• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Martin Movie: ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಬಿಗ್ ಅಪ್ಡೇಟ್! ಟೀಸರ್ ರಿಲೀಸ್ ಡೇಟ್ ಫಿಕ್ಸ್

Martin Movie: ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಬಿಗ್ ಅಪ್ಡೇಟ್! ಟೀಸರ್ ರಿಲೀಸ್ ಡೇಟ್ ಫಿಕ್ಸ್

ಮಾರ್ಟಿನ್ ಚಿತ್ರದ ಹೊಸ ಮ್ಯಾಟರ್ ಏನು ಗೊತ್ತೇ?

ಮಾರ್ಟಿನ್ ಚಿತ್ರದ ಹೊಸ ಮ್ಯಾಟರ್ ಏನು ಗೊತ್ತೇ?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಟೀಸರ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ-23 ರಂದು ಟೀಸರ್ ರಿಲೀಸ್ ಆಗುತ್ತಿದೆ. ಇದರ ಬಗ್ಗೆ ಸಿನಿಮಾ ಟೀಮ್ ಅಧಿಕೃತ ಮಾಹಿತಿ ರಿವೀಲ್ ಮಾಡಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿನಯದ ಮಾರ್ಟಿನ್ ಕನ್ನಡದ ಬಹು (Kannada Martin Movie) ನಿರೀಕ್ಷಿತ ಚಿತ್ರ ಆಗಿದೆ. ಈ ಸಿನಿಮಾದ ಶೂಟಿಂಗ್ ಸಂಪೂರ್ಣ ಆಗಿದೆ. ಚಿತ್ರೀಕರಣದ ನಂತರದ ಕೆಲಸದಲ್ಲಿ ಡೈರೆಕ್ಟರ್ ಎ.ಪಿ.ಅರ್ಜುನ್ (A P Arjun Direction Movie) ಬ್ಯುಸಿ ಆಗಿದ್ದಾರೆ. ಧ್ರುವ ಸರ್ಜಾ ಫ್ಯಾನ್ಸ್ ಕೂಡ ಈ ಒಂದು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾ ಪ್ರೇಮಿಗಳಲ್ಲೂ ಮಾರ್ಟಿನ್ ಒಂದು ಸಣ್ಣ ಕುತೂಹಲ ಮೂಡಿಸಿದೆ. ಸಿನಿಮಾದ (Martin Teaser Release Soon)ಇತರ ಮಾಹಿತಿ ಅಂತ ಬಂದ್ರೆ, ಇಲ್ಲಿವರೆಗೂ ವಿವಿಧ ಸುದ್ದಿಗಳು ಹೊರ ಬಿದ್ದಿವೆ. ಪೋಸ್ಟರ್​​ಗಳು ರಿಲೀಸ್ ಆಗಿ ಚಿತ್ರದ ಬಗೆಗಿನ ಭರವಸೆ ಹೆಚ್ಚಿಸಿವೆ. ಆದರೆ ಈ ಸಿನಿಮಾ ಬಿಗ್ ಅಪ್​​ಡೇಟ್ಸ್ ಒಂದು ಈಗ ಹೊರ ಬಿದ್ದಿದೆ.


ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಅಪ್​ಡೇಟ್ಸ್ ರಿವೀಲ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇವೆ. ಇದನ್ನೇ ಸಿನಿಮಾ ತಂಡ ಈಗಾಗಲೇ ಹೇಳಿಕೊಂಡಿದೆ. ಬಿಗ್ಗೆಸ್ಟ್ ಆ್ಯಕ್ಷನ್ ಸಿನಿಮಾ ಅನ್ನೋದನ್ನ ಕೂಡ ಹೆಚ್ಚು ಬಿಂಬಿಸಿದೆ.


Action Prince Dhruva Sarja Martin Movie Big Updates out
ಮಾರ್ಟಿನ್ ಸ್ಪೆಷಲ್ ಪ್ರೆಸ್ ಮೀಟ್ ಆಯೋಜನೆ


ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್​ನ್ನ ಇಬ್ಬರು ಸಾಹಸ ನಿರ್ದೇಶಕರು ಡೈರೆಕ್ಟ್ ಮಾಡಿದ್ದಾರೆ. ಕನ್ನಡದ ಸಾಹಸ ನಿರ್ದೇಶಕ ರವಿ ವರ್ಮ ಮತ್ತು ಟಾಲಿವುಡ್​ನ ರಾಮ-ಲಕ್ಷ್ಮಣ ಈ ಒಂದು ಕ್ಲೈಮ್ಯಾಕ್ಸ್ ಸೀನ್​ನ್ನ ತೆಗೆದುಕೊಟ್ಟಿದ್ದಾರೆ.




ಕನ್ನಡದ ಮಾರ್ಟಿನ್ ಚಿತ್ರದ ಹೊಸ ಮ್ಯಾಟರ್ ಏನು ಗೊತ್ತೇ?
ಬಹು ನಿರೀಕ್ಷೆಯ ಮಾರ್ಟಿನ್ ಚಿತ್ರ ಬಹು ಕೋಟಿಯಲ್ಲಿ ರೆಡಿ ಆಗುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿಯೇ ತೆರೆಗೂ ಬರ್ತಿದೆ. ಕನ್ನಡದ ಪ್ಯಾನ್​ ಇಂಡಿಯಾ ಸಾಲಿಗೆ ಈ ಚಿತ್ರವೂ ಈಗಾಗಲೇ ಸೇರಿದೆ.


ಮಾರ್ಟಿನ್ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೋಲ್ಜರ್ ಪಾತ್ರವನ್ನ ಮಾಡಿದ್ದಾರೆ. ಕನ್ನಡದ ಈ ಯೋಧನ ಕಥೆಗೆ ಹಾಲಿವುಡ್ ಟೆಕ್ನಿಕಲ್ ಸ್ಪರ್ಶ ಇರೋದು ವಿಶೇಷ.


ಫೆಬ್ರವರಿ-23 ರಂದು ಮಾರ್ಟಿನ್ ಚಿತ್ರದ ಟೀಸರ್​ ರಿಲೀಸ್
ಧ್ರುವ ಸರ್ಜಾ ನಿರ್ವಹಿಸಿದ ಪಾತ್ರದ ಪೋಸ್ಟರ್​ಗಳನ್ನ ಗಮನಿಸಿದ್ರೆ, ಹಾಲಿವುಡ್​ ಆ್ಯಕ್ಷನ್ ಸಿನಿಮಾ ನೋಡಿದ ಅನುಭವ ಆಗುತ್ತಿದೆ. ಮಾರ್ಟಿನ್ ಚಿತ್ರದ ಈ ಹಿಂದಿನ ಪೋಸ್ಟರ್​ಗಳಲ್ಲೂ ಇದನ್ನ ಗಮನಿಸಬಹುದು.


ಫೆಬ್ರವರಿ-15 ರಂದು ರಿಲೀಸ್ ಆದ ಒಂದು ವಿಶೇಷ ಫೋಟೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಪಕ್ಕಾ ವಾರ್​ ಫೀಲ್ಡ್​​ನ ಚಿತ್ರಣವೇ ಈ ಒಂದು ಪೋಸ್ಟರ್​​ ನಲ್ಲಿ ಕಾಣಿಸುತ್ತದೆ.


ಟೀಸರ್​ ರಿಲೀಸ್​ ವಿಷಯ ತಿಳಿಸಲು ವಿಶೇಷ ಪೋಸ್ಟರ್ ರಿಲೀಸ್
ಚಿತ್ರದ ಇತರ ಪೋಸ್ಟ್​​ಗಿಂತಲೂ ಇದು ಇನ್ನೂ ಬೇರೆ ಫೀಲ್ ಕೊಡುತ್ತಿದೆ. ಇದಕ್ಕೂ ಹೆಚ್ಚಾಗಿ ಚಿತ್ರದ ಟೀಸರ್​ ರಿಲೀಸ್ ಡೇಟ್ ಕೂಡ ಇದೇ ಫೋಟೋದಲ್ಲಿಯೇ ರಿವೀಲ್ ಆಗಿದೆ.
ಫೆಬ್ರವರಿ-23 ರಂದು ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಅಧಿಕೃತವಾಗಿಯೇ ಸಿನಿಮಾ ತಂಡ ಈ ಒಂದು ವಿಶೇಷವನ್ನ ಕೂಡ ಹೇಳಿಕೊಂಡಿದೆ.


Action Prince Dhruva Sarja Martin Movie Big Updates out
ಟೀಸರ್​ ರಿಲೀಸ್​ ವಿಷಯ ತಿಳಿಸಲು ವಿಶೇಷ ಪೋಸ್ಟರ್ ರಿಲೀಸ್


ಮಾರ್ಟಿನ್ ಸ್ಪೆಷಲ್ ಪ್ರೆಸ್ ಮೀಟ್ ಆಯೋಜನೆ
ಫೆಬ್ರವರಿ-15 ರ ಸಂಜೆ ಬೆಂಗಳೂರಿನಲ್ಲಿ ವಿಶೇಷ ಪ್ರೆಸ್ ಮೀಟ್ ಕೂಡ ಪ್ಲಾನ್ ಆಗಿದೆ. ಸಿನಿಮಾ ಶೂಟಿಂಗ್​ ಬಳಿಕ ಇದೇ ಮೊದಲ ಬಾರಿಗೆ ಮಾರ್ಟಿನ್ ಚಿತ್ರ ತಂಡ ಪ್ರೆಸ್ ಮೀಟ್ ಮಾಡುತ್ತಿದೆ.


ಇದನ್ನೂ ಓದಿ: Rajinikanth Movie: ಗಿರಿಕನ್ಯೆ ಸಿನಿಮಾದಲ್ಲಿ ರಾಜ್​ ಕುಮಾರ್ ಜೊತೆ ನಟಿಸೋಕೆ ನೋ ಎಂದ ರಜನಿ! ಕಾರಣ ಏನ್ ಗೊತ್ತಾ?


ಸಿನಿಮಾದ ಇತರ ವಿಷಯಗಳನ್ನ ಹೇಳಲಿಕ್ಕೇನೆ ಪ್ರೆಸ್​ ಮೀಟ್ ಕರೆಯಲಾಗಿದೆ. ಇದೇ ಪ್ರೆಸ್​ ಮೀಟ್​ಲ್ಲಿಯೇ ಚಿತ್ರದ ಇತರ ಮಾಹಿತಿಯನ್ನ ಸಿನಿಮಾ ತಂಡ ಕೊಡಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು