ಲಾಕ್ ಡೌನ್ ನಂತರ ಮೊದಲ ಕನ್ನಡ ಸಿನಿಮಾ ವೀಕ್ಷಿಸಿಸಲಿರುವ ಸಿದ್ದರಾಮಯ್ಯ!

Siddaramaiah: ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ, ಆ ರೀತಿ ಸಾಕಷ್ಟು ಸಿನಿಮಾಗಳನ್ನ ನೋಡಿದ್ದಾರೆ. ತೆಲುಗಿನ ಬಾಹುಬಲಿ, ಪವರ್ ಸ್ಟಾರ್ ಪುನೀತ್ ನಟನೆಯ ರಾಜಕುಮಾರ ವೀಕ್ಷಿಸಿ ಎಂಜಾಯ್ ಮಾಡಿದ್ದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಮಾಜಿ ಮುಖ್ಯ ಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿನಿಮಾ ಪ್ರೇಮಿ. ಕಾಲೇಜು ದಿನಗಳಲ್ಲಿ ಅವರು ಡಾ.ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದರಂತೆ. ಕನ್ನಡ ಕಣ್ಮಣಿ ರಾಜ್ ಕುಮಾರ್ ಸಿನಿಮಾ ಬಂದ್ರೆ ಮುಗಿ ಬಿದ್ದು ನೋಡುತ್ತಾ ಇದ್ದರಂತೆ. ಇನ್ನು ಈಗಲೂ ಸಹ ಸಿನಿಮಾಗಳೆಡೆಗೆ ಹಾಗೆಯೇ ಆಸಕ್ತಿ ಉಳಿಸಿಕೊಂಡಿದ್ದಾರೆ. ಒಳ್ಳೆಯ ಸಿನಿಮಾ ಥಿಯೇಟರ್ ಗೆ ಬಂದಿದೆ ಅಂದರೆ ಎಷ್ಟೇ ಬ್ಯುಸಿಯಾಗಿದ್ದರು ಸಹ ಮೂರುಗಂಟೆಗಳ ಕಾಲ ಬಿಡುವು ಮಾಡಿಕೊಂಡು ಗೆಳೆಯರ ಜೊತೆನೋ, ಫ್ಯಾಮಿಲಿ ಜೊತೆನೋ ಸಿನಿಮಾ ನೋಡುತ್ತಾರೆ.

ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ, ಆ ರೀತಿ ಸಾಕಷ್ಟು ಸಿನಿಮಾಗಳನ್ನ ನೋಡಿದ್ದಾರೆ. ತೆಲುಗಿನ ಬಾಹುಬಲಿ, ಪವರ್ ಸ್ಟಾರ್ ಪುನೀತ್ ನಟನೆಯ ರಾಜಕುಮಾರ ವೀಕ್ಷಿಸಿ ಎಂಜಾಯ್ ಮಾಡಿದ್ದರು. ಹಾಗೆಯೇ ಸಾಕಷ್ಟು ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳಲ್ಲೂ ಸಹ ಪಾಲ್ಗೊಂಡು ಚಿತ್ರತಂಡಗಳಿಗೆ ಆಶಿರ್ವಾದ ಮಾಡಿದ್ದರು.

ಕೊರೋನಾ ಕಾರಣ ಕಳೆದ ಎಂಟು ತಿಂಗಳಿನಿಂದ ಯಾವುದೇ ಸಿನಿಮಾವನ್ನು ಮಾಜಿ ಮುಖ್ಯಮಂತ್ರಿಗಳು ವೀಕ್ಷಿಸಿರಲಿಲ್ಲ‌. ಈಗ 8 ತಿಂಗಳ ನಂತರ ಮೊಟ್ಟಮೊದಲ ಬಾರಿಗೆ ಹೊಸ ಕನ್ನಡ ಸಿನಿಮಾವೊಂದು ನವೆಂಬರ್ 20ಕ್ಕೆ ಬಿಡುಗಡೆಯಾಗುತ್ತಿದೆ.ಹೌದು.  ಆಕ್ಟ್ 1978 ಎಂಬ ಕನ್ನಡ ಸಿನಿಮಾ ಶುಕ್ರವಾರ ತೆರೆ ಕಾಣುತ್ತಿದ್ದು, ಹಿಂದಿನ ದಿನವೇ ಸ್ಪೆಷಲ್ ಶೋನಲ್ಲಿ ಈ ಸಿನಿಮಾವನ್ನ ಮಾಜಿ ಮುಖ್ಯಮಂತ್ರಿ ಗಳು ಕಣ್ತುಂಬಿಕೊಳ್ಳಲಿದ್ದಾರೆ. ಅಂದಹಾಗೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
Published by:Harshith AS
First published: