ಕೊರೋನಾ ಲಾಕ್ಡೌನ್ ಆರಂಭವಾದಾಗಿನಿಂದ ಚಿತ್ರಮಂದಿರಗಳು ಮುಚ್ಚಿದ್ದವು. ಆದರೆ ಚಿತ್ರಗಮಂದಿರಗಳು ಮುಚ್ಚುತ್ತಿದ್ದಂತೆಯೇ ಡಿಜಿಟಲ್ ವೇದಿಕೆಗಳಲ್ಲಿ ಹೊಸ ಸಿನಿಮಾಗಳು ರಿಲೀಸ್ ಆಗಲು ಆರಂಭವಾದವು. ಜನರು ಚಿತ್ರಮಂದಿರಗಳನ್ನು ಮರೆತು ಹೋಗಿದ್ದಾರೆ ಎನ್ನುವ ಮಟ್ಟಿಗೆ ಡಿಜಿಟಲ್ ವೇದಿಕೆಗಳು ಜನರ ಮೇಲೆ ಪರಿಣಾಮ ಬೀರಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಿರುವಾಗಲೇ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಅಂದರೆ ಆರೇಳು ತಿಂಗಳ ನಂತರ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಆದರೆ ಪ್ರೇಕ್ಷಕರು ಮಾತ್ರ ಚಿತ್ರಮಂದಿರಗಳತ್ತ ತಿರುಗಿ ನೋಡುತ್ತಿಲ್ಲ. ಒಂದು ಶೋಗೆ 5-10 ಜನ ಇದ್ದರೆ ಹೆಚ್ಚು. ಇದೇ ಕಾರಣದಿಂದ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗಲೇ ಸ್ಯಾಂಡಲ್ವುಡ್ ನಿರ್ದೇಶಕ ಮಂಸೋರೆ ಹಾಗೂ ಅವರ ತಂಡ ಧೈರ್ಯ ಮಾಡಿ ತಮ್ಮ ಹೊಸ ಸಿನಿಮಾ ಆ್ಯಕ್ಟ್ 1978 ಅನ್ನು ರಿಲೀಸ್ ಮಾಡಿದ್ದಾರೆ.
ನಾತಿಚರಾಮಿ ಸಿನಿಮಾದ ನಿರ್ದೇಶಕ ಮಂಸೋರೆ ಅವರ ಮತ್ತೊಂದು ಸಿನಿಮಾ ಇದಾಗಿದೆ. ಆ್ಯಕ್ಟ್ 1978 ಸಿನಿಮಾದ ಪೋಸ್ಟರ್ನಿಂದ ಕುತೂಹಲ ಹೆಚ್ಚಿಸಿದ್ದು, ಟ್ರೇಲರ್ನಿಂದ ಅದು ಇಮ್ಮಡಿಯಾಗುವಂತಾಯಿತು. ಇದರಿಂದಾಗಿಯೇ ಈ ಸಿನಿಮಾ ಬಗ್ಗೆ ಚಿತ್ರತಂಡಕ್ಕೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಲಾಕ್ಡೌನ್ ಸಡಿಲಗೊಂಡು ಚಿತ್ರಮಂದಿರಗಳು ತೆರೆದ ನಂತರ ರಿಲೀಸ್ ಆಗಿರುವ ಮೊದಲ ಸಿನಿಮಾ ಇದಾಗಿದ್ದು, ಇದಕ್ಕೆ ಸಿಗಲಿರುವ ಪ್ರತಿಕ್ರಿಯೆಯತ್ತ ಇಡೀ ಸ್ಯಾಂಡಲ್ವುಡ್ ಚಿತ್ತವಿದೆ. ಇನ್ನುಈ ಸಿನಿಮಾಗೆ ಬೆಂಬಲವಾಗಿ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ನಿಂತಿದ್ದು, ಚಿತ್ರತಂಡಕ್ಕೆ ಶುಭ ಕೋರುತ್ತಿದ್ದಾರೆ.
Come let's celebrate the glory of stories on big screens again. #ACT1978 in theaters from tomorrow!!
Wishing the entire team huge success on their spectacular venture!🤗🤗
Check Out The Trailer: https://t.co/aOfSu23nro @mansore25 @yajnashetty @UrsPramodShetty pic.twitter.com/QqnmShtLgB
— Rakshit Shetty (@rakshitshetty) November 19, 2020
Exactly after 8 months & a week,we a
r releasing a new movie & we had to get it done in a big way. Team @KRG_Connects nailed it along wit team #ACT1978. Do watch the cinema at ur nearest theatres. Its getting superb reviews #CelebrateCinemaAgain @mansore25 @KRG_Studios pic.twitter.com/ecszjW2USy
— Karthik Gowda (@Karthik1423) November 19, 2020
1st movie to release post #pandemic. I'm so happy for this team. Let this new beginning in the post covid era be very very successful. All the best team #ACT1978 @mansore25 @SanchariVijay @bsuresha @yajnashetty pic.twitter.com/h1mgsqjOpJ
— TIGER (@Theactorpradeep) November 19, 2020
Wishing the best #ACT1978 @mansore25 https://t.co/M6H9d4HGSa
— Dhananjaya (@Dhananjayaka) November 18, 2020
Saw the film,,,fantastic effort and fabulous performances by all.
My bst wshs for the release ,team #Act1978 .
🤗🥂...cheers. pic.twitter.com/hxGfbL13vX
— Kichcha Sudeepa (@KicchaSudeep) November 19, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ