ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫುಲ್ ಬ್ಯುಸಿ ಇದ್ದಾರೆ. KD ಚಿತ್ರಕ್ಕೆ ಸೂಕ್ತ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಚಿತ್ರೀಕರಣವೂ ಶುರು ಆಗಿದೆ. ಆದರೆ ಇದಕ್ಕೂ ಮೊದಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರವೂ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾನೇ ಆಗಿದೆ. ಚಿತ್ರದಲ್ಲಿ ಬರುವ ಆ್ಯಕ್ಷನ್ ಭರ್ಜರಿಯಾಗಿ ಚಿತ್ರೀಕರಣ ಆಗಿವೆ. ಹಾಗೆ ಈ ಚಿತ್ರದ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅದ್ಭುತವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ನಿರೀಕ್ಷೆ ಕೂಡ ಜಾಸ್ತಿ ಆಗುತ್ತಿದೆ. ಧ್ರುವ ಸರ್ಜಾ ಫ್ಯಾನ್ಸ್ ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಚಿತ್ರದ ಹೊಸ ಅಪ್ಡೇಟ್ಸ್ ಹೊರ ಬಿದ್ದಿದೆ. ಅದರ ವಿವರ ಇಲ್ಲಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ ಮ್ಯಾಟರ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ಗಳು ಇವೆ. ಕನ್ನಡದ ನಿರೀಕ್ಷಿತ ಸಿನಿಮಾಗಳಲ್ಲಿ ಮಾರ್ಟಿನ್ ಚಿತ್ರದ ಹೆಸರು ಕೂಡ ಇದೆ. ಧ್ರುವ ಸರ್ಜಾ ಈ ಚಿತ್ರದಲ್ಲಿ ಭಾರೀ ಆ್ಯಕ್ಷನ್ಗಳನ್ನ ಮಾಡಿದ್ದಾರೆ. ಇದಕ್ಕಾಗಿಯೇ ಭಾರೀ ತಯಾರಿ ಮಾಡಿಕೊಂಡು ಅದ್ಭುತ ದೃಶ್ಯಗಳನ್ನು ತೆಗೆಯಲು ನೆರವಾಗಿದ್ದಾರೆ.
ಮಾರ್ಟಿನ್ ಚಿತ್ರದಲ್ಲಿ ಭರ್ಜರಿ ಕ್ಲೈಮ್ಯಾಕ್ಸ್ ಸೀನ್
ಡೈರೆಕ್ಟರ್ ಎ.ಪಿ.ಅರ್ಜುನ್ ನಿರ್ದೆಶನದ ಮಾರ್ಟಿನ್ ಚಿತ್ರದಲ್ಲಿ ವಿಶೇಷ ಕ್ಲೈಮ್ಯಾಕ್ಸ್ ಇದೆ. ಈ ಚಿತ್ರದಲ್ಲಿ ಇರೋ ಹೈಲೈಟ್ಸ್ಗಳಲ್ಲಿ ಇದು ಕೂಡ ಟಾಪ್ಅಲ್ಲಿಯೇ ಇದೆ. ಆ್ಯಕ್ಷನ್ ಪ್ರೇಮಿಗಳಿಗೆ ಮಾರ್ಟಿನ್ ಒಂದು ದ್ಭುತ ಆ್ಯಕ್ಷನ್ ಚಿತ್ರ ಆಗಿ ಹೊರ ಹೊಮ್ಮಲಿದೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನ ಬರೋಬ್ಬರಿ 40 ದಿನ ಚಿತ್ರೀಕರಣ ಮಾಡಿದ್ದಾರೆ.
ಮಾರ್ಟಿನ್ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಇಬ್ಬರು ಮಾಸ್ಟರ್ಸ್
ಮಾರ್ಟಿನ್ ಚಿತ್ರದ ವಿಶೇಷವೇ ಇದಾಗಿದೆ. ಕನ್ನಡದಲ್ಲಿ ಒಂದು ದೃಶ್ಯವನ್ನ ಒಬ್ಬ ಫೈಟ್ ಮಾಸ್ಟರ್ ಡೈರೆಕ್ಟ್ ಮಾಡೋ ವಾಡಿಕೆ ಇದೆ. ಮಾರ್ಟಿನ್ ಚಿತ್ರದ ವಿಷಯದಲ್ಲಿ ಅದು ಸುಳ್ಳಾಗಿದೆ.
ಸಾಹಸ ನಿರ್ದೇಶಕ ರವಿ ವರ್ಮ ಮತ್ತು ಟಾಲಿವುಡ್ನ ರಾಮ್-ಲಕ್ಷ್ಮಣ ಈ ಒಂದು ದೃಶ್ಯಕ್ಕೆ ಕೆಲಸ ಮಾಡಿದ್ದಾರೆ. ಮಾಸ್ಟರ್ ರವಿ ವರ್ಮ್ ಚಿತ್ರದ ಚೇಜಿಂಗ್ ದೃಶ್ಯವನ್ನ ತೆಗೆದುಕೊಟ್ಟಿದ್ದಾರೆ. ರಾಮ್-ಲಕ್ಷ್ಮಣ ಸಿನಿಮಾದ ಇದೇ ದೃಶ್ಯದ ಬೇರೆ ಸೀನ್ಗಳನ್ನ ಶೂಟ್ ಮಾಡಿಕೊಟ್ಟಿದ್ದಾರೆ.
ಮಾರ್ಟಿನ್ ಚಿತ್ರದ ಬಿಗ್ ಅಪ್ಡೇಟ್ಸ್ ಏನು ಗೊತ್ತೇ?
ಡೈರೆಕ್ಟರ್ ಎ.ಪಿ.ಅರ್ಜುನ್ ತಮ್ಮ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಚಿತ್ರದ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದಾರೆ.
ಆದರೆ ಚಿತ್ರದ ಯಾವುದೇ ದೃಶ್ಯಗಳನ್ನ ಇಲ್ಲಿವರೆಗೂ ಬಿಟ್ಟುಕೊಟ್ಟಿಲ್ಲ. ಅದನ್ನ ಸರಿಯಾದ ಟೈಮ್ಗೆ ರಿಲೀಸ್ ಮಾಡಬೇಕು ಅಂತಲೇ ಯೋಚನೆ ಮಾಡಿದ್ದಾರೆ. ಆ ಟೈಮ್ ಈಗ ಬಂದಿದೆ. ಅದಕ್ಕೆ ಒಂದು ದಿನ ಕೂಡ ಫಿಕ್ಸ್ ಆಗಿದೆ.
ಫೆಬ್ರವರಿ ತಿಂಗಳಲ್ಲಿ ಮಾರ್ಟಿನ್ ಟೀಸರ್ ರಿಲೀಸ್
ಜೋಗಿ ಪ್ರೇಮ್ ನಿರ್ದೇಶನದ KD ಸಿನಿಮಾ ಈಗಷ್ಟೇ ಶುರು ಆಗಿದೆ. ಇದರ ಅಪ್ಡೇಟ್ಸ್ ಈಗಲೇ ಹೆಚ್ಚು ನಿರೀಕ್ಷೆ ಮಾಡೋಕೆ ಆಗೋದಿಲ್ಲ. ಆದರೆ ಮಾರ್ಟಿನ್ ಚಿತ್ರದ ಬಹುತೇಕ ಕೆಲಸ ಪೂರ್ಣ ಆಗಿದೆ.
ಹಾಗಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಮಾರ್ಟಿನ್ ಚಿತ್ರದ ಅಪ್ಡೇಟ್ಸ್ ಮೇಲೆ ಈಗ ಕಣ್ಣು ನೆಟ್ಟಿದ್ದಾರೆ. ಚಿತ್ರದ ಒಂದೇ ಒಂದು ಪೋಸ್ಟರ್ ರಿಲೀಸ್ ಆದ್ರೆ ಸಾಕು. ಅದನ್ನೂ ದೊಡ್ಡ ಹಬ್ಬ ಮಾಡುತ್ತಾರೆ. ಅಂತಹ ನಿರೀಕ್ಷಿತ ಈ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.
ಫೆಬ್ರವರಿ 2ನೇ ವಾರ ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್
ಮಾರ್ಟಿನ್ ಚಿತ್ರದ ಟೀಸರ್ ರೆಡಿ ಆಗುತ್ತಿದೆ. ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಒಂದಷ್ಟು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಎರಡನೇ ವಾರ ಚಿತ್ರದ ಟೀಸರ್ ರಿಲೀಸ್ ಆಗುತ್ತದೆ.
ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಪ್ಲಾನಿಂಗ್ ನಡೆಯುತ್ತಿದೆ. ಫೆಬ್ರವರಿ 2ನೇ ವಾರ ಟೀಸರ್ ರಿಲೀಸ್ ಮಾಡೋ ಯೋಚನೆ ಕೂಡ ಮಾಡಲಾಗುತ್ತಿದೆ. ಆದರೆ ಫೆಬ್ರವರಿ 2ನೇ ವಾರದ ಯಾವ ಡೇಟ್ನಲ್ಲಿ ಟೀಸರ್ ರಿಲೀಸ್ ಆಗುತ್ತದೆ ಅನ್ನೋದು ಇನ್ನಷ್ಟೆ ಹೊರಬೀಳಬೇಕಿದೆ.
ಇದನ್ನೂ ಓದಿ: Love Birds Cinema: 'ಲವ್ ಮಾಕ್ಟೇಲ್' ಜೋಡಿಯ 'ಲವ್ ಬರ್ಡ್ಸ್' ಟೀಸರ್; ಡಾರ್ಲಿಂಗ್ ಕೃಷ್ಣ, ಮಿಲನಾ ಪಾತ್ರ ಹೇಗಿದೆ?
ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಚಿತ್ರದ ಟೀಸರ್ ಹೇಗಿರುತ್ತದೆ?
ಮಾರ್ಟಿನ್ ಚಿತ್ರದ ಟೀಸರ್ ಹೇಗಿರುತ್ತದೆ ಅನ್ನೋ ಕುತೂಹಲ ಇದೆ. ಪೋಸ್ಟರ್ ನಲ್ಲಿಯೇ ಮಾರ್ಟಿನ್ ರೂಪ ನೋಡಿರೋ ಸಿನಿಪ್ರೇಮಿಗಳು, ಟೀಸರ್ನಲ್ಲಿ ವಿಶೇಷವನ್ನ ನಿರೀಕ್ಷೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಟಿನ್ ಚಿತ್ರದ ಟೀಸರ್ ಹೇಗಿರುತ್ತದೆ ಅನ್ನುವ ಕುತೂಹಲ ಜಾಸ್ತಿ ಆಗಿದೆ. ಇನ್ನುಳಿದಂತೆ ಸದ್ಯಕ್ಕೆ ಈ ಚಿತ್ರದ ಅಪ್ಡೇಟ್ಸ್ ಇಷ್ಟೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ