Dhruva Sarja: ಜೋಗಿ ಪ್ರೇಮ್​-ಧ್ರುವ ಸರ್ಜಾ ಸಿನಿಮಾಗೆ ಮುಹೂರ್ತ ಫಿಕ್ಸ್​! ಇವ್ರೇ ನೋಡಿ ಚೀಫ್​ ಗೆಸ್ಟ್​

ಪ್ರೇಮ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್​ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ.

ಪ್ರೇಮ್​ ಶೇರ್​ ಮಾಡಿರುವ ಫೋಟೋ

ಪ್ರೇಮ್​ ಶೇರ್​ ಮಾಡಿರುವ ಫೋಟೋ

  • Share this:
ಧ್ರುವ ಸರ್ಜಾ (Dhruva Sarja).. ಕಡಿಮೆ ಸಮಯದಲ್ಲಿ ಹೆಚ್ಚು ಹೆಸರು ಮಾಡಿದ ಯುವ ನಾಯಕ ನಟ. ಬ್ಯಾಗ್ರೌಂಡ್​ ಇದ್ದರೂ ಬಳಸಿಕೊಳ್ಳದೇ ಚಿತ್ರರಂಗಕ್ಕೆ ಕಾಲಿಟ್ಟ ಧ್ರುವ ಸರ್ಜಾ, ‘ಅದ್ಧೂರಿ’ (Addhuri) ಮೂಲಕ ಸ್ಯಾಂಡಲ್​ವುಡ್(Sandalwood)​ನಲ್ಲಿ ನೆಲೆ ಕಂಡುಕೊಂಡರು. ಇದಾದ ಬಳಿಕ ‘ಬಹದ್ದೂರ್’​(Bahaddur), ನಂತರ ‘ಭರ್ಜರಿ’ (Bharjari), ಕೊನೆಯದಾಗಿ ‘ಪೊಗರು’(Pogaru) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಡೈಲಾಗ್​ ಡೆಲಿವರಿ, ಮ್ಯಾನರಿಸಂ ಎಲ್ಲವೂ ಫ್ಯಾನ್ಸ್​ಗೆ ಸಖತ್​ ಇಷ್ಟ. ಸದ್ಯ ಮಾರ್ಟಿನ್(Martin)​ ಸಿನಿಮಾದ ಶೂಟಿಂಗ್​ನಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾಗೆ ಸ್ಯಾಂಡಲ್​ವುಡ್(Sandalwood) ಜೋಗಿ ಪ್ರೇಮ್​ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಅನ್ನುವ ಎಲ್ಲರಿಗೂ ಗೊತ್ತಿದೆ. ಇದೀಗ ಧ್ರುವ ಹಾಗೂ ಪ್ರೇಮ್​ ಕಾಂಬಿನೇಷನ್​ ಸಿನಿಮಾಗೆ ಮುಹೂರ್ತ ಫಿಕ್ಸ್​ ಆಗಿದೆ.

ಮಾಹಿತಿ ಹಂಚಿಕೊಂಡ ಜೋಗಿ ಪ್ರೇಮ್​!

'ಏಕ್‌ ಲವ್ ಯಾ' ಚಿತ್ರ ರಿಲೀಸ್ ಬೆನ್ನಲ್ಲೇ ಧ್ರುವ ಸರ್ಜಾಗೆ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಹೊರ ಬಂದಿತ್ತು. ಈಗ ಈ ಸುದ್ದಿ ಪಕ್ಕಾ ಆಗಿದೆ. ಪ್ರೇಮ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್​ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ.

ಏಪ್ರಿಲ್​ 24ಕ್ಕೆ ಹೊಸ ಸಿನಿಮಾ ಲಾಂಚ್​!

ಏಪ್ರಿಲ್ 24ರಂದು ಧ್ರುವ ಮತ್ತು ಪ್ರೇಮ್ ಹೊಸ ಚಿತ್ರ ಲಾಂಚ್ ಆಗಲಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿ ವಿಚಾರ ಹಂಚಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಕೊಟ್ಟಿದ್ದಾರೆ. "ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, 24ರಂದು ಬೆಳಿಗ್ಗೆ 9:30ಕ್ಕೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಡೆಯೋ ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ, ಬನ್ನಿ ಒಟ್ಟಿಗೆ ಹಬ್ಬ ಮಾಡೋಣ, ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ಹರಸಿ ಹಾರೈಸಿ. ಸ್ಥಳ: ಮೈಸೂರು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿ." ಎಂದು ಪ್ರೇಮ್ ಟ್ವಿಟ್ ಮಾಡಿದ್ದಾರೆ.


ಇದನ್ನೂ ಓದಿ: ಶೀಘ್ರವೇ `ರಾಜಮಾರ್ತಾಂಡ’ ರಿಲೀಸ್​, ಕೊನೆ ಬಾರಿ ತೆರೆ ಮೇಲೆ ಚಿರುನನ್ನು ಕಣ್ತುಂಬಿಕೊಳ್ಳೋ ಅವಕಾಶ!

ಭೂಗತಲೋಕದ ಹೊಸ ಚರಿತ್ರೆ ಬರೆದಿದ್ದ ಪ್ರೇಮ್​!

ಭೂಗತಲೋಕದ ಹೊಸ ಚರಿತ್ರೆಯನ್ನು ಈ ಹಿಂದೆ ತೆರೆಮೇಲೆ ನಿರ್ದೇಶಕ ಪ್ರೇಮ್​ ತಂದಿಟ್ಟಿದ್ದರು. ಈಗ ಮತ್ತೆ ಅಂತಹದ್ದೇ ಒಂದು ಕಥೆಯನ್ನು ತೆರೆಮೇಲೆ ಜೋಗಿ ಪ್ರೇಮ್ ತರುತ್ತಿದ್ದಾರೆ. ಜೋಗಿ ಪ್ರೇಮ್​ ಅವರ ಮೊದಲ ನಿರ್ದೇಶನದ 'ಎಕ್ಸ್​ಕ್ಯೂಸ್​​ಮಿ' ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಇದಾದ ಬಳಿಕ ರಕ್ತಸಿಕ್ತ 'ಕರಿಯಾ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಇದಾದ ಬಳಿಕ ಜೋಗಿ ಸಿನಿಮಾ ಬಗ್ಗೆ ಹೇಳುವು ಅವಶ್ಯಕಥೆ ಇಲ್ಲ.ಈಗ ಧ್ರುವ ಸರ್ಜಾ ಜೊತೆ ಮಾಡುತ್ತಿರುವ ಸಿನಿಮಾಗೂ ದುಬಾರಿ ಸೆಟ್ ಒಂದನ್ನು ಹಾಕುತ್ತಿದ್ದಾರೆ ಎನ್ನಲಾಗಿದೆ. ಸೀಗೆಹಳ್ಳಿ ಸಮೀಪ 70ರ ದಶಕದ ಸೆಟ್‌ ಅನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ: `ಬಹದ್ದೂರು ಗಂಡು’ ಧ್ರುವ ಸರ್ಜಾ `ಭರ್ಜರಿ’ ವರ್ಕೌಟ್​! ಅಬ್ಬಬ್ಬಾ...ಏನ್​ ಬೈಸಿಪ್ಸ್​​ ಗುರೂ

ಈ ಸಿನಿಮಾಗಾಗಿ 70 ದಶಕಕ್ಕೆ ಹೋಲುವ ಸೆಟ್ಟನ್ನು ನಿರ್ಮಿಸಲಾಗುತ್ತಿದ್ದು, ಇದು ಭೂಗಲೋಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಕೊತ್ವಾಲ್ ರಾಮಚಂದ್ರ ಹಾಗೂ ಎಂ ಪಿ ಜೈರಾಜ್ ಕಾಲ ಭೂಗತಲೋಕದ ಕತೆಯೊಂದನ್ನು ತೆರೆಮೇಲೆ ತರಲು ಹೊರಟಿದ್ದಾರೆ ಅನ್ನುವ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.
Published by:Vasudeva M
First published: