Dhruva Sarja Movie: ಮಾರ್ಟಿನ್‌ ಚಿತ್ರದ ಬಗ್ಗೆ ಹೊರ ಬಿತ್ತು ಹೊಸ ಅಪ್‌ಡೇಟ್ಸ್‌

ಭರ್ಜರಿ ಆ್ಯಕ್ಷನ್‌ಗಳ ಮಾರ್ಟಿನ್ ಸಿನಿಮಾ ಹೊಸ ಅಪ್‌ಡೇಟ್ಸ್ ಏನು ?

ಭರ್ಜರಿ ಆ್ಯಕ್ಷನ್‌ಗಳ ಮಾರ್ಟಿನ್ ಸಿನಿಮಾ ಹೊಸ ಅಪ್‌ಡೇಟ್ಸ್ ಏನು ?

ಮಾರ್ಟಿನ್ ಸಿನಿಮಾದಲ್ಲಿ ಇರೋ ಆ್ಯಕ್ಷನ್ ದೃಶ್ಯಗಳು ಮೈಂಡ್ ಬ್ಲೋಯಿಂಗ್ ಆಗಿ ಬಂದಿವೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Martin Movie Latest Updates) ಅಭಿನಯದ ಮಾರ್ಟಿನ್ ಸಿನಿಮಾದ ಹೊಸ ಅಪ್‌ಡೇಟ್ಸ್ ಹೊರ ಬಿದ್ದಿದೆ. ಸಿನಿಮಾ ಬಹುತೇಕ ಕೆಲಸ ಮುಗಿಸಿರೋ ಡೈರೆಕ್ಟರ್ ಎ.ಪಿ.ಅರ್ಜುನ್, ಈಗ VFX ಕೆಲಸದಲ್ಲಿ ಬ್ಯುಸಿ ಇದ್ದಾರೆ. ನುರಿತ ತಜ್ಞರ ತಂಡ ಕನ್ನಡ ಈ (Action Prince Dhruva Sarja) ಮಾರ್ಟಿನ್ ಚಿತ್ರಕ್ಕೆ ವಿಶೇಷ ಟಚ್ ಕೊಡುತ್ತಿದ್ದಾರೆ. ಈ ಮೂಲಕ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹ ಮೂಡಿದೆ. ಸಿನಿಮಾದಲ್ಲಿ ಭರ್ಜರಿ ರಿಯಲ್ ಸಾಹಸಗಳೇ ಇವೆ. ಇವುಗಳಿಗೆ ಹೊಸ ರೀತಿಯ ಟಚ್ ಕೊಡುವ ಕೆಲಸ (Movie Latest Updates) ಈಗ ನಡೆಯುತ್ತಿದೆ. ಇದನ್ನ ಬೆಳ್ಳಿ ತೆರೆ (Martin Movie Latest News) ಮೇಲೆ ನೋಡಿದ್ರೆ ಸಿಗೋ ಮಜಾನೇ ಬೇರೆ ಇದೆ.


ಮಾರ್ಟಿನ್ ಸಿನಿಮಾದಲ್ಲಿ ಹೊಸ ರೀತಿಯ ಆ್ಯಕ್ಷನ್ ಸೀನ್‌ಗಳಿವೆ. ಇವುಗಳನ್ನ ಅಷ್ಟೇ ಎಫೆಕ್ಟಿವ್ ಆಗಿಯೇ ತೋರಿಸೋ ಕೆಲಸವು ಈಗಾಗಲೇ ಶುರು ಆಗಿದೆ. ಸಿನಿಮಾದಲ್ಲಿ ಬರುವ ಪ್ರಮುಖ ಆ್ಯಕ್ಷನ್ ದೃಶ್ಯಗಳಿಗೆ ಹೈ ಕ್ವಾಲಿಟಿ VFX ಕೆಲಸ ನಡೆಯುತ್ತಿದೆ.


Action Prince Dhruva Sarja Martin Movie Latest Updates
ಮಾರ್ಟಿನ್ ಡೈರೆಕ್ಟರ್ ಎ.ಪಿ.ಅರ್ಜುನ್ ಏನ್ ಮಾಡ್ತಿದ್ದಾರೆ ?


ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಚಿತ್ರಕ್ಕೆ VFX ಕೆಲಸ ಶುರು


ಸಿನಿಮಾದಲ್ಲಿ ಬೈಕ್ ಚೇಜಿಂಗ್ ಕೂಡ ಇದೆ. ಇದರ ರೋಮಾಂಚಕ ದೃಶ್ಯಗಳಿಗೆ ಇದೀಗ VFX ಸ್ಪರ್ಶ ನೀಡಲಾಗುತ್ತಿದೆ. VFX ಇದ್ದಲ್ಲಿ ಯಾವುದೇ ಸಾಮಾನ್ಯ ದೃಶ್ಯಗಳೂ ಅದ್ಭುತವಾಗಿಯೇ ಕಾಣಿಸುತ್ತವೆ.




ಮಾರ್ಟಿನ್ ಸಿನಿಮಾದಲ್ಲಿ ಇರೋ ಆ್ಯಕ್ಷನ್ ದೃಶ್ಯಗಳು ಮೈಂಡ್ ಬ್ಲೋಯಿಂಗ್ ಆಗಿಯೇ ಬಂದಿವೆ. ಬೈಕ್ ಚೇಂಜ್‌ ಅಂತೂ ಹುಚ್ಚು ಹಿಡಿಸುತ್ತದೆ. ಅದಕ್ಕೆ VFX ಟಚ್ ಬಂದ್ಮೇಲೆ ಇನ್ನೂ ರೋಮಾಂಚನ ಹೆಚ್ಚಾಗುತ್ತದೆ ಅಂತಲೇ ಹೇಳಬಹುದು.




ಮಾರ್ಟಿನ್ ಚಿತ್ರದ ಡೈರೆಕ್ಟರ್ ಎ.ಪಿ.ಅರ್ಜುನ್ ತಮ್ಮ ಈ ಚಿತ್ರದಲ್ಲಿ ತುಂಬಾ ಒಳ್ಳೆ ದೃಶ್ಯಗಳನ್ನೆ ಪ್ಲಾನ್ ಮಾಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಂದ್ಮೇಲೆ ಭರ್ಜರಿ ಆ್ಯಕ್ಷನ್ ದೃಶ್ಯಗಳು ಬೇಕೇ ಬೇಕು. ಅದರ ಕೊರತೆ ಈ ಸಿನಿಮಾದಲ್ಲಿ ಇಲ್ವೇ ಇಲ್ಲ ನೋಡಿ.


ಭರ್ಜರಿ ಆ್ಯಕ್ಷನ್‌ಗಳ ಮಾರ್ಟಿನ್ ಸಿನಿಮಾ ಹೊಸ ಅಪ್‌ಡೇಟ್ಸ್ ಏನು ?


ಡಾಕ್ಟರ್ ರವಿ ವರ್ಮಾ, ರಾಮ್-ಲಕ್ಷ್ಮಣ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಾಹಸ ನಿರ್ದೇಶನದ ಮಾಡಿದ್ದಾರೆ. ಇದರ ಝಲಕ್ ಈಗಾಗಲೇ ಚಿತ್ರದ ಟೀಸರ್‌ನಲ್ಲಿ ಸಿಕ್ಕಿದೆ.


Action Prince Dhruva Sarja Martin Movie Latest Updates
ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಚಿತ್ರಕ್ಕೆ VFX ಕೆಲಸ ಶುರು


ಮಾರ್ಟಿನ್ ಚಿತ್ರದ ಟೀಸರ್ ನಿಜಕ್ಕೂ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದೆ. ದೇಶ-ವಿದೇಶದಲ್ಲೂ ಮಾರ್ಟಿನ್ ಸಿನಿಮಾದ ಟೀಸರ್ ಚರ್ಚೆ ಆಗಿದೆ. ಮಿಲಿಯನ್ ಗಟ್ಟಲೆ ಈ ಒಂದು ಟೀಸರ್‌ಗೆ ವೀವ್ಸ್ ಬಂದಿವೆ.


ಮಾರ್ಟಿನ್ ಡೈರೆಕ್ಟರ್ ಎ.ಪಿ.ಅರ್ಜುನ್ ಏನ್ ಮಾಡ್ತಿದ್ದಾರೆ ?


ಲೈಕ್ಸ್ ಮತ್ತು ಕಾಮೆಂಟ್‌ಗಳೂ ಲಕ್ಷದ ಲೆಕ್ಕ ದಾಟಿ ಹೋಗಿವೆ. ಆದರೆ ಅದ್ಯಾರೋ ಪುಣ್ಯಾತ್ಮರು ಯುಟ್ಯೂಬ್ ಚಾನೆಲ್‌ನ ಅನ್ನೆ ಹ್ಯಾಕ್ ಮಾಡಿದ್ದರು. ಇದರಿಂದ ಟೀಸರ್‌ನ ಕಾಮೆಂಟ್ಸ್ ಮತ್ತು ವೀವ್ಸ್‌ ಡಿಲೀಟ್ ಆಗಿದ್ದವು.


ಈ ಒಂದು ಬೆಳವಣಿಗೆಯಿಂದ ಸಿನಿಮಾ ತಂಡ ಬೇಸರಗೊಂಡಿತ್ತು. ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ತುಂಬಾನೇ ಬೇಜಾರು ಮಾಡಿಕೊಂಡಿದ್ದರು.


ಇದನ್ನೂ ಓದಿ: Rajendra Singh Babu: ರೆಬಲ್ ಸ್ಟಾರ್ ಅಂತ ಸಿನಿಮಾ ರೀ-ರಿಲೀಸ್; ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?


ಆದರೂ ಎಲ್ಲವನ್ನ ಪಕ್ಕಕ್ಕೆ ಇಟ್ಟು, ಇದೀಗ ಮಾರ್ಟಿನ್ ಸಿನಿಮಾದ VFX ಕೆಲಸದಲ್ಲಿಯೇ ಡೈರೆಕ್ಟರ್ ಎ.ಪಿ.ಅರ್ಜುನ್ ಬ್ಯುಸಿ ಅಗಿದ್ದಾರೆ.


ಪ್ಯಾನ್ ಇಂಡಿಯಾ ಮಾರ್ಟಿನ್ ಚಿತ್ರದ ನಿರೀಕ್ಷೆ 


ಮಾರ್ಟಿನ್ ಸಿನಿಮಾ ಟೀಸರ್ ನೋಡಿದ ಫ್ಯಾನ್ಸ್ ತುಂಬಾನೇ ಖುಷಿಪಟ್ಟಿದ್ದಾರೆ. ಚಿತ್ರದ ರಿಲೀಸ್ ಅನ್ನು ಕೂಡ ಈಗ ಎದುರು ನೋಡುತ್ತಿದ್ದಾರೆ.


ಇನ್ನು ಮಾರ್ಟಿನ್ ಸಿನಿಮಾದಲ್ಲಿ ನಾಯಕ ಧ್ರುವ ಸರ್ಜಾ ಸೋಲ್ಜರಾ ? ಇಲ್ಲವೇ ಸ್ಪೈ ಆಗಿದ್ದಾರಾ ? ಈ ಎಲ್ಲ ಪ್ರಶ್ನೆಗಳು ಈಗಲೇ ಹುಟ್ಟಿಕೊಂಡಿವೆ.

top videos


    ಆದರೆ ಈ ಕುರಿತು ಸಿನಿಮಾದ ಡೈರೆಕ್ಟರ್ ಎ.ಪಿ.ಅರ್ಜುನ್ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೂ ಅಭಿಮಾನಿಗಳಲ್ಲಿ ಸಾಮಾನ್ಯ ಸಿನಿಪ್ರೇಮಿಗಳಲ್ಲಿ ಧ್ರುವ ಸರ್ಜಾ ಪಾತ್ರದ ಕುರಿತು ಭಾರೀ ಕುತೂಹಲ ಮೂಡಿದೆ.

    First published: