಎಫ್ 2 ಎದುರು ಬರಲು ಆಮಿರ್ ಹಿಂಜರಿಕೆ? ಲಾಲ್ ಸಿಂಗ್ ಛಡ್ಡಾ ಬಿಡುಗಡೆ ಮುಂದೂಡಿಕೆ

ಚಿತ್ರ ಲಾಲ್ ಸಿಂಗ್ ಛಡ್ಡಾ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿಲ್ಲ. ಸಿನಿಮಾ ಕೆಲಸಗಳು ಮುಗಿಯಲು ಸಾಧ್ಯವಾಗದೇ ಇರುವುದಕ್ಕೆ 11 ಆಗಸ್ಟ್ 2022 ರಂದು ಚಿತ್ರ ಬಿಡುಗಡೆಯಾಗಲಿದೆ.

ಆಮಿರ್ - ಯಶ್

ಆಮಿರ್ - ಯಶ್

  • Share this:
    ಏಪ್ರಿಲ್​ 14ರಂದು ನಟ (Actor) ಆಮಿರ್ ಖಾನ್ (Amir Khan) ನಟನೆಯ 'ಲಾಲ್​ ಸಿಂಗ್​ ಛಡ್ಡಾ’ (Laal Singh Chaddha) ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಈಗ ಆ ಮಾತಿನಿಂದ ನಟ ಆಮಿರ್ ಹಿಂದೆ ಸರಿದಿದ್ದಾರೆ. ತಮ್ಮ ಸಿನಿಮಾ (Movie) ರಿಲೀಸ್ (Release) ದಿನಾಂಕವನ್ನು ಬದಲಾಯಿದ್ದಾರೆ. ಜೊತೆಗೆ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ.  ಅಂದ ಹಾಗೇ, ಏಪ್ರಿಲ್ 14 ರಂದು ತೆರೆಗೆ ಅಪ್ಪಳಿಸಲು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್​ 2’ ಸಿನಿಮಾ (KGF 2) ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ. ಎರಡೂ ಸಿನಿಮಾಗಳು ಏಕದಿನಕ್ಕೆ ರಿಲೀಸ್ ಆಗುವ ಮೂಲಕ ಸಾಕಷ್ಟು ಪೈಪೋಟಿಗೆ ಇಳಿಯಲಿವೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೀಗ ನಟ ಆಮಿರ್ ತಮ್ಮ ಸಿನಿಮಾದ ರಿಲೀಸ್ ಡೇಟ್ ನ್ನು ಮುಂದಕ್ಕೆ ಹಾಕಿದ್ದಾರೆ.  ಇದರಿಂದ ‘ಕೆಜಿಎಫ್​ 2’ ಸಿನಿಮಾಗೆ ಮತ್ತಷ್ಟು ಚಿತ್ರಮಂದಿರಗಳು (Theaters) ಸಿಗುವ ಸಾಧ್ಯತೆ ಇದೆ.

    ನಟ ಆಮಿರ್​ ಖಾನ್​ ಸಿನಿಮಾದ ರಿಲೀಸ್​ ದಿನಾಂಕವೇ ಮುಂದಕ್ಕೆ

    ‘ಕೆಜಿಎಫ್​ 2’ ಎದುರು ‘ಲಾಲ್​ ಸಿಂಗ್​ ಛಡ್ಡಾ’ ಸಿನಿಮಾ ತೆರೆಗೆ ತರುತ್ತಿರುವ ವಿಚಾರಕ್ಕೆ ನಟ ಆಮಿರ್​ ಖಾನ್​ ಅವರು ಕ್ಷಮೆ ಕೇಳಿದ್ದರು. ನಮ್ಮ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಹೇಳಿದ್ದರು. ಅನೇಕರು ‘ಕೆಜಿಎಫ್​ 2’ ಎದುರು ತೆರೆಗೆ ಬಂದರೆ ಆಮಿರ್​ ಖಾನ್​ ಸಿನಿಮಾ ಸೋಲಲಿದೆ ಎಂದು ಭವಿಷ್ಯ ಹೇಳಿದ್ದರು. ಆದರೆ, ಈಗ ಆಮಿರ್​ ಖಾನ್​ ಸಿನಿಮಾದ ರಿಲೀಸ್​ ದಿನಾಂಕವೇ ಮುಂದಕ್ಕೆ ಹೋಗಿದೆ.

    11 ಆಗಸ್ಟ್ 2022 ರಂದು ಲಾಲ್ ಸಿಂಗ್ ಛಡ್ಡಾ ಬಿಡುಗಡೆ

    ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹಾಕಿರುವುದಕ್ಕೆ ಚಿತ್ರತಂಡ ಪ್ರಕಟಣೆ ಹೊರಡಿಸಿದೆ. “ನಮ್ಮ ಚಿತ್ರ ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿಲ್ಲ. ಸಿನಿಮಾ ಕೆಲಸಗಳು ಮುಗಿಯಲು ಸಾಧ್ಯವಾಗದೇ ಇರುವುದೇ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹಾಕಲು ಕಾರಣ. 11 ಆಗಸ್ಟ್ 2022 ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ” ಎಂದು ತಿಳಿಸಿದೆ.






    ಇದನ್ನೂ ಓದಿ: ಎಲ್ಲೆಲ್ಲೂ ‘ಪುಷ್ಪ ಸೀರೆ’ಗಳಿಗೆ ಫುಲ್ ಡಿಮ್ಯಾಂಡ್.. ಹೆಂಗಳೆಯರಿಗೆ ಈಗ ಇದೇ ಬೇಕಂತೆ!

    ಇನ್ನು ಚಿತ್ರತಂಡ ಕೆಲವೇ ದಿನಗಳ ಹಿಂದೆ ಒಂದು ಪೋಸ್ಟ್ ಹಾಕಿತ್ತು. 'ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣದ 'ಲಾಲ್ ಸಿಂಗ್ ಛಡ್ಡಾ' ಏಪ್ರಿಲ್ 14ರಂದೇ ಬಿಡುಗಡೆಯಾಗಲಿದೆ. ಈ ಚಿತ್ರದ ನಿರ್ಮಾಣದ ವೇಳೆ ನಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿತ್ತು.

    ಇನ್ನು 'ಲಾಲ್ ಸಿಂಗ್ ಚಡ್ಡಾ' ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದು, ಪ್ರೀತಂ ಸಂಗೀತ ನೀಡಿದ್ದಾರೆ. ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದಿದ್ದಾರೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.

    ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಸಂಗೀತ ಮಾಂತ್ರಿಕ ಕಮ್​ಬ್ಯಾಕ್​.. ಆಂಗ್ಲೋ ಇಂಡಿಯನ್ ಸಿನಿಮಾಗೆ ಇಳಯರಾಜ ಮ್ಯೂಸಿಕ್​!

    ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಸ್ಪರ್ಧೆ

    ಇತ್ತ ಆಮಿರ್​ ಖಾನ್​ ಚಿತ್ರ ರೇಸ್​ನಿಂದ ಹಿಂದೆ ಸರಿಯುವ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುವ ಬಗ್ಗೆ ಘೋಷಣೆ ಮಾಡಿದೆ. ‘ಕೆಜಿಎಫ್​ 2’ ಹಾಗೂ ‘ಜೆರ್ಸಿ’ ನಡುವೆ ಈಗ ಸ್ಪರ್ಧೆ ಏರ್ಪಡುತ್ತಿದೆ. ‘ಕೆಜಿಎಫ್​ 2’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಯಶ್​ ನಟನೆಯ ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನವಿದೆ.
    Published by:renukadariyannavar
    First published: