ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಕೆಡಿ ಚಿತ್ರದ (Martin Get Up Video Viral) ಚಿತ್ರೀಕರಣಲ್ಲಿ ಬ್ಯುಸಿ ಇದ್ದಾರೆ. ಇವರ ಸಿನಿಮಾಗಳು ಸೆಟ್ ಏರೋದೇ ತಡ, ಹಲ್ ಚಲ್ ಶುರು ಆಗುತ್ತದೆ. ಅದೇ ರೀತಿ ಇದೀಗ ಮಾರ್ಟಿನ್ ಮತ್ತು ಕೆಡಿ ಸಿನಿಮಾ (Martin Movie Updates) ಕ್ರೇಜ್ ಶುರು ಆಗಿದೆ. ಕೆಡಿ ಚಿತ್ರಕ್ಕೂ ಮೊದಲು ಮಾರ್ಟಿನ್ ಚಿತ್ರವೇ ತೆರೆಗೆ ಬರುತ್ತದೆ. ಹೀಗಿರೋವಾಗ ಧ್ರುವ ಸರ್ಜಾ ಅವರ ಸಿನಿಮಾದ ಚಟುವಟಿಕೆಗಳು (Action Prince Video Viral) ಆರಂಭದಲ್ಲಿಯೇ ಹೆಚ್ಚು ಗಮನ ಸೆಳೆಯುತ್ತವೆ. ಮಾರ್ಟಿನ್ ಸಿನಿಮಾ ರೀತಿನೇ ಕೆಡಿ ಸಿನಿಮಾದ ಪ್ರತಿ ಹೆಜ್ಜೆನೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಇದೇ ಚಿತ್ರದ (Fan Made Video) ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಮಾರ್ಟಿನ್ ಹಲ್ ಚಲ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಸಿನಿಮಾ ಸೆಟ್ಟೇರಿದ್ರೆ ಸಾಕು, ಹಲ್ ಚಲ್ ಶುರು ಆಗಿಯೇ ಬಿಡುತ್ತದೆ. ಸಿನಿಮಾ ಪ್ರೇಮಿಗಳಲ್ಲದೇ, ಧ್ರುವ ಸರ್ಜಾ ಫ್ಯಾನ್ ಬೇಸ್ ತುಂಬಾ ಸ್ಟ್ರಾಂಗ್ ಆಗಿದೆ. ಇವರ ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ಧ್ರುವ ಸರ್ಜಾ ಅವರ ಪ್ರತಿ ಕ್ಷಣವನ್ನೂ ಸೆಲೆಬ್ರೇಟ್ ಮಾಡುತ್ತಾರೆ.
ಧ್ರುವ ಸರ್ಜ ಅಭಿನಯದ ಮಾರ್ಟಿನ್ ಸಿನಿಮಾ ಅತಿ ದೊಡ್ಡ ಭರವಸೆ ಮೂಡಿಸಿದೆ. ಟೆರಿಫಿಕ್ ಸೋಲ್ಜರ್ ರೋಲ್ ಅಲ್ಲಿಯೇ ಧ್ರುವ ಸರ್ಜಾ ಈ ಚಿತ್ರದಲ್ಲಿ ಕಂಗೊಳಿಸುತ್ತಿದ್ದಾರೆ. ಇವರ ಈ ಒಂದು ಚಿತ್ರದ ಟೀಸರ್ ಭರ್ಜರಿಯಾಗಿಯೇ ಇದೆ. ಇದನ್ನ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಮಾರ್ಟಿನ್ ಸಿನಿಮಾ ಲುಕ್ ಇರೋ ವಿಡಿಯೋ ವೈರಲ್
ಆದರೆ ಇದೀಗ ಮಾರ್ಟಿನ್ ಸಿನಿಮಾದ ಒಂದು ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋಕ್ಕೆ ಹಿನ್ನೆಲೆ ಸಂಗೀತ ಕೂಡ ಇದೆ. ಅದನ್ನ ನೋಡಿದಾಗ, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗುತ್ತದೆ. ಹಾಗೇನೆ ಇದು ಯಾವ ಚಿತ್ರದ ವಿಡಿಯೋ ಅನ್ನೋ ಪ್ರಶ್ನೆ ಕೂಡ ಹುಟ್ಟಬಹುದು. ಆ ಕೂಡಲೇ ಧ್ರುವ ಸರ್ಜಾ ಗೆಟಪ್ ನೋಡಿದರೆ ತಿಳಿದೇ ಬಿಡುತ್ತದೆ.
View this post on Instagram
ಆ್ಯಕ್ಷನ್ ಪ್ರಿನ್ಸ್ ಫ್ಯಾನ್ ಮೇಡ್ ಇಂಟ್ರಸ್ಟಿಂಗ್ ವಿಡಿಯೋ
ಈ ಒಂದು ಸಮಯದಲ್ಲಿ ತೆಗೆದ ಈ ವಿಡಿಯೋ ನೋಡೋರಿಗೆ ಇಂಟ್ರೆಸ್ಟಿಂಗ್ ಆಗಿದೆ. ಧ್ರುವ ಸರ್ಜಾ ಅವರ ಈ ವಿಡಿಯೋದಲ್ಲಿ ಸ್ಲೋಮೋಷನ್ ಎಫೆಕ್ಟ್ ಇದೆ. ಹಿನ್ನೆಲೆಯಲ್ಲಿ ಇಂಗ್ಲೀಷ್ ಹಾಡೊಂದರ ಖದರ್ ಕೂಡ ಇದೆ.
ಎಲ್ಲವೂ ಸೇರಿ ಇದೊಂದು ಇಂಟ್ರಸ್ಟಿಂಗ್ ವಿಡಿಯೋ ಅನಿಸುತ್ತದೆ. ಹಾಗೇನೆ ಯಾರಪ್ಪ ಇದನ್ನ ಶೇರ್ ಮಾಡಿದ್ದು ಅಂತ ನೋಡಿದ್ರೆ, ಧ್ರುವ ಸರ್ಜಾ ಅವರ ವಿಐಪಿಗಳೇ ಇದನ್ನ ತುಂಬಾ ಪ್ರೀತಿಯಿಂದಲೇ ಎಡಿಟ್ ಮಾಡಿದ್ದಾರೆ. ತಮ್ಮ ವಿಐಪಿ ಆಫ್ ಧ್ರುವ ಅಣ್ಣ ಅನ್ನೋ ಹೆಸರಿನ ಇನ್‌ಸ್ಟಾ ಪೇಜ್ ನಲ್ಲಿ ಈ ಒಂದು ಸ್ಪೆಷಲ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಧ್ರುವ ಸರ್ಜಾ ಫ್ಯಾನ್ ಫಾಲೋಯಿಂಗ್ ದೊಡ್ಡಮಟ್ಟದಲ್ಲಿಯೇ ಇದೆ. ಧ್ರುವ ಸರ್ಜಾ ಅವರ ಪ್ರತಿ ಮೂವ್‌ಮೆಂಟ್‌ನ್ನ ಅಷ್ಟೇ ಪ್ರೀತಿಯಿಂದಲೇ ಇವರೆಲ್ಲ ನೋಡ್ತಾರೆ. ಅದನ್ನ ಅಷ್ಟೇ ಖುಷಿಯಿಂದಲೇ ಸೆಲೆಬ್ರೇಟ್ ಮಾಡುತ್ತಾರೆ.
ಇದನ್ನೂ ಓದಿ: Ghost Movie Updates: ಕನ್ನಡದ ಘೋಸ್ಟ್ ಚಿತ್ರತಂಡ ಸೇರಿದ ಅನುಪಮ್ ಖೇರ್, ಡೈರೆಕ್ಟರ್ ಶ್ರೀನಿ ಹಂಚಿಕೊಂಡರು ಸ್ಪೆಷಲ್ ಫೋಟೋಸ್!
ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ರಿಲೀಸ್ ಡೇಟ್‌ನ್ನ ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲಿಯೇ ಕೆಡಿ ಸಿನಿಮಾ ಹೇಗೆ ಬರುತ್ತದೆ ಅನ್ನೊ ಕುತೂಹಲದಲ್ಲೂ ಇದ್ದು, ಏನೆಲ್ಲ ಅಪ್‌ಡೇಟ್ಸ್ ಹೊರ ಬೀಳುತ್ತದೆ ಅನ್ನೋ ನಿರೀಕ್ಷೆಯಲ್ಲಿಯೇ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ