ನಮ್ಮ ಬಾವುಟಕ್ಕೆ ಮರ್ಯಾದೆ ಕೊಡ್ಲೇಬೇಕು: ಧ್ವಜ ಸುಟ್ಟವರಿಗೆ ಧ್ರುವ ಸರ್ಜಾ `ಪೊಗರ್​’ದಸ್ತ್​​​ ವಾರ್ನಿಂಗ್​!

‘ಕರ್ನಾಟಕದ ಬಾವುಟಕ್ಕೆ ಎಲ್ಲರೂ ಮರ್ಯಾದೆ ಕೊಡಲೇಬೇಕು. ಮರ್ಯಾದೆ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿಲ್ಲ. ಅದು ಮನಸ್ಸಿನಲ್ಲೇ ಇರುತ್ತದೆ. ನಾವು ನಿಮಗೆ ಯಾವ ರೀತಿ ಮರ್ಯಾದೆ ಕೊಡುತ್ತೇವೋ ಅದೇ ರೀತಿ ನೀವು ನಮ್ಮ ಧ್ವಜವನ್ನು ಗೌರವಿಸಬೇಕು’ ಎಂದಿದ್ದಾರೆ ಧ್ರುವ.

ನಟ ಧ್ರುವ ಸರ್ಜಾ

ನಟ ಧ್ರುವ ಸರ್ಜಾ

  • Share this:
ಕನ್ನಡಿಗರ ತಾಳ್ಮೆಯನ್ನು ಎಂಇಎಸ್ (MES)​ ಕಾರ್ಯಕರ್ತರು ಪದೇ ಪದೇ ಕೆಣಕುತ್ತಿದ್ದಾರೆ. ಕಾಲು ಕೆರೆದು ಜಗಳಕ್ಕೆ ನಿಂತಿದ್ದಾರೆ. ಕನ್ನಡಿಗರು ಶಾಂತಿಪ್ರಿಯರು ನಿಜ..ಆದರೆ ತಾಳ್ಮೆ ಕೆಟ್ಟರೆ ಸಿಂಹ(Lion)ಗಳಂತೆ ನುಗ್ಗಿ ಅವರನ್ನು ಬೇಟೆಯಾಡುತ್ತೇವೆ. ಎಂಇಎಸ್‌ ಮುಖಂಡ ದೀಪಕ್ ದಳವಿ (Deepak Dalvi) ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್‌ನ ಕೆಲವರು ಮಹಾರಾಷ್ಟ್ರ(Maharashtra)ದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ(Kannada Flag) ಬೆಂಕಿ ಇಟ್ಟಿದ್ದರು. ಆ ಬಗ್ಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಿನ್ನೆ ಶಿವಣ್ಣ(Shivanna), ಗಣೇಶ್​(Ganesh), ದುನಿಯಾ ವಿಜಿ(Duniya Viji) ಸೇರಿ ಹಲವರು ಪ್ರತಿಕ್ರಿಯೆ ನೀಡಿದ್ದರು. . ಕನ್ನಡಕ್ಕಾಗಿ ಸ್ಯಾಂಡಲ್​ವುಡ್(Sandalwood)​ ಸ್ಟಾರ್ಸ್​ ಮತ್ತೊಮ್ಮೆ ಒಂದಾಗಿದ್ದಾರೆ. ಈ ವಿಚಾರ ಇದೀಗ ಭಾರಿ ಚರ್ಚೆ ಆಗುತ್ತಿದೆ. ಈಗ ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ(Dhruva Sarja) ಖಡಕ್​ ಆಗಿ ವಾರ್ನಿಂಗ್​ ಕೊಟ್ಟಿದ್ದಾರೆ.  ರಚಿತಾ ರಾಮ್​ ಮತ್ತು ಅಜಯ್​ ರಾವ್​ ನಟನೆಯ ‘ಲವ್​ ಯೂ ರಚ್ಚು’ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಕರುನಾಡಿನ ಧ್ವಜದ ಬಗ್ಗೆ ಅವರು ಮಾತನಾಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಕನ್ನಡಿಗರು ಶೇರ್​ ಮಾಡಿದ್ದಾರೆ.

ಕರ್ನಾಟಕ ಭಾವುಟಕ್ಕೆ ಮರ್ಯಾದೆ ಕೊಡ್ಲೇಬೇಕು ಎಂದು ಧ್ರುವ

‘ಕರ್ನಾಟಕದ ಬಾವುಟಕ್ಕೆ ಎಲ್ಲರೂ ಮರ್ಯಾದೆ ಕೊಡಲೇಬೇಕು. ಮರ್ಯಾದೆ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿಲ್ಲ. ಅದು ಮನಸ್ಸಿನಲ್ಲೇ ಇರುತ್ತದೆ. ನಾವು ನಿಮಗೆ ಯಾವ ರೀತಿ ಮರ್ಯಾದೆ ಕೊಡುತ್ತೇವೋ ಅದೇ ರೀತಿ ನೀವು ನಮ್ಮ ಧ್ವಜವನ್ನು ಗೌರವಿಸಬೇಕು’ ಎಂದಿದ್ದಾರೆ ಧ್ರುವ. ಶಿವರಾಜ್​ಕುಮಾರ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ. ಅದೇ ರೀತಿ ಜಗ್ಗೇಶ್​, ಸಂತೋಷ್​ ಆನಂದ್​ರಾಮ್​ ಸೇರಿದಂತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಜೊತೆ ಜಗ್ಗೇಶ್​ ಕೂಡ ಕೂಡಲೇ ಕನ್ನಡಿಗ ಹೋರಾಟಗಾರರನ್ನು ಬಿಡುಗಡೆಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದರು.


ಇದನ್ನು ಓದಿ : ಕನ್ನಡಕ್ಕಾಗಿ ಒಂದಾದ ಚಂದನವನ: ಶಿವಣ್ಣ ಬಳಿಕ ಧ್ವಜ ಸುಟ್ಟವರ ವಿರುದ್ಧ ಗಣೇಶ್​, ದುನಿಯಾ ವಿಜಯ್​ ಗರಂ!

ಸ್ವಾಭಿಮಾನದ ಕಿಚ್ಚು ಸುಟ್ಟಿದ್ದಾರೆ ಎಂದ ಗಣೇಶ್​

ಕನ್ನಡ ಧ್ವಜ ಸುಟ್ಟವರ ವಿರುದ್ಧ ಆಕ್ರೋಶ ಹೊರ ಹಾಕಿದ ನಟ ಗಣೇಶ್, "ಅವರು ಸುಟ್ಟಿದ್ದು ಧ್ವಜವಲ್ಲ, ಕನ್ನಡಿಗರ ಸ್ವಾಭಿಮಾನದ ಕಿಚ್ಚು. ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು. ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಜೈ ಕನ್ನಡಾಂಬೆ" ಎಂದು ನಟ ಗಣೇಶ್‌ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ ಅನ್ನು ಸಾವಿರಾರು ಕನ್ನಡಿಗರು ಶೇರ್ ಮಾಡಿಕೊಂಡಿದ್ದಾರೆ.

ಇದನ್ನು ಓದಿ : ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು: `ಆಳ್​ ಕನ್ನಡ ತಾಯ್​​, ಬಾಳ್​ ಕನ್ನಡ ತಾಯ್’ ಎಂದು ಶಿವಣ್ಣ ವಾರ್ನಿಂಗ್​!

ದ್ರೋಹಿಗಳನ್ನು ಬಂಧಿಸಿ ಎಂದ ದುನಿಯಾ ವಿಜಯ್​!

ಕನ್ನಡ ಬಾವುಟ ಸುಟ್ಟಿರುವ ವಿಚಾರವಾಗಿ ನಟ ದುನಿಯಾ ವಿಜಯ್‌ ಕೂಡ ಟ್ವೀಟ್‌ ಮಾಡಿದ್ದಾರೆ. "ನಾಡು, ನುಡಿ, ಭಾಷೆ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ". ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಅವರು ಹೇಡಿಗಳು ಎಂದ ಪ್ರಜ್ವಲ್​ ದೇವರಾಜ್​!

ನಟ ಪ್ರಜ್ವಲ್‌ ದೇವರಾಜ್‌ ಕನ್ನಡ ಧ್ವಜವನ್ನು ಸುಟ್ಟವರನ್ನ ಹೇಡಿಗಳು ಎಂದು ಕರೆದಿದ್ದಾರೆ. " ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ. ಜೈ ಕನ್ನಡ, ಜೈ ಕರ್ನಾಟಕ" ಎಂದು ಪೋಸ್ಟ್​ ಮಾಡಿದ್ದಾರೆ.
Published by:Vasudeva M
First published: