• Home
  • »
  • News
  • »
  • entertainment
  • »
  • KD Film Viral News: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ KD ಚಿತ್ರದ ನಾಯಕಿ ಯಾರು? ಮಾಲಾಶ್ರೀ ಮಗಳು ರಾಧನಾ ರಾಮ್ ಹೆಸರು ಕೇಳಿ ಬರ್ತಿರೋದೆಕೆ?

KD Film Viral News: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ KD ಚಿತ್ರದ ನಾಯಕಿ ಯಾರು? ಮಾಲಾಶ್ರೀ ಮಗಳು ರಾಧನಾ ರಾಮ್ ಹೆಸರು ಕೇಳಿ ಬರ್ತಿರೋದೆಕೆ?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ "KD" ಚಿತ್ರದ ನಾಯಕಿ ಯಾರು?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ "KD" ಚಿತ್ರದ ನಾಯಕಿ ಯಾರು?

ರಾಧನಾ ರಾಮ್ ಆಯ್ಕೆ ಬಗ್ಗೆ ಕೆಡಿ ಚಿತ್ರದ ಡೈರೆಕ್ಟರ್ ಜೋಗಿ ಪ್ರೇಮ್​ ಏನ್ ಹೇಳ್ತಾರೆ ಅನ್ನೋ ಕುತೂಹಲ ಕೂಡ ಇದೆ. ಈ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಜೋಗಿ ಪ್ರೇಮ್ ನ್ಯೂಸ್ -18 ಕನ್ನಡ ಡಿಜಿಟಲ್​ ಗೆ ರಿಯಾಕ್ಟ್ ಮಾಡಿದ್ದಾರೆ. ಏನ್ ಹೇಳಿದ್ದಾರೆ ಗೊತ್ತೇ? ಮುಂದಿದೆ ಓದಿ.

  • News18 Kannada
  • Last Updated :
  • Bangalore [Bangalore], India
  • Share this:

ಆ್ಯಕ್ಷನ್ ಪ್ರಿನ್ಸ್ ಧ್ರುವ (Dhruva Sarja) ಸರ್ಜಾ ಅಭಿನಯದ ಕೆಡಿ (KD Cinema) ಸಿನಿಮಾ ಟೈಟಲ್ ಟೀಸರ್​ನಿಂದಲೇ ಭಾರೀ ಸುದ್ದಿ ಮಾಡಿದೆ. ಇಡೀ ಸಿನಿಮಾದ ಒಂದು ಗತ್ತೇನು ಅನ್ನೋದು ಈ ಒಂದು ಟೀಸರ್​ ನಲ್ಲಿಯೇ ತಿಳಿದು ಬಿಟ್ಟಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹೀಗೆ ಬಹು ಭಾಷೆಯಲ್ಲಿ ಕೆಡಿ ಚಿತ್ರ ರಿಲೀಸ್ ಆಗುತ್ತದೆ. ಸಿನಿಮಾದ ಕೆಲಸ ಇನ್ನೂ ಶುರು ಆಗಿಲ್ಲ. ಆದರೆ ಚಿತ್ರದ ಟೀಸರ್​​ (KD Film Teaser) ಅನ್ನ ಅದ್ಭುತವಾಗಿಯೇ ರೆಡಿ ಮಾಡಿರೋ ಡೈರೆಕ್ಟರ್ ಜೋಗಿ ಪ್ರೇಮ್ ಇತರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಅದರ ಮಧ್ಯೆನೆ ಕೆಡಿ ಚಿತ್ರದ ಒಂದು ಸುದ್ದಿ ಈಗ ಹೊರ ಬಿದ್ದಿದೆ. ಇದು ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇದೆ.


ಈ ಸುದ್ದಿ ಬಗ್ಗೆ ಡೈರೆಕ್ಟರ್ (Jogi Prem) ಜೋಗಿ ಪ್ರೇಮ್, ನ್ಯೂಸ್-18 ಕನ್ನಡ ಡಿಜಿಟಿಲ್ ಜೊತೆಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಅನ್ನೋದು ಮುಂದೆ ಇದೆ ಓದಿ.


ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರದ ವೈರಲ್ ನ್ಯೂಸ್ ಏನು?
ಕನ್ನಡ ಚಿತ್ರರಂಗದಲ್ಲಿ ಕೆಡಿ ಸಿನಿಮಾ ಧಮಾಕಾ ಮಾಡುತ್ತಿದೆ. ಟೀಸರ್ ಮೂಲಕವೇ ಇದು ಸದ್ದು ಮಾಡಿದೆ. ಸಿನಿಮಾದ ಚಿತ್ರೀಕರಣದ ಕೆಲಸ ಇನ್ನೂ ಶುರು ಆಗಿಲ್ಲ. ಆದರೆ ಈ ಸಿನಿಮಾದ ಸುತ್ತ ಹತ್ತು ಹಲವು ಸುದ್ದಿಗಳು ಹರಿದಾಡುತ್ತಲೇ ಇವೆ.




ಸಿನಿಮಾರಂಗದಲ್ಲಿ ಒಂದು ಸಿನಿಮಾ ಸೆಟ್​ ಏರಿದ್ರೆ ಮುಗಿತು. ಅದರ ಸುತ್ತ ಹಲವು ನ್ಯೂಸ್ ಹರಿದಾಡುತ್ತವೆ. ಅದರಂತೆ ಕೆಡಿ ಸಿನಿಮಾ ಸುತ್ತ ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ. ಆ ಲೆಕ್ಕದಲ್ಲಿ ಈ ಚಿತ್ರಕ್ಕೆ ನಾಯಕಿ ಯಾರು? ಅನ್ನೋ ಪ್ರಶ್ನೆನೂ ಇದೆ. ಇದರ ಬೆನ್ನಲ್ಲಿಯೇ ಈಗೊಂದು ಹೆಸರು ಕೂಡ ಕೇಳಿ ಬರುತ್ತಿದೆ.


Action Prince Dhruva Sarja Film Viral News
"KD" ಚಿತ್ರದ ನಾಯಕಿ ಯಾರು? ಮಾಲಾಶ್ರೀ ಮಗಳು ರಾಧನಾ ರಾಮ್ ಹೆಸರು ಕೇಳಿ ಬರ್ತಿರೋದೆಕೆ?


ಆ್ಯಕ್ಷನ್ ಪ್ರಿನ್ಸ್ ಜೊತೆಗೆ ರಾಧನಾ ರಾಮ್ ಜೋಡಿ-ಮೋಡಿ
ಇಂತಹ ಒಂದು ಸುದ್ದಿ ಈಗ ಬಲು ಜೋರಾಗಿಯೇ ಕೇಳಿ ಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕೆಡಿ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಇದೆ. ಇದುವೇ ಈಗೀನ ಟಾಕ್ ಆಫ್ ದಿ ಟೌನ್ ಕೂಡ ಆಗಿದೆ.


ರಾಧನಾ ರಾಮ್ ಈಗಾಗಲೇ ಒಂದು ಬಿಗ್ ಸಿನಿಮಾ ಒಪ್ಪಿ ಆಗಿದೆ. ಆ ಮೂಲಕ ಕನ್ನಡ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಅದರ ಹೊರತಾಗಿ ಈಗ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಕೆಡಿ ಚಿತ್ರದಲ್ಲಿ ಅಭಿನಯಿಸ್ತಾರೆ ಅನ್ನೋ ನ್ಯೂಸ್ ದಿನೇ ದಿನೇ ವೈರಲ್ ಆಗುತ್ತಿದೆ.


Action Prince Dhruva Sarja Film Viral News
ಕೆಡಿ ಚಿತ್ರಕ್ಕೆ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಹೀರೋಯಿನ್ನಾ​ ?


ರಾಧನಾ ರಾಮ್ ಆಯ್ಕೆ ಬಗ್ಗೆ ಕೆಡಿ ಚಿತ್ರದ ಡೈರೆಕ್ಟರ್ ಜೋಗಿ ಪ್ರೇಮ್​ ಏನ್ ಹೇಳ್ತಾರೆ ಅನ್ನೋ ಕುತೂಹಲ ಕೂಡ ಇದೆ. ಈ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಜೋಗಿ ಪ್ರೇಮ್ ನ್ಯೂಸ್ -18 ಕನ್ನಡ ಡಿಜಿಟಲ್​ ಗೆ ರಿಯಾಕ್ಟ್ ಮಾಡಿದ್ದಾರೆ. ಏನ್ ಹೇಳಿದ್ದಾರೆ ಗೊತ್ತೇ? ಮುಂದಿದೆ ಓದಿ.


ನಿಮ್ಮ ಕೆಡಿ ಚಿತ್ರಕ್ಕೆ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಹೀರೋಯಿನ್ನಾ​?

ಜೋಗಿ ಪ್ರೇಮ್: No

ಮಾಲಾಶ್ರಿ ಮಗಳೇ ನಿಮ್ಮ ಚಿತ್ರದ ನಾಯಕಿ ಅನ್ನುವ ಸುದ್ದಿ ಹರಿದಾಡುತ್ತಿದೆ.ಈ
ಹಿನ್ನೆಲೆಯಲ್ಲಿ ಮಾತು ಕಥೆ ಏನಾದರು ಆಗಿದಿಯೇ ?


ಜೋಗಿ ಪ್ರೇಮ್: No


ನಿಮ್ಮ ಚಿತ್ರಕ್ಕೆ ಇನ್ನೂ ಯಾರ ಆಯ್ಕೆನೂ ಅಗಿಲ್ವೇ? ಈಗ ಹರಿಡ್ತಿರೋ ಸುದ್ದಿ ನಿಜ ಅಲ್ವೇ?


ಜೋಗಿ ಪ್ರೇಮ್: Nooo


ಡೈರೆಕ್ಟರ್ ಜೋಗಿ ಪ್ರೇಮ್ ಸಿನಿಮಾ ಮೇಕಿಂಗ್​ ಸದಾ ವಿಶೇಷಾಗಿಯೇ ಇರುತ್ತದೆ. ಎಲ್ಲೂ ಏನೂ ಬಿಟ್ಟುಕೊಡೋದೇ ಇಲ್ಲ. ಹಾಗೆ ಎಲ್ಲವನ್ನೂ ಗೌಪ್ಯವಾಗಿಯೇ ಇಟ್ಟಿರುತ್ತಾರೆ. ಸಡನ್ ಆಗಿಯೇ ಎಲ್ಲರ ಮುಂದೆ ಅದನ್ನ ರಿವೀಲ್ ಮಾಡ್ತಾರೆ. ಸರ್ಪ್ರೈಸ್ ಕೂಡ ಕೊಟ್ಟು ಬಿಡ್ತಾರೆ.


ಇದನ್ನೂ ಓದಿ: Mellusire Remix: ಹಳೆ ಹಾಡು ಹೊಸ ಕಿಕ್! ದೆವ್ವದ ಸಿನಿಮಾದಲ್ಲಿ ಕ್ಲಾಸಿಕ್ ಸಾಂಗ್


ಜೋಗಿ ಪ್ರೇಮ್ ಈ ಚಿತ್ರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಒಂದು ಸುದ್ದಿ ಇತ್ತು. ಬಾಲಿವುಡ್ ನಟ ಸಂಜಯ್ ದತ್ ಈ ಚಿತ್ರಕ್ಕೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ ಅನ್ನೋ ಮಾತು ಅದಾಗಿತ್ತು. ಈ ವಿಷಯ ಇನ್ನೂ ಅಧಿಕೃತಗೊಂಡಿಲ್ಲ. ಆದರೆ ಸಂಜಯ್ ದತ್ ಚಿತ್ರದ ಟೈಟಲ್ ಟೀಸರ್​ ರಿಲೀಸ್​​ಗೆ ಬಂದು ಎಲ್ಲರಿಗೂ ಶಾಕ್ ಕೊಟ್ಟರು.


ಹೀಗೆ ಸಿನಿಮಾದ ವಿಷಯಗಳನ್ನ ಬಿಟ್ಟುಕೊಡದ ಡೈರೆಕ್ಟರ್ ಜೋಗಿ ಪ್ರೇಮ್, ಸದ್ಯದ ರಾಧನಾ ರಾಮ್ ಆಯ್ಕೆಯನ್ನ ನೋ ಎಂದು ಹೇಳಿ ಹರಿದಾಡುವ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

First published: