ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಮತ್ತೊಮ್ಮೆ ದೇಹ ಇಳಿಸಿಕೊಂಡಿದ್ದಾರೆ. ಪೊಗರು ಚಿತ್ರದ ಸಮಯದಲ್ಲೂ ಎರಡು ರೀತಿಯ (Kannada Hero Dhruva Sarja) ಪಾತ್ರ ಮಾಡುವ ಅವಶ್ಯಕತೆ ಇತ್ತು. ಅದಕ್ಕಾಗಿ ಒಮ್ಮೆ ಹೆಚ್ಚಿನ ತೂಕ ಇಳಿಸಿಕೊಂಡು ಚಿಕ್ಕ (Dhruva Sarja Young Look) ಹುಡುಗರ ರೀತಿ ಕಾಣಿಸಿಕೊಂಡ್ರು. ಇದೇ ಚಿತ್ರದಲ್ಲಿ ತೂಕ ಹೆಚ್ಚಿಸಿಕೊಂಡು ದೈತ್ಯ ದೇಹದಲ್ಲಿ ಅಭಿನಯಿಸಿದ್ದರು. ಅದೇ ರೀತಿಯ ಚಾಲೆಂಜ್ ಮತ್ತೆ ಸ್ವೀಕರಿಸಿದ್ದಾರೆ. ಹೆಚ್ಚು ಕಡಿಮೆ 23 ದಿನಗಳಲ್ಲಿ 18kg ತೂಕ ಇಳಿಸಿಕೊಂಡಿದ್ದಾರೆ. (Dhruva Sarja weight Loss) ಹಾಗೆಯೇ ಸಣ್ಣ ಕೂಡ ಆಗಿದ್ದಾರೆ. ಇದನ್ನ ಕಂಡ ಅನೇಕರು ವಾರೇ ವ್ಹಾ ಅಂತಲೂ ಬಣ್ಣಿಸಿದ್ದಾರೆ. ಆದರೂ ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತೂಕ ಇಳಿಸಿದ್ದು ಹೇಗೆ?
ಕನ್ನಡದ KD ಚಿತ್ರಕ್ಕಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದೇಹ ತೂಕ ಇಳಿಸಿದ್ದಾರೆ. ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿರೋದು ಆಶ್ಚರ್ಯವೇ ಆಗಿದೆ. ಆದರೆ ಇಷ್ಟು ಬೇಗ ಇಷ್ಟು ತೂಕ ಇಳಿಸಿಕೊಳ್ಳಲು ಸಾಧ್ಯವೇ? ಅನ್ನುವ ಪ್ರಶ್ನೆ ಕೂಡ ಇದೆ.ಆ್ಯಕ್ಷನ್ ಪ್ರಿನ್ಸ್ ದೇಹದ ತೂಕ ಇಳಿಸಿಕೊಳ್ತಿರೋದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಪೊಗರು ಚಿತ್ರಕ್ಕೆ ಧ್ರುವ ದೇಹದ ತೂಕ ಇಳಿಸಿಕೊಂಡಿದ್ದರು. ಡೈರೆಕ್ಟರ್ ನಂದ ಕಿಶೋರ್ ಚಿತ್ರಕ್ಕೆ ಚಿಕ್ಕ ಹುಡುಗನ ರೀತಿ ನೀವು ಕಾಣಬೇಕು ಅಂತಲೇ ಚಾಲೆಂಜ್ ಕೊಟ್ಟಿದ್ದರು.
ಪೊಗರು ಚಿತ್ರದ ಬಳಿಕ ಧ್ರುವ ಸರ್ಜಾ KD ಚಿತ್ರಕ್ಕೆ ದೇಹದ ತೂಕ ಇಳಿಸಿಕೊಂಡಿದ್ದಾರೆ. ಡೈರೆಕ್ಟರ್ ಜೋಗಿ ಪ್ರೇಮ್ ಕೊಟ್ಟ ಚಾಲೆಂಜ್ ಸ್ವೀಕರಿಸಿ ಧ್ರುವ ಸರ್ಜಾ ವೇಟ್ ಲಾಸ್ ಮಾಡಿಕೊಂಡಿದ್ದಾರೆ.
ದಿನವೂ ದೇಹ ದಂಡಿಸೋ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!
ಧ್ರುವ ಸರ್ಜಾ ವರ್ಕೌಟ್ಗೆ ಹೆಚ್ಚು ಒತ್ತುಕೊಡುತ್ತಾರೆ. ದಿನವೂ ದೇಹವನ್ನ ದಂಡಿಸುತ್ತಾರೆ. ದೇಹವನ್ನ ಫಿಟ್ ಆಗಿಯೇ ಇಟ್ಟುಕೊಂಡು ಬಂದಿದ್ದಾರೆ. ಸರ್ಜಾ ಫ್ಯಾಮಿಲಿಯಲ್ಲಿ ಇದು ಕಾಮನ್ ವಿಷಯವೇ ಆಗಿದೆ.
ಆದರೆ ಚಿತ್ರಕ್ಕಾಗಿ ಧ್ರುವ ಸರ್ಜಾ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅದೇ ಚಿತ್ರಕ್ಕಾಗಿ ದೇಹದ ತೂಕವನ್ನ ಹೇಳಿದ ಸಮಯಕ್ಕೆ ಇಳಿಸಿಕೊಂಡು ಬಿಡ್ತಾರೆ. ಅದೇ ರೀತಿ ಈಗ KD ಚಿತ್ರಕ್ಕೆ ಸಣ್ಣ ಆಗಿದ್ದಾರೆ. ಇನ್ನೇನು ಚಿತ್ರದ ಶೂಟಿಂಗ್ನಲ್ಲೂ ಭಾಗಿ ಆಗಲಿದ್ದಾರೆ.
ಕಠಿಣ ಡಯೆಟ್-ದಿನವೂ 10 ಕಿಮಿ ಓಟ!
ಧ್ರುವ ಸರ್ಜಾ ಕಳೆದ 36 ದಿನಗಳಿಂದಲೂ ಟ್ರೆಡ್ಮಿಲ್ ಮೇಲೆ ಓಡ್ತಾನೇ ಇದ್ದಾರೆ. ಪ್ರತಿ ದಿನ 10 ಕಿಲೋಮೀಟರ್ ಓಟ ಇದ್ದೇ ಇರುತ್ತದೆ. ಪ್ರತಿ ದಿನ ಹೀಗೆ ಓಡಿಯೇ ಧ್ರುವ ಸರ್ಜಾ ದೇಹದ ತೂಕ ಇಳಿಸಿಕೊಂಡಿದ್ದಾರೆ.
ಕಠಿಣ ಡಯೆಟ್ ಫಾಲೋ ಮಾಡಿದ್ದಾರೆ. ಇದರಿಂದಲೇ ಬಹು ಬೇಗ ದೇಹ ದಂಡನೆ ಮಾಡಿದ್ರೆ ದೇಹದ ಮೇಲೆ ಪರಿಣಾಮ ಬೀರೋದಿಲ್ವೇ? ಹೀಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಕಾಮೆಂಟ್ ಹೊಡೆಯೋರಿಗೆ ಧ್ರುವ ಕೊಟ್ಟ ಉತ್ತರವೇನು?
ದೇಹದ ತೂಕ ಇಳಿಸಿಕೊಂಡಿರೋ ಬಗ್ಗೆ ಕಮೆಂಟ್ ಮಾಡೋರಿಗೆ ಧ್ರುವ ಸರ್ಜಾ ಉತ್ತರ ಕೊಟ್ಟರೇ? ಹೀಗೆ ಕೇಳಲಿಕ್ಕೆ ಈಗೊಂದು ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ.
ಧ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಪತಿಗೆ ಇಡ್ಲಿ ತಿನಿಸಿದ್ದಾರೆ. ಎಲ್ಲರಂತೆ ಧ್ರುವ ಕೂಡ ಎಲ್ಲವನ್ನೂ ಸೇವಿಸುತ್ತಿದ್ದಾರೆ. ಕಠಿಣ ವ್ಯಾಯಾಮವನ್ನೂ ನಿಯಮಿತ ಮಾಡುತ್ತಿದ್ದಾರೆ. ನುರಿತವರ ಮಾರ್ಗದರ್ಶನದಲ್ಲಿ ಡಯೆಟ್ ಮತ್ತು ವರ್ಕೌಟ್ ಮಾಡಿದ್ದಾರೆ.
ಇದನ್ನೂ ಓದಿ: Sapthami Gowda: ಯಾವ ಭಾಷೆಯಲ್ಲಿ ಸಿನಿಮಾ ಮಾಡಿದ್ರು ನನ್ನ ಮೊದಲ ಆದ್ಯತೆ ಕನ್ನಡಕ್ಕೆ; ಕಾಂತಾರ ನಟಿಯ ಖಡಕ್ ಉತ್ತರ
ಇಷ್ಟೆಲ್ಲ ಪರಿಶ್ರಮದಿಂದ ದೇಹದ ತೂಕ ಇಳಿದಿದೆ ಅನ್ನೋದೇ ವಿಡಿಯೋದ ಒಟ್ಟು ಅರ್ಥ ಮತ್ತು ತಾತ್ಪರ್ಯ ಅಂತಲೇ ಹೇಳಬಹುದು. ಇನ್ನುಳಿದಂತೆ ಇದೇ ತಿಂಗಳ 25 ರಿಂದ KD ಸಿನಿಮಾ ಶೂಟಿಂಗ್ನಲ್ಲೂ ಧ್ರುವ ಸರ್ಜಾ ಭಾಗಿ ಆಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ