`ಮಾರ್ಟಿನ್​’ ಚಿತ್ರಕ್ಕಾಗಿ ಧ್ರುವ ಸರ್ಜಾ ಮಸ್ತ್​​ ವರ್ಕೌಟ್​: ಆ್ಯಕ್ಷನ್​ ಪ್ರಿನ್ಸ್​ ಜೊತೆ ವೈಭವಿ ಶಾಂಡಿಲ್ಯ ರೊಮ್ಯಾನ್ಸ್​!!

‘ಮಾರ್ಟಿನ್​’ ಸಿನಿಮಾದಲ್ಲಿ ಧ್ರುವ ಸರ್ಜಾ ಯೋಧ(Soldier)ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಪಾತ್ರಕ್ಕಾಗಿ ಅವರು ಜಿಮ್​(Gym)ನಲ್ಲಿ ಸಖತ್​ ವರ್ಕೌಟ್​(Workout) ಮಾಡುತ್ತಿದ್ದಾರೆ.

ನಟ ಧ್ರುವ ಸರ್ಜಾ

ನಟ ಧ್ರುವ ಸರ್ಜಾ

  • Share this:
ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಪ್ರಿನ್ಸ್​(Action Prince) ಧ್ರುವ ಸರ್ಜಾ(Dhruva Sarja) ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರು ಗಳಿಸದವರು. ಅವರು ಮಾಡಿರುವ ಬೆರಳಿಕೆಯ ಚಿತ್ರಗಳೇ ಸೂಪರ್-ಡೂಪರ್(Super -Duper)​ ಹಿಟ್​ ಆಗಿವೆ. ಕೋಟ್ಯಾಂತರ ಅಭಿಮಾನಿಗಳನ್ನು ಕೇವಲ ನಾಲ್ಕು ಸಿನಿಮಾಗಳಿಂದ ಧ್ರುವ ಸರ್ಜಾ ಸಂಪಾದಿಸಿದ್ದಾರೆ. ‘ಅದ್ಧೂರಿ’ಯಾಗಿ ತೆರೆ ಮೇಲೆ ಎಂಟ್ರಿಯಾಗಿದ್ದ ಧ್ರುವ ಸರ್ಜಾ ‘ಬಹದ್ದೂರ್’​ ಆಗಿ ‘ಭರ್ಜರಿ’ಯಾಗಿ ಸೌಂಡ್(Sound)​ ಮಾಡಿದ್ದರು. ಇದಾದ ಬಳಿಕ ತಮ್ಮ ‘ಪೊಗರು’ ತೋರಿಸಿದ್ದರು. ಈ ನಾಲ್ಕು ಸಿನಿಮಾಗಳು ಧ್ರುವ ಸರ್ಜಾಗೆ ಊಹೆಗೆ ಮೀರಿ ಯಶಸ್ಸು ತಂದುಕೊಡ್ತು. ಇದೀಗ ಧ್ರುವ ಸರ್ಜಾ ತಮ್ಮ ಮುಂದಿನ ಸಿನಿಮಾ ‘ಮಾರ್ಟಿನ್​’(Martin) ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲಿರಿಗೂ ಗೊತ್ತೆ ಇದೆ. ‘ಮಾರ್ಟಿನ್​’ ಸಿನಿಮಾದಲ್ಲಿ ಧ್ರುವ ಸರ್ಜಾ ಯೋಧ(Soldier)ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಪಾತ್ರಕ್ಕಾಗಿ ಅವರು ಜಿಮ್​(Gym)ನಲ್ಲಿ ಸಖತ್​ ವರ್ಕೌಟ್​(Workout) ಮಾಡುತ್ತಿದ್ದಾರೆ. ಈಗಾಗಲೇ ಹುರಿಗಟ್ಟಿದ ದೈತ್ಯ ದೇಹ ಹೊಂದಿರುವ ಧ್ರುವ ಸರ್ಜಾ ಇದೀಗ ಆ ದೇಹಕ್ಕೆ ಇನ್ನಷ್ಟು ಸಾಣೆ ಹಿಡಿಯಲು ಜಿಮ್ಮು ಹೊಕ್ಕಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಧ್ರುವ ಸರ್ಜಾ ಇನ್‌ಸ್ಟಾಗ್ರಾಂ(Instagram)ನಲ್ಲಿ ಹಂಚಿಕೊಂಡಿದ್ದಾರೆ. ಭಾರಿ ಗಾತ್ರದ ಡಂಬಲ್ಸ್ ಅನ್ನು ಧ್ರುವ ಸರ್ಜಾ ಸರಾಗವಾಗಿ ಎತ್ತುತ್ತಿದ್ದಾರೆ.  'ಮಾರ್ಟಿನ್' ನಲ್ಲಿ ಧ್ರುವ ಸರ್ಜಾ ದೈತ್ಯಾಕಾರದಲ್ಲಿ ಕಾಣುವುದಂತೂ ಪಕ್ಕಾ ಗುರೂ ಅಂತಿದ್ದಾರೆ ಫ್ಯಾನ್ಸ್​.

ಸೈನಿಕನ ಪಾತ್ರದಲ್ಲಿ ಧ್ರುವ ಸರ್ಜಾ!

‘ಮಾರ್ಟಿನ್' ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಉದಯ್ ಕೆ ಮೆಹ್ತಾ. ಧ್ರುವ ಸರ್ಜಾರ 'ಪೊಗರು' ಸಿನಿಮಾಕ್ಕೂ ಇವರೇ ಬಂಡವಾಳ ಹೂಡಿದ್ದರು.ಮೊದಲಿನಿಂದಲೂ ಧ್ರುವ ಸರ್ಜಾ ವರ್ಕೌಟ್​​ ಮಾಡುತ್ತಿದ್ದರು. ಅವರ ಫಿಟ್​ ಆದ ಬಾಡಿ ನೋಡಿ ಅದೆಷ್ಟೋ ಮಂದಿ ಜಿಮ್​ಗೆ ಹೋಗಿ ತಾವೂ ಹಾಗೇ ಆಗಬೇಕೆಂದು ಕಸರತ್ತು ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅವರ  ಮ್ಯಾನರಿಸಂನ ಅವರ ಅಭಿಮಾನಿಗಳು ಕೂಡ ಅನುಸರಿಸುತ್ತಾರೆ. ಇವರ ಪೊಗರು ಸಿನಿಮಾದಲ್ಲಿ ಮೂವರು ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್​​ಗಳು ಕೂಡ ಕಾಣಿಸಿಕೊಂಡಿದ್ದರು.

ಇದನ್ನು ಓದಿ : ಅಬ್ಬಬ್ಬಾ.. ಶ್ರೀ ರಾಮನ ಪಾತ್ರಕ್ಕೆ ಪ್ರಭಾಸ್​​ ಪಡೆದ ಸಂಭಾವನೆ ಕೇಳಿದ್ರೆ ತಲೆ ತಿರುಗೋದು ಪಕ್ಕಾ!

ಧ್ರುವಾಗೆ ನಾಯಕಿಯಾಗಲಿದ್ದಾರೆ ವೈಭವಿ ಶಾಂಡಿಲ್ಯ!

ಧ್ರುವ ಸರ್ಜಾಗೆ ನಾಯಕಿಯಾಗಿ ನಟಿಸುವುದು ಯಾರು ಎಂಬ ಬಗ್ಗೆ ಚಿತ್ರತಂಡದಿಂದ ಈವರೆಗೆ ಮಾಹಿತಿ ಸಿಕ್ಕಿರಲಿಲ್ಲ. ಆ ಕುರಿತು ಈ ‘ಮಾರ್ಟಿನ್​’ ಬಳಗ ಬ್ರೇಕಿಂಗ್ ನ್ಯೂಸ್​ ನೀಡಿದೆ. ಧ್ರುವ ಸರ್ಜಾಗೆ ಜೋಡಿಯಾಗಿಸಲು ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಅವರನ್ನು ಆಯ್ಕೆ ಮಾಡಲಾಗಿದೆ.ಇದು ಇವರ ಮೂರನೇ ಕನ್ನಡ ಸಿನಿಮಾ, ಶರಣ್-ಚಿಕ್ಕಣ್ಣ ನಟಿಸಿದ್ದ 'ರಾಜ್-ವಿಷ್ಣು' ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಗಾಳಿಪಟ 2' ನಲ್ಲಿ ನಟಿಸಿದ್ದಾರೆ. ಇದೀಗ 'ಮಾರ್ಟಿನ್‌'ನಲ್ಲಿ ನಟಿಸಲಿದ್ದಾರೆ.


ಇದನ್ನು ಓದಿ : ಅಪ್ಪು ಹುಟ್ಟುಹಬ್ಬಕ್ಕೆ 100 ದಿನ ಬಾಕಿ: ಮುಂಬೈನಲ್ಲಿರುವ ಅಭಿಮಾನಿಗಳಿಂದ ಅಭಿಯಾನ ಶುರು!

ಫಸ್ಟ್​ ಲುಕ್​, ಮೋಷನ್​ ಪೋಸ್ಟರ್​ಗೆ ಫ್ಯಾನ್ಸ್​ ಫಿದಾ!

ಹಲವು ಕಾರಣಗಳಿಂದಾಗಿ ‘ಮಾರ್ಟಿನ್’​ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಚಿತ್ರೀಕರಣ ಆರಂಭ ಆಗುವುದಕ್ಕೂ ಮುನ್ನವೇ ಫೋಟೋಶೂಟ್​ ಮಾಡಿಸಲಾಗಿತ್ತು. ಟೈಟಲ್​ ಲಾಂಚ್​ ವೇಳೆಗೆ ಧ್ರುವ ಅವರ ಫಸ್ಟ್​ಲುಕ್​ ಕೂಡ ಬಿಡುಗಡೆ ಆಗಿತ್ತು. ಮೋಷನ್​ ಪೋಸ್ಟರ್​ ​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದರು. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುನ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್​-ಕಟ್​ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ.
Published by:Vasudeva M
First published: