ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಅಭಿನಯದ (Martin Film Updates) ಮಾರ್ಟಿನ್ ಸಿನಿಮಾದ ಚಿತ್ರೀಕರಣ (Martin Film Climax Shooting) ಭರದಿಂದಲೇ ಸಾಗಿದೆ. ಈ ಚಿತ್ರದ ಸಾಹಸ ದೃಶ್ಯಗಳನ್ನೂ ಭರ್ಜರಿಯಾಗಿಯೇ ತೆಗೆಯಲಾಗುತ್ತಿದೆ. ಚಿತ್ರದ ಮಹತ್ವದ ಸಾಹಸ ದೃಶ್ಯಕ್ಕೆ ಭಾರೀ ಸೀನ್ಗಳನ್ನೆ ಪ್ಲಾನ್ ಮಾಡಲಾಗಿದೆ. ಒಂದೇ ಒಂದು ಕ್ಲೈಮ್ಯಾಕ್ಸ್ ಸೀನ್ಗಾಗಿಯೇ ಇಬ್ಬರು ಸಾಹಸ ನಿರ್ದೇಶಕರು (Fight Masters) ನಿರ್ದೇಶಕರೇ ಕೆಲಸ ಮಾಡಿದ್ದಾರೆ.ಸಿನಿಮಾದ ಈ ಒಂದು ಭಾರೀ ದೃಶ್ಯದ ಚಿತ್ರೀಕರಣ ಕೂಡ ಈಗಾಗಲೇ ಆಗಿದೆ. ಇದೇ ಶೂಟಿಂಗ್ (Martin Movie Climax Shooting) ಸೆಟ್ ನಲ್ಲಿಯೇ ತೆಗೆದ ಒಂದಷ್ಟು ಫೋಟೋಗಳೂ ಈಗ ಹೊರಬಿದ್ದಿವೆ. ಇದರ ಸುತ್ತ ಒಂದಷ್ಟು ಮಾಹಿತಿ ಕೂಡ ಇಲ್ಲಿದೆ ಓದಿ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ ಸಖತ್ ಫೈಟ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ನಿರೀಕ್ಷೆ ದಿನೇ ದಿನೇ ಹೆಚ್ಚುತ್ತಿದೆ. ಪೊಗರು ಸಿನಿಮಾ ಆದ್ಮೇಲೆ ಧ್ರುವ ಸರ್ಜಾ ಈ ಮಾರ್ಟಿನ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಧ್ರುವ ಸರ್ಜಾ ಮತ್ತೊಂದು ಮಾಸ್ ಫಿಲ್ಮ ತೆಗೆದುಕೊಂಡು ಬರ್ತಿದ್ದಾರೆ.
ಮಾರ್ಟಿನ್ ಸಿನಿಮಾ ಪಕ್ಕಾ ಆ್ಯಕ್ಷನ್ ಮೂವಿ ಅಂತಲೇ ಹೇಳಬಹುದು. ಧ್ರುವ ಸರ್ಜಾ ಮಾರ್ಟಿನ್ ಚಿತ್ರದ ಮೂಲಕ ಬೇರೆ ಲೆವಲ್ನ ಆ್ಯಕ್ಷನ್ಗಳನ್ನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪಕ್ಕಾ ಪ್ಲಾನಿಂಗ್ ಆಗಿದೆ. ಸಾಹಸ ನಿರ್ದೇಶಕರು ಸಖತ್ ತಯಾರಿ ಮಾಡಿಕೊಂಡೇ ಬಂದಿದ್ದಾರೆ.
ಮಾರ್ಟಿನ್ ಚಿತ್ರ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಇಬ್ಬರು ಆ್ಯಕ್ಷನ್ ಮಾಸ್ಟರ್ಸ್!
ಹೌದು, ಕನ್ನಡ ಚಿತ್ರರಂಗದಲ್ಲಿ ಇಲ್ಲಿವರೆಗೂ ಭರ್ಜರಿ ಆ್ಯಕ್ಷನ್ ಇರೋ ಚಿತ್ರಗಳು ಬಂದಿವೆ. ಭರ್ಜರಿ ಆ್ಯಕ್ಷನ್ ಇರೋ ಕ್ಲೈಮ್ಯಾಕ್ಸ್ ಸೀನ್ಗಳನ್ನೂ ತೆಗೆಯಲಾಗಿದೆ. ಆದರೆ ಮೂವರು ಸಾಹಸ ನಿರ್ದೇಶಕರು ಒಂದೇ ಚಿತ್ರದ ಒಂದೇ ಕ್ಲೈಮ್ಯಾಕ್ಸ್ ಸೀನ್ ತೆಗೆದಿರೋದು ಕಡಿಮೇನೆ.
ಆದರೆ ಮಾರ್ಟಿನ್ ಚಿತ್ರದ ವಿಷಯದಲ್ಲಿ ಈಗೊಂದು ಪ್ರಯೋಗವೇ ಆಗಿದೆ. ಚಿತ್ರದ ಕಟ್ಟಕಡೆಯ ದೃಶ್ಯಕ್ಕಾಗಿಯೇ ಮೂವರು ಸಾಹಸ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರಕ್ಕೆ ರವಿ ವರ್ಮಾ ಸಾಹಸ
ಸಾಹಸ ನಿರ್ದೇಶಕ ರವಿ ವರ್ಮಾ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿರೋ ಸ್ಟಂಟ್ ಮಾಸ್ಟರ್, ತಮ್ಮ ಚಿತ್ರ ಜೀವನದಲ್ಲಿ ವಿಶೇಷ ಸಾಹಸಗಳನ್ನೆ ಕಂಪೋಜ್ ಮಾಡಿದ್ದಾರೆ. ಬೆಳ್ಳಿ ತೆರೆ ಮೇಲೂ ಅವುಗಳನ್ನ ಅಷ್ಟೇ ಅದ್ಭುತವಾಗಿಯೇ ತಂದಿದ್ದಾರೆ. ಅದೇ ರೀತಿ ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನ ಈಗ ತೆಗೆದಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಹಸ ಪ್ರಿಯರು ಹೌದು, ಅದಕ್ಕೆ ಪೂರಕ ಅನ್ನೊ ಹಾಗೇನೆ ಭರ್ಜರಿ ಫೈಟ್ಗಳೂ ಧ್ರುವ ಅಭಿನಯದ ಚಿತ್ರದಲ್ಲಿ ಇರುತ್ತವೆ. ಮಾರ್ಟಿನ್ ಚಿತ್ರದಲ್ಲೂ ಇವೆ. ಅದೇ ರೀತಿ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬೇಜಾನ್ ಫೈಟ್ಸ್ ಇವೆ. ಇದಕ್ಕಾಗಿಯೇ ಸಾಹಸ ನಿರ್ದೇಶಕ ರವಿ ವರ್ಮಾ ಅಲ್ಲದೇ ಇನ್ನೂ ಇಬ್ಬರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ.
ಮಾರ್ಟಿನ್ ಚಿತ್ರಕ್ಕೆ ರಾಮ್ ಲಕ್ಷ್ಮಣ ಸಾಹಸ ನಿರ್ದೇಶನ
ಮಾರ್ಟಿನ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರಕ್ಕೆ ರವಿ ವರ್ಮಾ, ರಾಮ್ ಮತ್ತು ಲಕ್ಷ್ಮಣ ಹೀಗೆ ಇವರೂ ಸಾಹಸ ನಿರ್ದೇಶನ ಮಾಡಿದ್ದಾರೆ. ಈಗ ಮಾಹಿತಿಗೆ ಪೂರಕ ಅನ್ನೋ ಹಾಗೆ, ನಿರ್ದೇಶಕ ಎ.ಪಿ.ಅರ್ಜುನ್, ಆ್ಯಕ್ಷನ್ ಮಾಸ್ಟರ್ಸ್ ರವಿ ವರ್ಮಾ, ರಾಮ್ ಲಕ್ಷ್ಮಣ ಇರೋ ಫೋಟೋ ಕೂಡ ಹೊರ ಬಿದ್ದಿದೆ.
ಇದನ್ನೂ ಓದಿ: Kannada Vedha Film Story: ವೇದ ಸಿನಿಮಾದಲ್ಲಿ ಆ 4 ಮಹಿಳೆಯರೇ ಪವರ್ಫುಲ್, ಒಂದೊಂದು ಅವತಾರನೂ ಕ್ಲಾಸಿಕ್!
ಇನ್ನುಳಿದಂತೆ ಸದ್ಯಕ್ಕೆ ಫೋಟೋ ಸಮೇತ ಇಷ್ಟೇ ಮಾಹಿತಿ ಹೊರಬಿದ್ದಿದೆ. ಈ ಹಿಂದೇನೆ ಈ ಕ್ಲೈಮ್ಯಾಕ್ಸ್ ಸೀನ್ ಬಗ್ಗೆ ಭಾರೀ ಚರ್ಚೆಗಳೂ ಆಗಿವೆ. ಸುದ್ದಿಗಳೂ ಹರದಾಡಿವೆ. ಅದಕ್ಕೆ ಸೂಕ್ತ ಅಪ್ಡೇಟ್ ಅನ್ನೋ ಹಾಗೆ ಈಗ ರಾಮ್-ಲಕ್ಷ್ಮಣ ಮತ್ತು ರವಿ ವರ್ಮಾ ಚಿತ್ರದ ಕ್ಲ್ರೈಮ್ಯಾಕ್ಸ್ ಸೀನ್ ಮುಗಿಸಿಕೊಟ್ಟಿದ್ದಾರೆ.
ಮಾರ್ಟಿನ್ ಚೇಜ್-ಸಾಹಸ ನಿರ್ದೇಶಕ ರವಿ ವರ್ಮ ಕಲ್ಪನೆ
ಸಾಹಸ ನಿರ್ದೇಶಕ ರವಿ ವರ್ಮ ಈ ಚಿತ್ರಕ್ಕೆ ಚೇಜ್ ದೃಶ್ಯಗಳನ್ನೆ ಕಂಪೋಜ್ ಮಾಡಿದ್ದಾರೆ. ರಾಮ-ಲಕ್ಷ್ಮಣ ಚಿತ್ರದ ಬೇರೆ ದೃಶ್ಯಗಳನ್ನ ತೆಗೆದಿದ್ದಾರೆ. ಈಗಾಗಲೇ ಈ ಚಿತ್ರದ ಸಾಹಸ ದೃಶ್ಯದ ಕೆಲಸ ಪೂರ್ಣಗೊಂಡಿದೆ ಎಂದು ಸಾಹಸ ನಿರ್ದೇಶಕ ರವಿ ವರ್ಮಾ ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ