Happy Birthday Dhruva Sarja: ನಾನೇನು ದೊಡ್ಡ ಸೆಲೆಬ್ರಿಟಿಯಲ್ಲ... ನನ್ನ ವಿಐಪಿಗಳಲ್ಲಿ ಪುಟ್ಟದೊಂದು ಮನವಿ ಎಂದಿದ್ದೇಕೆ ಧ್ರುವ ಸರ್ಜಾ

'ನಾನೇನು ದೊಡ್ಡ ಸೆಲಬ್ರಿಟಿಯೇನಲ್ಲ... ಇದೇ 6ರಂದು ನನ್ನ ಹುಟ್ಟುಹಬ್ಬ. ಆದರೆ, ನನಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸು ಇಲ್ಲ. ನೀವು ಅರ್ಥ ಮಾಡಿಕೊಳ್ಳುತ್ತೀರಾ ಅಂತ ಭಾವಿಸಿದ್ದೇನೆ' ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ.

ನಟ ಧ್ರುವ ಸರ್ಜಾ

ನಟ ಧ್ರುವ ಸರ್ಜಾ

  • Share this:
ಧ್ರುವ ಸರ್ಜಾ ಸಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಆದರೆ, ಅವರು ಬೇರೆ ಸ್ಟಾರ್​ಗಳಿಗೆ ಹೋಲಿಸಿದರೆ, ಅವರಷ್ಟು ಸಕ್ರಿಯವಾಗಿಲ್ಲ. ಏನಾದರೂ ವಿಷಯ ಹೇಳಬೇಕೆಂದಾಗ ಮಾತ್ರ ಅಲ್ಲಿ ಕಾಣಿಸಿಕೊಳ್ಳುತ್ತಾರೆ. ನಿನ್ನೆ ಸಂಜೆ ಧ್ರುವ ಸರ್ಜಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಮ್ಮ ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಅದರಲ್ಲಿ ವಿಐಪಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಅಷ್ಟಕ್ಕೂ ಯಾರು ಈ ವಿಐಪಿಗಳು ಅಂತೀರಾ..? ಆ ವಿಐಪಿಗಳು ಮತ್ತಾರೂ ಅಲ್ಲ... ಅವರ ಅಭಿಮಾನಿಗಳು. ತಮ್ಮ ಅಭಿಮಾನಿಗಳನ್ನು ಧ್ರುವ ಸರ್ಜಾ ವಿಐಪಿಗಳೆಂದು ಕರೆಯುತ್ತಾರೆ. ಇನ್ನು ತಾನೇನು ಸೆಲೆಬ್ರಿಟಿ ಅಲ್ಲ... ಆದರೂ ನನ್ನ ವಿಐಪಿಗಳಲ್ಲಿ ನನ್ನದೊಂದು ಪುಟ್ಟ ಮನವಿ ಅಂತ ವಿಡಿಯೋದಲ್ಲಿ ಮಾತು ಆರಂಭಿಸಿರುವ ಧ್ರುವ ಸರ್ಜಾ  ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಉಂಟುಮಾಡುವ ಸುದ್ದಿ ಹೇಳಿದ್ದಾರೆ. 

ಹೌದು, ನಾಳೆ ಅಂದರೆ ಅ.6ರಂದು ಧ್ರುವ ಸರ್ಜಾ ಹುಟ್ಟುಹಬ್ಬ. ನಾನೇನು ದೊಡ್ಡ ಸೆಲಬ್ರಿಟಿಯೇನಲ್ಲ... ಇದೇ 6ರಂದು ನನ್ನ ಹುಟ್ಟುಹಬ್ಬ. ಆದರೆ, ನನಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸು ಇಲ್ಲ. ನೀವು ಅರ್ಥ ಮಾಡಿಕೊಳ್ಳುತ್ತೀರಾ ಅಂತ ಭಾವಿಸಿದ್ದೇನೆ. ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಎರಡು ದೊಡ್ಡ ಕಾರಣಗಳಿವೆ. ಒಂದು ಕೋರೋನಾ ಮತ್ತೊಂದು ಸಿನಿಮಾ ಚಿತ್ರೀಕರಣದ ನಿಮಿತ್ತ ವೈಜಾಗ್​ನಲ್ಲಿರುತ್ತೇನೆ. ಪ್ರತಿ ವರ್ಷ ಹೇಗೆ ತಮ್ಮ ಮನೆಯ ಹುಡುಗ ಅಂತ ಎಲ್ಲರೂ ಆಶೀರ್ವಾದ ಮಾಡಿ, ನಿಮ್ಮ ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ ಅಂತ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.






ಧ್ರುವ ಸರ್ಜಾ ಅವರು ಸಹೋದರನ್ನು ಕಳೆದುಕೊಂಡಾಗಿನಿಂದ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿಲ್ಲ. ಈ ಎಲ್ಲ ಸಂಭ್ರಮಾಚರಣೆಗಳಿಂದ ಧ್ರುವ ದೂರವೇ ಉಳಿದಿದ್ದಾರೆ. ಇನ್ನು ಕೊರೋನಾ ಕಾಟ ಆರಂಭವಾದಾಗಿನಿಂದ ಎಲ್ಲ ಸ್ಟಾರ್​ ನಟರೂ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕಾರಣ ಗುಂಪಾಗಿ ಜನರು ಒಂದೆಡೆ ಸೇರುವುದರಿಂದ ಕೊರೋನಾ ಹರಡುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು.

ಇದನ್ನೂ ಓದಿ: Martin: ಯೂಟ್ಯೂಬ್‍ನಲ್ಲಿ ದಾಖಲೆ ಮಾಡುವ ಮೂಲಕ ಟ್ರೆಂಡಿಂಗ್​ನಲ್ಲಿದ್ದಾನೆ ಮಾರ್ಟಿನ್ !

ಮಾರ್ಟಿನ್ ಚಿತ್ರೀಕರಣದಲ್ಲಿ ಧ್ರುವ ಸರ್ಜಾ

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್​ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಇದರ ಚಿತ್ರೀಕರಣ ವೈಜಾಗ್​ ನಡೆಯುತ್ತಿದ್ದು, ಧ್ರುವ ಸರ್ಜಾ ಅಲ್ಲೇ ಇದ್ದಾರೆ. ಆ್ಯಕ್ಷನ್​ ಪ್ರಿನ್ಸ್​ ಧುವ್ರ ಸರ್ಜಾ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ ಅವರು 9 ವರ್ಷಗಳ ನಂತರ ಮತ್ತೆ ಈ ಸಿನಿಮಾಗಾಗಿ ಒಂದಾಗಿದ್ದಾರೆ. ಎ.ಪಿ. ಅರ್ಜುನ್ ಹಾಗೂ ಧ್ರುವ ಅವರ ಕಾಂಬಿನೇಷನ್​ ಮೇಲೆ ಕನ್ನಡ ಸಿನಿಪ್ರಿಯರಿಗೆ ತುಂಬಾ ನಿರೀಕ್ಷೆ ಇದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾರ್ಟಿನ್ ಸಿನಿಮಾದ ಪೋಸ್ಟರ್​ ಅನ್ನು ರಿಲೀಸ್ ಮಾಡಲಾಗಿತ್ತು, ಅಭಿಮಾನಿಗಳು ಧ್ರುವ ಸರ್ಜಾ ಅವರ ಖಡಕ್ ಲುಕ್​ಗೆ ಫಿದಾ ಆಗಿದ್ದರು. ಅದೇ ಕಟ್ಟು ಮಸ್ತಾದ ದೇಹ, ಕೈ ಮೇಲೆ ಟ್ಯಾಟೂ. ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಲುಕ್ ವೈರಲ್ ಆಗಿತ್ತು. ಈ ಸಿನಿಮಾ ಕುರಿತಾಗಿ ಧ್ರುವ ಸರ್ಜಾ ಅವರು ಸಾಕಷ್ಟು ವಿಷಯಗಳನ್ನು ಆಗಲೇ ಹಂಚಿಕೊಂಡಿದ್ದರು. ಮಾರ್ಟಿನ್​ ಚಿತ್ರದ ಪೋಸ್ಟರ್ ನೋಡಿದವರೆಲ್ಲ ಇದರಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಇದೇ ಎಂದು ತಿಳಿದುಕೊಂಡಿದ್ದರು. ಆದರೆ, ಇದು ಸತ್ಯ ಅಲ್ಲ ಎಂದಿದ್ದ ಧ್ರುವ ಸರ್ಜಾ, ಮಾರ್ಟಿನ್​ ನಾನಲ್ಲ ಎಂದಿದ್ದರು.

ಇದನ್ನೂ ಓದಿ: Martin: ಧ್ರುವ ಸರ್ಜಾ ಜೊತೆ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುವ ಅವಕಾಶ ನಿಮ್ಮದಾಗಬಹುದು..!

ಈ ಸಿನಿಮಾ ಸೆಟ್ಟೇರುವ ಮುನ್ನವೇ ಮಾರ್ಟಿನ್ ಚಿತ್ರದ ಐದೂ ಭಾಷೆಗಳ ಆಡಿಯೋ ಹಕ್ಕು ಮಾರಾಟವಾಗಿದೆಯಂತೆ. ಲಹರಿ ಸಂಸ್ಥೆ ಎಲ್ಲ ಭಾಷೆಯ ಹಕ್ಕನ್ನು ಖರೀದಿ ಮಾಡಿದೆಯಂತೆ. ಮಾರ್ಟಿನ್ ಚಿತ್ರಕ್ಕೂ ಮೊದಲು ಅಂದರೆ ಪೊಗರು ಸಿನಿಮಾ ರಿಲೀಸ್ ಆದ ನಂತರ ನಂದ ಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅವರ ಮತ್ತೊಂದು ಹೊಸ ಸಿನಿಮಾ ಪ್ರಕಟಿಸಲಾಗಿತ್ತು. ಅದೇ ದುಬಾರಿ. ಆ ಸಿನಿಮಾಗೂ ಉದಯ್ ಮೆಹ್ತಾ ಅವರೇ ಹಣ ಹೂಡುವವರಿದ್ದರು. ಆದರೆ ಆ ಚಿತ್ರವನ್ನು ಮಧ್ಯದಲ್ಲೇ ಕೈ ಬಿಡಲಾಯಿತು.
Published by:Anitha E
First published: