Arjun Sarja: ಮೀಟೂ ಕೇಸ್​ನಲ್ಲಿ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್.. 3 ವರ್ಷಗಳ ಹೋರಾಟದಲ್ಲಿ ಗೆದ್ದ `ಆ್ಯಕ್ಷನ್​ ಕಿಂಗ್​!’

ಅಂದು ಶ್ರುತಿ ಹರಿಹರನ್​ ಮಾಡಿದ್ದ ಆರೋಪಗಳಿಗೆ ಇಂದಿಗೂ ಯಾವುದೇ ಸಾಕ್ಷಿ ಸಿಕ್ಕಿಲ್ಲ ಹಾಗಾಗಿ ಪೊಲೀಸರು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ (B Report) ಸಲ್ಲಿಸಿದ್ದರು. ಈ ವರದಿಗೆ ಶ್ರುತಿ ಹರಿಹರನ್​ ಆಕ್ಷೇಪಣೆ ಸಲ್ಲಿಸಿಲ್ಲ. ಈ ಕಾರಣಕ್ಕೆ 8ನೇ ಎಸಿಎಂಎಂ ನ್ಯಾಯಾಲಯ ವರದಿಯನ್ನು ಅಂಗೀಕರಿಸಿದೆ. ಹೀಗಾಗಿ, ಪ್ರಕರಣದಲ್ಲಿ ಅರ್ಜುನ್​ ಸರ್ಜಾಗೆ ಗೆಲುವಾಗಿದೆ.

ಅರ್ಜುನ್​ ಸರ್ಜಾ, ಶ್ರುತಿ ಹರಿಹರನ್​

ಅರ್ಜುನ್​ ಸರ್ಜಾ, ಶ್ರುತಿ ಹರಿಹರನ್​

  • Share this:
2018ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಒಂದು ವಿಚಾರದ ಸಖತ್​ ಸದ್ದು ಮಾಡಿತ್ತು. ಬಾಲಿವುಡ್(Bollywood)​, ಟಾಲಿವುಡ್(Tollywood)​, ಕಾಲಿವುಡ್(Kollywood)​ ಕೊನೆಗೆ ಸ್ಯಾಂಡಲ್​ವುಡ್(Sandalwood)​ನಲ್ಲೂ ಈ ವಿಚಾರ ಭಾರಿ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಅದೇ ಮೀಟೂ(Me-too) ಪ್ರಕರಣ. ಬಹುಬಾಷಾ ನಟ ಅರ್ಜುನ್​ ಸರ್ಜಾ(Arjun Sarja) ವಿರುದ್ಧ ಸ್ಯಾಂಡಲ್​ವುಡ್ ನಟಿ ಶ್ರುತಿ ಹರಿಹರನ್(Sruthi Hariharan)​ ಮೀಟೂ ಕೇಸ್​ ದಾಖಲಿಸಿದ್ದರು. ನನಗೆ ಅರ್ಜುನ್​ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನೇ ಸೃಷ್ಟಿಸಿದ್ದರು. ಈ ವಿಚಾರ ಎಲ್ಲಕಡೆ ಹಬ್ಬಿಕೊಂಡಿತ್ತು. ಸಾಕಷ್ಟು ಆರೋಪಗಳು, ಪ್ರತ್ಯಾರೋಪಗಳು ಕೇಳಿಬಂದಿತ್ತು. ಆದರೆ, ಅಂದು ಶ್ರುತಿ ಹರಿಹರನ್​ ಮಾಡಿದ್ದ ಆರೋಪಗಳಿಗೆ ಇಂದಿಗೂ ಯಾವುದೇ ಸಾಕ್ಷಿ ಸಿಕ್ಕಿಲ್ಲ ಹಾಗಾಗಿ ಪೊಲೀಸರು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ (B Report) ಸಲ್ಲಿಸಿದ್ದರು. ಈ ವರದಿಗೆ ಶ್ರುತಿ ಹರಿಹರನ್​ ಆಕ್ಷೇಪಣೆ ಸಲ್ಲಿಸಿಲ್ಲ. ಈ ಕಾರಣಕ್ಕೆ 8ನೇ ಎಸಿಎಂಎಂ ನ್ಯಾಯಾಲಯ ವರದಿಯನ್ನು ಅಂಗೀಕರಿಸಿದೆ. ಹೀಗಾಗಿ, ಪ್ರಕರಣದಲ್ಲಿ ಅರ್ಜುನ್​ ಸರ್ಜಾಗೆ ಗೆಲುವಾಗಿದೆ.

ಪ್ರಕರಣದಲ್ಲಿ ಅರ್ಜುನ್​ ಸರ್ಜಾಗೆ ಗೆಲುವು!

ಪ್ರಕರಣವೊಂದರ ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಅಗತ್ಯ ಇರುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅಂತಿಮ ವರದಿಯೇ ಬಿ ರಿಪೋರ್ಟ್‌. ಈಗ ನ್ಯಾಯಾಲಯ ಈ ವರದಿಯನ್ನು ಒಪ್ಪಿರುವುದರಿಂದ ಪ್ರಕರಣದಲ್ಲಿ ಅರ್ಜುನ್​ ಸರ್ಜಾ ಯಾವುದೇ ತಪ್ಪು ಮಾಡಿಲ್ಲ ಎಂಬುದು ಸಾಬೀತಾದಂತಾಗಿದೆ. ಇಷ್ಟು ವರ್ಷಗಳ ಹೋರಾಟದಲ್ಲಿ ಕೊನೆಗೂ ಅರ್ಜುನ್​ ಸರ್ಜಾಗೆ ಗೆಲುವಾಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇದನ್ನು ಓದಿ : ರಾತ್ರಿ ಕೈಯಲ್ಲಿ ವೈನ್ ಬಾಟಲಿ​ ಹಿಡಿದು ಸಿನಿಮಾ ಸೋಲಿಗೆ ಕಾರಣ ಹುಡುಕಿದ್ದರಂತೆ ಸುಶಾಂತ್​: ಕಹಿ ಘಟನೆ ನನೆದ ನಟಿ!

ಪ್ರಕರಣದ ಹಿನ್ನೆಲೆ ಏನು?
ಅರುಣ್​ ವೈದ್ಯನಾಥನ್​ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್​ ಮತ್ತು ಅರ್ಜುನ್​ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್​ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್​ವುಡ್​ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು.


ಅಂಬರೀಷ್​ ಅವರ ನೇತೃತ್ವದಲ್ಲಿ ನಡೆದಿತ್ತು ಸಭೆ

2018ರಲ್ಲಿ ಈ ವಿವಾದ ಬಗೆಹರಿಸಲು ‘ರೆಬೆಲ್​ ಸ್ಟಾರ್​’ ಅಂಬರೀಷ್​ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಶ್ರುತಿ ಹರಿಹರನ್​ ಅವರು ಸಭೆಯ ಅರ್ಧದಲ್ಲೇ ಹೊರ ನಡೆದಿದ್ದರು. ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಅವರು ಹೇಳಿದ್ದರು. ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಅರ್ಜುನ್​ ಸರ್ಜಾ ವಿರುದ್ಧ ದೂರು ನೀಡಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ (354, 509), ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಕೇಸ್ ದಾಖಲಾಗಿತ್ತು.

ಇದನ್ನು ಓದಿ: ಬ್ರೇಕಪ್ ನಂತರ ಮೂರನೇ ಮಗುವನ್ನು ದತ್ತು ಪಡೆದ ನಟಿ.. ನಿಜವಾಗಿಯೂ ನೀವು ದೇವತೆ ಅಂದಿದ್ಯಾಕೆ ನೆಟ್ಟಿಗರು?

‘ವಿಸ್ಮಯ’ ಶೂಟಿಂಗ್​ ನಡೆದಿದ್ದು 2015-16ರ ಸಮಯದಲ್ಲಿ. ಮೀಟೂ ಆರೋಪ ಕೇಳಿಬಂದಿದ್ದು 2018ರಲ್ಲಿ. ಘಟನೆ ನಡೆದು ಎರಡು ವರ್ಷ ಕಳೆದ ಬಳಿಕ ಅವರು ದೂರು ನೀಡಿದ್ದರು. ಮೂರು ವರ್ಷ ತನಿಖೆ ನಡೆಸಿದರೂ ಕೂಡ ಕಬ್ಬನ್​ ಪಾರ್ಕ್​ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣ ನ್ಯಾಯಾಲಯಕ್ಕೆ ಬಿ-ರಿಪೋರ್ಟ್​ ಸಲ್ಲಿಸಲಾಗಿತ್ತು. ಇದೀಗ  8ನೇ ಎಸಿಎಂಎಂ ನ್ಯಾಯಾಲಯ ವರದಿಯನ್ನು ಅಂಗೀಕರಿಸಿದೆ.
Published by:Vasudeva M
First published: