• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Martin Teaser: ಮಾರ್ಟಿನ್ ಟೀಸರ್ ಬೆಂಕಿ ಎಂದ ಪ್ರಿನ್ಸ್ ಫ್ಯಾನ್ಸ್! ಥ್ರಿಲ್ಲಿಂಗ್ ಎಲಿಮೆಂಟ್ಸ್​ಗೆ ಸಿನಿಪ್ರಿಯರು ಫಿದಾ

Martin Teaser: ಮಾರ್ಟಿನ್ ಟೀಸರ್ ಬೆಂಕಿ ಎಂದ ಪ್ರಿನ್ಸ್ ಫ್ಯಾನ್ಸ್! ಥ್ರಿಲ್ಲಿಂಗ್ ಎಲಿಮೆಂಟ್ಸ್​ಗೆ ಸಿನಿಪ್ರಿಯರು ಫಿದಾ

ಮಾರ್ಟಿನ್ ಟೀಸರ್ ಹೇಗಿದೆ? ಇದರಲ್ಲಿ ಏನಿದೆ?

ಮಾರ್ಟಿನ್ ಟೀಸರ್ ಹೇಗಿದೆ? ಇದರಲ್ಲಿ ಏನಿದೆ?

ಮಾರ್ಟಿನ್ ಚಿತ್ರದ ಟೀಸರ್​ನ್ನ ಗಮನಿಸಿದ್ರೆ, ನಿಮಗೆ ಇಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್ ಜಾಸ್ತಿ ಇದೆ ಅನಿಸುತ್ತದೆ. ರೋಚಕತೆಯ ತುತ್ತ ತುದಿಗೆ ಕರೆದುಕೊಂಡು ಹೋಗುವ ಶಕ್ತಿ ಈ ಚಿತ್ರಕ್ಕಿದೆ ಅಂತ ಹೇಳಬಹುದು.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ (Martin Movie Teaser Released) ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್​ನಲ್ಲಿ ಚಿತ್ರದ ಫಸ್ಟ್ ಟೀಸರ್ ಪ್ರದರ್ಶನ ಆಗಿದೆ. ಇದನ್ನ ಅಭಿಮಾನಿಗಳು (Martin Film Teaser) ಸಿನಿಮಾ ರಿಲೀಸ್ ರೀತಿನೇ ಸ್ವಾಗತ ಮಾಡಿದ್ದಾರೆ. ಇದಕ್ಕೂ ಹೆಚ್ಚಾಗಿ (Dhruva Sarja Movie) ಸಿನಿಮಾದ ಟೀಸರ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಾರ್ಟಿನ್ ಅವತಾರ್ ನೋಡಿದ ಅಭಿಮಾನಿಗಳು "ಟೀಸರ್ ಬೆಂಕಿ" ಅಂತಲೇ ಉದ್ಘರಿಸಿದ್ದಾರೆ. ಅಭಿಮಾನಿಗಳ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರದಲ್ಲಿ ನಿಜಕ್ಕೂ ಅಬ್ಬರಿಸಿದ್ದಾರೆ. ವೀರ (Pan India Martin Movie) ಯೋಧನಂತೆ ಗರ್ಜಿಸಿದ್ದಾರೆ. ಆ್ಯಕ್ಷನ್ ಪ್ರಿಯರಿಗೆ ಈ ಚಿತ್ರ ಭರ್ಜರಿ ರಸದೌತಣವೇ ಆಗಲಿದೆ.


ಮಾರ್ಟಿನ್ ಟೀಸರ್ ಕಂಡು ಫುಲ್ ಖುಷ್ ಆದ ಫ್ಯಾನ್ಸ್


ಮಾರ್ಟಿನ್ ಚಿತ್ರದ ಟೀಸರ್​​ನಲ್ಲಿ ಅಭಿಮಾನಿಗಳಿಗೆ ಏನು ಬೇಕೋ ಅದು ಸಿಕ್ಕಿದೆ. ಇದನ್ನ ಕಂಡ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಆ್ಯಕ್ಷನ್ ಪ್ರಿಯರಿಗೆ ಈ ಚಿತ್ರ ಹಾಲಿವುಡ್​ ಫೀಲ್ ಕೊಡೋದಂತು ಗ್ಯಾರಂಟಿ ಅನ್ನುವ ಮಟ್ಟಿಗೆ ಡೈರೆಕ್ಟರ್ ಎ. ಪಿ. ಅರ್ಜುನ್ ಈ ಚಿತ್ರದ ಮಾಡಿದ್ದಾರೆ.


Action Prince Dhruva Sarja Martin Movie Teaser Released
ಮಾರ್ಟಿನ್ ರೋಚಕ ಟೀಸರ್ ರಿಲೀಸ್


ಮಾರ್ಟಿನ್ ಚಿತ್ರದ ಟೀಸರ್​ನ್ನ ಗಮನಿಸಿದ್ರೆ, ನಿಮಗೆ ಇಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್ ಜಾಸ್ತಿ ಇದೆ ಅನಿಸುತ್ತದೆ. ರೋಚಕತೆಯ ತುತ್ತ ತುದಿಗೆ ಕರೆದುಕೊಂಡು ಹೋಗುವ ಶಕ್ತಿ ಈ ಚಿತ್ರಕ್ಕಿದೆ ಅಂತಲೇ ಅಭಿಪ್ರಾಯ ಪಡಬಹುದು.




ಮಾರ್ಟಿನ್ ರೋಚಕ ಟೀಸರ್ ರಿಲೀಸ್
ಅಷ್ಟೊಂದು ರೋಚಕ ಕ್ಷಣದ ಈ ಚಿತ್ರದಲ್ಲಿ ಈಗ ಬಿಟ್ಟಿರೋ ಟೀಸರ್ ನಲ್ಲಿ ಕೇವಲ ಝಲಕ್ ಮಾತ್ರ ಇದೆ. ಇಡೀ ಚಿತ್ರದ ಕಥೆ ಬೇರೆನೆ ಇದೆ ಅನ್ನೋದು ಕೂಡ ಈಗ ಈ ಟೀಸರ್ ಮೂಲಕ ಜನರಿಗೆ ತಿಳಿದಿದೆ.


ಇಂಡಿಯಾ ಮತ್ತು ಪಾಕಿಸ್ತಾನ್ ವಿಷಯ ಕೂಡ ಈ ಚಿತ್ರದಲ್ಲಿದೆ ಅನ್ನೋದು ಈಗ ಟೀಸರ್​ ಮೂಲಕ ತಿಳಿದಿದೆ. ಪಾಕ್ ಧ್ವಜ ಇರೋ ಒಂದು ದೃಶ್ಯವೂ ಈ ಒಂದು ಟೀಸರ್​ನಲ್ಲಿ ಗೋಚರಿಸುತ್ತದೆ.


ಮಾರ್ಟಿನ್ ಟೀಸರ್ ಹೇಗಿದೆ? ಇದರಲ್ಲಿ ಏನಿದೆ?
ಇಂತಹ ಈ ಟೀಸರ್​ನಲ್ಲಿ ಆ್ಯಕ್ಷನ್ ಪ್ರಿನ್ಸ್ ಅಬ್ಬರಿಸಿದ್ದಾರೆ. ಭರ್ಜರಿ ಆ್ಯಕ್ಷನ್ ಮೂಲಕ ಸಖತ್ ಎಂಟ್ರಿ ಕೂಡ ಕೊಟ್ಟಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ಬಾಂಬ್ ಬ್ಲಾಸ್ಟಿಂಗ್ ಮತ್ತು ಫೈಟ್ ಹೇರಳವಾಗಿಯೆ ಇವೆ ಅನ್ನೋ ಸತ್ಯದ ಝಲಕ್ ಈಗ ಫ್ಯಾನ್ಸ್​ಗೆ ಸಿಕ್ಕಿದೆ.


ಫ್ಯಾನ್ಸ್ ಚಿತ್ರದ ಟೀಸರ್ ವೀಕ್ಷಿಸಿ ಬೆಂಕಿ ಅಂತಲೇ ಹೇಳುತ್ತಾರೆ. ಅವರ ಆಡು ಭಾಷೆಯ ಈ ಪದದ ಅರ್ಥ ಸಿಂಪಲ್ ಆಗದೆ. ನಮ್ಮ ಪ್ರಿನ್ಸ್ ಮಾರ್ಟಿನ್ ಟೀಸರ್ ಸೂಪರ್ ಅನ್ನೋದನ್ನ ಈ ರೀತಿ ಬೆಂಕಿ ಅಂತಲೇ ಹೇಳಿಕೊಂಡಿದ್ದಾರೆ.


Action Prince Dhruva Sarja Martin Movie Teaser Released
ಮಾರ್ಟಿನ್ ಟೀಸರ್ ಕಂಡು ಫುಲ್ ಖುಷ್ ಆದ ಫ್ಯಾನ್ಸ್


ಮಾರ್ಟಿನ್ ಚಿತ್ರದಲ್ಲಿ ಎ.ಪಿ.ಅರ್ಜುನ್ ಏನ್ ಹೇಳ್ತಿದ್ದಾರೆ?
ಮಾರ್ಟಿನ್ ಚಿತ್ರದಲ್ಲಿ ಸುಮಾರು ವಿಷಯಗಳಿವೆ. ಗಂಭೀರ ಸಬ್ಜಕ್ಟ್​​ನ ಮಾರ್ಟಿನ್​ನಲ್ಲಿ ಡೈರೆಕ್ಟರ್ ಎ. ಪಿ. ಅರ್ಜುನ್ ಹೊಸ ವಿಷಯವನ್ನೆ ಟಚ್ ಮಾಡಿದಂತೆ ಕಾಣುತ್ತಿದೆ.


ಬಾಲಿವುಡ್​ನಲ್ಲಿ ಬಂದ ಉರಿ ಚಿತ್ರದ ರೀತಿನೇ ಇಲ್ಲೂ ಏನಾದರೂ ಸರ್ಜಿಕಲ್ ಸ್ಟ್ರೈಕ್ ಏನಾದರೂ ಇದಿಯೇ? ಅನ್ನುವ ಅನುಮಾನವೂ ಇದೆ. ನಿರ್ಮಾಪಕ ಉದಯ್ ಮೆಹತಾ ಅವರ ಭಾರೀ ಬಂಡವಾಳದ ಮಾರ್ಟಿನ್ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀD ಆಗುತ್ತಿದೆ. ಸದ್ಯ ಟೀಸರ್ ಹೊಸ ಕಿಚ್ಚು ಹಚ್ಚಿದೆ ಅಂತಲೇ ಹೇಳಬಹುದು.


ಇದನ್ನೂ ಓದಿ: RSS Movie: ರಾಜಮೌಳಿ ತಂದೆ RSS ಚಿತ್ರ ಹೈಜಾಕ್ ಮಾಡ್ತಿದ್ದಾರಾ?


ಹಾಗೇನೆ ಮಾರ್ಟಿನ್ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇವೆ. ಆದರೆ ಡೈರೆಕ್ಟರ್ ಎ. ಪಿ. ಅರ್ಜುನ್ ಅವುಗಳನ್ನ ಇನ್ನೂ ಎಲ್ಲೂ ರಿವೀಲ್ ಮಾಡಿಲ್ಲ. ಇನ್ನುಳಿದಂತೆ ಚಿತ್ರದ ಹೊಸ ವಿಷಯಗಳು ಒಂದೊಂದಾಗಿ ಹಂತ ಹಂತವಾಗಿಯೇ ರಿವೀಲ್ ಆಗಲಿವೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು